ಟ್ಯಾಂಗೋ ರೆಡ್ ಬಣ್ಣದ Mahindra XEV 9e ಯನ್ನು ಮನೆಗೆ ತಂದ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್
ವಿಶೇಷ ಎಂಬಂತೆ, ಎಆರ್ ರೆಹಮಾನ್ XEV 9e ಮತ್ತು BE 6 ಗಾಗಿ ವಾರ್ನಿಂಗ್ ಮತ್ತು ವಾಹನ ಶಬ್ದಗಳನ್ನು ಸಂಯೋಜಿಸಿದ್ದಾರೆ
ಮಹೀಂದ್ರಾ ತಮ್ಮ XEV 9e ನ ಇತ್ತೀಚಿನ ಖರೀದಿದಾರರ ವಿವರವನ್ನು ಹಂಚಿಕೊಳ್ಳಲು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಳಸಿಕೊಂಡಿದೆ. ಈ ಬಾರಿಯ ಖರೀದಿದಾರ ಬೇರೆ ಯಾರೂ ಅಲ್ಲ, ಪ್ರಸಿದ್ಧ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್. ಹಾಗೆಯೇ ಕಾರಿನ ವಾರ್ನಿಂಗ್ ಮತ್ತು ನೋಟಿಫಿಕೇಶನ್ ಸೌಂಡ್‌ಗಳನ್ನು ಸಹ ಸಂಯೋಜಿಸಿದ್ದಾರೆ. XEV 9e ಪ್ರಸ್ತುತ ಸೆಲೆಬ್ರಿಟಿಗಳ ನೆಚ್ಚಿನ ಆಯ್ಕೆ ಆಗಿದೆ, ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಇದನ್ನು ಖರೀದಿಸಿದ್ದಾರೆ, ಇದೀಗ ಎಆರ್ ರೆಹಮಾನ್ ಕೂಡ XEV 9e ಯನ್ನು ಮನೆಗೆ ಕೊಂಡೊಯ್ದಿದ್ದಾರೆ. ಇವರು XEV 9eನ ಟಾಪ್-ಸ್ಪೆಕ್ ಪ್ಯಾಕ್ 3 ವೇರಿಯೆಂಟ್‌ಅನ್ನು ಆಯ್ದುಕೊಂಡಿದ್ದು ಮತ್ತು ಇದು ಟ್ಯಾಂಗೋ ರೆಡ್ ವರ್ಣದಲ್ಲಿದೆ.
ಮಹೀಂದ್ರಾ XEV 9e ನ ಒಂದು ಸಣ್ಣ ಅವಲೋಕನ ಇಲ್ಲಿದೆ:
ಮಹೀಂದ್ರಾ XEV 9e ಅನ್ನು ಪ್ಯಾಕ್ ಒನ್, ಪ್ಯಾಕ್ ಟು, ಪ್ಯಾಕ್ ತ್ರೀ ಸೆಲೆಕ್ಟ್ ಮತ್ತು ಪ್ಯಾಕ್ ತ್ರೀ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದು ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಇಳಿಜಾರಾದ ರೂಫ್‌ಲೈನ್, ಫ್ಲಶ್ ಮಾದರಿಯ ಡೋರ್ ಹ್ಯಾಂಡಲ್‌ಗಳು ಮತ್ತು 19-ಇಂಚಿನ ಅಲಾಯ್ ಚಕ್ರಗಳಂತಹ ಭವಿಷ್ಯದ ಅಂಶಗಳೊಂದಿಗೆ ಸೊಗಸಾದ ಬಾಹ್ಯ ವಿನ್ಯಾಸವನ್ನು ಹೊಂದಿದೆ. ಬೆಲೆಗಳು 21.90 ಲಕ್ಷ ರೂ.ನಿಂದ 30.50 ಲಕ್ಷ ರೂ.ಗಳವರೆಗೆ (ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಇರಲಿದೆ.
ಫೀಚರ್‌ಗಳ ಕುರಿತು..
ಮಹೀಂದ್ರಾ XEV 9e 12.3-ಇಂಚಿನ ಮೂರು ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ, ಒಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಸಹ-ಪ್ರಯಾಣಿಕರ ಮನರಂಜನೆಗಾಗಿ), ಮೆಮೊರಿ ಕಾರ್ಯನಿರ್ವಹಣೆಯೊಂದಿಗೆ 6-ವೇ ಪವರ್ಡ್ ಡ್ರೈವರ್ ಸೀಟ್, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಪನೋರಮಿಕ್ ಗ್ಲಾಸ್ ರೂಫ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್ ಮತ್ತು ವರ್ಧಿತ ರಿಯಾಲಿಟಿ-ಆಧಾರಿತ ಹೆಡ್-ಅಪ್ ಡಿಸ್‌ಪ್ಲೇ ಮುಂತಾದ ಫೀಚರ್‌ಗಳಿಂದ ತುಂಬಿದೆ.
ಇದರ ಸುರಕ್ಷತಾ ಸೂಟ್ ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಒಳಗೊಂಡಿದೆ.
ಪವರ್‌ಟ್ರೇನ್ ಆಯ್ಕೆಗಳು
XEV 9e ಎರಡು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇವುಗಳ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:
ವಿಶೇಷಣಗಳು |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
1 |
1 |
ಪವರ್ |
231 ಪಿಎಸ್ |
286 ಪಿಎಸ್ |
ಟಾರ್ಕ್ |
380 ಎನ್‌ಎಮ್ |
380 ಎನ್‌ಎಮ್ |
ಕ್ಲೈಮ್ ಮಾಡಲಾದ ರೇಂಜ್ (MIDC ಭಾಗ 1+ಭಾಗ 2) |
542 ಕಿ.ಮೀ. |
656 ಕಿ.ಮೀ. |
ಡ್ರೈವ್‌ಟ್ರೇನ್ |
RWD* |
*RWD -ರಿಯರ್ ವೀಲ್ ಡ್ರೈವ್
ಮಹೀಂದ್ರಾ XEV 9e ಅನ್ನು ಎರಡು ಹೋಮ್ ಚಾರ್ಜರ್ ಆಯ್ಕೆಗಳೊಂದಿಗೆ ಪಡೆಯಬಹುದು: 50,000 ರೂ. ಬೆಲೆಯ 7.2 ಕಿ.ವ್ಯಾಟ್ AC ಚಾರ್ಜರ್ ಮತ್ತು 75,000 ರೂ. ಬೆಲೆಯ 11.2 ಕಿ.ವ್ಯಾಟ್ AC ಫಾಸ್ಟ್ ಚಾರ್ಜರ್. ಇದು ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಗಳೊಂದಿಗೆ ಬರುತ್ತದೆ, ಇವೆಲ್ಲವನ್ನೂ ಕೆಳಗೆ ವಿವರಿಸಲಾಗಿದೆ.
ಬ್ಯಾಟರಿ ಪ್ಯಾಕ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
7.2 ಕಿ.ವ್ಯಾ AC ಚಾರ್ಜರ್ |
8.7 ಗಂಟೆಗಳು |
11.7 ಗಂಟೆಗಳು |
11.2 ಕಿ.ವ್ಯಾ AC ಫಾಸ್ಟ್ ಚಾರ್ಜರ್ |
6 ಗಂಟೆಗಳು |
8 ಗಂಟೆಗಳು |
140 ಕಿ.ವ್ಯಾ ಡಿಸಿ |
20 ನಿಮಿಷಗಳು (20%–80%) |
|
180 ಕಿ.ವ್ಯಾ ಡಿಸಿ |
20 ನಿಮಿಷಗಳು (20%–80%) |
ಪ್ರತಿಸ್ಪರ್ಧಿಗಳು
ಮಹೀಂದ್ರಾ XEV 9e, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಎಂಜಿ ಝಡ್ಎಸ್ ಇವಿಗಳಿಗೆ ಪ್ರೀಮಿಯಂ ಪರ್ಯಾಯವಾಗಿ ಹೊರಹೊಮ್ಮುತ್ತದೆ ಮತ್ತು ಹ್ಯುಂಡೈ ಅಯೋನಿಕ್ 5 ಮತ್ತು ಬಿವೈಡಿ ಸೀಲಿಯನ್ 7 ಗೆ ಕೈಗೆಟುಕುವ ಪರ್ಯಾಯವಾಗಿಯೂ ಪರಿಗಣಿಸಬಹುದು. ಇದು ಬಿಡುಗಡೆಯಾದ ನಂತರ ಮುಂಬರುವ ಟಾಟಾ ಹ್ಯಾರಿಯರ್ ಇವಿಗೂ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ