• English
  • Login / Register

Skoda Slavia Style Edition ನ ಬಿಡುಗಡೆ, 19.13 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ

ಸ್ಕೋಡಾ ಸ್ಲಾವಿಯಾ ಗಾಗಿ rohit ಮೂಲಕ ಫೆಬ್ರವಾರಿ 16, 2024 09:42 pm ರಂದು ಪ್ರಕಟಿಸಲಾಗಿದೆ

  • 41 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು ಟಾಪ್-ಸ್ಪೆಕ್ ಸ್ಟೈಲ್ ಟ್ರಿಮ್ ಅನ್ನು ಆಧರಿಸಿದೆ ಮತ್ತು 500 ಕಾರುಗಳಿಗೆ ಮಾತ್ರ ಸೀಮಿತವಾಗಿದೆ

Skoda Slavia Style Edition launched

  • ಇದು ಅನುಗುಣವಾದ ಸ್ಟ್ಯಾಂಡರ್ಡ್ ಸ್ಟೈಲ್ ವೇರಿಯಂಟ್‌ಗಿಂತ  30,000 ರೂ.ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿದೆ. 
  • ಈ ಸೆಡಾನ್‌ ಅನ್ನು 1.5-ಲೀಟರ್ ಟರ್ಬೊ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ, 7-ಸ್ಪೀಡ್ DCT ಯೊಂದಿಗೆ ಜೋಡಿಸಲಾಗಿದೆ.
  • ಬೋರ್ಡ್‌ನಲ್ಲಿರುವ ಹೊಸ ವೈಶಿಷ್ಟ್ಯಗಳು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಮತ್ತು ಪಡಲ್‌ ಲ್ಯಾಂಪ್‌(ಕೊಚ್ಚೆಗುಂಡಿ ದೀಪ)ಗಳನ್ನು ಒಳಗೊಂಡಿವೆ.
  • ಒಳಗೆ ಮತ್ತು ಹೊರಗೆ  'ಸ್ಟೈಲ್ ಎಡಿಷನ್' ಬ್ಯಾಡ್ಜ್‌ಗಳನ್ನು, ಬ್ಲ್ಯಾಕ್‌ ರೂಫ್‌ ಮತ್ತು ಸಿಲ್ ಪ್ಲೇಟ್‌ಗಳ ಮೇಲೆ 'ಸ್ಲಾವಿಯಾ' ಮಾನಿಕರ್ ಅನ್ನು ಪಡೆಯುತ್ತದೆ.
  • ಇದು ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್ ಮತ್ತು ಟೊರ್ನಾಡೊ ರೆಡ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. 

ಸ್ಕೋಡಾ ಸ್ಲಾವಿಯಾವನ್ನು ಸ್ಟೈಲ್ ಎಡಿಷನ್ ಎಂಬ ಸೀಮಿತ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ. ಸ್ಕೋಡಾ ಹೊಸ ಆವೃತ್ತಿಯು ಟಾಪ್-ಎಂಡ್‌ ಮೊಡೆಲ್‌ ಸ್ಟೈಲ್ ಟ್ರಿಮ್‌ನ ಆಧರಿಸಿದೆ ಮತ್ತು ಇದರ ಉತ್ಪಾದನೆಯನ್ನು 500 ಯುನಿಟ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆ 19.13 ಲಕ್ಷ ರೂ. ಇರಲಿದ್ದು, ಅನುಗುಣವಾದ ಸ್ಟ್ಯಾಂಡರ್ಡ್ ಸ್ಟೈಲ್ ವೇರಿಯಂಟ್‌ಗಿಂತ ಬೆಲೆಯಲ್ಲಿ 30,000 ರೂ.ನಷ್ಟು ದುಬಾರಿಯಾಗಲಿದೆ.

ಸ್ಲಾವಿಯಾ ಸ್ಟೈಲ್ ಆವೃತ್ತಿಯಲ್ಲಿ ಹೊಸದೇನಿದೆ?

ಕಪ್ಪು ಬಿ-ಪಿಲ್ಲರ್‌ಗಳು, ಬ್ಲ್ಯಾಕ್ಡ್-ಔಟ್ ಒಆರ್‌ವಿಎಮ್‌ ಹೌಸಿಂಗ್‌ಗಳು ಮತ್ತು ಬ್ಲ್ಯಾಕ್‌ ರೂಫ್‌ನ ಮೇಲೆ 'ಎಡಿಷನ್' ಬ್ಯಾಡ್ಜ್ ಅನ್ನು ಒದಗಿಸುವ ಮೂಲಕ ಸ್ಕೋಡಾ ಇದನ್ನು ಸೆಡಾನ್‌ನ ಸಾಮಾನ್ಯ ಆವೃತ್ತಿಗಳಿಂದ ಪ್ರತ್ಯೇಕಿಸಿದೆ. ಸ್ಲಾವಿಯಾ ಸ್ಟೈಲ್ ಆವೃತ್ತಿಯು ಕ್ಯಾಂಡಿ ವೈಟ್, ಟೊರ್ನಾಡೋ ರೆಡ್ ಮತ್ತು ಬ್ರಿಲಿಯಂಟ್ ಸಿಲ್ವರ್ ಎಂಬ ಮೂರು ಬಾಡಿ ಕಲರ್‌ನ ಆಯ್ಕೆಗಳಲ್ಲಿ ಲಭ್ಯವಿದೆ. 

Skoda Slavia Style Edition launched

ಸಿಲ್ ಪ್ಲೇಟ್‌ನಲ್ಲಿ 'ಸ್ಲಾವಿಯಾ' ಚಿಹ್ನೆ ಮತ್ತು ಸ್ಟೀರಿಂಗ್ ವೀಲ್‌ನ ಕೆಳಗಿನ ಭಾಗದಲ್ಲಿ 'ಎಡಿಷನ್' ಮಾನಿಕರ್ ಅನ್ನು ಪಡೆಯುವ ಒಳಭಾಗದಲ್ಲಿ ಕೆಲವು ಸೇರ್ಪಡೆಗಳನ್ನು ಮಾಡಲಾಗಿದೆ. ಹೊಸ ವೈಶಿಷ್ಟ್ಯಗಳ ವಿಷಯದಲ್ಲಿ, ಸ್ಲಾವಿಯಾ ಸ್ಟೈಲ್ ಆವೃತ್ತಿಯು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಮತ್ತು ಪಡ್ಲ್ ಲ್ಯಾಂಪ್‌ಗಳೊಂದಿಗೆ ಬರುತ್ತದೆ. 10-ಇಂಚಿನ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುವ ಸ್ಲಾವಿಯಾ ಸ್ಟೈಲ್ ವೇರಿಯಂಟ್‌ನ ವೈಶಿಷ್ಟ್ಯಗಳ ಪಟ್ಟಿಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಪವರ್‌ಟ್ರೇನ್‌ ಆಯ್ಕೆಗಳು

ಸ್ಲಾವಿಯಾ ಸ್ಟೈಲ್ ಆವೃತ್ತಿಯನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ (150 PS/ 250 Nm) ಎಂಜಿನ್ ಆಯ್ಕೆಯೊಂದಿಗೆ ಮಾತ್ರ ನೀಡಲಾಗುತ್ತಿದ್ದು, ಇದನ್ನು 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಗೆ ಜೋಡಿಸಲಾಗಿದೆ. ಸ್ಕೋಡಾವು ತನ್ನ ಸ್ಟೈಲ್ ಟ್ರಿಮ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಸಹ ಒದಗಿಸುತ್ತದೆ.

ದೊಡ್ಡ 1.5-ಲೀಟರ್ ಎಂಜಿನ್‌ನ ಹೊರತಾಗಿ, ಸೆಡಾನ್‌ನ ಸ್ಟ್ಯಾಂಡರ್ಡ್‌ ಆವೃತ್ತಿಗಳಲ್ಲಿ ಸಣ್ಣ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಸಹ ಲಭ್ಯವಿದೆ. ಇದು 115 ಪಿಎಸ್‌/178 ಎನ್‌ಎಮ್‌ ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

 ಇದನ್ನು ಸಹ ಓದಿ: ಹೊಸ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಹಳೆಯದನ್ನು ಗುಜರಿಗೆ ಹಾಕುವುದರಿಂದಾಗುವ ಎಲ್ಲಾ ಪ್ರಯೋಜನಗಳನ್ನು ಗಮನಿಸಿ

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Skoda Slavia

 ಭಾರತದಾದ್ಯಂತ ಸ್ಕೋಡಾ ಸ್ಲಾವಿಯಾದ ಎಕ್ಸ್-ಶೋರೂಮ್  ಬೆಲೆಯು 11.53 ಲಕ್ಷ ರೂ.ನಿಂದ ಪ್ರಾರಂಭವಾಗಿ 19.13 ಲಕ್ಷ ರೂ.ವರೆಗೆ ಇದೆ. ಸ್ಲಾವಿಯಾ ಸ್ಟೈಲ್ ಆವೃತ್ತಿಯು ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲವಾದರೂ, ಕಾಂಪ್ಯಾಕ್ಟ್ ಸೆಡಾನ್‌ಗಳಾದ ಹುಂಡೈ ವೆರ್ನಾ, ವೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್‌ಗಳ ವಿರುದ್ಧ ಸ್ಪರ್ಧೆ ಒಡ್ಡುತ್ತದೆ.

ಇನ್ನಷ್ಟು ಓದಿ: ಸ್ಲಾವಿಯಾ ಆಟೋಮ್ಯಾಟಿಕ್‌

was this article helpful ?

Write your Comment on Skoda ಸ್ಲಾವಿಯಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience