ಹೊಸ Force Gurkha 5-door ಎಸ್‌ಯುವಿಯ ಇಂಟಿರೀಯರ್‌ನ ಟೀಸರ್ ಬಿಡುಗಡೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರ್ಪಡೆ
ಟೀಸರ್‌ನಲ್ಲಿ ತೋರಿಸಿರುವಂತೆ, ಇದು ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಪ್ಟನ್ ಸೀಟ್‌ಗಳನ್ನು ನೀಡಿದೆ ಮತ್ತು ಅದರ 3-ಡೋರ್ ವೇರಿಯಂಟ್ ಗಿಂತ ಉತ್ತಮವಾದ ಸುಸಜ್ಜಿತ ಕ್ಯಾಬಿನ್ ಅನ್ನು ಪಡೆಯುತ್ತದೆ.
- 5-ಡೋರ್ ಫೋರ್ಸ್ ಗೂರ್ಖಾದ ಒಳಭಾಗವನ್ನು ತೋರಿಸಲಾಗಿದೆ.
- ಇದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ವಿವಿಧ ಮೋಡ್‌ಗಳೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.
- ಇದು ಮೂರನೇ ಸಾಲಿನ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಪ್ಟನ್ ಸೀಟ್‌ಗಳನ್ನು ನೀಡಿದೆ.
- ಡಿಸೈನ್ ಫೀಚರ್ ಬದಲಾವಣೆಗಳಲ್ಲಿ ಸ್ಕ್ವೇರ್-ಆಕಾರದ ಹೆಡ್‌ಲೈಟ್‌ಗಳು ಮತ್ತು ಡ್ಯುಯಲ್-ಟೋನ್ ಫಿನಿಶ್‌ನೊಂದಿಗೆ 16-ಇಂಚಿನ ಅಲೊಯ್ ವೀಲ್ಸ್ ಅನ್ನು ಒಳಗೊಂಡಿವೆ.
- ಇದು ಮುಂಬರುವ ವಾರಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ; ಬೆಲೆಯು ರೂ. 16 ಲಕ್ಷದಿಂದ ಶುರುವಾಗಬಹುದು (ಎಕ್ಸ್ ಶೋರೂಂ).
ಫೋರ್ಸ್ ಗೂರ್ಖಾ 5-ಡೋರ್ ಹೊರಭಾಗದ ಟೀಸರ್ ನಂತರ, ಈ ಭಾರತೀಯ ಬ್ರ್ಯಾಂಡ್ ಈಗ ನಮಗೆ SUV ಯ ಒಳಭಾಗವನ್ನು ತೋರಿಸುವ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಟೀಸರ್ ನಲ್ಲಿ ಈ ಉದ್ದವಾದ ಗೂರ್ಖಾ ವರ್ಷನ್ ಕೆಲವು ಆಧುನಿಕ ಫೀಚರ್ ಗಳು ಮತ್ತು ಹೊಸದಾದ ಸೀಟಿಂಗ್ ವ್ಯವಸ್ಥೆಯೊಂದಿಗೆ ಬರಲಿದೆ ಎಂದು ತೋರಿಸಲಾಗಿದೆ.
ಇದರಲ್ಲಿ ಹೊಸತು ಏನೇನಿದೆ?
ಟೀಸರ್‌ನಲ್ಲಿ ತೋರಿಸಿರುವಂತೆ, ಮುಂಬರುವ 5-ಡೋರ್ ಗೂರ್ಖಾವು ಡ್ಯುಯಲ್-ಟೋನ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಆಲ್ ಬ್ಲಾಕ್ ಕ್ಯಾಬಿನ್ ಅನ್ನು ಹೊಂದಿರುತ್ತದೆ. ಇದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಟೈರ್ ಪ್ರೆಶರ್ ಸೇರಿದಂತೆ ಹಲವಾರು ಮಾಹಿತಿಯನ್ನು ತೋರಿಸುವ ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಕೆಲವು ಹೊಸ ಆಧುನಿಕ ಫೀಚರ್ ಗಳನ್ನು ಪಡೆಯುತ್ತದೆ. ಈ ಫೀಚರ್ ಗಳ ಜೊತೆಗೆ, ಗೂರ್ಖಾ 5-ಡೋರ್ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಪ್ಟನ್ ಸೀಟ್‌ಗಳನ್ನು ನೀಡುತ್ತಿದೆ, ಹಾಗಾಗಿ ಇದು 7-ಸೀಟರ್ ಮಾಡೆಲ್ ಆಗಿ ಬರಲಿದೆ. ಟೀಸರ್ ಪ್ರಕಾರ, ಆಫ್ ರೋಡ್ ಮೋಡ್‌ಗಳಿಗಾಗಿ ಎಲೆಕ್ಟ್ರಾನಿಕ್ ಚಾಲಿತ 4WD ಕಾನ್ಫಿಗರೇಶನ್ ನಾಬ್ ಅನ್ನು ಕೂಡ ನಾವು ನೋಡಬಹುದು.
ಇದನ್ನು ಕೂಡ ಓದಿ: ಹೊಸ ಫೋರ್ಸ್ ಗೂರ್ಖಾ 5-ಡೋರ್ ಟೀಸರ್ ಹೊಚ್ಚಹೊಸ ಡಿಸೈನ್ ವಿವರಗಳನ್ನು ನೀಡಿದೆ
ಹೊರಭಾಗ
ಇತ್ತೀಚಿನ ಟೀಸರ್‌ಗಳು ಮತ್ತು ಸ್ಪೈ ಶಾಟ್‌ಗಳ ಪ್ರಕಾರ, ಈ 5-ಡೋರ್ ಮಾಡೆಲ್ ಅದರ LED DRL ಗಳು ಮತ್ತು LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುವ ರೌಂಡ್ ಹೆಡ್‌ಲೈಟ್ ಡಿಸೈನ್ ಅನ್ನು ಹಾಗೆಯೇ ಉಳಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ. ಹೊಸ 5-ಡೋರ್ ಗೂರ್ಖಾದಲ್ಲಿರುವ ಗ್ರಿಲ್ ಈಗಿರುವ 3-ಡೋರ್ ಮಾಡೆಲ್ ನಲ್ಲಿ ಇರುವಂತೆಯೇ ಇದೆ. ಹೊಸ ಗೂರ್ಖಾ ಎಲ್ಲಾ ರೀತಿಯ ರಸ್ತೆಗಳಿಗೆ ಸೂಕ್ತವಾದ ಟೈರ್‌ಗಳೊಂದಿಗೆ ವಿಭಿನ್ನವಾಗಿ ಕಾಣುವ ವೀಲ್ ಗಳನ್ನು ಹೊಂದಿರುತ್ತದೆ. 3-ಡೋರ್ ಗೂರ್ಖಾದಲ್ಲಿರುವ ಟೈಲ್‌ಗೇಟ್ ನಲ್ಲಿ ಇರಿಸಲಾದ ಸ್ಪೇರ್ ವೀಲ್ ಮತ್ತು ಲ್ಯಾಡರ್ ಹಾಗೂ ಸ್ನಾರ್ಕೆಲ್ ಅನ್ನು ಇಲ್ಲಿ ಕೂಡ ನೀಡಲಾಗಿದೆ.
ಫೀಚರ್ ಗಳು
ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ, ಗೂರ್ಖಾ ಫ್ರಂಟ್ ಪವರ್ ವಿಂಡೋಗಳು ಮತ್ತು ಮಲ್ಟಿಪಲ್ ವೆಂಟ್ ನೊಂದಿಗೆ ಮ್ಯಾನುವಲ್ ACಯನ್ನು ಕೂಡ ಪಡೆಯುತ್ತದೆ.
ಸುರಕ್ಷತೆಯ ವಿಷಯದಲ್ಲಿ, ಗೂರ್ಖಾ ಕನಿಷ್ಠ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ABS, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ನೀಡುತ್ತಿದೆ.
ಪವರ್‌ಟ್ರೇನ್
5-ಡೋರ್ ಗೂರ್ಖಾ ಅದರ 3-ಡೋರ್ ಮಾಡೆಲ್ ನಲ್ಲಿರುವ 90 PS ಮತ್ತು 250 Nm ಟಾರ್ಕ್ ಅನ್ನು ಉತ್ಪಾದನೆ ಮಾಡುವ 2.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ, ಆದರೆ ಇಲ್ಲಿ ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಬಹುದು. ಇದು 4-ವೀಲ್-ಡ್ರೈವ್ (4WD) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಆಫ್-ರೋಡ್ ಪ್ರಯಾಣಕ್ಕಾಗಿ ಲೊ-ರೇಂಜ್ ಟ್ರಾನ್ಸ್‌ಫರ್ ಆಯ್ಕೆಯನ್ನು ನೀಡುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹೊಸ ಗೂರ್ಖಾ 5-ಡೋರ್ ಬೆಲೆಯು ಸುಮಾರು 16 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. 2024 ರ ಗೂರ್ಖಾ ಮಾರುತಿ ಜಿಮ್ನಿಗಿಂತಲೂ ದೊಡ್ಡದಾಗಿದೆ ಮತ್ತು ಆಗಸ್ಟ್ 15, 2024 ರಂದು ಮಾರುಕಟ್ಟೆಗೆ ಬರಲಿರುವ ಥಾರ್ 5-ಡೋರ್ ವರ್ಷನ್ ಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಗೂರ್ಖಾ ಡೀಸೆಲ್