Tata Curvv ವರ್ಸಸ್ ಟಾಟಾ Curvv EV: ಬಾಹ್ಯ ವಿನ್ಯಾಸದ ಹೋಲಿಕೆ
ಟಾಟಾ ಕರ್ವ್ ಗಾಗಿ shreyash ಮೂಲಕ ಜುಲೈ 26, 2024 09:42 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಕರ್ವ್‌ನ ಎಲೆಕ್ಟ್ರಿಕ್ ಆವೃತ್ತಿಯು ಏರೋಡೈನಾಮಿಕಲ್ ಸ್ಟೈಲ್‌ನ ಅಲಾಯ್ ವೀಲ್‌ಗಳು ಮತ್ತು ಮುಚ್ಚಿದ ಗ್ರಿಲ್‌ನಂತಹ ಇವಿ-ನಿರ್ದಿಷ್ಟ ವಿನ್ಯಾಸದ ಅಂಶಗಳನ್ನು ಪಡೆಯುತ್ತದೆ
ಟಾಟಾ ಕರ್ವ್ ಮತ್ತು ಟಾಟಾ ಕರ್ವ್ ಇವಿಯನ್ನು ಈಗಾಗಲೇ ಅನಾವರಣಗೊಳಿಸಲಾಗಿದ್ದು, ಈ ಎಸ್‌ಯುವಿ-ಕೂಪ್‌ನ ಎಲೆಕ್ಟ್ರಿಕ್ ಆವೃತ್ತಿಯ ಬೆಲೆಗಳು ಮತ್ತು ಇತರ ವಿವರಗಳನ್ನು ಆಗಸ್ಟ್ 7ರಂದು ಘೋಷಿಸಲಾಗುವುದು. ಸಿಟ್ರೊಯೆನ್ ಬಸಾಲ್ಟ್ ಜೊತೆಗೆ ಟಾಟಾ ಕರ್ವ್ ಭಾರತದಲ್ಲಿನ ಮೊದಲ ಮಾಸ್-ಮಾರ್ಕೆಟ್ ಎಸ್‌ಯುವಿ-ಕೂಪ್‌ಗಳಲ್ಲಿ ಒಂದಾಗಿದೆ. ವಿನ್ಯಾಸದ ವಿಷಯದಲ್ಲಿ ಕರ್ವ್ ಇವಿಯೊಂದಿಗೆ ICE (ಆಂತರಿಕ ದಹನಕಾರಿ ಎಂಜಿನ್) ಆವೃತ್ತಿಯ ಹೋಲಿಕೆ ಇಲ್ಲಿದೆ.
ಮುಂಭಾಗ
ಟಾಟಾ ಕರ್ವ್‌ನ ಇಂಧನ ಚಾಲಿತ ಆವೃತ್ತಿಯು ಹೊಸ ಟಾಟಾ ಹ್ಯಾರಿಯರ್‌ನಿಂದ ಅನೇಕ ಸ್ಟೈಲಿಂಗ್ ಸೂಚನೆಗಳನ್ನು ಎರವಲು ಪಡೆಯುತ್ತದೆ. ಟಾಟಾದ ದೊಡ್ಡ ಎಸ್‌ಯುವಿಯಾದ ಹ್ಯಾರಿಯರ್‌ನಂತೆಯೇ ಗ್ರಿಲ್, ಏರ್ ಡ್ಯಾಮ್ ಮತ್ತು ಹೆಡ್‌ಲೈಟ್ ಹೌಸಿಂಗ್ ಅನ್ನು ಪಡೆಯುತ್ತದೆ. ಮತ್ತೊಂದೆಡೆ ಟಾಟಾ ಕರ್ವ್ ಇವಿಯು ಮುಚ್ಚಿದ ಗ್ರಿಲ್ ಅನ್ನು ಪಡೆಯುತ್ತದೆ, ಆದರೆ ಮುಂಭಾಗದ ಬಂಪರ್ ಟಾಟಾ ನೆಕ್ಸನ್ ಇವಿನಲ್ಲಿ ಕಂಡುಬರುವಂತೆ ಲಂಬವಾದ ಸ್ಲ್ಯಾಟ್‌ಗಳನ್ನು ಪಡೆಯುತ್ತದೆ. ಕರ್ವ್ ಮತ್ತು ಕರ್ವ್ ಇವಿ ಎರಡರಲ್ಲೂ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಟಾಟಾ ನೆಕ್ಸಾನ್ ಇವಿಯಿಂದ ಎರವಲು ಪಡೆಯಲಾಗಿದೆ ಮತ್ತು ಅವುಗಳು ವೆಲ್‌ಕಮ್ ಮತ್ತು ಗುಡ್‌ಬಾಯ್ ಅನಿಮೇಷನ್‌ಗಳನ್ನು ಸಹ ಒಳಗೊಂಡಿವೆ.
ಸೈಡ್
ಕರ್ವ್ ಮತ್ತು ಕರ್ವ್ ಇವಿಯು ಎರಡೂ ಬದಿಯಿಂದ ಒಂದೇ ರೀತಿಯ ಆಕಾರ ಮತ್ತು ವಿನ್ಯಾಸವನ್ನು ಹೊಂದಿದ್ದರೂ, ಕರ್ವ್ ಇವಿಯು ಏರೋಡೈನಾಮಿಕ್ ಶೈಲಿಯ ಅಲಾಯ್ ವೀಲ್‌ಗಳನ್ನು ಹೊಂದಿದೆ. ಮತ್ತೊಂದೆಡೆ ರೆಗುಲರ್ ಟಾಟಾ ಕರ್ವ್ ಡ್ಯುಯಲ್-ಟೋನ್ ಪೆಟಲ್ ಆಕಾರದ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ. ಇಲ್ಲಿ ಎರಡೂ ಎಸ್‌ಯುವಿ-ಕೂಪ್‌ಗಳು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತವೆ, ಇದನ್ನು ಟಾಟಾ ಕಾರುಗಳಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿದೆ.
ಹಿಂಭಾಗ
ಹಿಂಭಾಗದಲ್ಲಿ, ಟಾಟಾ ಕರ್ವ್ ಮತ್ತು ಕರ್ವ್ ಇವಿಯು ಎರಡೂ ಒಂದೇ ವಿನ್ಯಾಸಗಳನ್ನು ಹೊಂದಿವೆ. ವೆಲ್‌ಕಮ್ ಮತ್ತು ಗುಡ್‌ಬಾಯ್ ಅನಿಮೇಷನ್‌ಗಳೊಂದಿಗೆ ಕನೆಕ್ಟೆಡ್ ಎಲ್‌ಇಡಿ ಟೈಲ್‌ಲೈಟ್ ಸೆಟಪ್ ಅನ್ನು ಅವು ಒಳಗೊಂಡಿವೆ. ಹೆಚ್ಚುವರಿಯಾಗಿ, ಈ ಎರಡೂ ಎಸ್‌ಯುವಿ-ಕೂಪ್‌ಗಳು ಸಂಪೂರ್ಣ ಕಪ್ಪು ಬಣ್ಣದ ಹೊರಗಿನ ಹಿಂಭಾಗದ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿವೆ. ಕರ್ವ್‌ನ ಎರಡೂ ಆವೃತ್ತಿಗಳಲ್ಲಿ ವಿಸ್ತೃತ ರೂಫ್‌ನ ಸ್ಪಾಯ್ಲರ್ ಅನ್ನು ಸಹ ಸೇರಿಸಲಾಗಿದೆ.
ಇದನ್ನು ಸಹ ಓದಿ: Tata Curvv ವರ್ಸಸ್ Citroen Basalt: ಹೊರಭಾಗದ ವಿನ್ಯಾಸ ಹೋಲಿಕೆ
ಪವರ್‌ಟ್ರೈನ್‌ಗಳು
ಟಾಟಾ ಕರ್ವ್ ಹೊಸ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್ ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ ಮತ್ತು ಇದು ಟಾಟಾ ನೆಕ್ಸಾನ್‌ನಿಂದ ಎರವಲು ಪಡೆದ 1.5-ಲೀಟರ್ ಡೀಸೆಲ್ ಎಂಜಿನ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ.
ಎಂಜಿನ್ |
1.2-ಲೀಟರ್ T-GDi ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
125 ಪಿಎಸ್ |
115 ಪಿಎಸ್ |
ಟಾರ್ಕ್ |
225 ಎನ್‌ಎಮ್ |
260 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್, 7-ಸ್ಪೀಡ್ DCT (ನಿರೀಕ್ಷಿತ) |
6-ಸ್ಪೀಡ್ ಮ್ಯಾನುಯಲ್ |
ಡಿಸಿಟಿ: ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಕರ್ವ್ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು ಮತ್ತು ಸುಮಾರು 500 ಕಿಮೀ ರೇಂಜ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಕರ್ವ್ ಇವಿಯು ಟಾಟಾದ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಪಂಚ್ ಇವಿ ಸಹ ಇದನ್ನು ಆಧರಿಸಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ ಇವಿಯನ್ನು ಮೊದಲು ಬಿಡುಗಡೆ ಮಾಡಲಿದೆ ಮತ್ತು ಇದರ ಬೆಲೆಗಳು 20 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಎಮ್‌ಜಿ ಜೆಡ್‌ಎಸ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ eVX ಗೆ ಸ್ಪರ್ಧೆಯನ್ನು ಒಡ್ಡಲಿದೆ. ಕರ್ವ್ ಇವಿಯ ಬಿಡುಗಡೆಯ ನಂತರ ಕರ್ವ್‌ನ ಇಂಧನ ಚಾಲಿತ ಅವೃತ್ತಿಯು ಮಾರಾಟವಾಗಲಿದೆ, ಮತ್ತು ಇದರ ಬೆಲೆ 10.50 ಲಕ್ಷ ರೂ. (ಎಕ್ಸ್ ಶೋರೂಂ) ಆಗಿರಬಹುದು. ಕರ್ವ್‌ಗೆ ಸಿಟ್ರೊಯೆನ್ ಬಸಾಲ್ಟ್ ನೇರ ಪ್ರತಿಸ್ಪರ್ಧಿಯಾಗಿದ್ದು, ಇದರೊಂದಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್, ಎಂಜಿ ಆಸ್ಟರ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸೊಗಸಾದ ಪರ್ಯಾಯವಾಗಿ ಪರಿಗಣಿಸಬಹುದು.
ಟಾಟಾ ಕರ್ವ್ ಕುರಿತ ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ, ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
0 out of 0 found this helpful