Login or Register ಅತ್ಯುತ್ತಮ CarDekho experience ಗೆ
Login

Maruti Swift ಬ್ಲಿಟ್ಜ್ ಲಿಮಿಟೆಡ್-ಎಡಿಷನ್‌ ಬಿಡುಗಡೆ, 39,500 ರೂ.ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ

ಮಾರುತಿ ಸ್ವಿಫ್ಟ್ ಗಾಗಿ dipan ಮೂಲಕ ಅಕ್ಟೋಬರ್ 16, 2024 09:09 pm ರಂದು ಪ್ರಕಟಿಸಲಾಗಿದೆ

ಸ್ವಿಫ್ಟ್ ಬ್ಲಿಟ್ಜ್ ಅನ್ನು ಸೀಮಿತ ಅವಧಿಗೆ ಬೇಸ್-ಸ್ಪೆಕ್ Lxi, Vxi, ಮತ್ತು Vxi (O) ವೇರಿಯೆಂಟ್‌ಗಳೊಂದಿಗೆ ಮಾತ್ರ ನೀಡಲಾಗುತ್ತದೆ

  • ಸ್ವಿಫ್ಟ್ ಬ್ಲಿಟ್ಜ್ ಫಾಗ್ ಲ್ಯಾಂಪ್‌ಗಳು ಮತ್ತು ಕಪ್ಪು ರೂಫ್ ಸ್ಪಾಯ್ಲರ್‌ನಂತಹ ಎಕ್ಸ್‌ಟಿರಿಯರ್‌ ಆಕ್ಸಸ್ಸರಿಗಳನ್ನು ಪಡೆಯುತ್ತದೆ.
  • ಇದು ಫ್ಲೋರ್‌ ಮ್ಯಾಟ್‌ಗಳು ಮತ್ತು ಪ್ರಕಾಶಿತ ಸ್ಕಫ್ ಪ್ಲೇಟ್‌ಗಳಂತಹ ಇಂಟಿರಿಯರ್‌ ಆಕ್ಸಸ್ಸರಿಗಳನ್ನು ಸಹ ಪಡೆಯುತ್ತದೆ.
  • ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
  • ಸ್ವಿಫ್ಟ್‌ನ ಬೆಲೆಗಳು ಬದಲಾಗದೆ ಉಳಿದಿವೆ ಮತ್ತು ಭಾರತದಾದ್ಯಂತ ಇದರ ಎಕ್ಸ್ ಶೋರೂಂ ಬೆಲೆಗಳು 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ವರೆಗೆ ಇದೆ.

ಮಾರುತಿ ಸ್ವಿಫ್ಟ್ ಈ ಹಬ್ಬದ ಸೀಸನ್‌ನಲ್ಲಿ ಲಿಮಿಟೆಡ್‌ ಎಡಿಷನ್‌ ಅನ್ನು ಪಡೆಯುವ ಮತ್ತೊಂದು ಕಾರು ಆಗಿದೆ. ಇದನ್ನು ಸ್ವಿಫ್ಟ್ ಬ್ಲಿಟ್ಜ್ ಎಂದು ಕರೆಯಲಾಗುತ್ತಿದ್ದು, ಇದು ಬೇಸ್-ಸ್ಪೆಕ್ Lxi, Vxi ಮತ್ತು Vxi (O) ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ ಮತ್ತು ಅನುಗುಣವಾದ ವೇರಿಯೆಂಟ್‌ಗಳೊಂದಿಗೆ 39,500 ರೂ.ಮೌಲ್ಯದ ಆಕ್ಸಸ್ಸರಿಗಳನ್ನು ಹೊಂದಿದೆ. ಇದರಲ್ಲಿ ಲಭ್ಯವಿರುವ ಆಕ್ಸಸ್ಸರಿಗಳ ವಿವರಗಳನ್ನು ತಿಳಿಯೋಣ.

ಮಾರುತಿ ಸ್ವಿಫ್ಟ್ ಬ್ಲಿಟ್ಜ್: ಯಾವ ಆಕ್ಸಸ್ಸರಿಗಳು ಆಫರ್‌ನಲ್ಲಿವೆ?

Lxi

Vxi ಮತ್ತು Vxi (ಒಪ್ಶನಲ್‌)

ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ

ಕಪ್ಪು ರೂಫ್ ಸ್ಪಾಯ್ಲರ್

ಬಾಡಿ ಸೈಡ್‌ ಮೋಲ್ಡಿಂಗ್

ಬಾಗಿಲುಗಳ ಅಡಿಯಲ್ಲಿ ಪ್ರಕಾಶಿತ ಸ್ಕಫ್ ಪ್ಲೇಟ್‌ಗಳು

ಕಪ್ಪು ಬಣ್ಣದ ಮುಂಭಾಗದ ಬಂಪರ್ ಲಿಪ್ ಸ್ಪಾಯ್ಲರ್

ಕಪ್ಪು ಹಿಂಭಾಗದ ಬಂಪರ್ ಲಿಪ್ ಸ್ಪಾಯ್ಲರ್

ಕಪ್ಪು ಬಣ್ಣದ ಸೈಡ್‌ ಅಂಡರ್‌ಬಾಡಿ ಸ್ಪಾಯ್ಲರ್

ಕಪ್ಪು ಬಣ್ಣದ ವೀಲ್‌ ಆರ್ಚ್‌ಗಳು

ಡೋರ್ ವೈಸರ್ (ಸ್ಟೇನ್‌ಲೆಸ್ ಸ್ಟೀಲ್ ಇನ್ಸರ್ಟ್‌ನೊಂದಿಗೆ)

ಫ್ಲಾರ್‌ ಮ್ಯಾಟ್‌ಗಳು

ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಫ್‌ಗಳು

ಸೀಟ್ ಕವರ್

ವಿಂಡೋ ಫ್ರೇಮ್ ಕಿಟ್

'ಅರೆನಾ' ಪ್ರೊಜೆಕ್ಷನ್‌ನೊಂದಿಗೆ ಪಡಲ್‌ ಲ್ಯಾಂಪ್‌ಗಳು

ಮುಂಭಾಗದ ಗ್ರಿಲ್ ಗಾರ್ನಿಶ್‌

ಸ್ವಿಫ್ಟ್ ಬ್ಲಿಟ್ಜ್‌ನ ಬೇಸ್-ಸ್ಪೆಕ್ ಎಲ್‌ಎಕ್ಸ್‌ಐ ವೇರಿಯೆಂಟ್‌ನೊಂದಿಗೆ ನೀಡಲಾಗುವ ಆಕ್ಸಸ್ಸರಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಮತ್ತೊಂದೆಡೆ, Vxi ಮತ್ತು Vxi (ಒಪ್ಶನಲ್‌) ವೇರಿಯೆಂಟ್‌ಗಳು 39,500 ರೂ.ಮೌಲ್ಯದ ಆಕ್ಸಸ್ಸರಿಗಳೊಂದಿಗೆ ಲಭ್ಯವಿದೆ.

ಇದನ್ನೂ ಓದಿ: ಮಹೀಂದ್ರಾ XUV 3XOನ ಬೆಲೆಗಳಲ್ಲಿ 30,000 ರೂ.ವರೆಗೆ ಹೆಚ್ಚಳ, ಏನಿದರ ಗುಟ್ಟು ?

ಮಾರುತಿ ಸ್ವಿಫ್ಟ್ Lxi, Vxi ಮತ್ತು Vxi (ಒಪ್ಶನಲ್‌): ಒಂದು ಅವಲೋಕನ

ಸ್ವಿಫ್ಟ್‌ನ Lxi, Vxi ಮತ್ತು Vxi (ಒಪ್ಶನಲ್‌) ವೇರಿಯೆಂಟ್‌ಗಳು ಪ್ರೊಜೆಕ್ಟರ್ ಆಧಾರಿತ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಷಡ್ಭುಜೀಯ ಗ್ರಿಲ್, ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು 14-ಇಂಚಿನ ಸ್ಟೀಲ್‌ ವೀಲ್‌ಗಳನ್ನು ಪಡೆಯುತ್ತವೆ. Vxi ಮತ್ತು Vxi (ಒಪ್ಶನಲ್‌) ವೇರಿಯೆಂಟ್‌ಗಳು ಫುಲ್‌-ವೀಲ್‌ ಕವರ್‌ಗಳನ್ನು ಸಹ ಪಡೆಯುತ್ತವೆ.

ಇದು ಕಪ್ಪು ಕ್ಯಾಬಿನ್ ಥೀಮ್ ಮತ್ತು ಫ್ಯಾಬ್ರಿಕ್ ಸೀಟ್ ಕವರ್‌ ಅನ್ನು ಹೊಂದಿದೆ. ಫೀಚರ್‌ಗಳ ವಿಷಯದಲ್ಲಿ, Lxi ಮ್ಯಾನ್ಯುವಲ್ ಎಸಿ, ಎಲ್ಲಾ ನಾಲ್ಕು ಪವರ್ ವಿಂಡೋಗಳು, ಹಿಂಭಾಗದ ಡಿಫಾಗರ್ ಮತ್ತು ಮುಂಭಾಗದ ಪ್ರಯಾಣಿಕರಿಗೆ 12V ಚಾರ್ಜಿಂಗ್ ಸಾಕೆಟ್ ಅನ್ನು ಹೊಂದಿದೆ.

Vxi ಮತ್ತು Vxi (ಒಪ್ಶನಲ್‌) ವೇರಿಯೆಂಟ್‌ಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, ನಾಲ್ಕು ಸ್ಪೀಕರ್‌ಗಳು ಮತ್ತು ಹಿಂದಿನ ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನು ಹೊಂದಿವೆ. ಈ ಎರಡು ವೇರಿಯೆಂಟ್‌ಗಳು Lxi ವೇರಿಯೆಂಟ್‌ ನೀಡುವ ಎಲ್ಲಾ ಫೀಚರ್‌ಗಳನ್ನು ಸಹ ಪಡೆಯುತ್ತವೆ. Vxi (ಒಪ್ಶನಲ್‌) ವೇರಿಯೆಂಟ್‌ ಬಟನ್‌ನಲ್ಲಿ ಮಡಚಬಹುದಾದ ORVM ಗಳನ್ನು ಪಡೆಯುತ್ತದೆ.

ಸುರಕ್ಷತೆಯ ದೃಷ್ಟಿಯಿಂದ, Lxi, Vxi ಮತ್ತು Vxi (ಒಪ್ಶನಲ್‌) ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳೊಂದಿಗೆ (ಎಲ್ಲಾ ವೇರಿಯೆಂಟ್‌ಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ಬರುತ್ತವೆ.

ಮಾರುತಿ ಸ್ವಿಫ್ಟ್: ಪವರ್‌ಟ್ರೇನ್ ಆಯ್ಕೆಗಳು

ಮಾರುತಿ ಸ್ವಿಫ್ಟ್ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಬರುತ್ತದೆ, ಇದನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಚಾಲಿತಗೊಳಿಸಬಹುದು. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಇಂಧನ ಆಯ್ಕೆ

ಪೆಟ್ರೋಲ್‌

ಸಿಎನ್‌ಜಿ

ಪವರ್‌

82 ಪಿಎಸ್‌

69 ಪಿಎಸ್‌

ಟಾರ್ಕ್

112 ಎನ್‌ಎಮ್‌

102 ಎನ್‌ಎಮ್‌

ಟ್ರಾನ್ಸ್‌ಮಿಷನ್‌

5 MT*, 5 AMT^

5 MT

ಮೈಲೇಜ್‌

ಪ್ರತಿ ಲೀ.ಗೆ 24.80 ಕಿ.ಮೀ. (ಮ್ಯಾನುವಲ್‌), ಪ್ರತಿ ಲೀ.ಗೆ 25.75 ಕಿ.ಮೀ. (ಎಎಮ್‌ಟಿ)

ಪ್ರತಿ ಕೆ.ಜಿ.ಗೆ 32.85 ಕಿ.ಮೀ

*MT = ಮ್ಯಾನುವಲ್ ಟ್ರಾನ್ಸ್ಮಿಷನ್

^AMT = ಆಟೋಮ್ಯಾಟಿಕ್‌ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್

ಎಲ್‌ಎಕ್ಸ್‌ಐ ವೇರಿಯೆಂಟ್‌ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಕೇವಲ ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ಬರುತ್ತದೆ, ಆದರೆ Vxi ಮತ್ತು Vxi (ಒಪ್ಶನಲ್‌) ಅನ್ನು ಪೆಟ್ರೋಲ್ (ಮ್ಯಾನುವಲ್‌ ಮತ್ತು ಎಎಮ್‌ಟಿ ಎರಡೂ) ಜೊತೆಗೆ ಒಪ್ಶನಲ್‌ ಸಿಎನ್‌ಜಿ ಕಿಟ್‌ನೊಂದಿಗೆ ನೀಡಲಾಗುತ್ತದೆ.

ಇದನ್ನೂ ಓದಿ: Tata Curvv EV ಚಾರ್ಜಿಂಗ್ ಟೆಸ್ಟ್: ಕಂಪೆನಿ ಹೇಳಿದಷ್ಟು ವೇಗವಾಗಿ ಚಾರ್ಜ್‌ ಆಗುತ್ತಾ ?

ಮಾರುತಿ ಸ್ವಿಫ್ಟ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಮಾರುತಿ ಸ್ವಿಫ್ಟ್‌ನ ಎಕ್ಸ್ ಶೋರೂಂ ಬೆಲೆಗಳು 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ವರೆಗೆ ಇದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ರೆನಾಲ್ಟ್ ಟ್ರೈಬರ್ ಸಬ್-4ಎಮ್‌ ಕ್ರಾಸ್‌ಒವರ್ ಎಮ್‌ಪಿವಿ ಮತ್ತು ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ನಂತಹ ಮೈಕ್ರೋ ಎಸ್‌ಯುವಿಗಳಿಗೆ ಅದೇ ಬೆಲೆಯ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

Share via

Write your Comment on Maruti ಸ್ವಿಫ್ಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ