• English
  • Login / Register

Tata Curvv EV ಬಿಡುಗಡೆ, ಬೆಲೆಗಳು 17.49 ಲಕ್ಷ ರೂ.ನಿಂದ ಪ್ರಾರಂಭ

ಟಾಟಾ ಕರ್ವ್‌ ಇವಿ ಗಾಗಿ ಸೋನು ಮೂಲಕ ಆಗಸ್ಟ್‌ 08, 2024 11:21 am ರಂದು ಮಾರ್ಪಡಿಸಲಾಗಿದೆ

  • 90 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು 45 ಕಿ.ವ್ಯಾಟ್‌ ಮತ್ತು 55 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ ಮತ್ತು 585 ಕಿ.ಮೀವರೆಗೆ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಹೊಂದಿದೆ

Tata Curvv EV launched in India

  • ಮಿಡ್‌ ರೇಂಜ್‌ ಮತ್ತು ಲಾಂಗ್‌ ರೇಂಜ್‌ ಆವೃತ್ತಿಗಳು ಒಂದೇ ವಿದ್ಯುತ್ ಮೋಟರ್ ಅನ್ನು ಪಡೆಯುತ್ತವೆ.
  • ಲಾಂಗ್‌ ರೇಂಜ್‌ ಆವೃತ್ತಿಗಳು 167 ಪಿಎಸ್‌ ಅನ್ನು ಹೊರಹಾಕುವ ಶಕ್ತಿಯುತ ಮೋಟಾರ್ ಅನ್ನು ಪಡೆಯುತ್ತವೆ.
  • ಮಿಡ್‌ ಮತ್ತು ಲಾಂಗ್‌-ರೇಂಜ್‌ನ ಆವೃತ್ತಿಗಳು ಕ್ರಮವಾಗಿ 502 ಕಿಮೀ ಮತ್ತು 585 ಕಿಮೀಗಳ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಹೊಂದಿದೆ. 
  • ಇದರ ಫೀಚರ್‌ಗಳ ಸೆಟ್ 12.3-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿದೆ.
  • ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 17.49 ಲಕ್ಷ ರೂ.ನಿಂದ 21.99 ಲಕ್ಷ ರೂ.ವರೆಗೆ ಇದೆ. 

ಟಾಟಾ ಮೋಟಾರ್ಸ್‌ನ ಬಹುನಿರೀಕ್ಷಿತ ಕರ್ವ್ ಇವಿ ಯು ಇಂದು ಬಿಡುಗಡೆಯಾಗಿದ್ದು, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 17.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ.  2024 ರಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಅತ್ಯಂತ ನಿರೀಕ್ಷಿತ ಮೊಡೆಲ್‌ಗಳಲ್ಲಿ ಒಂದಾಗಿತ್ತು ಮತ್ತು ಅದರ ಎಲೆಕ್ಟ್ರಿಕ್ ಆವೃತ್ತಿಯು ಇಂಧನದಿಂದ ಚಾಲಿತ ಆವೃತ್ತಿಗಿಂತ(ICE) ಮೊದಲೇ ಮಾರುಕಟ್ಟೆಗೆ ಬಂದಿದೆ. ಟಾಟಾದ ಈ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಇದು 585 ಕಿಮೀ ವರೆಗೆ ಎಆರ್‌ಎಐ-ರೇಟೆಡ್ ಕ್ಲೈಮ್ ರೇಂಜ್‌ ಅನ್ನು ಹೊಂದಿದೆ. ಹಾಗೆಯೇ, ಇದು ಟಾಟಾದ ಪ್ರಮುಖ ಉತ್ಪನ್ನಗಳಾದ ಹೊಸ ಹ್ಯಾರಿಯರ್ ಮತ್ತು ಸಫಾರಿಯಿಂದ ಸಾಕಷ್ಟು ಫೀಚರ್‌ಗಳನ್ನು ಪಡೆಯುತ್ತದೆ.

ಬೆಲೆ

ಎಕ್ಸ್ ಶೋರೂಂ ಬೆಲೆ (ಪರಿಚಯಾತ್ಮಕ)

ಆವೃತ್ತಿಗಳು

ಮೀಡಿಯಮ್‌ ರೇಂಜ್‌

ಲಾಂಗ್‌ ರೇಂಜ್‌

ಕ್ರಿಯೇಟಿವ್ 

17.49 ಲಕ್ಷ ರೂ.

ಆಕಂಪ್ಲಿಶ್‌ಡ್‌

18.49 ಲಕ್ಷ ರೂ.

  19.25 ಲಕ್ಷ ರೂ.

ಆಕಂಪ್ಲಿಶ್‌ಡ್‌+ ಎಸ್‌

19.29 ಲಕ್ಷ ರೂ.

19.99 ಲಕ್ಷ ರೂ.

ಎಂಪವರ್ಡ್‌+

-

21.25 ಲಕ್ಷ ರೂ.

ಎಂಪವರ್ಡ್‌+ ಎ

-

21.99 ಲಕ್ಷ ರೂ.

ಡಿಸೈನ್‌

Tata Curvv EV gets a Punch Ev-like LED DRLs

ಮುಂಭಾಗದಲ್ಲಿ, ಕರ್ವ್‌ ಆಧುನಿಕ ಟಾಟಾ ಕಾರುಗಳ ವಿನ್ಯಾಸ ಶೈಲಿಯನ್ನು ಅನುಸರಿಸುತ್ತದೆ. ಇದು ನೆಕ್ಸಾನ್ ತರಹದ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ ಸ್ಟ್ರಿಪ್ ಅನ್ನು ಪಡೆಯುತ್ತದೆ ಮತ್ತು ಲಂಬವಾಗಿ ಇರಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳು ಹ್ಯಾರಿಯರ್‌ನಿಂದ ಪ್ರೇರಿತವಾಗಿದೆ.

Tata Curvv EV introduces flush door handles in the segment

ಸೈಡ್ ಪ್ರೊಫೈಲ್ ಅದರ ಇಳಿಜಾರು ರೂಫ್‌ನಿಂದೊಂದಿಗೆ ಎಸ್‌ಯುವಿ-ಕೂಪ್ ಶೈಲಿಯನ್ನು ಪ್ರದರ್ಶಿಸುತ್ತದೆ. ಇದು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ದಪ್ಪ ಬಾಡಿ ಕ್ಲಾಡಿಂಗ್ ಮತ್ತು 18-ಇಂಚಿನ ಏರೋಡೈನಾಮಿಕಲಿ  ವಿನ್ಯಾಸದ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ.

Tata Curvv EV gets a sloping roofline

ಕರ್ವ್‌ ಇವಿಯ ಹಿಂಭಾಗದ ತುದಿಯು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳು, ಸ್ಕಿಡ್ ಪ್ಲೇಟ್‌ನೊಂದಿಗೆ ದೊಡ್ಡ ಕಪ್ಪು ಬಂಪರ್ ಮತ್ತು ಲಂಬವಾಗಿ ಇರಿಸಲಾದ ತ್ರಿಕೋನ ರಿಫ್ಲೆಕ್ಟರ್‌ ಮತ್ತು ರಿವರ್ಸಿಂಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. 

ಹೆಚ್ಚುವರಿಯಾಗಿ, ಕರ್ವ್‌ ಇವಿಯು 190 ಎಮ್‌ಎಮ್‌ ಗ್ರೌಂಡ್ ಕ್ಲಿಯರೆನ್ಸ್ ಮತ್ತು 450 ಎಮ್‌ಎಮ್‌ ನೀರಿನ ವೇಡಿಂಗ್ (ನೀರಿನ ಆಳದಲ್ಲಿ ಸಾಗುವ) ಸಾಮರ್ಥ್ಯವನ್ನು ಹೊಂದಿದೆ. ಈ ಇವಿಯು ಪಂಚ್ ಇವಿನಂತೆ 500-ಲೀಟರ್ ಬೂಟ್ ಸ್ಪೇಸ್ ಮತ್ತು 11.6-ಲೀಟರ್ ಫ್ರಂಕ್ (ಮುಂಭಾಗದ ಬಾನೆಟ್ ಕೆಳಗೆ ಬೂಟ್ ಸ್ಪೇಸ್) ಅನ್ನು ಪಡೆಯುತ್ತದೆ.

ಬ್ಯಾಟರಿ ಪ್ಯಾಕ್ & ರೇಂಜ್

 

ಮೀಡಿಯಮ್‌ ರೇಂಜ್‌

ಲಾಂಗ್‌ ರೇಂಜ್‌

ಬ್ಯಾಟರಿ ಪ್ಯಾಕ್‌

45 ಕಿ.ವ್ಯಾಟ್‌

55 ಕಿ.ವ್ಯಾಟ್‌

ಇಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1

1

ARAI-ಕ್ಲೈಮ್‌ ಮಾಡಲಾದ ರೇಂಜ್‌

502 ಕಿ.ಮೀ

585 ಕಿ.ಮೀ

ಟಾಟಾ ಕರ್ವ್‌ ಇವಿಯು 0-100 kmph ವೇಗವನ್ನು 8.6 ಸೆಕೆಂಡುಗಳಲ್ಲಿ ಸ್ಪ್ರಿಂಟ್ ಮಾಡಬಹುದು ಮತ್ತು 160 kmph ವರೆಗೆ ಗರಿಷ್ಠ ವೇಗವನ್ನು ತಲುಪಬಹುದು. ಟಾಟಾ ಕರ್ವ್‌ ಇವಿ ಅನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡುತ್ತಿದ್ದು, 585 ಕಿ.ಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ಹೊಂದಿದೆ. ಇದು ಪಂಚ್ ಇವಿಯಂತೆಯೇ ಟಾಟಾದ ಹೊಸ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಇದು 70 ಕಿ.ವ್ಯಾಟ್‌ ವರೆಗಿನ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ, ಇದು 40 ನಿಮಿಷಗಳಲ್ಲಿ 10-80 ಪ್ರತಿಶತದವರೆಗೆ ಬ್ಯಾಟರಿಯನ್ನು ಚಾರ್ಜ್‌ ಮಾಡಬಹುದು.

ಕರ್ವ್‌ ಇವಿಯು 4-ಹಂತದ ಬ್ಯಾಟರಿ ಪುನರುತ್ಪಾದನೆ ವ್ಯವಸ್ಥೆಯನ್ನು ಹೊಂದಿದ್ದು, ಚಾಲಕರು ಪ್ಯಾಡಲ್ ಶಿಫ್ಟರ್‌ಗಳನ್ನು ಬಳಸಿಕೊಂಡು ನಿಯಂತ್ರಿಸಬಹುದು.

ಫೀಚರ್‌ಗಳು ಮತ್ತು ಸುರಕ್ಷತೆ

Tata Curvv EV Dashboard

ಕರ್ವ್‌ ಇವಿಯ ಫೀಚರ್‌ಗಳ ಪಟ್ಟಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್‌ನೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್, ಪ್ಯಾನರೋಮಿಕ್‌ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ JBL-ಟ್ಯೂಡಿಂಗ್ ಸೌಂಡ್ ಸಿಸ್ಟಮ್ (320W ಸಬ್ ವೂಫರ್ ಒಳಗೊಂಡಂತೆ), 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳನ್ನು ಒಳಗೊಂಡಿದೆ. ಇದು ಟಾಟಾದ 'iRA' ಕನೆಕ್ಟೆಡ್‌ ಕಾರ್ ಟೆಕ್‌ನ ನವೀಕರಿಸಿದ ಸೂಟ್ ಅನ್ನು ಸಹ ಹೊಂದಿದೆ.

ಇದು Arcade.ev ಅನ್ನು ಸಹ ಪಡೆಯುತ್ತದೆ, ಇದು ಕಾರು ಪಾರ್ಕ್‌ ಮಾಡಿದ ಸಮಯದಲ್ಲಿ Amazon Prime Video ಮತ್ತು Hotstar ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ನಿಮಗೆ ಅನುಮತಿಸುತ್ತದೆ.

Tata Curvv EV Steering Wheel

ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಬ್ಲೈಂಡ್ ಸ್ಪಾಟ್ ಮಾನಿಟರ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಹೊಂದಿರುವ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ನ್ಯಾವಿಗೇಷನ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಡ್ರೈವರ್ ಡಿಸ್‌ಪ್ಲೇಯಲ್ಲಿ ಪ್ರದರ್ಶಿಸಲಾಗುತ್ತದೆ.

ಟಾಟಾವು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ-ಬೀಮ್ ಅಸಿಸ್ಟ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿರುವ ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್‌ನೊಂದಿಗೆ ಕರ್ವ್‌ ಇವಿಯನ್ನು ಸಜ್ಜುಗೊಳಿಸಿದೆ.

ಟಾಟಾ ಮೋಟಾರ್ಸ್ ಕರ್ವ್‌ ಇವಿಗಾಗಿ ಅಕೌಸ್ಟಿಕ್ ಸೌಂಡ್ಸ್‌ಗಳನ್ನು ಪರಿಚಯಿಸಿದೆ, ಇದು ಕಾರಿನ ಹೊರಗೆ 20 kmph ಗಿಂತ ಕಡಿಮೆ ವೇಗದಲ್ಲಿ ಕೇಳುತ್ತದೆ. ಈ ಫೀಚರ್‌ ಜನನಿಬಿಡ ಪ್ರದೇಶಗಳಲ್ಲಿ ಟ್ರಾಫಿಕ್ ಅನ್ನು ಎಚ್ಚರಿಸಲು ವಿನ್ಯಾಸಗೊಳಿಸಲಾಗಿದೆ, ಪಾದಚಾರಿ ಸುರಕ್ಷತೆ ಮತ್ತು ಒಟ್ಟಾರೆ ಜಾಗೃತಿಯನ್ನು ಹೆಚ್ಚಿಸುತ್ತದೆ.

ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್‌ ಇವಿಯು ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಇವಿಎಕ್ಸ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಕಾರುಗಳ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್‌ ಚಾನಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಕರ್ವ್‌ ಇವಿ ಆಟೋಮ್ಯಾಟಿಕ್‌ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌ EV

Read Full News

explore ಇನ್ನಷ್ಟು on ಟಾಟಾ ಕರ್ವ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience