ಟಾಟಾ ಪಂಚ್'ನ ಸಿಎನ್‌ಜಿ ಆವೃತ್ತಿ ಬಿಡುಗಡೆ, 7.10 ಲಕ್ಷದಿಂದ ಪ್ರಾರಂಭವಾಗಲಿದೆ ಬೆಲೆ
ಟಾಟಾ ಪಂಚ್ ಗಾಗಿ rohit ಮೂಲಕ ಆಗಸ್ಟ್ 04, 2023 05:17 pm ರಂದು ಮಾರ್ಪಡಿಸಲಾಗಿದೆ
- 32 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಪಂಚ್‌ನ ಸಿಎನ್‌ಜಿ ವೇರಿಯೆಂಟ್ ಗಳು ತಮ್ಮ ಸಾಮಾನ್ಯ ಪೆಟ್ರೋಲ್ ಕೌಂಟರ್‌ಪಾರ್ಟ್‌ಗಳಿಗಿಂತ ರೂ 1.61 ಲಕ್ಷದವರೆಗೆ ಹೆಚ್ಚು ಬೆಲೆಯನ್ನು ಹೊಂದಿದೆ.
-
ಟಾಟಾ ಕಂಪೆನಿ ತನ್ನ ಟಿಯಾಗೊ ಮತ್ತು ಟಿಗೊರ್‌ನಲ್ಲೂ ಸಿಎನ್‌ಜಿ ಪವರ್‌ಟ್ರೇನ್‌ಗಳನ್ನು ಸುಧಾರಿಸಿದ್ದಾರೆ.
-
ಟಿಯಾಗೊ, ಟಿಯಾಗೊ NRG ಮತ್ತು ಟಿಗೊರ್‌ನ ಸಿಎನ್‌ಜಿ ಆವೃತ್ತಿಗಳು 5,000 ರೂ.ಗಳಷ್ಟು ದುಬಾರಿಯಾಗಿದೆ
-
ಪಂಚ್ ಸಿಎನ್‌ಜಿಯು ಆಲ್ಟ್ರೋಜ್ ಸಿಎನ್‌ಜಿ ಯ 73.5PS/103Nm 1.2-ಲೀಟರ್ ಪೆಟ್ರೋಲ್ ಪವರ್‌ಟ್ರೇನ್ ಅನ್ನು ಪಡೆಯುತ್ತದೆ.
-
ಟಾಟಾ ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿಯನ್ನು 73.5PS/95Nm 1.2-ಲೀಟರ್ ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ಒದಗಿಸಿದೆ.
-
ಪಂಚ್ ಸಿಎನ್‌ಜಿಯು ವಾಯ್ಸ್ ನಲ್ಲಿ ಕಂಟ್ರೋಲ್ ಮಾಡುವ ಸನ್‌ರೂಫ್, ಎರಡು ಮುಂಭಾಗದ ಆರ್ಮ್‌ರೆಸ್ಟ್‌ಗಳು ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಕಾರು ತಯಾರಕರು ಟಾಟಾ ಆಲ್ಟ್ರೊಜ್ ಸಿಎನ್‌ಜಿಯಲ್ಲಿ ಪರಿಚಯಿಸಿದ ಅವಳಿ-ಸಿಲಿಂಡರ್ ತಂತ್ರಜ್ಞಾನದ ಸೂತ್ರವನ್ನು ಇದೀಗ ಟಾಟಾ ಪಂಚ್‌ಗೂ ಅನ್ವಯಿಸಿದ್ದಾರೆ. ಹಾಗೆಯೇ, ಟಾಟಾ ಟಿಯಾಗೊ ಮತ್ತು ಟಾಟಾ ಟಿಗೊರ್ ಸಿಎನ್‌ಜಿ ಮಾದರಿಗಳಿಗೂ ಅದೇ ಅಪ್ಡೇಟ್ ನ್ನು ನೀಡಿದೆ. ಟಾಟಾ CNG ಮಾದರಿಗಳ ಹೊಸ ಮತ್ತು ನವೀಕರಿಸಿದ ಶ್ರೇಣಿಯ ಸಂಪೂರ್ಣ ಬೆಲೆ ಪಟ್ಟಿ ಇಲ್ಲಿದೆ:
ಪಂಚ್
ವೇರಿಯೆಂಟ್ |
ಬೆಲೆ |
ಪ್ಯೂರ್ ಸಿಎನ್‌ಜಿ |
7.10 ಲಕ್ಷ ರೂ |
ಅಡ್ವೆಂಚರ್ ಸಿಎನ್‌ಜಿ |
7.85 ಲಕ್ಷ ರೂ |
ಅಡ್ವೆಂಚರ್ ರಿದಮ್ ಸಿಎನ್‌ಜಿ |
8.20 ಲಕ್ಷ ರೂ |
ಅಕೊಂಪ್ಲಿಶಿಡ್ ಸಿಎನ್‌ಜಿ |
8.85 ಲಕ್ಷ ರೂ |
ಅಕೊಂಪ್ಲಿಶಿಡ್ ಡಜ್ಝಲ್ ಎಸ್ ಸಿಎನ್‌ಜಿ |
9.68 ಲಕ್ಷ ರೂ |
ಪಂಚ್‌ನ ಸಿಎನ್‌ಜಿ ಆವೃತ್ತಿಯ ಬೆಲೆಯು ಸಾಮಾನ್ಯ ಪೆಟ್ರೋಲ್ ಆವೃತ್ತಿಗಳಿಗಿಂತ ಸುಮಾರು 1.61 ಲಕ್ಷದವರೆಗೆ ಹೆಚ್ಚಾಗಿದೆ
ಟಿಯಾಗೋ
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
XE ಸಿಎನ್‌ಜಿ |
6.50 ಲಕ್ಷ ರೂ |
6.55 ಲಕ್ಷ ರೂ |
+5,000 ರೂ |
XM ಸಿಎನ್‌ಜಿ |
6.85 ಲಕ್ಷ ರೂ |
6.90 ಲಕ್ಷ ರೂ |
+5,000 ರೂ |
XT ಸಿಎನ್‌ಜಿ |
7.30 ಲಕ್ಷ ರೂ |
7.35 ಲಕ್ಷ ರೂ |
+5,000 ರೂ |
XZ+ಸಿಎನ್‌ಜಿ |
8.05 ಲಕ್ಷ ರೂ |
8.10 ಲಕ್ಷ ರೂ |
+5,000 ರೂ |
XZ+ DT ಸಿಎನ್‌ಜಿ |
8.15 ಲಕ್ಷ ರೂ |
8.20 ಲಕ್ಷ ರೂ |
+5,000 ರೂ |
XT NRG ಸಿಎನ್‌ಜಿ |
7.60 ಲಕ್ಷ ರೂ |
7.65 ಲಕ್ಷ ರೂ |
+5,000 ರೂ |
XZ NRG ಸಿಎನ್‌ಜಿ |
8.05 ಲಕ್ಷ ರೂ |
8.10 ಲಕ್ಷ ರೂ |
+5,000 ರೂ |
-
ಟ್ವಿನ್-ಸಿಲಿಂಡರ್ ಟೆಕ್ ಅಪ್‌ಡೇಟ್‌ನೊಂದಿಗೆ, ಟಿಯಾಗೊ ಸಿಎನ್‌ಜಿ ಬೆಲೆಗಳನ್ನು ಒಂದೇ ರೀತಿಯಾಗಿ 5,000 ರೂ.ಗಳಷ್ಟು ಹೆಚ್ಚಿಸಲಾಗಿದೆ.
-
ಟಿಯಾಗೋ NRGಯ CNG ಆವೃತ್ತಿಗಳಿಗೆ ಸಹ ಇದೇ ಬೆಲೆ ಏರಿಕೆ ಅನ್ವಯಿಸುತ್ತದೆ.
ಇದನ್ನೂ ಓದಿ: 2022 ಟಾಟಾ ಟಿಯಾಗೊ iCNG: ಮೊದಲ ಡ್ರೈವ್ ನ ವಿಮರ್ಶೆ
ಟಿಗೋರ್
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
XM ಸಿಎನ್‌ಜಿ |
7.75 ಲಕ್ಷ ರೂ |
7.80 ಲಕ್ಷ ರೂ |
+5,000 ರೂ |
XZ ಸಿಎನ್‌ಜಿ |
8.15 ಲಕ್ಷ ರೂ |
8.20 ಲಕ್ಷ ರೂ |
+5,000 ರೂ |
XZ+ ಸಿಎನ್‌ಜಿ |
8.80 ಲಕ್ಷ ರೂ |
8.85 ಲಕ್ಷ ರೂ |
+5,000 ರೂ |
XZ+ ಲೆಥೆರೆಟ್ ಪ್ಯಾಕ್ ಸಿಎನ್‌ಜಿ |
8.90 ಲಕ್ಷ ರೂ |
8.95 ಲಕ್ಷ ರೂ |
+5,000 ರೂ |
-
ಟಿಗೋರ್ ಸಿಎನ್‌ಜಿ ಬೆಲೆಗಳನ್ನು ಒಂದೇ ರೀತಿಯಾಗಿ 5,000 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಒಂದೇ ರೀತಿಯ ಪವರ್ ಟ್ರೇನ್
ಆಲ್ಟ್ರೋಜ್ ಸಿಎನ್‌ಜಿ ಹೊಂದಿರುವ ಅದೇ ಪವರ್‌ಟ್ರೇನ್ ಅನ್ನು ಪಂಚ್ ಸಿಎನ್‌ಜಿ ಹೊಂದಿದೆ. ಈ ಘಟಕವು 73.5PS/103Nm ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಪೆಟ್ರೋಲ್ ಮೋಡ್‌ನಲ್ಲಿ, ಇದು ಟಿಯಾಗೋ-ಟಿಗೋರ್ ಜೋಡಿಯಲ್ಲಿ 86PS ಮತ್ತು 113Nm ಅನ್ನು ಉತ್ಪಾದಿಸುತ್ತದೆ. ಆದರೆ ಪಂಚ್ ಮತ್ತು ಆಲ್ಟ್ರೋಜ್ ನಲ್ಲಿ 88PS/115Nm ಅನ್ನು ಉತ್ಪಾದಿಸುತ್ತದೆ. ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಮೋಡ್‌ನಲ್ಲಿ 73.5PS/95Nm ಉತ್ಪಾದಿಸುತ್ತದೆ. ಎಲ್ಲಾ ಮೂರು CNG ಕಾರುಗಳು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ವೈಶಿಷ್ಟ್ಯಗಳ ಬಗ್ಗೆ ಒಂದಷ್ಟು
ಪಂಚ್ ಸಿಎನ್‌ಜಿ ಯಲ್ಲಿ ವಾಯ್ಸ್ ನಲ್ಲಿ ಕಂಟ್ರೋಲ್ ಮಾಡಬಹುದಾದ ಸಿಂಗಲ್-ಪೇನ್ ಸನ್‌ರೂಫ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಫ್ರಂಟ್ ಆರ್ಮ್‌ರೆಸ್ಟ್‌ಗಳಂತಹ ಕೆಲವು ಪ್ರಮುಖ ಅಪ್ಡೇಟ್ ಗಳನ್ನು ಪಡೆಯುತ್ತದೆ. ಇವುಗಳ ಹೊರತಾಗಿ, ಇದು 7-ಇಂಚಿನ ಟಚ್‌ಸ್ಕ್ರೀನ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದುವ ಮೂಲಕ ಈ ಮೈಕ್ರೋ ಎಸ್ಯುವಿಯ ಸೌಕರ್ಯಗಳ ಪಟ್ಟಿಗೆ ಹೊಸ ತೂಕವನ್ನು ನೀಡುತ್ತದೆ.
ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಮಾಡೆಲ್ ಗಳು ತಮ್ಮ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಯಾವುದೇ ಅಪ್ ಗ್ರೇಡ್ ಗಳನ್ನು ಹೊಂದಿಲ್ಲ. ಅವುಗಳು 7-ಇಂಚಿನ ಟಚ್‌ಸ್ಕ್ರೀನ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕೀಲೆಸ್ ಎಂಟ್ರಿಯೊಂದಿಗೆ ಬರುತ್ತವೆ. ಇದರ ಸುರಕ್ಷತಾ ಕಿಟ್ ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.
ಇವುಗಳ ಪ್ರತಿಸ್ಪರ್ಧಿಗಳು
ಟಾಟಾ ಟಿಯಾಗೊ ಸಿಎನ್‌ಜಿಯ ನೇರ ಪ್ರತಿಸ್ಪರ್ಧಿಗಳೆಂದರೆ ಮಾರುತಿ ಸೆಲೆರಿಯೊ ಮತ್ತು ವ್ಯಾಗನ್ ಆರ್ ಸಿಎನ್‌ಜಿ, ಆದರೆ ಸೆಡಾನ್ ವಿಭಾಗದಲ್ಲಿ ಟಿಗೊರ್ ಸಿಎನ್‌ಜಿಯ ಮಾರುಕಟ್ಟೆಯ ಸ್ಪರ್ಧಿಗಳೆಂದರೆ ಮಾರುತಿ ಡಿಜೈರ್ ಮತ್ತು ಹ್ಯುಂಡೈ ಔರಾ ಸಿಎನ್‌ಜಿ. ಮತ್ತೊಂದೆಡೆ, ಮೈಕ್ರೋ ಎಸ್ಯುವಿ ವಿಭಾಗದಲ್ಲಿ ಪಂಚ್ ಸಿಎನ್‌ಜಿಯ ಏಕೈಕ ಪ್ರತಿಸ್ಪರ್ಧಿ ಎಂದರೆ ಇತ್ತೀಚೆಗೆ ಪರಿಚಯಿಸಲಾದ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ.
ಇನ್ನಷ್ಟು ಓದಿ : ಟಾಟಾ ಪಂಚ್ ಆಟೋಮ್ಯಾಟಿಕ್
0 out of 0 found this helpful