Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು
ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 06, 2023 11:09 am ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಪರಿಷ್ಕೃತ ಕಿಯಾ ಸೋನೆಟ್ ಅನ್ನು ಡಿಸೆಂಬರ್ 14ರಂದು ಬಿಡುಗಡೆ ಮಾಡಲಾಗುತ್ತದೆ ಹಾಗೂ ಇದು 2024ರ ಆರಂಭದಲ್ಲಿ ರಸ್ತೆಗಿಳಿಯಲಿದೆ
- ಕಿಯಾ ಸಂಸ್ಥೆಯು ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಿತ್ತು ಹಾಗೂ ಈ SUV ಗೆ ಮೊದಲ ಬಾರಿಗೆ ಇಷ್ಟೊಂದು ಮಟ್ಟದಲ್ಲಿ ಬದಲಾವಣೆಗಳನ್ನು ಮಾಡಿದೆ.
- ಪರಿಷ್ಕೃತ ಗ್ರಿಲ್, ಸಂಪರ್ಕಿತ LED ಟೇಲ್ ಲ್ಯಾಂಪ್ ಗಳು ಮತ್ತು ಮರುವಿನ್ಯಾಸಕ್ಕೆ ಒಳಪಡಿಸಿದ ಅಲೋಯ್ ವೀಲ್ ಗಳನ್ನು ಇದು ಪಡೆಯಲಿದೆ.
- ಕ್ಯಾಬಿನ್ ನಲ್ಲಿ ಚಾಲಕನ ಡಿಜಿಟಲ್ ಡಿಸ್ಪ್ಲೇ ಮತ್ತು ಹೊಸ ಸೀಟ್ ಅಫೋಲ್ಸ್ಟರಿ ಬರಲಿದೆ.
- ಜತೆಗೆ 10.25 ಇಂಚಿನ ಟಚ್ ಸ್ಕ್ರೀನ್, ಪ್ರಮಾಣಿತ 6 ಏರ್ ಬ್ಯಾಗ್ ಗಳು ಮತ್ತು ADAS ಅನ್ನು ಈ ವಾಹನದಲ್ಲಿ ಕಾಣಬಹುದಾಗಿದೆ.
- ನಿವೃತ್ತಿಯ ಹೊಸ್ತಿಲಲ್ಲಿ ಇರುವ ಮಾದರಿಯಲ್ಲಿ ಇರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಗಳಿಂದ ಇದನ್ನು ಚಲಾಯಿಸಲಾಗುತ್ತದೆ.
- ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.
ಭಾರತದ ರಸ್ತೆಗಳಲ್ಲಿ ಓಡಾಡಲಿರುವ ಪರಿಷ್ಕೃತ ಕಿಯಾ ಸೋನೆಟ್ ಕಾರು ಡಿಸೆಂಬರ್ 14ರಂದು ಬಿಡುಗಡೆಯಾಗಲಿದೆ. ಕಿಯಾ ಸಂಸ್ಥೆಯು ಇತ್ತೀಚೆಗೆ ಈ ಸುದ್ದಿಯನ್ನು ದೃಢೀಕರಿಸಿದ್ದು ಪರಿಷ್ಕೃತ SUV ಯ ಕುರಿತು ಒಂದಷ್ಟು ಮಾಹಿತಿಯನ್ನೂ ನೀಡಿದೆ. ಈಗ ಕೆಲವು ಡೀಲರ್ ಗಳು ಹೊಸ ಸೋನೆಟ್ ಕಾರಿಗೆ ಆಫ್ಲೈನ್ ಬುಕಿಂಗ್ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ ತಿಳಿದಿರುವ ಮಾಹಿತಿ ಇಲ್ಲಿದೆ:
ಪವರ್ ಟ್ರೇನ್ ಆಯ್ಕೆಗಳು
ಕಿಯಾದ ಸಬ್-4m SUV ಯ ಪವರ್ ಟ್ರೇನ್ ಗೆ ಯಾವುದೇ ದೊಡ್ಡ ಪ್ರಮಾಣದ ಬದಲಾವಣೆ ಉಂಟಾಗದು. ಪರಿಷ್ಕರಣೆಯ ನಂತರವೂ ಇದು ಈ ಕೆಳಗೆ ನೀಡಿರುವ ಹಿಂದಿನ ಆಯ್ಕೆಗಳನ್ನೇ ಮುಂದುವರಿಸಲಿದೆ:
ವಿವರಗಳು |
1.2-ಲೀಟರ್ N.A. ಪೆಟ್ರೋಲ್ |
1-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT |
6-ಸ್ಪೀಡ್ iMT/ 7-ಸ್ಪೀಡ್ DCT |
6-ಸ್ಪೀಡ್ iMT/ 6-ಸ್ಪೀಡ್ AT |
ಕಿಯಾ ಸಂಸ್ಥೆಯು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಬದಲಿಗೆ ಡೀಸೆಲ್ ಎಂಜಿನ್ ಜೊತೆಗೆ ಡೀಸೆಲ್ ಎಂಜಿನ್ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಮತ್ತೆ ಪರಿಚಯಿಸುವ ಕುರಿತು ಆನ್ಲೈನ್ ನಲ್ಲಿ ವರದಿಗಳು ಹರಿದಾಡುತ್ತಿವೆ. ಆದರೆ ಪರಿಷ್ಕೃತ SUV ಯ ಜೊತೆಗೆ ಇದು ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ನೀವು ಇನ್ನಷ್ಟು ಕಾಲ ಕಾಯಬೇಕು.
ಹೊಸ ನೋಟ
ಉದ್ದನೆಯ ಹಾಗೂ ಕೋರೆಹಲ್ಲಿನ ಆಕಾರದ LED DRL ಗಳು, ಪರಿಷ್ಕೃತ ಗ್ರಿಲ್ ಮತ್ತು ಸ್ಥಾನ ಬದಲಾಯಿಸಿಕೊಂಡ LED ಫಾಗ್ ಲ್ಯಾಂಪ್ ಗಳು ಇತ್ಯಾದಿಗಳ ಮೂಲಕ ಕಿಯಾ ಸಂಸ್ಥೆಯು ಹೊರಭಾಗದಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಭಿನ್ನವಾಗಿ ಕಾಣುವ ಅಲೋಯ್ ವೀಲ್ ಗಳು ಮತ್ತು ಸಂಪರ್ಕಿತ LED ಟೇಲ್ ಲ್ಯಾಂಪ್ ಗಳು ಇತ್ಯಾದಿ ಬದಲಾವಣೆಗಳನ್ನು ಸಹ ಹೊರಾಂಗಣದಲ್ಲಿ ಮಾಡಲಾಗಿದೆ.
ಒಳಗಡೆಗೆ ಇದು ಹೇಗೆ ಭಿನ್ನವಾಗಿದೆ?
ಈ ಕಾರು ತಯಾರಕ ಸಂಸ್ಥೆಯು 2024 ಸೋನೆಟ್ ಕಾರಿಗೆ ಹೊಸ ಸೀಟ್ ಅಫೋಲ್ಸ್ಟರಿ ಮತ್ತು ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ನೀಡಲಿದೆ. ಪರಿಷ್ಕೃತ SUV ಯ ಟೀಸರ್ ಪ್ರಕಾರ, ನಿವೃತ್ತಿ ಕಾಣಲಿರುವ ಮಾದರಿಯಲ್ಲಿ ಇರುವಂತೆಯೇ ಇದು ಸಹ 10.25 ಇಂಚಿನ ಟಚ್ ಸ್ಕ್ರೀನ್ ಅನ್ನು ಹೊಂದಿರಲಿದೆ.
ನೀವು ಬೇರೆ ಯಾವ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?
ಪರಿಷ್ಕೃತ ಸೋನೆಟ್ ಕಾರಿನಲ್ಲಿ ಚಾಲಕನ ಡಿಜಿಟಲ್ ಡಿಸ್ಪ್ಲೇ (ಹೊಸ ಸೆಲ್ಟೋಸ್ ಕಾರಿನಿಂದ) ಮತ್ತು 360 ಡಿಗ್ರಿ ಕ್ಯಾಮರಾವನ್ನು ಸಹ ಈ ಬಾರಿ ಕಾಣಬಹುದಾಗಿದೆ. ಕಿಯಾ ಸಂಸ್ಥೆಯು ಈ SUV ಯಲ್ಲಿ ವೈರ್ ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಸಿಂಗಲ್ ಪೇನ್ ಸನ್ ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒದಗಿಸುವುದನ್ನು ಮುಂದುವರಿಸಲಿದೆ.
ಇದರ ಸುರಕ್ಷತಾ ಪಟ್ಟಿಯಲ್ಲಿ ಪ್ರಮಾಣಿತ ಆರು ಏರ್ ಬ್ಯಾಗ್ ಗಳು, ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಹಿಲ್ ಹೋಲ್ಡ್ ಅಸಿಸ್ಟ್, ಹಾಗೂ ಬಹುಶಃ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಕಾಣಬಹುದಾಗಿದೆ.
ಇದನ್ನು ಸಹ ಓದಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಅಂದಾಜು ಬೆಲೆ ಮತ್ತು ಸ್ಪರ್ಧಿಗಳು
ಕಿಯಾ ಸಂಸ್ಥೆಯು 2024ರ ಆರಂಭದಲ್ಲಿ ಈ ಪರಿಷ್ಕೃತ ವಾಹನದ ಮಾರಾಟವನ್ನು ಪ್ರಾರಂಭಿಸಿದಾಗ ಇದರ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಇದು ಹ್ಯುಂಡೈ ವೆನ್ಯು, ಮಾರುತಿ ಬ್ರೆಜ್ಜಾ, ಟಾಟಾ ನೆಕ್ಸನ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್, ರೆನೋ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸೋವರ್ ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್
0 out of 0 found this helpful