ಜಾಗತಿಕ ಬಿಡುಗಡೆಗೆ ಮುನ್ನ ಪರೀಕ್ಷೆ ವೇಳೆಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾದ Skoda Kylaq
ಸ್ಕೋಡಾ kylaq ಗಾಗಿ shreyash ಮೂಲಕ ಅಕ್ಟೋಬರ್ 23, 2024 07:46 pm ರಂದು ಪ್ರಕಟಿಸಲಾಗಿದೆ
- 40 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಕೈಲಾಕ್, ಜೆಕ್ ಮೂಲದ ವಾಹನ ತಯಾರಕರ 'ಇಂಡಿಯಾ 2.5' ಯೋಜನೆಯಡಿಯಲ್ಲಿ ಭಾರತದಲ್ಲಿ ಸಿದ್ಧವಾಗುತ್ತಿರುವ ಹೊಸ ಕಾರು ಆಗಿದೆ ಮತ್ತು ನಮ್ಮ ಮಾರುಕಟ್ಟೆಯಲ್ಲಿ ಕಾರು ತಯಾರಕರ ಎಂಟ್ರಿ-ಲೆವೆಲ್‌ನ ಎಸ್‌ಯುವಿ ಕಾರು ಆಗಲಿದೆ
-
ಸ್ಕೋಡಾ ಕೈಲಾಕ್ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಸಬ್-4ಎಮ್ ಎಸ್‌ಯುವಿ ಆಗಿದೆ, ಸ್ಲಾವಿಯಾ ಮತ್ತು ಕುಶಾಕ್ ಸಹ ಇದನ್ನೇ ಆಧರಿಸಿದೆ.
-
ಎಕ್ಸ್‌ಟಿರಿಯರ್ ಸ್ಟೈಲ್‌ನ ಅಂಶಗಳು ಎಲ್ಲಾ ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ಸಿಗ್ನೇಚರ್ ಸ್ಕೋಡಾ ಗ್ರಿಲ್ ಅನ್ನು ಒಳಗೊಂಡಿರುತ್ತದೆ.
-
ವೆಂಟಿಲೇಶನ್ ಫಂಕ್ಷನ್‌ನೊಂದಿಗೆ 6-ವೇ ಆಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳಂತಹ ಸೌಕರ್ಯಗಳನ್ನು ಪಡೆಯುತ್ತದೆ.
-
ಸುರಕ್ಷತಾ ಕಿಟ್‌ನ ಭಾಗವಾಗಿ ಎಲ್ಲಾ ವೇರಿಯೆಂಟ್‌ಗಳು 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುತ್ತದೆ.
-
1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ 115 ಪಿಎಸ್ ಪವರ್ ಅನ್ನು ಉತ್ಪಾದಿಸಲಾಗುತ್ತದೆ.
-
8.50 ಲಕ್ಷ ರೂ.ನಿಂದ ಎಕ್ಸ್ ಶೋರೂಂ ಬೆಲೆಗಳು ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಸ್ಕೋಡಾ ಕೈಲಾಕ್ ಭಾರತದಲ್ಲಿ ಜೆಕ್ ವಾಹನ ತಯಾರಕರ ಎಂಟ್ರಿ-ಲೆವೆಲ್‌ನ ಕಾರು ಆಗಲಿದೆ, ಇದು ನವೆಂಬರ್ 6, 2024ರಂದು ತನ್ನ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ. ಅದರ ಜಾಗತಿಕ ಪ್ರೀಮಿಯರ್‌ನ ಮುಂಚೆಯೇ, ಕೈಲಾಕ್‌ನ ಪರೀಕ್ಷಾ ಆವೃತ್ತಿಗಳಲ್ಲಿ ಒಂದು ಭಾರೀ ಮರೆಮಾಚುವಿಕೆಯ ಕವರ್ ಅನ್ನು ಧರಿಸಿ ರೌಂಡ್ಸ್ ಮಾಡುತ್ತಿದ್ದ ವೇಳೆಯಲ್ಲಿ ನಮ್ಮ ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದೆ.
ನಾವು ಏನನ್ನು ನೋಡಿದ್ದೇವೆ?
ಹೊಸ ಸ್ಪೈ ಶಾಟ್‌ಗಳು ಕೈಲಾಕ್‌ನ ಬದಿ ಮತ್ತು ಹಿಂಭಾಗವು ಹೇಗೆ ಕಾಣುತ್ತದೆ ಎಂಬುದನ್ನು ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ. ಈ ನಿರ್ದಿಷ್ಟ ಪರೀಕ್ಷಾ ಕಾರು ಕಪ್ಪುಬಣ್ಣದ ಅಲಾಯ್ ವೀಲ್‌ಗಳ ಮೇಲೆ ಓಡುತ್ತಿತ್ತು, ಮತ್ತು ಇದು ಒರಟಾದ ನೋಟವನ್ನು ನೀಡುವ ಸಿಲ್ವರ್ ಫಿನಿಶ್ ರೂಫ್ ರೈಲ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿರುವ ಟೈಲ್ ಲೈಟ್‌ಗಳು ಮುಚ್ಚಲ್ಪಟ್ಟಿದ್ದರೂ, ನಮ್ಮ ಅವಲೋಕನಗಳು ಮತ್ತು ಹಿಂದಿನ ದೃಶ್ಯಗಳ ಆಧಾರದ ಮೇಲೆ ಇದು ತಲೆಕೆಳಗಾದ L-ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿರಬಹುದು ಎಂದು ನಾವು ಅಂದಾಜಿಸುತ್ತೇವೆ.
ಸ್ಕೋಡಾವು ಇತ್ತೀಚೆಗೆ ಕೈಲಾಕ್ ಬಗ್ಗೆ ಅದರ ಗಾತ್ರವನ್ನು ಒಳಗೊಂಡಂತೆ ತನ್ನ ಚೊಚ್ಚಲ ಪ್ರವೇಶದ ಮೊದಲು ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಕೈಲಾಕ್ 3,995 ಮಿ.ಮೀ ಉದ್ದವಿದ್ದು, 189 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ 2,566 ಮಿ.ಮೀ ವೀಲ್‌ಬೇಸ್ ಅನ್ನು ಹೊಂದಿದೆ.
ಇದನ್ನು ಸಹ ಪರಿಶೀಲಿಸಿ: Maruti Brezza ಗಿಂತ ಹೆಚ್ಚುವರಿಯಾಗಿ ಈ 5 ಫೀಚರ್‌ಗಳನ್ನು ನೀಡಲಿರುವ Skoda Kylaq
ಇಂಟಿರಿಯರ್ ಮತ್ತು ನಿರೀಕ್ಷಿತ ಫೀಚರ್‌ಗಳು
ಸ್ಕೋಡಾ ಕುಶಾಕ್ ಟಚ್‌ಸ್ಕ್ರೀನ್ ಚಿತ್ರವನ್ನು ಮಾಹಿತಿಗಾಗಿ ಬಳಸಲಾಗಿದೆ
ಕೈಲಾಕ್ ಒಳಭಾಗದಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ಸ್ಕೋಡಾ ಇನ್ನೂ ನಮಗೆ ತೋರಿಸಿಲ್ಲ, ಆದರೆ ಡ್ಯಾಶ್‌ಬೋರ್ಡ್ ವಿನ್ಯಾಸವು ಕುಶಾಕ್‌ನಂತೆಯೇ ಇರುತ್ತದೆ ಎಂದು ನಾವು ಅಂದಾಜಿಸುತ್ತೇವೆ. ಇದು 10.1-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರಲಿದೆ. ಇದು ವೆಂಟಿಲೇಶನ್ ಫಂಕ್ಷನ್‌ನೊಂದಿಗೆ ಆರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳನ್ನು ಪಡೆಯುತ್ತದೆ.
ಸುರಕ್ಷತಾ ಪ್ಯಾಕೇಜ್‌ನಲ್ಲಿ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಒಳಗೊಂಡಿರುತ್ತದೆ, ಆದರೆ ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ.
ನಿರೀಕ್ಷಿತ ಪವರ್‌ಟ್ರೇನ್
ಸ್ಕೋಡಾವು ಕೈಲಾಕ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುತ್ತದೆ, ಇದು 115 ಪಿಎಸ್ ಮತ್ತು 178 ಎನ್‌ಎಮ್‌ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಜೋಡಿಯಾಗಲಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
8.50 ಲಕ್ಷ ರೂ.ನಿಂದ ಇದರ ಎಕ್ಸ್ ಶೋರೂಂ ಬೆಲೆಗಳು ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಮತ್ತು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4ಎಮ್ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
0 out of 0 found this helpful