ಬಿಡುಗಡೆಗೆ ಮುಂಚಿತವಾಗಿಯೇ Kylaqನ ಈ ಮಾಹಿತಿಗಳನ್ನು ಬಹಿರಂಗ ಪಡಿಸಿದ ಸ್ಕೋಡಾ
ಸ್ಕೋಡಾ kylaq ಗಾಗಿ dipan ಮೂಲಕ ಅಕ್ಟೋಬರ್ 16, 2024 08:19 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಕೈಲಾಕ್ ಕುಶಾಕ್ ಮತ್ತು ಸ್ಲಾವಿಯಾದಲ್ಲಿರುವ ಅದೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರಲಿದೆ
-
ಕೈಲಾಕ್ ಒಮ್ಮೆ ಭಾರತದಲ್ಲಿ ಬಿಡುಗಡೆಯಾದ ನಂತರ ಸ್ಕೋಡಾದ ಎಂಟ್ರಿ ಲೆವೆಲ್ ಎಸ್‌ಯುವಿಯಾಗಲಿದೆ.
-
ಇದು ವೆಂಟಿಲೇಷನ್ ಫಂಕ್ಷನ್ ಮತ್ತು ಆಲ್ LED ಲೈಟಿಂಗ್ ಸೆಟಪ್‌ನೊಂದಿಗೆ 6-ವೇ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಪಡೆಯುತ್ತದೆ.
-
ಸುರಕ್ಷತೆಯ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ಮಲ್ಟಿ-ಕೊಲಿಷನ್ ಬ್ರೇಕ್‌ಗಳನ್ನು ಒಳಗೊಂಡಿರುತ್ತದೆ.
-
ಇದು 3,995 ಎಂಎಂ ಉದ್ದವಿದ್ದು, 189 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ 2,566 ಎಂಎಂ ವೀಲ್‌ಬೇಸ್ ಹೊಂದಿದೆ.
-
ಇದರ ಬೆಲೆಯು ರೂ. 8.50 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಸ್ಕೋಡಾ ಕೈಲಾಕ್ ನವೆಂಬರ್ 6, 2024 ರಂದು ಜಾಗತಿಕವಾಗಿ ಲಾಂಚ್ ಅಗಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಜೆಕ್ ಕಾರು ತಯಾರಕರು ಈಗ ಪವರ್‌ಟ್ರೇನ್ ಆಯ್ಕೆ, ಡೈಮೆನ್ಷನ್‌ಗಳು ಮತ್ತು ಕೆಲವು ಫೀಚರ್‌ಗಳನ್ನು ಒಳಗೊಂಡಂತೆ ಸಬ್-4m ಎಸ್‌ಯುವಿಯ ಕೆಲವು ಹೊಸ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಬನ್ನಿ, ಈ ಹೊಸ ವಿವರಗಳನ್ನು ನೋಡೋಣ:
ಸ್ಕೋಡಾ ಕೈಲಾಕ್: ಯಾವ ಯಾವ ಫೀಚರ್‌ಗಳ ಬಗ್ಗೆ ವಿವರ ಹೊರಬಿದ್ದಿವೆ?
ಸ್ಕೋಡಾ ಕೈಲಾಕ್ ಅನ್ನು ಭಾರತದಲ್ಲಿ ಸ್ಲಾವಿಯಾ ಮತ್ತು ಕುಶಾಕ್ ಮಾಡೆಲ್‌ಗಳಿಗೆ ಬಳಸಲಾದ MQB-A0-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಅದರ ಡೈಮೆನ್ಷನ್‌ಗಳು ಈ ಕೆಳಗಿನಂತಿವೆ:
ಉದ್ದ |
3,995 ಮಿ.ಮೀ |
ಅಗಲ |
ಇನ್ನಷ್ಟೇ ಗೊತ್ತಾಗಬೇಕಿದೆ |
ಎತ್ತರ |
ಇನ್ನಷ್ಟೇ ಗೊತ್ತಾಗಬೇಕಿದೆ |
ವೀಲ್‌ಬೇಸ್ |
2,566 ಮಿ.ಮೀ |
ಗ್ರೌಂಡ್ ಕ್ಲಿಯರೆನ್ಸ್ |
189 ಮಿ.ಮೀ |
ಈ ಎಸ್‌ಯುವಿಯ ಎತ್ತರ ಮತ್ತು ಅಗಲವನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ. ಮಾರುತಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್‌ನಂತಹ ಜನಪ್ರಿಯ ಮಾಡೆಲ್‌ಗಳಿಗೆ ಹೋಲಿಸಿದರೆ, ಕೈಲಾಕ್ ಅದೇ ರೀತಿಯ ಉದ್ದವನ್ನು ಹೊಂದಿದೆ. ಆದರೆ, ಇದು ಬ್ರೆಝಾಕ್ಕಿಂತ 66 ಎಂಎಂ ಉದ್ದ ಮತ್ತು ನೆಕ್ಸಾನ್‌ಗಿಂತ 68 ಎಂಎಂ ಉದ್ದವಿರುವ ವೀಲ್‌ಬೇಸ್ ಅನ್ನು ಹೊಂದಿದೆ. ಮತ್ತೊಂದೆಡೆ, ಈ ಎರಡೂ ಪ್ರತಿಸ್ಪರ್ಧಿಗಳ ಗ್ರೌಂಡ್ ಕ್ಲಿಯರೆನ್ಸ್ ಕೈಲಾಕ್‌ಗಿಂತ ಉತ್ತಮವಾಗಿದೆ.
ಕೈಲಾಕ್‌ನಲ್ಲಿ ವೆಂಟಿಲೇಶನ್ ಫಂಕ್ಷನ್, ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ) ಮತ್ತು ಮಲ್ಟಿ-ಕೊಲಿಷನ್-ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ 6-ವೇ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಒಳಗೊಂಡಿರುತ್ತದೆ ಎಂದು ಸ್ಕೋಡಾ ದೃಢಪಡಿಸಿದೆ. ಸ್ಲಾವಿಯಾ ಮತ್ತು ಕುಶಾಕ್‌ನಲ್ಲಿ ಇರುವ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS/178 Nm) ಅನ್ನು ಕೈಲಾಕ್ ಕೂಡ ಪಡೆಯಲಿದೆ ಎಂದು ಸ್ಕೋಡಾ ತಿಳಿಸಿದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ (ಟಾರ್ಕ್ ಕನ್ವರ್ಟರ್) ಆಯ್ಕೆಯೊಂದಿಗೆ ಬರುತ್ತದೆ.
ಇದನ್ನು ಕೂಡ ಓದಿ: 2024ರ ಕೊನೆಯಲ್ಲಿ ಬಿಡುಗಡೆಗೊಳ್ಳಲಿರುವ ಕಾರುಗಳ ಪಟ್ಟಿ ಇಲ್ಲಿದೆ
ಸ್ಕೋಡಾ ಕೈಲಾಕ್: ಒಂದು ಸಣ್ಣ ಪರಿಚಯ
ಸ್ಕೋಡಾ ಕೈಲಾಕ್‌ನ ಕೆಲವು ಹೊರಭಾಗದ ಫೀಚರ್‌ಗಳ ಒಂದು ಲುಕ್ ಅನ್ನು ತೋರಿಸುವ ಟೀಸರ್ ಅನ್ನು ಈ ಮೊದಲು ಹೊರಬಿಡಲಾಗಿತ್ತು. ಇವುಗಳಲ್ಲಿ ಇತರ ಸ್ಕೋಡಾ ಕಾರುಗಳಲ್ಲಿ ಇರುವ ಸಿಗ್ನೇಚರ್ ಬಟರ್‌ಫ್ಲೈ ಗ್ರಿಲ್, ಸ್ಪ್ಲಿಟ್-ಹೆಡ್‌ಲ್ಯಾಂಪ್ ಡಿಸೈನ್ ಮತ್ತು ಸುತ್ತುವ LED ಟೈಲ್‌ಲೈಟ್‌ಗಳು ಸೇರಿವೆ.
ಸ್ಕೋಡಾ ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಒಳಭಾಗವನ್ನು ಇನ್ನೂ ತೋರಿಸಿಲ್ಲ, ಆದರೆ ಇದು ಕುಶಾಕ್‌ನಲ್ಲಿರುವ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ಪಡೆಯುವ ನಿರೀಕ್ಷೆಯಿದೆ. ನಿರೀಕ್ಷಿಸಲಾಗಿರುವ ಫೀಚರ್‌ಗಳಲ್ಲಿ 10-ಇಂಚಿನ ಟಚ್‌ಸ್ಕ್ರೀನ್, ಸಿಂಗಲ್-ಪೇನ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿವೆ.
ಸ್ಕೋಡಾ ಕೈಲಾಕ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕೈಲಾಕ್ ಬೆಲೆಯು ರೂ 8.50 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ XUV 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳೊಂದಿಗೆ ಕೂಡ ಸ್ಪರ್ಧಿಸುತ್ತದೆ.
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
0 out of 0 found this helpful