Login or Register ಅತ್ಯುತ್ತಮ CarDekho experience ಗೆ
Login

ಹೊಸ ಸುಜುಕಿ ಸ್ವಿಫ್ಟ್‌ನ ಬಣ್ಣಗಳ ವಿವರ ಬಹಿರಂಗ! ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಸ್ವಿಫ್ಟ್‌ ಕಾರನ್ನು ನೀವು ಯಾವ ಬಣ್ಣದಲ್ಲಿ ನೋಡಲು ಇಷ್ಟಪಡುತ್ತೀರಿ?

ನವೆಂಬರ್ 08, 2023 07:09 pm ರಂದು shreyash ಮೂಲಕ ಪ್ರಕಟಿಸಲಾಗಿದೆ
41 Views

ಸದ್ಯದಲ್ಲೇ ಬದಲಾಗಲಿರುವ ಭಾರತೀಯ ಮಾರುತಿ ಸ್ವಿಫ್ಟ್‌ ಕಾರು 9 ಬಣ್ಣಗಳಲ್ಲಿ ದೊರೆಯುತ್ತಿದೆ

  • ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್‌ ಕಾರು ಅಕ್ಟೋಬರ್‌ ತಿಂಗಳಿನಲ್ಲಿ ಜಪಾನ್‌ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಜಾಗತಿಕ ಮಟ್ಟದ ಬಿಡುಗಡೆಯನ್ನು ಕಂಡಿತು.
  • ಬಲೇನೊ ಮತ್ತು ಫ್ರಾಂಕ್ಸ್‌ ಮಾದರಿಗಳಿಂದ ಪ್ರೇರಣೆ ಪಡೆದ ಹೊಸ ಫೇಶಿಯಾ ಮತ್ತು ಒಳಾಂಗಣ ವಿನ್ಯಾಸಗಳನ್ನು ಇದು ಪಡೆಯಲಿದೆ.
  • ಹೊಸ ತಲೆಮಾರಿನ ಸ್ವಿಫ್ಟ್‌ ಕಾರು ಹೊಸ 1.2 ಲೀಟರ್‌ 3 ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಅನ್ನು ಪಡೆಯಲಿದೆ.
  • ಇದನ್ನು 2024ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಜಪಾನ್‌ ಮೊಬಿಲಿಟಿ ಶೋ 2023 ಕಾರ್ಯಕ್ರಮದಲ್ಲಿ ಉತ್ಪಾದನೆಗೆ ಸಿದ್ಧಗೊಂಡ ಪರಿಕಲ್ಪನೆಯು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸುಜುಕಿ ಸಂಸ್ಥೆಯು ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಕಾರನ್ನು ತನ್ನ ತಾಯ್ನೆಲದಲ್ಲಿ ಬಿಡುಗಡೆ ಮಾಡಿದೆ. ಪರಿಷ್ಕೃತ ಮಾದರಿಯು ವಿನ್ಯಾಸದಲ್ಲಿ ಸಮಗ್ರ ಬದಲಾವಣೆಗೆ ಒಳಗಾಗಿದ್ದು ಹೊಸ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಮೂಲಕ ರಸ್ತೆಗಿಳಿಯಲಿದೆ. ಜಪಾನಿನ ಕಾರು ತಯಾರಕ ಸಂಸ್ಥೆಯು ಈ ಹೊಸ ತಲೆಮಾರಿನ ಸ್ವಿಫ್ಟ್‌ ಕಾರಿಗೆ ಲಭ್ಯವಿರುವ ಬಣ್ಣಗಳ ಆಯ್ಕೆಯನ್ನು ಬಹಿರಂಗಪಡಿಸಿದೆ. ಅವುಗಳನ್ನು ನಾವು ವಿವರವಾಗಿ ನೋಡೋಣ.

ಫ್ರಂಟಿಯರ್‌ ಬ್ಲೂ ಮೆಟಾಲಿಕ್

ಈ ಛಾಯೆಯು ಭಾರತದಲ್ಲಿರುವ ಮಾರುತಿ ಸ್ವಿಫ್ಟ್‌ ಕಾರಿನ ಜೊತೆಗೆ ನೀಡಲಾಗುವ ಪರ್ಲ್‌ ಮೆಟಾಲಿಕ್‌ ಮಿಡ್‌ ನೈಟ್‌ ಬ್ಲೂ ಬಣ್ಣವನ್ನೇ ಹೋಲುತ್ತದೆ.

ಕೂಲ್‌ ಯೆಲೋ ಮೆಟಾಲಿಕ್

ಇದು ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್‌ ಕಾರಿನ ಹೊಸ ಛಾಯೆಗಳಲ್ಲಿ ಒಂದಾಗಿದ್ದು, ಜಪಾನ್‌ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು.

ಇದನ್ನು ಸಹ ನೋಡಿರಿ: ಹಳೆಯ ಮತ್ತು ಹೊಸ ಮಾರುತಿ ಸ್ವಿಫ್ಟ್‌ ಕಾರು: ಚಿತ್ರಗಳ ಮೂಲಕ ಹೋಲಿಕೆ

ಬರ್ನಿಂಗ್‌ ರೆಡ್‌ ಪರ್ಲ್‌ ಮೆಟಾಲಿಕ್

ಸ್ವಿಫ್ಟ್‌ ಕಾರಿನ ಅತ್ಯಂತ ಸಾಂಪ್ರದಾಯಿಕ ಮಾದರಿ ಇದಾಗಿದ್ದು, ಭಾರತದಲ್ಲಿ ಸದ್ಯಕ್ಕೆ ಚಾಲನೆಯಲ್ಲಿರುವ ಮಾದರಿಯಲ್ಲಿ ಇದನ್ನು ಸಾಲಿಡ್‌ ಫೈರ್‌ ರೆಡ್‌ ಎಂಬುದಾಗಿ ಕರೆಯಲಾಗುತ್ತದೆ.

ಫ್ಲೇಮ್‌ ಆರೆಂಜ್‌ ಪರ್ಲ್‌ ಮೆಟಾಲಿಕ್

ಈ ಛಾಯೆಯು, ಭಾರತದಲ್ಲಿ ಸದ್ಯಕ್ಕೆ ಲಭ್ಯವಿರುವ ಪರ್ಲ್‌ ಮೆಟಾಲಿಕ್‌ ಲುಸೆಂಟ್‌ ಆರೆಂಜ್‌ ಗಿಂತಲೂ ತುಸು ಪ್ರಕಾಶಮಾನವಾಗಿ ಕಾಣುತ್ತದೆ.

ಕ್ಯಾರವಾನ್‌ ಐವರಿ ಪರ್ಲ್‌ ಮೆಟಾಲಿಕ್

ಹೊಸ ತಲೆಮಾರಿನ ಸ್ವಿಫ್ಟ್‌ ಕಾರಿನ ಹೊಸ ಛಾಯೆಗಳಲ್ಲಿ ಇದೂ ಸಹ ಒಂದಾಗಿದ್ದು, ಈ ಪಟ್ಟಿಯಲ್ಲಿರುವ ಅತ್ಯಂತ ಪಕ್ವ ಆಯ್ಕೆಗಳ ಪೈಕಿ ಇದು ಸಹ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಬಿಳಿ ಅಥವಾ ಬೆಳ್ಳಿಯ ಬಣ್ಣಕ್ಕಿಂತಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಪ್ಯೂರ್‌ ವೈಟ್‌ ಪರ್ಲ್

ಯಾವುದೇ ಮಾದರಿಯು ಆರಿಸಿಕೊಳ್ಳುವ ಸಾಮಾನ್ಯ ಬಣ್ಣವು ಇದಾಗಿದ್ದು, ಹೊಸ ತಲೆಮಾರಿನ ಸ್ವಿಫ್ಟ್‌ ಕಾರಿನ ಪರಿಷ್ಕೃತ ನೋಟಕ್ಕೆ ಇದು ಸರಿಹೊಂದುತ್ತದೆ.

ಪ್ರೀಮಿಯಂ ಸಿಲ್ವರ್‌ ಮೆಟಾಲಿಕ್

ಸುಜುಕಿ ಸಂಸ್ಥೆಯು ಹೊರತರುವ ಪ್ರೀಮಿಯಂ ಸಿಲ್ವರ್‌ ಕಲರ್‌ ಅನ್ನು ಈ ಪರಿಷ್ಕೃತ ಹ್ಯಾಚ್‌ ಬ್ಯಾಕ್‌ ಕಾರಿನಲ್ಲಿ ಮುಂದುವರಿಸಲಾಗಿದೆ.

ಸ್ಟಾರ್ ಸಿಲ್ವರ್‌ ಮೆಟಾಲಿಕ್

ಹಿಂದಿನ ಬೆಳ್ಳಿಯ ಬಣ್ಣಕ್ಕೆ ಹೋಲಿಸಿದರೆ ಸ್ಟಾರ್‌ ಸಿಲ್ವರ್‌ ಮೆಟಾಲಿಕ್‌ ಬಣ್ಣವು ಪ್ರಕಾಶಮಾನವಾದ ಆಯ್ಕೆಯಾಗಿದ್ದು ಬಿಳಿ ಮತ್ತು ಬೆಳ್ಳಿಯ ಬಣ್ಣದ ನಡುವೆ ನಿಲ್ಲುತ್ತದೆ.

ಸೂಪರ್‌ ಬ್ಲ್ಯಾಕ್‌ ಪರ್ಲ್

ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿರುವ ಸ್ವಿಫ್ಟ್‌ ಕಾರುಗಳ ಮೂಲಕ ಈ ಬಣ್ಣವನ್ನು ವಿಶೇಷ ಕಪ್ಪು ಆವೃತ್ತಿಯಾಗಿ ನೀಡಲಾಗುತ್ತದೆ.

ಕಪ್ಪು ಛಾವಣಿಯ ಜೊತೆಗೆ ಫ್ರಂಟಿಯರ್‌ ಬ್ಲೂ ಮೆಟಾಲಿಕ್

ನಾಲ್ಕನೇ ತಲೆಮಾರಿನ ಸ್ವಿಫ್ಟ್‌ ಕಾರು ಈ ಡ್ಯುವಲ್‌ ಟೋನ್‌ ಬಣ್ಣದ ಮೂಲಕ ಜಪಾನಿನಲ್ಲಿ ಜಾಗತಿಕ ಬಿಡುಗಡೆಯನ್ನು ಕಂಡಿತು.

ಕಪ್ಪು ಛಾವಣಿಯ ಜೊತೆಗೆ ಬರ್ನಿಂಗ್‌ ರೆಡ್ ಮೆಟಾಲಿಕ್

ಇದು ಬರ್ನಿಂಗ್‌ ರೆಡ್‌ ಬಣ್ಣದ ಡ್ಯುವಲ್‌ ಟೋನ್‌ ವೇರಿಯಂಟ್‌ ಆಗಿದೆ. ಭಾರತದಲ್ಲಿ ಮಾರುತಿ ಸಂಸ್ಥೆಯು ಸ್ವಿಫ್ಟ್‌ ಕಾರಿಗೆ ಮಿಡ್‌ ನೈಟ್‌ ಬ್ಲ್ಯಾಕ್‌ ಛಾವಣಿಯ ಜೊತೆಗೆ ಕೆಂಪು ಬಣ್ಣದ ಆಯ್ಕೆಯನ್ನು ಸಹ ನೀಡುತ್ತದೆ.

‌ಕಪ್ಪು ಛಾವಣಿಯ ಜೊತೆಗೆ ಕೂಲ್‌ ಯೆಲ್ಲೊ ಮೆಟಾಲಿಕ್‌ ಗನ್

ಸ್ವಿಫ್ಟ್‌ ಕಾರಿನ ಅತ್ಯಂತ ಹೊಸ ಛಾಯೆಯು ಕಪ್ಪು ಛಾವಣಿಯ ಆಯ್ಕೆಯೊಂದಿಗೆ ಬರುತ್ತದೆ.

ಕಪ್ಪು ಛಾವಣಿಯ ಜೊತೆಗೆ ಪ್ಯೂರ್‌ ವೈಟ್‌ ಪರ್ಲ್‌ ಮೆಟಾಲಿಕ್‌

ಪ್ಯೂರ್‌ ವೈಟ್‌ ಪರ್ಲ್‌ ಬಣ್ಣವನ್ನು ವೈದೃಶ್ಯವೆನಿಸುವ ಕಪ್ಪು ಛಾವಣಿಯೊಂದಿಗೂ ಪಡೆಯಬಹುದಾಗಿದ್ದು, ಈ ಮೂಲಕ ಸ್ಪೋರ್ಟಿಯರ್‌ ನೋಟವನ್ನು ಪಡೆಯಬಹುದಾಗಿದೆ.

ಗಮನಿಸಿ: ಜಪಾನಿನಲ್ಲಿ ರಸ್ತೆಗಿಳಿಯಲಿರುವ ಸುಜುಕಿ ಸ್ವಿಫ್ಟ್‌ ಕಾರಿನ ಎಲ್ಲಾ ಬಣ್ಣಗಳ ಹೆಸರುಗಳನ್ನು ಅವುಗಳ ಸ್ಥಳೀಯ ಭಾಷೆಯಿಂದ ಇಂಗ್ಲಿಷ್‌ ಗೆ ಭಾಷಾಂತರಿಸಲಾಗಿದೆ.

ಸುಜುಕಿ ಸಂಸ್ಥೆಯ ಪ್ರಕಾರ ಸ್ವಿಫ್ಟ್‌ ಕಾರಿನ ಫ್ರಂಟಿಯರ್‌ ಬ್ಲೂ ಪರ್ಲ್‌ ಮೆಟಾಲಿಕ್‌, ಬರ್ನಿಂಗ್‌ ರೆಡ್‌ ಪರ್ಲ್‌ ಮೆಟಾಲಿಕ್‌, ಪ್ಯೂರ್‌ ವೈಟ್‌ ಪರ್ಲ್‌, ಪ್ರೀಮಿಯಂ ಸಿಲ್ವರ್‌ ಮೆಟಾಲಿಕ್‌ ಮತ್ತು ಡ್ಯುವಲ್‌ ಟೋನ್‌ ರೂಫ್‌ ಆಯ್ಕೆಗಳ ಬೆಲೆಗಳು ಇತರ ಬಣ್ಣಗಳ ವಾಹನಗಳಿಗಿಂತ ಭಿನ್ನವಾಗಿವೆ.

ಇದನ್ನು ಸಹ ನೋಡಿರಿ: ರಸ್ತೆ ಅಪಘಾತಗಳು 2022ರಲ್ಲಿ ಪ್ರತಿ ದಿನವೂ 460 ಭಾರತೀಯರನ್ನು ಕೊಂದಿವೆ! ಎಲ್ಲಿ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂಬುದನ್ನು ನೋಡಿರಿ

ಹೊಸ ಎಂಜಿನ್

ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್‌ ಕಾರು, ಭಾರತದಲ್ಲಿ ಸದ್ಯಕ್ಕೆ ಲಭ್ಯವಿರುವ 1.2 ಲೀಟರ್‌ 4 ಸಿಲಿಂಡರ್‌ K ಸೀರೀಸ್‌ ಎಂಜಿನಿನ ಬದಲಿಗೆ 1.2-ಲೀಟರಿನ 3-ಸಿಲಿಂಡರ್ Z-ಸೀರೀಸ್ ಪೆಟ್ರೋಲ್‌ ಎಂಜಿನ್‌ ಜೊತೆಗೆ ರಸ್ತೆಗಿಳಿಯಲಿದೆ. ಸುಜುಕಿ ಸಂಸ್ಥೆಯು ಹೊಸ ಎಂಜಿನಿನ ಔಟ್ಪುಟ್‌ ವಿವರಗಳನ್ನು ಬಹಿರಂಗಪಡಿಸದೆ ಇದ್ದರೂ, ಹೆಚ್ಚಿನ ಇಂಧನ ದಕ್ಷತೆಗಾಗಿ ಇದನ್ನು CVT ಅಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ ಜೊತೆಗೆ ಹೊಂದಿಸುವ ಸಾಧ್ಯತೆ ಇದೆ. ಇದೇ ವೇಳೆ, ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಮಾದರಿಯು ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಆಯ್ಕೆಗಳೆರಡನ್ನೂ ನೀಡಲಿದೆ.

ಭಾರತದಲ್ಲಿ ನಿರೀಕ್ಷಿತ ಬಿಡುಗಡೆ

2024 ಮಾರುತಿ ಸ್ವಿಫ್ಟ್‌ ಕಾರು ಭಾರತದಲ್ಲಿ ಈಗಾಗಲೇ ಪರೀಕ್ಷಾರ್ಥ ಓಡಾಟವನ್ನು ಪ್ರಾರಂಭಿಸಿದ್ದು, ಇತ್ತೀಚಿಗೆ ಕಾಣಿಸಿಕೊಂಡ ಈ ಹ್ಯಾಚ್‌ ಬ್ಯಾಕ್‌ ಕಾರಿನ ಸ್ಪೈ ಶಾಟ್‌ ಗಳು ಭಾರತಕ್ಕೆ ಸೀಮಿತವೆನಿಸಿರುವ ಆವೃತ್ತಿಯ ಹೊಸ ವಿನ್ಯಾಸದ ವಿವರಗಳು ಮತ್ತು ಸೌಲಭ್ಯಗಳನ್ನು ಬಹಿರಂಗಪಡಿಸಿವೆ. ಹೊಸ ತಲೆಮಾರಿನ ಸ್ವಿಫ್ಟ್‌ ಕಾರು 2024ರ ಮೊದಲಾರ್ಧದಲ್ಲೇ ಬಿಡುಗಡೆಯಾಗಲಿದ್ದು, ಆರಂಭಿಕ ಬೆಲೆಯು ರೂ. 6 ಲಕ್ಷದಿಂದ ಪ್ರಾರಂಭಗೊಳ್ಳಲಿದೆ. ಇದು ಹ್ಯುಂಡೈ ಗ್ರಾಂಡ್‌ i10 ನಿಯೋಸ್‌ ಜೊತೆಗೆ ಸ್ಪರ್ಧಿಸಲಿದ್ದು ಮಾರುತಿ ವ್ಯಾಗನರ್‌ R ಮತ್ತು ಮಾರುತಿ ಇಗ್ನಿಸ್‌ ಕಾರುಗಳಿಗೆ ಬದಲಿ ಆಯ್ಕೆ ಎನಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಸ್ವಿಫ್ಟ್‌ AMT

Share via

Write your Comment on Maruti ಸ್ವಿಫ್ಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.19 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ