Login or Register ಅತ್ಯುತ್ತಮ CarDekho experience ಗೆ
Login

ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ

modified on ಮೇ 07, 2024 12:19 pm by rohit for ಮಾರುತಿ ಬಾಲೆನೋ

ಮಾರುತಿ ಫ್ರಾಂಕ್ಸ್ ಕಡಿಮೆ ರಿಯಾಯಿತಿಗಳನ್ನು ಹೊಂದಿದೆ ಆದರೆ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗಾಗಿ ನೀವು 50,000 ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು

  • ಮಾರುತಿ ಗ್ರ್ಯಾಂಡ್ ವಿಟಾರಾದಲ್ಲಿ ಗರಿಷ್ಠ 74,000 ರೂ.ವರೆಗಿನ ರಿಯಾಯಿತಿಗಳು ಲಭ್ಯವಿದೆ.
  • ಬಲೆನೊ ಮತ್ತು ಜಿಮ್ನಿ 50,000 ರೂ.ವರೆಗಿನ ಪ್ರಯೋಜನಗಳನ್ನು ಹೊಂದಿದೆ.
  • ಮಾರುತಿಯು ಫ್ರಾಂಕ್ಸ್ ಅನ್ನು ರೂ 28,000 ವರೆಗಿನ ಉಳಿತಾಯದೊಂದಿಗೆ ನೀಡುತ್ತಿದೆ.
  • ಇಗ್ನಿಸ್ ಒಟ್ಟು ರೂ 58,000 ವರೆಗಿನ ಕೊಡುಗೆಗಳನ್ನು ಪಡೆಯುತ್ತದೆ.
  • ಎಲ್ಲಾ ಕೊಡುಗೆಗಳು 2024ರ ಮೇ ತಿಂಗಳ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಮಾರುತಿಯ ನೆಕ್ಸಾ ಶ್ರೇಣಿಯು ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಸೇರಿದಂತೆ ಒಟ್ಟು ಎಂಟು ಮೊಡೆಲ್‌ಗಳನ್ನು ಒಳಗೊಂಡಿದೆ. ನೀವು ಈ ಮಾದರಿಗಳಲ್ಲಿ ಯಾವುದಾದರೂ ಒಂದನ್ನು ಖರೀದಿಸಲು ಯೋಜಿಸುತ್ತಿದ್ದರೆ, ಟೊಯೊಟಾ ಇನ್ನೋವಾ ಹೈಕ್ರಾಸ್-ಆಧಾರಿತ ಇನ್ವಿಕ್ಟೊ ಎಮ್‌ಪಿವಿಯನ್ನು ಹೊರತುಪಡಿಸಿ ಇತರ ಎಲ್ಲಾ ಕಾರುಗಳ ಮೇಲೆ ಮಾರುತಿಯು ವಿವಿಧ ರಿಯಾಯಿತಿಗಳನ್ನು ಹೊರತಂದಿದೆ. 2024ರ ಮೇ ತಿಂಗಳ ಅಂತ್ಯದವರೆಗೆ ಮಾನ್ಯವಾಗಿರುವ ಮೊಡೆಲ್‌-ವಾರು ಆಫರ್‌ಗಳ ವಿವರಗಳು ಇಲ್ಲಿದೆ:

ಬಲೆನೋ

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

30,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

5,000 ರೂ.

ಒಟ್ಟು ಲಾಭಗಳು

50,000 ರೂ.ವರೆಗೆ

  • ಮಾರುತಿ ಬಲೆನೊದ ಎಎಮ್‌ಟಿ ಮೊಡೆಲ್‌ಗಳು ಮಾತ್ರ ಮೇಲೆ ತಿಳಿಸಿದ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತವೆ.

  • ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸುವವರಿಗೆ, ನಗದು ರಿಯಾಯಿತಿಯು 5,000 ರೂ.ರಷ್ಟು ಕಡಿಮೆಯಾಗುತ್ತದೆ, ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿಯುತ್ತವೆ.

  • ಖರೀದಿದಾರರು ಎಕ್ಸ್‌ಚೇಂಜ್‌ ಬೋನಸ್ ಬದಲಿಗೆ 20,000 ರೂಗಳ ಒಪ್ಷನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು.

  • ನೀವು ಬಲೆನೊ ಸಿಎನ್‌ಜಿ ಖರೀದಿಸಲು ಬಯಸಿದರೆ, ಮಾರುತಿ ಅದನ್ನು ರೂ 10,000 ನಗದು ರಿಯಾಯಿತಿಯೊಂದಿಗೆ ಒದಗಿಸುತ್ತಿದೆ, ಆದರೆ ಇತರ ರಿಯಾಯಿತಿಗಳು ಪರಿಣಾಮ ಬೀರುವುದಿಲ್ಲ.

  • ಮಾರುತಿ ಬಲೆನೊದ ಬೆಲೆಯು 6.66 ಲಕ್ಷ ರೂ.ನಿಂದ 9.88 ಲಕ್ಷ ರೂ.ವರೆಗೆ ಇರಲಿದೆ.

ಫ್ರಾಂಕ್ಸ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

15,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

3,000 ರೂ.

ಒಟ್ಟು ಲಾಭಗಳು

28,000 ರೂ.ವರೆಗೆ

  • ನೀವು ಮಾರುತಿ ಫ್ರಾಂಕ್ಸ್‌ನ ಟರ್ಬೊ-ಪೆಟ್ರೋಲ್ ಆವೃತ್ತಿಗಳನ್ನು ಆರಿಸಿದರೆ, ಮಾರುತಿ ಅವುಗಳನ್ನು 43,000 ರೂ.ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್‌ನೊಂದಿಗೆ ನೀಡುತ್ತಿದೆ.
  • ಎಕ್ಸ್‌ಚೇಂಜ್‌ ಬೋನಸ್ ಬದಲಿಗೆ 15,000 ರೂ.ಗಳ ಒಪ್ಷನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು.
  • ಅದರ ರೆಗುಲರ್‌ ಪೆಟ್ರೋಲ್ ಆವೃತ್ತಿಗಳನ್ನು ಖರೀದಿಸಲು ಬಯಸುವವರಿಗೆ, ಕ್ಯಾಶ್‌ ಡಿಸ್ಕೌಂಟ್‌ 10,000 ರೂ.ನಷ್ಟು ಸಿಗುತ್ತದೆ, ಆದರೆ ಫ್ರಾಂಕ್ಸ್ ಸಿಎನ್‌ಜಿ ಕೇವಲ ಎಕ್ಸ್‌ಚೇಂಜ್‌ ಬೋನಸ್ ಅಥವಾ ಸ್ಕ್ರ್ಯಾಪೇಜ್ ಬೋನಸ್‌ನೊಂದಿಗೆ ಬರುತ್ತದೆ.
  • ಮಾರುತಿಯು ಫ್ರಾಂಕ್ಸ್‌ನ ಬೆಲೆಯನ್ನು 7.51 ಲಕ್ಷ ರೂ.ನಿಂದ 13.04 ಲಕ್ಷ ರೂಪಾಯಿಗಳವರೆಗೆ ನಿಗದಿಪಡಿಸಿದೆ.

ಗ್ರ್ಯಾಂಡ್ ವಿಟಾರಾ

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

20,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

50,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

4,000 ರೂ.

ಒಟ್ಟು ಲಾಭಗಳು

74,000 ರೂ.ವರೆಗೆ

  • ಮೇಲೆ ತಿಳಿಸಿದ ಉಳಿತಾಯವು ಮಾರುತಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್-ಹೈಬ್ರಿಡ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ, ಇದರ ಬೆಲೆಯು 18.43 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

  • ಮಾರುತಿಯು ಎಸ್‌ಯುವಿಯ ಸ್ಟ್ರಾಂಗ್-ಹೈಬ್ರಿಡ್ ವೇರಿಯೆಂಟ್‌ಗಳನ್ನು 55,000 ರೂ.ವರೆಗಿನ ಅತ್ಯಧಿಕ ಒಪ್ಷನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್‌ನೊಂದಿಗೆ (ಎಕ್ಸ್‌ಚೇಂಜ್‌ ಬೋನಸ್ ಬದಲಿಗೆ) ಸಹ ನೀಡುತ್ತಿದೆ.

  • ಎಸ್‌ಯುವಿಯ ಟಾಪ್‌-ಎಂಡ್‌ ಪೆಟ್ರೋಲ್ ಆವೃತ್ತಿಯು ಝೀಟಾ ಮತ್ತು ಆಲ್ಫಾ ವೇರಿಯೆಂಟ್‌ಗಳನ್ನು (ಎಡಬ್ಲ್ಯೂಡಿ ಒಳಗೊಂಡಂತೆ) ಆಯ್ಕೆ ಮಾಡುವವರಿಗೆ, ಕ್ಯಾಶ್‌ ಡಿಸ್ಕೌಂಟ್‌ 5,000 ರೂ.ನಷ್ಟು ಹೆಚ್ಚಾಗುತ್ತದೆ ಮತ್ತು ಎಕ್ಸ್‌ಚೇಂಜ್‌ ಮತ್ತು ಸ್ಕ್ರ್ಯಾಪ್‌ಪೇಜ್ ಬೋನಸ್‌ಗಳು ರೂ 20,000 ರಷ್ಟು ಕಡಿಮೆಯಾಗುತ್ತವೆ.

  • ಮಿಡ್-ಸ್ಪೆಕ್ ಗ್ರಾಂಡ್ ವಿಟಾರಾದ ಡೆಲ್ಟಾ ಆವೃತ್ತಿಯು 10,000 ರೂ.ನಷ್ಟು ಕ್ಯಾಶ್‌ ಡಿಸ್ಕೌಂಟ್‌, ರೂ 30,000 ಎಕ್ಸ್‌ಚೇಂಜ್‌ ಬೋನಸ್ ಮತ್ತು 4,000 ರೂ.ವರೆಗಿನ ಕಾರ್ಪೊರೇಟ್ ಡಿಸ್ಕೌಂಟ್‌ ನೊಂದಿಗೆ ಲಭ್ಯವಿದೆ.

  • ಮಾರುತಿಯು ಎಸ್‌ಯುವಿಯ ಬೇಸ್-ಸ್ಪೆಕ್ ಸಿಗ್ಮಾ ಆವೃತ್ತಿಯನ್ನು ಕೇವಲ 4,000 ರೂಗಳ ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡುತ್ತಿದೆ.

  • ಗ್ರ್ಯಾಂಡ್ ವಿಟಾರಾವು 10.99 ಲಕ್ಷ ರೂ.ನಿಂದ 20.09 ಲಕ್ಷ ರೂ.ವರೆಗೆ ಮಾರಾಟವಾಗುತ್ತಿದೆ.

ಜಿಮ್ನಿ

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

50,000 ರೂ.

ಒಟ್ಟು ಪ್ರಯೋಜನಗಳು

50,000 ರೂ.ವರೆಗೆ

  • ಮಾರುತಿ ಜಿಮ್ನಿಯ ಎಲ್ಲಾ ಆವೃತ್ತಿಗಳು 50,000 ರೂ.ವರೆಗಿನ ಪ್ರಯೋಜನಗಳನ್ನು ಹೊಂದಿವೆ.

  • ಮಾರುತಿ ಇದರಲ್ಲಿ ಯಾವುದೇ ವಿನಿಮಯ ಬೋನಸ್ ಅಥವಾ ಸ್ಕ್ರ್ಯಾಪ್‌ಪೇಜ್ ಬೋನಸ್‌ ನೀಡುತ್ತಿಲ್ಲ.

  • ಜಿಮ್ನಿಯ ಬೆಲೆ 12.74 ಲಕ್ಷ ರೂ.ನಿಂದ 14.95 ಲಕ್ಷ ರೂ.ವರೆಗೆ ಇದೆ.

ಇದನ್ನು ಸಹ ಓದಿ: ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ

ಎಕ್ಸ್‌ಎಲ್‌6

ಆಫರ್‌

ಮೊತ್ತ

ಎಕ್ಸ್‌ಚೇಂಜ್‌ ಬೋನಸ್

20,000 ರೂ.

ಒಟ್ಟು ಪ್ರಯೋಜನಗಳು

20,000 ರೂ.ವರೆಗೆ

  • ಮೇಲೆ ತಿಳಿಸಲಾದ ಎಕ್ಸ್‌ಚೇಂಜ್‌ ಬೋನಸ್ ಅನ್ನು ಮಾರುತಿ ಎಕ್ಸ್‌ಎಲ್‌6ನ ಪೆಟ್ರೋಲ್ ಆವೃತ್ತಿಗಳೊಂದಿಗೆ ಮಾತ್ರ ನೀಡಲಾಗುತ್ತದೆ.

  • ಎಕ್ಸ್‌ಚೇಂಜ್‌ ಬೋನಸ್ ಬದಲಿಗೆ 25,000 ರೂ.ಗಳ ಒಪ್ಷನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು.

  • ಎಕ್ಸ್‌ಎಲ್‌6 ಎಮ್‌ಪಿವಿಯ ಸಿಎನ್‌ಜಿ ವೇರಿಯಂಟ್‌ಗಳಲ್ಲಿ ಯಾವುದೇ ರಿಯಾಯಿತಿ ಇಲ್ಲ.

  • ಮಾರುತಿಯ ಈ ಎಂಪಿವಿಯ ಬೆಲೆ 11.61 ಲಕ್ಷ ರೂ.ನಿಂದ 14.77 ಲಕ್ಷ ರೂ.ವರೆಗೆ ಇರಲಿದೆ.

ಸಿಯಾಝ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

20,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

25,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

3,000 ರೂ.

ಒಟ್ಟು ಲಾಭಗಳು

48,000 ರೂ.ವರೆಗೆ

  • ಮಾರುತಿ ಸಿಯಾಜ್‌ನ ಎಲ್ಲಾ ಆವೃತ್ತಿಗಳು ಮೇಲೆ ತಿಳಿಸಿದ ಉಳಿತಾಯವನ್ನು ಪಡೆಯುತ್ತದೆ.

  • ಖರೀದಿದಾರರು ಎಕ್ಸ್‌ಚೇಂಜ್‌ ಬೋನಸ್ ಬದಲಿಗೆ 30,000 ರೂ.ಗಳ ಒಪ್ಷನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು.

  • ಮಾರುತಿ ಸಿಯಾಝ್‌ನ ಬೆಲೆ 9.40 ಲಕ್ಷ ರೂ.ಗಳಿಂದ 12.29 ಲಕ್ಷ ರು.ಗಳ ನಡುವೆ ಇದೆ.

ಇಗ್ನಿಸ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.

ಕಾರ್ಪೋರೇಟ್‌ ಡಿಸ್ಕೌಂಟ್‌

3,000 ರೂ.

ಒಟ್ಟು ಲಾಭಗಳು

58,000 ರೂ.ವರೆಗೆ

  • ಮೇಲೆ ತಿಳಿಸಲಾದ ಮಾರುತಿ ಇಗ್ನಿಸ್‌ಗೆ ಗರಿಷ್ಠ ರಿಯಾಯಿತಿಗಳು AMT ಆವೃತ್ತಿಗಳಿಗೆ ಅನ್ವಯಿಸುತ್ತವೆ.

  • ನೀವು ಹ್ಯಾಚ್‌ಬ್ಯಾಕ್‌ನ ಮ್ಯಾನುವಲ್ ಆವೃತ್ತಿಯನ್ನು ಆರಿಸಿದರೆ, ನಗದು ರಿಯಾಯಿತಿಯು ರೂ 5,000 ರಷ್ಟು ಕಡಿಮೆಯಾಗುತ್ತದೆ, ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿಯುತ್ತವೆ.

  • ನೀವು 15,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಆರಿಸಿಕೊಳ್ಳಬಹುದು ಅಥವಾ 20,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್‌ನ ಆಯ್ಕೆ ಮಾಡಬಹುದು.

  • ಮಾರುತಿ ಇಗ್ನಿಸ್‌ನ ಬೆಲೆಯನ್ನು 5.84 ಲಕ್ಷದಿಂದ 8.11 ಲಕ್ಷ ರು.ಗಳವರೆಗೆ ನಿಗದಿಪಡಿಸಿದೆ.

ಗಮನಿಸಿ:

1) ಗ್ರಾಹಕರ ಅರ್ಹತೆಯ ಆಧಾರದ ಮೇಲೆ ಕಾರ್ಪೊರೇಟ್ ಕೊಡುಗೆಗಳು ಬದಲಾಗಬಹುದು.

2) ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಪ್ರಯೋಜನಗಳು ಬದಲಾಗಬಹುದು, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

3) ತಿಳಿಸಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು

ಇನ್ನಷ್ಟು ಓದಿ: ಮಾರುತಿ ಬಲೆನೊ ಎಎಂಟಿ

r
ಅವರಿಂದ ಪ್ರಕಟಿಸಲಾಗಿದೆ

rohit

  • 23 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಬಾಲೆನೋ

Read Full News

explore similar ಕಾರುಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಫ್ರಾಂಕ್ಸ್‌

ಪೆಟ್ರೋಲ್21.79 ಕೆಎಂಪಿಎಲ್
ಸಿಎನ್‌ಜಿ28.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಎಕ್ಸ್‌ಎಲ್ 6

ಪೆಟ್ರೋಲ್20.97 ಕೆಎಂಪಿಎಲ್
ಸಿಎನ್‌ಜಿ26.32 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ