ಬಿಡುಗಡೆಗೆ ಮುಂಚಿತವಾಗಿ Tata Curvv EVನ ಕ್ಯಾಬಿನ್ ಟೀಸರ್ ಔಟ್: ಸನ್‌ರೂಫ್, ಮತ್ತು ಹಲವು ಲಕ್ಷುರಿ ಫೀಚರ್‌ಗಳು !
ಟಾಟಾ ಕರ್ವ ್ ಇವಿ ಗಾಗಿ samarth ಮೂಲಕ ಆಗಸ್ಟ್ 06, 2024 04:09 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ SUV-ಕೂಪ್ ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳನ್ನು ಒಳಗೊಂಡಂತೆ ನೆಕ್ಸಾನ್ EV, ಹ್ಯಾರಿಯರ್ ಮತ್ತು ಸಫಾರಿಯಲ್ಲಿರುವ ಫೀಚರ್ ಪಡೆಯಲಿದೆ ಎಂದು ಕ್ಯಾಬಿನ್ ಫೋಟೋಗಳು ತೋರಿಸುತ್ತವೆ
-
ಟಾಟಾ ಕರ್ವ್ EV ಯ ಟೀಸರ್ ಚಿತ್ರಗಳು ಇದು ಪನರೋಮಿಕ್ ಸನ್‌ರೂಫ್, ಡುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳನ್ನು ಪಡೆಯಲಿದೆ ಎಂದು ತೋರಿಸುತ್ತದೆ.
-
ಇದು 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಕೂಡ ಪಡೆಯಲಿದೆ.
-
ಕರ್ವ್ EV 500 ಕಿಮೀ ಕ್ಲೇಮ್ ಮಾಡಿರುವ ರೇಂಜ್ ನೊಂದಿಗೆ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ.
-
ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ).
ಟಾಟಾ ಮೋಟಾರ್ಸ್ ಆಗಸ್ಟ್ 7, 2024 ರಂದು ಟಾಟಾ ಕರ್ವ್ EV ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಾರಿನ ಹೊರಭಾಗವನ್ನು ತೋರಿಸಿದ ನಂತರ, ಟಾಟಾ ಇದೀಗ ಕ್ಯಾಬಿನ್ ಬಗ್ಗೆ ಹೆಚ್ಚಿನ ವಿವರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಹೊಸ ಚಿತ್ರಗಳು ಕರ್ವ್ ನ ಒಳಭಾಗವನ್ನು ತೋರಿಸುತ್ತವೆ ಮತ್ತು ಅದರ ಕೆಲವು ಪ್ರೀಮಿಯಂ ಫೀಚರ್ ಗಳನ್ನೂ ಹೈಲೈಟ್ ಮಾಡುತ್ತವೆ. ಈ ಮುಂಬರುವ SUV-ಕೂಪ್‌ನ ಟೀಸರ್ ಚಿತ್ರಗಳಿಂದ ನಾವು ಪಡೆದಿರುವ ಹೆಚ್ಚಿನ ವಿವರಗಳು ಇಲ್ಲಿವೆ:
ಯಾವ ಯಾವ ವಿವರಗಳನ್ನು ತೋರಿಸಲಾಗಿದೆ?
ನಾವು ಈಗಾಗಲೇ ಕಾರಿನ ಒಳಭಾಗವನ್ನು ಕೆಲವು ದಿನಗಳ ಹಿಂದೆ ನೋಡಿದ್ದೇವೆ ಮತ್ತು ಅದು ನೆಕ್ಸನ್ EV ಯ ಡ್ಯಾಶ್‌ಬೋರ್ಡ್‌ನಂತೆ ಕಾಣುತ್ತದೆ, ಆದರೆ ಹೊಸ ಚಿತ್ರಗಳು ನಮಗೆ ಕ್ಯಾಬಿನ್‌ನ ಸ್ಪಷ್ಟವಾದ ಲುಕ್ ಅನ್ನು ನೀಡುತ್ತವೆ. ಇಲ್ಲಿ ಎದ್ದು ಕಾಣುವ ಒಂದು ಫೀಚರ್ ಎಂದರೆ ದೊಡ್ಡ ಸನ್‌ರೂಫ್, ಮತ್ತು ನಂತರ ನೀವು ಡ್ಯುಯಲ್ ಡಿಜಿಟಲ್ ಸ್ಕ್ರೀನ್‌ಗಳನ್ನು ಕೂಡ ಗಮನಿಸಬಹುದು. ಡ್ಯಾಶ್‌ಬೋರ್ಡ್ ಡ್ಯುಯಲ್ ಸ್ಕ್ರೀನ್‌ಗಳಿಗಾಗಿ ಇಂಟಿಗ್ರೇಟೆಡ್ ಸೆಟಪ್ ಅನ್ನು ಹೊಂದಿದೆ, ಇದು ಇನ್ಫೋಟೈನ್‌ಮೆಂಟ್ ಯೂನಿಟ್‌ಗಾಗಿ 12.3-ಇಂಚಿನ ಡಿಸ್ಪ್ಲೇ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಆಗಿರುವ ಸಾಧ್ಯತೆಯಿದೆ.
ನಾವು ಗಮನಿಸಿದ ಇತರ ಫೀಚರ್ ಗಳೆಂದರೆ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್, AC ವೆಂಟ್‌ಗಳು, ಸೆಂಟರ್ ಕನ್ಸೋಲ್, ಗೇರ್ ಶಿಫ್ಟರ್, ಆಟೋಮ್ಯಾಟಿಕ್ AC ಗಾಗಿ ಟಚ್ ಕಂಟ್ರೋಲ್ ಗಳು, ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಡ್ರೈವ್ ಮೋಡ್ ಸೆಲೆಕ್ಟರ್. ಈ ಎಲ್ಲಾ ಫೀಚರ್ ಗಳನ್ನು ನೆಕ್ಸಾನ್ EV ಯಿಂದ ಪಡೆದಿರುವಂತೆ ಕಾಣುತ್ತದೆ. ನಾವು ನೋಡಿರುವ ಇತರ ಫೀಚರ್ ಗಳಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿವೆ.
ಚಿತ್ರಗಳು ಹ್ಯಾರಿಯರ್ ಮತ್ತು ಸಫಾರಿ ಮಾಡೆಲ್ ಗಳಿಂದ ಪಡೆದ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ತೋರಿಸುತ್ತವೆ, ಮತ್ತು ಅದರ ಮೇಲೆ ಇತರ ಹೊಸ ಟಾಟಾ ಕಾರುಗಳಲ್ಲಿ ಈಗಾಗಲೇ ಇರುವ ಬ್ರ್ಯಾಂಡ್‌ನ ಹೊಳೆಯುವ ಲೋಗೋ ಕೂಡ ನೀಡಲಾಗಿದೆ.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತಾ ವಿವರಗಳು
ನೀಡಲಾಗಿರುವ ಇತರ ಫೀಚರ್ ಗಳಲ್ಲಿ ಪ್ರೀಮಿಯಂ ಸೌಂಡ್ ಸಿಸ್ಟಮ್ ಮತ್ತು ಪವರ್ಡ್ ಟೈಲ್‌ಗೇಟ್ ಸೇರಿವೆ. ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಬ್ಲೈಂಡ್ ವ್ಯೂ ಮಾನಿಟರಿಂಗ್ ಹೊಂದಿರುವ 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಟಾಟಾ ಕರ್ವ್ ನೀಡುವ ನಿರೀಕ್ಷೆಯಿದೆ.
ಇದನ್ನು ಕೂಡ ಓದಿ: ಟಾಟಾ ಕರ್ವ್ ವರ್ಸಸ್ ಟಾಟಾ ಕರ್ವ್ EV: ಹೊರಭಾಗದ ಡಿಸೈನ್ ಹೋಲಿಕೆ
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
ಟಾಟಾ ಇನ್ನೂ ಕರ್ವ್ EV ಯ ಬ್ಯಾಟರಿ ಮತ್ತು ಮೋಟಾರ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು ಸುಮಾರು 500 ಕಿಮೀ ರೇಂಜ್ ಅನ್ನು ನೀಡುವ ಎರಡು ಬ್ಯಾಟರಿ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ. ಟಾಟಾ ಇಲ್ಲಿ ಕರ್ವ್ EV ಗೆ V2L (ವೆಹಿಕಲ್ ಟು ಲೋಡ್) ಮತ್ತು V2V (ವೆಹಿಕಲ್ ಟು ವೆಹಿಕಲ್) ಫಂಕ್ಷನಾಲಿಟಿಗಳನ್ನು ಕೂಡ ನೀಡುವ ಸಾಧ್ಯತೆಯಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ EV ಬೆಲೆಯು 20 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ. ಇದು MG ZS EV ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EV ಮತ್ತು ಮಾರುತಿ eVX ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ