• English
  • Login / Register

ಈ ಜುಲೈನಲ್ಲಿ ಮಾರುತಿ ಅರೆನಾ ಮೊಡೆಲ್‌ಗಳ ಮೇಲೆ ಭರ್ಜರಿ 63,500 ರೂ.ವರೆಗೆ ಡಿಸ್ಕೌಂಟ್‌

ಮಾರುತಿ ಆಲ್ಟೊ ಕೆ10 ಗಾಗಿ yashika ಮೂಲಕ ಜುಲೈ 08, 2024 01:24 pm ರಂದು ಮಾರ್ಪಡಿಸಲಾಗಿದೆ

  • 152 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರ್ಟಿಗಾವನ್ನು ಹೊರತುಪಡಿಸಿ, ಕಾರು ತಯಾರಕರು ಎಲ್ಲಾ ಮೊಡೆಲ್‌ಗಳ ಮೇಲೆ ಈ ಡಿಸ್ಕೌಂಟ್‌ಗಳನ್ನು ಮತ್ತು ಆಫರ್‌ಗಳನ್ನು ನೀಡುತ್ತಿದ್ದಾರೆ

  • ಮಾರುತಿ ವ್ಯಾಗನ್ ಆರ್ ಅತ್ಯಧಿಕ 63,500 ರೂ.ಗಳ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ, ಹಾಗೆಯೇ ಆಲ್ಟೊ ಕೆ10   63,100 ರೂ.ಗಳಷ್ಟು ಹೊಂದಿದೆ. 
  • ಗ್ರಾಹಕರು 7 ವರ್ಷಕ್ಕಿಂತ ಕಡಿಮೆ ಹಳೆಯದಾದ ಕಾರನ್ನು ಎಕ್ಸ್‌ಚೇಂಜ್‌ ಮಾಡಿದರೆ ವ್ಯಾಗನ್ ಆರ್ ಮತ್ತು ಹಳೆಯ ಸ್ವಿಫ್ಟ್‌ನಲ್ಲಿ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಪಡೆಯಬಹುದು.
  • ಈ ಎಲ್ಲಾ ಕೊಡುಗೆಗಳು ಜುಲೈ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಈ ಜುಲೈನಲ್ಲಿ ನೀವು ಮಾರುತಿ ಕಾರನ್ನು ಅದರ ಅರೆನಾ ಕಾರುಗಳ ಪಟ್ಟಿಯಿಂದ ಖರೀದಿಸಲು ಯೋಜಿಸುತ್ತಿದ್ದರೆ, ಅದರ ಹೆಚ್ಚಿನ ಮೊಡೆಲ್‌ಗಳಿಗೆ ಲಭ್ಯವಿರುವ ಹಲವಾರು ರಿಯಾಯಿತಿಗಳನ್ನು ನೀವು ಪಡೆಯಬಹುದು. ಮಾರುತಿ ಎರ್ಟಿಗಾ ಎಮ್‌ಪಿವಿಯನ್ನು ಹೊರತುಪಡಿಸಿ, ಎಲ್ಲಾ ಇತರ ಮಾರುತಿ ಅರೆನಾ ಕಾರುಗಳು ಈ ತಿಂಗಳು ಕ್ಯಾಶ್‌ ಡಿಸ್ಕೌಂಟ್‌ಗಳು, ಎಕ್ಸ್‌ಚೇಂಜ್‌ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳ ರೂಪದಲ್ಲಿ ವಿವಿಧ ಪ್ರಯೋಜನಗಳನ್ನು ಹೊಂದಿವೆ. ಮಾರುತಿ ಅರೆನಾ ಮೊಡೆಲ್‌ಗಳ ಮೇಲೆ ಲಭ್ಯವಿರುವ ರಿಯಾಯಿತಿಗಳ ಮೊಡೆಲ್‌-ವಾರು ಪಟ್ಟಿ ಇಲ್ಲಿದೆ.

ಆಲ್ಟೋ ಕೆ10

Maruti Alto K10

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

  45,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

3,100 ರೂ.ವರೆಗೆ

ಒಟ್ಟು ಲಾಭಗಳು

63,100 ರೂ.ವರೆಗೆ

  • ಮೇಲೆ ತಿಳಿಸಿದ ಪ್ರಯೋಜನಗಳು ಈ ಹ್ಯಾಚ್‌ಬ್ಯಾಕ್‌ನ ಎಎಮ್‌ಟಿ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿವೆ.
  • ಮಾರುತಿ ಕೆ10 ನ ಮ್ಯಾನುವಲ್ ಮತ್ತು ಸಿಎನ್‌ಜಿ ಆವೃತ್ತಿಗಳು ಕ್ರಮವಾಗಿ 40,000 ರೂ. ಮತ್ತು  30,000 ರೂ.ವರೆಗೆ ನಗದು ರಿಯಾಯಿತಿಯನ್ನು ಪಡೆಯುತ್ತವೆ.
  • ಎಲ್ಲಾ ಆವೃತ್ತಿಗಳಿಗೆ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಒಂದೇ ಆಗಿರುತ್ತವೆ.
  • ಮಾರುತಿ ಆಲ್ಟೊ ಕೆ10 ಬೆಲೆಗಳು 3.99 ಲಕ್ಷ ರೂ.ನಿಂದ 5.96 ಲಕ್ಷ ರೂ.ಗಳ ನಡುವೆ ಇದೆ.

ಎಸ್‌-ಪ್ರೆಸ್ಸೋ

Maruti S-Presso

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಕಾರ್ಪೋರೇಟ್‌ ಡಿಸ್ಕೌಂಟ್‌

3,100 ರೂ.ವರೆಗೆ

ಒಟ್ಟು ಲಾಭಗಳು

58,100 ರೂ.ವರೆಗೆ

  • ಮೇಲೆ ತಿಳಿಸಲಾದ ಪ್ರಯೋಜನಗಳು ಮಾರುತಿ ಎಸ್-ಪ್ರೆಸ್ಸೊದ ಪೆಟ್ರೋಲ್-ಎಎಮ್‌ಟಿ ಆವೃತ್ತಿಗಳಲ್ಲಿ ಲಭ್ಯವಿದೆ.
  • ಮ್ಯಾನುಯಲ್‌ ಮತ್ತು ಸಿಎನ್‌ಜಿ ಆವೃತ್ತಿಗಳು 35,000 ರೂ.ವರೆಗಿನ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ಬರಲಿದೆ.
  • ಮಾರುತಿ ಎಸ್-ಪ್ರೆಸ್ಸೊದ ಎಲ್ಲಾ ಆವೃತ್ತಿಗಳು ಒಂದೇ ರೀತಿಯ ಕಾರ್ಪೊರೇಟ್ ಮತ್ತು ಎಕ್ಸ್‌ಚೇಂಜ್‌ ಬೋನಸ್‌ಗಳನ್ನು ಪಡೆಯುತ್ತವೆ.
  • ಇದರ ಬೆಲೆಗಳು 4.26 ಲಕ್ಷ ರೂ.ನಿಂದ 6.12 ಲಕ್ಷ ರೂ.ವರೆಗೆ ಇದೆ

ವ್ಯಾಗನ್‌ ಆರ್‌

Maruti Wagon R

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್‌ (<7 ವರ್ಷಗಳು)

5,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

3,500 ರೂ.

ಒಟ್ಟು ಲಾಭಗಳು

63,500 ರೂ.

  • ಮಾರುತಿ ವ್ಯಾಗನ್ ಆರ್ ಈ ಜುಲೈನ ಅರೆನಾ ಆಫರ್‌ನಲ್ಲಿ ಅತ್ಯಧಿಕ ಡಿಸ್ಕೌಂಟ್‌ಅನ್ನು ಪಡೆಯುತ್ತದೆ, ಇದರಲ್ಲಿ ನೀವು ಒಟ್ಟು 63,500 ರೂ.ವರೆಗೆ ಉಳಿತಾಯ ಪಡೆಯಬಹುದು. 

  • ಮೇಲೆ ತಿಳಿಸಿದ ಪ್ರಯೋಜನಗಳು ವ್ಯಾಗನ್ ಆರ್‌ನ ಎಎಮ್‌ಟಿ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತವೆ.

  • ಹೊಸ ವ್ಯಾಗನ್ ಆರ್‌ಗಾಗಿ ನಿಮ್ಮ ಹಳೆಯ ಕಾರನ್ನು (7 ವರ್ಷಕ್ಕಿಂತ ಹೆಚ್ಚು ಹಳೆಯದಲ್ಲ) ಎಕ್ಸ್‌ಚೇಂಜ್‌ ಮಾಡಿದರೆ ಕಾರು ತಯಾರಕರು ಹೆಚ್ಚುವರಿಯಾಗಿ ರೂ 5,000 ಎಕ್ಸ್‌ಚೇಂಜ್‌ ಬೋನಸ್ ಅನ್ನು ನೀಡುತ್ತಾರೆ. 

  • ಮ್ಯಾನುಯಲ್ ಆವೃತ್ತಿಗಳಿಗೆ, 35,000 ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ ಇದೆ, ಆದರೆ ಸಿಎನ್‌ಜಿ ಟ್ರಿಮ್‌ಗಳು 30,000 ರೂಪಾಯಿಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ಬರುತ್ತದೆ.

  • ಎಲ್ಲಾ ಆವೃತ್ತಿಗಳಲ್ಲಿ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಬದಲಾಗದೆ ಉಳಿಯುತ್ತದೆ.

  • ಮಾರುತಿ ವ್ಯಾಗನ್ ಆರ್‌ನ ಬೆಲೆಯು 5.55 ಲಕ್ಷ ರೂ.ನಿಂದ 7.33 ಲಕ್ಷ ರೂ.ವರೆಗೆ ಇದೆ. 

ಸೆಲೆರಿಯೊ

Maruti Celerio

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಒಟ್ಟು ಲಾಭಗಳು

  55,100 ರೂ.ವರೆಗೆ

  • ಮಾರುತಿ ಸೆಲೆರಿಯೊದ ಎಎಮ್‌ಟಿ ಆವೃತ್ತಿಗಳು ಕೋಷ್ಟಕದಲ್ಲಿ ಮೇಲೆ ತಿಳಿಸಿದಂತೆ ಹೆಚ್ಚಿನ ನಗದು ಡಿಸ್ಕೌಂಟ್‌ಗಳನ್ನು ಪಡೆಯುತ್ತವೆ.

  • ಮ್ಯಾನುಯಲ್ ಮತ್ತು ಸಿಎನ್‌ಜಿ ಆವೃತ್ತಿಗಳನ್ನು 35,000 ರೂ.ಗಳ ನಗದು ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.

  • ಎಲ್ಲಾ ಆವೃತ್ತಿಗಳಲ್ಲಿ ಎಕ್ಸ್‌ಚೇಂಜ್‌ ಬೋನಸ್ ಒಂದೇ ಆಗಿರುತ್ತದೆ. ಆದರೆ, ಮಾರುತಿಯ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಯಾವುದೇ ಕಾರ್ಪೊರೇಟ್ ಡಿಸ್ಕೌಂಟ್‌ ಇಲ್ಲ.

  • ಇದರ ಬೆಲೆಗಳು 5.36 ಲಕ್ಷ ರೂ.ನಿಂದ 7.05 ಲಕ್ಷ ರೂ.ವರೆಗೆ ಇದೆ.

ಹಳೆಯ ಜನರೇಶನ್‌ನ ಸ್ವಿಫ್ಟ್‌

Old-generation Maruti Swift

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

  20,000 ರೂ.

ಎಕ್ಸ್‌ಚೇಂಜ್‌ ಬೋನಸ್‌

15,000 ರೂ. 

ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್‌ (<7 ವರ್ಷಗಳು)

  5,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

2,100 ರೂ.

ಒಟ್ಟು ಲಾಭಗಳು

42,100 ರೂ.

  • ಸ್ಟಾಕ್ ಅನ್ನು ತೆರವುಗೊಳಿಸುವವರೆಗೆ ಕಾರು ತಯಾರಕರು ಹಳೆಯ-ಜನ್ ಸ್ವಿಫ್ಟ್‌ನಲ್ಲಿಯೂ ಪ್ರಯೋಜನಗಳನ್ನು ನೀಡುತ್ತಿದ್ದಾರೆ.

  • ಇಲ್ಲಿಯೂ ಸಹ, 20,000 ರೂ.ವರೆಗಿನ  ಕ್ಯಾಶ್‌ ಡಿಸ್ಕೌಂಟ್‌ ಪಡೆಯುವ ಮೂಲಕ ಎಎಮ್‌ಟಿ ಆವೃತ್ತಿಗಳು ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಆವೃತ್ತಿಗಳಾಗಿವೆ.

  • ಮ್ಯಾನುಯಲ್‌ ಆವೃತ್ತಿಗಳು 15,000ವರೆಗೆ ಕಡಿಮೆ ರಿಯಾಯಿತಿಯನ್ನು ಪಡೆಯುತ್ತವೆ ಮತ್ತು ಸಿಎನ್‌ಜಿ ಆವೃತ್ತಿಗಳು ಯಾವುದೇ ಕ್ಯಾಶ್‌ ಡಿಸ್ಕೌಂಟ್‌ಗಳನ್ನು ನೀಡುವುದಿಲ್ಲ.

  • ಎಲ್ಲಾ ಆವೃತ್ತಿಗಳು 15,000 ರೂ.ವರೆಗೆ ಎಕ್ಸ್‌ಚೇಂಜ್‌ ಬೋನಸ್ ಅನ್ನು ಪಡೆಯುತ್ತವೆ ಮತ್ತು ನೀವು 7 ವರ್ಷಕ್ಕಿಂತ ಕಡಿಮೆ ಹಳೆಯದಾದ ಎಕ್ಸ್‌ಚೇಂಜ್‌ಗಾಗಿ ಕಾರನ್ನು ಹೊಂದಿದ್ದರೆ, ನೀವು ರೂ 5,000 ವರೆಗಿನ ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್ ಅನ್ನು ಸಹ ಪಡೆಯಬಹುದು.

  • 18,400 ರೂ.ಗಳ ಹೆಚ್ಚುವರಿ ಬೆಲೆಗೆ ಸ್ವಿಫ್ಟ್‌ನ ಸ್ಪೇಷಲ್‌ ಎಡಿಷನ್‌ ಸಹ ಲಭ್ಯವಿದೆ.

  • ಪ್ರಸ್ತುತ ಹಳೆಯ-ತಲೆಯಮಾರಿನ ಮಾರುತಿ ಸ್ವಿಫ್ಟ್‌ನ ಬೆಲೆ 6.24 ಲಕ್ಷ ರೂ.ನಿಂದ 9.14 ಲಕ್ಷ ರೂ.ವರೆಗೆ ಇದೆ.

ಸ್ವಿಫ್ಟ್‌ 2024

Swift 2024

ಆಪರ್‌

ಮೊತ್ತ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ. 

ಕಾರ್ಪೋರೇಟ್‌ ಡಿಸ್ಕೌಂಟ್‌

2,100 ರೂ.

ಒಟ್ಟು ಲಾಭಗಳು

17,100 ರೂ.ವರೆಗೆ

  • 2024ರ ಸ್ವಿಫ್ಟ್ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್‌ಅನ್ನು ಹೊರತುಪಡಿಸಿ ಯಾವುದೇ ಇತರ ಡೀಲ್‌ಗಳನ್ನು ನೀಡುವುದಿಲ್ಲ.

  • ಗ್ರಾಹಕರು ಅದರ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರಲ್ಲೂ 15,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಅನ್ನು ಪಡೆಯಬಹುದು, ಜೊತೆಗೆ 2,100 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಅನ್ನು ಪಡೆಯಬಹುದು.

  • ಇದರ ಬೆಲೆ 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ವರೆಗೆ ಇದೆ.

ಈಕೊ

Maruti Eeco

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

20,000 ರೂ.

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

2,100 ರೂ.

ಒಟ್ಟು ಲಾಭಗಳು

37,100 ರೂ.

  • ಮಾರುತಿಯ ಈ ವ್ಯಾನ್‌ನ ಪೆಟ್ರೋಲ್‌ ಆವೃತ್ತಿಗಳು ಮಾತ್ರ ಈ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತದೆ.

  • ಸಿಎನ್‌ಜಿ ಆವೃತ್ತಿಯು 10,000 ರೂ.ವರೆಗಿನ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯುತ್ತದೆ.

  • ಎಲ್ಲಾ ಆವೃತ್ತಿಗಳು ಒಂದೇ ರೀತಿಯ ಎಕ್ಸ್‌ಚೇಂಜ್‌ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಪಡೆಯುತ್ತವೆ.

  • ಮಾರುತಿ ಇಕೋದ ಬೆಲೆಗಳು 5.32 ಲಕ್ಷ ರೂ.ನಿಂದ 6.58 ಲಕ್ಷ ರೂಪಾಯಿಗಳಷ್ಟಿದೆ.

ಡಿಜೈರ್‌

Maruti Dzire

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

15,000 ರೂ. 

ಎಕ್ಸ್‌ಚೇಂಜ್‌ ಬೋನಸ್‌

15,000 ರೂ. 

ಒಟ್ಟು ಲಾಭಗಳು

  30,000 ರೂ.

  • ಮಾರುತಿಯ ಸಬ್-ಕಾಂಪ್ಯಾಕ್ಟ್ ಸೆಡಾನ್‌ನ ಎಎಮ್‌ಟಿ ಆವೃತ್ತಿಗಳು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತದೆ. ಮ್ಯಾನುಯಲ್‌ ಆವೃತ್ತಿಗಳು 10,000 ರೂ.ವರೆಗೆ ಮಾತ್ರ ಕ್ಯಾಶ್‌ ಡಿಸ್ಕೌಂಟ್‌ ಅನ್ನು ಹೊಂದಿವೆ. ಆದರೆ ಈ ಎರಡೂ ಆವೃತ್ತಿಗಳು 15,000 ರೂಪಾಯಿಗಳವರೆಗಿನ ವಿನಿಮಯ ಬೋನಸ್ ಅನ್ನು ಪಡೆಯುತ್ತವೆ.

  • ದುರದೃಷ್ಟವಶಾತ್, ಡಿಜೈರ್ ಸಿಎನ್‌ಜಿ ಆವೃತ್ತಿಗಳು ಯಾವುದೇ ಡಿಸ್ಕೌಂಟ್‌ ಅನ್ನು ಪಡೆಯುವುದಿಲ್ಲ.

  • ಮಾರುತಿ ಡಿಜೈರ್‌ನ ಬೆಲೆಗಳು 6.57 ಲಕ್ಷ ರೂ.ನಿಂದ 9.39 ಲಕ್ಷ.ರೂ.ಗಳ ನಡುವೆ ಇದೆ. 

ಬ್ರೆಝಾ

Maruti Brezza

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

10,000 ರೂ.

ಎಕ್ಸ್‌ಚೇಂಜ್‌ ಬೋನಸ್‌

15,000 ರೂ. 

ಒಟ್ಟು ಲಾಭಗಳು

25,000 ರೂ.

  • ಎಸ್‌ಯುವಿಯ ಟಾಪ್‌-ಸ್ಪೆಕ್ ಮ್ಯಾನುಯಲ್‌ ಟ್ರಾನ್ಸ್‌ಮಿಷನ್ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ  ಆವೃತ್ತಿಗಳು 25,000 ರೂ.ವರೆಗೆ ಒಟ್ಟು ಪ್ರಯೋಜನಗಳೊಂದಿಗೆ ಬರುತ್ತವೆ. ಆದರೆ, ಮಾರುತಿ ಬ್ರೆಜ್ಜಾದ ಸಿಎನ್‌ಜಿ ಆವೃತ್ತಿಯು ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

  • ಎಲ್ಲಾ ಇತರ ಆವೃತ್ತಿಗಳು 15,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್‌ನೊಂದಿಗೆ ಮಾತ್ರ ಲಭ್ಯವಿದೆ.

  • ಮಾರುತಿ ಬ್ರೆಝಾದ ಬೆಲೆಯು 8.34 ಲಕ್ಷ ರೂ.ನಿಂದ 14.14 ಲಕ್ಷ ರೂಪಾಯಿಗಳಷ್ಟಿದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ

ಗಮನಿಸಿ: ನಿಮ್ಮ ಸ್ಥಳ ಮತ್ತು ಆಯ್ಕೆ ಮಾಡಿದ ಆವೃತ್ತಿಗಳ ಆಧಾರದ ಮೇಲೆ ಈ ಆಫರ್‌ಗಳು ಭಿನ್ನವಾಗಿರಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು, ನಿಮ್ಮ ಹತ್ತಿರದ ಮಾರುತಿ ಅರೆನಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ವಿನಂತಿಸುತ್ತೇವೆ. 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ಅನ್ನು ಫಾಲೋ ಮಾಡಿ   .

ಇನ್ನಷ್ಟು ಓದಿ: ಆಲ್ಟೊ ಕೆ10 ಆನ್‌ರೋಡ್‌ ಬೆಲೆ   

was this article helpful ?

Write your Comment on Maruti ಆಲ್ಟೊ ಕೆ10

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience