Login or Register ಅತ್ಯುತ್ತಮ CarDekho experience ಗೆ
Login

ಸ್ಕೆಚ್ ವರ್ಸಸ್ ರಿಯಾಲಿಟಿ: 2023 ವರ್ನಾ ಟೀಸರ್‌ಗಳಂತೆ ನಿಖರವಾಗಿ ಕಾಣುವುದಿಲ್ಲ ಯಾಕೆ ?

published on ಫೆಬ್ರವಾರಿ 27, 2023 07:47 pm by ansh for ಹುಂಡೈ ವೆರ್ನಾ

ಮುಂಬರುವ ಹ್ಯುಂಡೈ ಸೆಡಾನ್, ಶಕ್ತಿಯುತ ಮತ್ತು ಸ್ಪೋರ್ಟಿ ಹೊಸ ಡಿಸೈನ್‌ನ ಸ್ಕೆಚ್‌ಗಳ ಮೂಲಕ ಖರೀದಿದಾರರನ್ನು ಉತ್ಸುಕಗೊಳಿಸಿದೆ, ಆದರೆ ಅನುಭವವು ನಮ್ಮ ನಿರೀಕ್ಷೆಗಳನ್ನು ತಗ್ಗಿಸುವಂತೆ ಮಾಡಿದೆ.

ಆಟೋಮೋಟಿವ್ ಡಿಸೈನ್ ಹಲವು ಹಂತಗಳನ್ನೊಳಗೊಂಡ ದೀರ್ಘ ಪ್ರಕ್ರಿಯೆಯಾಗಿದ್ದು. ಅಂತಿಮ ನೋಟವನ್ನು ನಿರ್ಧರಿಸುವ ಮೊದಲು ವಿವಿಧ ರೀತಿಯ ವಸ್ತುಗಳ ಬಳಕೆಯನ್ನು ಒಳಗೊಂಡಿರುತ್ತದೆ. ಒಂದು ಕಾಗದದ ಮೇಲೆ ಸ್ಕೆಚ್‌ನಂತೆ ಚಿತ್ರಿಸಲಾಗುವ ಇವೆಲ್ಲವೂ ಒಂದು ಕಲ್ಪನೆಯೊಂದಿಗೆ ಪ್ರಾರಂಭವಾಗುತ್ತದೆ. ಈ ಕಲ್ಪನೆಯು ಡಿಸೈನ್ ಆಗುತ್ತದೆ ಮತ್ತು ಅಂತಿಮವಾಗಿ ಉತ್ಪಾದನೆಯಾಗುತ್ತದೆ. ಸಾಮಾನ್ಯವಾಗಿ ವೆಚ್ಚ-ಪರಿಣಾಮಕಾರಿ ಒಟ್ಟು ಉತ್ಪಾದನೆಯ ಮಿತಿಗಳು ಮತ್ತು ಮಾರುಕಟ್ಟೆಯ ಚಾಲನಾ ಪರಿಸ್ಥಿತಿಗಳಿಗೆ ಸರಿಹೊಂದುವ ಸಲುವಾಗಿ ಡಿಸೈನ್ ಅಂತಿಮವಾಗಿದ್ದರೂ, ಅಂತಿಮ ಉತ್ಪನ್ನವು ಸ್ಕೆಚ್‌ಗಿಂತ ತುಸು ವಿಭಿನ್ನವಾಗಿ ಕಾಣುತ್ತದೆ.

ತೀರಾ ಇತ್ತೀಚೆಗೆ, ಹ್ಯುಂಡೈ ತನ್ನ ಮುಂದಿನ ಕೊಡುಗೆಯಾದ ಆರನೇ-ಜನರೇಷನ್ ವರ್ನಾ, ತನ್ನ ಸ್ಕೆಚ್ ಅನ್ನು ಹಂಚಿಕೊಂಡಿದ್ದು, ಇದು ಟಾರ್ಗೆಟ್ ಆಡಿಯನ್ಸ್ ಅನ್ನು ಉತ್ಸುಕಗೊಳಿಸಿದೆ. ಸ್ಕೆಚ್ ನಮಗೆ ಸ್ಪೋರ್ಟಿ ಮತ್ತು ಪ್ರೀಮಿಯಂ ಸ್ಟ್ರಾನ್ಸ್ ತೀಕ್ಷ್ಣವಾದ ರೇಖೆಗಳು ಮತ್ತು ದೊಡ್ಡ ವ್ಹೀಲ್‌ಗಳೊಂದಿಗೆ ಅದರ ಇತ್ತೀಚಿನ ವಿನ್ಯಾಸ ಭಾಷ್ಯವನ್ನು ತೋರಿಸುತ್ತವೆ. ಆದರೆ ಈ ಕಾಂಪ್ಯಾಕ್ಟ್ ಸೆಡಾನ್ ನಿಖರವಾಗಿ ಕಾರು ತಯಾರಕರು ಟೀಸರ್‌ನಲ್ಲಿ ತೋರಿಸಿರುವಂತೆಯೇ ಗೋಚರಿಸುವುದಿಲ್ಲ.

ಇದನ್ನೂ ಓದಿ: ಕ್ರೆಟಾ EV ಭಾರತಕ್ಕೆ ಹ್ಯುಂಡೈನ ಮೊದಲ ಶ್ರೀಸಾಮಾನ್ಯ ಮಾರುಕಟ್ಟೆ ಎಲೆಕ್ಟ್ರಿಕ್ ಕಾರು ಆಗಬಹುದೇ?

ನಮ್ಮ ಪಾಯಿಂಟ್ ಅನ್ನು ಉತ್ತಮವಾಗಿ ವಿವರಿಸಲು, ಬಿಡುಗಡೆ ಪೂರ್ವ ಟೀಸರ್ ಸ್ಕೆಚ್ ಅಂತಿಮ ಉತ್ಪನ್ನದಿಂದ ಹೇಗೆ ವಿಭಿನ್ನವಾಗಿದೆ ಎಂಬುದನ್ನು ತೋರಿಸುವಂತಹ, ಹೆಚ್ಚಿನವು ಹ್ಯುಂಡೈನಿಂದಲೇ ಆಗಿರುವ ಐದು ಕಾರುಗಳ ಉದಾಹರಣೆಗಳನ್ನು ನಾವು ನೀಡುತ್ತೇವೆ.

ಹ್ಯುಂಡೈ ಕ್ರೆಟಾ

ಇದರ ಸ್ಕೆಚ್ ಮತ್ತು ನಾವು ಪಡೆದ ಎಸ್‌ಯುವಿಯ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ಫ್ರಂಟ್ ಪ್ರೊಫೈಲ್ ಸ್ವಲ್ಪ ಮಟ್ಟಿಗೆ ಸ್ಕೆಚ್‌ನಲ್ಲಿರುವಂತೆಯೇ ಗೋಚರಿಸಿದರೆ, ಸ್ಕೆಚ್‌ನ ಸೈಡ್ ಪ್ರೊಫೈಲ್ ಉತ್ಪ್ರೇಕ್ಷಿತ ಪ್ರಮಾಣವನ್ನು ಹೊಂದಿದ್ದು, ಬಿಡುಗಡೆಯಾದ ಕಾರಿನಂತೆ ಗೋಚರಿಸುವುದಿಲ್ಲ. ಸ್ಕೆಚ್‌ನಲ್ಲಿ, ಕಿಟಕಿಗಳು ಮತ್ತು ORVMಗಳು ನಯವಾಗಿ ಕಾಣುತ್ತವೆ ಮತ್ತು ಬಾಗಿಲುಗಳು ದೊಡ್ಡದಾಗಿ ಕಾಣುತ್ತವೆ. ಮತ್ತು ಅತಿ ದೊಡ್ಡ ಬದಲಾವಣೆಯೆಂದರೆ, ಚಕ್ರಗಳು, ಇದು ಬಿಡುಗಡೆಯಾದ ಕಾರಿನಲ್ಲಿರುವ 17-ಇಂಚಿನ ಆರ್ಚ್‌ಗಳಿಗಿಂತ ಹೆಚ್ಚು ಆರ್ಚ್‌ಗಳಿಂತ ತುಂಬಿವೆ.

ಹ್ಯುಂಡೈ ಔರಾ

ಅಂತಿಮ ಉತ್ಪನ್ನವು ಟೀಸರ್ ಸ್ಕೆಚ್‌ಗಿಂತ ಭಿನ್ನವಾಗಿರುತ್ತದೆ ಎಂಬುದಕ್ಕೆ ಇನ್ನೂ ಉತ್ತಮ ಉದಾಹರಣೆಯೆಂದರೆ ಈ ಔರಾ. ಸ್ಕೆಚ್‌ನಲ್ಲಿ ನವೀಕೃತ ಪೂರ್ವ ಔರಾ, ಉಬ್ಬಿದ ವ್ಹೀಲ್ ಆರ್ಚ್‌ಗಳು, ಆಳವಾದ ಇಂಡೆಂಟ್‌ ಹೊಂದಿರುವ ಪ್ರೊಫೈಲ್‌ಗಳು, ಲೋ-ರೈಡಿಂಗ್ ಸ್ಟ್ಯಾನ್ಸ್ ಹೊಂದಿದ್ದು, ಬಿಡುಗಡೆಯಾದ ಕಾರಿಗಿಂತ ಹೆಚ್ಚಾಗಿ ಸ್ಪೋರ್ಟ್ ಕಾರಿನಂತೆ ಕಾಣುತ್ತದೆ. ಹ್ಯುಂಡೈ ನಿಜವಾದ ಕಾರನ್ನು ಬಿಡುಗಡೆಗೊಳಿಸಿದಾಗ, ಇದೊಂದು ಸಂಕುಚಿತಗೊಳಿಸಿದ ಸಬ್‌ಕಾಂಪ್ಯಾಕ್ಟ್ ಗಾತ್ರವನ್ನು ಹೊಂದಿರುವ ಸಾಂಪ್ರದಾಯಿಕ ಸೆಡಾನ್ ಎಂಬುದು ತಿಳಿದುಬಂದಿದೆ.

ಹ್ಯುಂಡೈ ಅಲ್ಕಾಝರ್

ಹ್ಯುಂಡೈನ ಸ್ಕೆಚ್ ಹಾಗೂ ಅಂತಿಮ ಉತ್ಪನ್ನಕ್ಕೆ ನಿಕಟ ಸಂಬಂಧವನ್ನು ಹೊಂದಿರುವ ಕಾರು ಇಲ್ಲಿದೆ. ಎ-ಪಿಲ್ಲರ್ ರೇಕ್ ಮತ್ತು ಚಿತ್ರದಲ್ಲಿರುವಂತೆ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊರತುಪಡಿಸಿದರೆ ಸ್ಕೆಚ್ ಮತ್ತು ನಿಜವಾದ ಕಾರು ಒಂದಕ್ಕೊಂದು ಹೋಲುತ್ತವೆ.

ಸ್ಕೋಡಾ ಕುಶಾಕ್

ಬಿಡುಗಡೆಗೆ ಮುಂಚಿತವಾಗಿ ಡಿಸೈನ್ ಸ್ಕೆಚ್ ಅನ್ನು ಭಾರತದಲ್ಲಿ ಟೀಸರ್ ಮೂಲಕ ತೋರಿಸುವ ಕೆಲವು ಬ್ರ್ಯಾಂಡ್‌ಗಳಲ್ಲಿ ಸ್ಕೋಡಾ ಸಹ ಒಂದು. ಹ್ಯುಂಡೈನ ಇತ್ತೀಚಿನ ಕಾರುಗಳಿಗೆ ಹೋಲಿಸಿದರೆ, ಈ ಬ್ರ್ಯಾಂಡ್‌ನ ಸ್ಕೆಚ್‌ಗಳು ನಿಜವಾದ ಕಾರಿಗೆ ತೀರಾ ಹತ್ತಿರದ ಸಾಮ್ಯತೆಯನ್ನು ಹೊಂದಿವೆ, ವಿಶೇಷವಾಗಿ ಈ ಕುಶಾಕ್‌ನ ವಿಷಯದಲ್ಲಿ. ಬಿಡುಗಡೆಗೊಳಿಸಿದ ಟೀಸರ್ ಮತ್ತು ನಿಜವಾದ ಎಸ್‌ಯುವಿ ಒಂದೇ ಒಂದು ಗಮನಾರ್ಹ ವ್ಯತ್ಯಾಸವನ್ನು ಹೊಂದಿದ್ದು, ಅದು ಅಲೋಯ್ ವ್ಹೀಲ್‌ಗಳ ಗಾತ್ರ ಮತ್ತು ಡಿಸೈನ್. ಇದು ಎಲ್ಲಾ ಸ್ಕೆಚ್‌ಗಳಿಗೂ ಸಂಬಂಧಿಸಿದೆ.

ಸ್ಕೋಡಾ ಸ್ಲೇವಿಯಾ

ಕುಶಾಕ್ ನಂತರ ಸ್ಕೋಡಾ ಸ್ಲೇವಿಯಾ, ಮತ್ತೊಂದು ಸೆಡಾನ್. ಇದರಲ್ಲಿಯೂ ಟೀಸರ್ ಸ್ಕೆಚ್ ಮತ್ತು ನಿಜವಾದ ಸೆಡಾನ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಚಕ್ರಗಳು ಮತ್ತು ಅವರು ಬದಲಿಸಿದ ಕಾರಿನ ಸ್ಟ್ಯಾನ್ಸ್. ಸ್ಕೆಚ್‌ನ ಡಿಸೈನ್ ವಿವರಗಳು ಉತ್ಪಾದಿತ ಕಾರಿನಲ್ಲಿರುವಂತೆಯೇ ಕಾಣುತ್ತದೆಯಾದರೂ, ಸ್ಕೆಚ್‌ನಲ್ಲಿ ಅದು ತೀಕ್ಷವಾಗಿ ಕಾಣುತ್ತದೆ.

ಹಾಗಾದರೆ 2023 ಹ್ಯುಂಡೈ ವರ್ನಾದಲ್ಲಿ ಇದರ ಅರ್ಥವೇನು? ಸರಳವಾಗಿ ಹೇಳುವುದಾದರೆ, ಕಾರು ತಯಾರಕರು ಟೀಸರ್‌ನಲ್ಲಿ ಬಿಡುಗಡೆಗೊಳಿಸಿದ ಡಿಸೈನ್ ಸ್ಕೆಚ್ ನಿಜವಾದ ಸೆಡಾನ್ ಹೇಗಿರುತ್ತದೆ ಎಂಬುದರ ಹತ್ತಿರದ ಸಾಮ್ಯತೆಯಾಗಿದೆ, ಮತ್ತು ಉತ್ಪಾದನೆ ಮತ್ತು ಭಾರತೀಯ ಚಾಲನಾ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗುವಂತೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನಿರೀಕ್ಷಿಸಬಹುದಾದ ದೊಡ್ಡ ವ್ಯತ್ಯಾಸವೆಂದರೆ ಚಕ್ರಗಳ ಗಾತ್ರ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಮತ್ತು ಅದು ಸೆಡಾನ್‌ನ ರೋಡ್ ಪ್ರೆಸೆನ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿರೀಕ್ಷಿಸಬಹುದಾದ ದೊಡ್ಡ ವ್ಯತ್ಯಾಸವಾಗಿದೆ.

ಇದನ್ನೂ ಓದಿ: ತನ್ನ ವರ್ಗದ ಅತ್ಯಂತ ಶಕ್ತಿಶಾಲಿ ಸೆಡಾನ್ ಆಗಬಹುದಾದ ಹ್ಯುಂಡೈನ ಹೊಸ ವರ್ನಾ!

ಹೊಸ ಹ್ಯುಂಡೈ ವರ್ನಾದ ಬುಕಿಂಗ್‌ಗಳು ತೆರೆದಿವೆ ಮತ್ತು ಮಾರ್ಚ್ 21 ರಂದು ಬಿಡುಗಡೆಗೊಳ್ಳುತ್ತಿದೆ. ಈ ಕಾಂಪ್ಯಾಕ್ಟ್ ಸೆಡಾನ್‍ಗೆ ರೂ.10 ಲಕ್ಷ ಮೇಲ್ಪಟ್ಟು (ex-showroom) ಬೆಲೆನಿಗದಿಪಡಿಸಲಾಗುತ್ತದೆ ಮತ್ತು ಸ್ಕೋಡಾ ಸ್ಲೆವಿಯಾ, ಫೋಕ್ಸ್‌ವ್ಯಾಗನ್ ವರ್ಚಸ್, ಮತ್ತು ನವೀಕೃತ ಹೋಂಡಾ ಸಿಟಿ, ಗೆ ಪ್ರತಿಸ್ಪರ್ಧಿಯಾಗಿದೆ.

a
ಅವರಿಂದ ಪ್ರಕಟಿಸಲಾಗಿದೆ

ansh

  • 24 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ವೆರ್ನಾ

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ