Tata Harrier Facelift: ಆಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಶನ್ ವೇರಿಯೆಂಟ್‌ಗಳ ಬೆಲೆಗಳ ವಿವರ

published on ಅಕ್ಟೋಬರ್ 20, 2023 01:16 pm by shreyash for ಟಾಟಾ ಹ್ಯಾರಿಯರ್

  • 52 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯಾರಿಯರ್ ಆಟೋಮ್ಯಾಟಿಕ್ ಬೆಲೆಯು ರೂ. 19.99 ಲಕ್ಷದಿಂದ ರೂ 26.44 ಲಕ್ಷದವರೆಗಿದೆ (ಎಕ್ಸ್-ಶೋರೂಮ್)

Tata Harrier Facelift Automatic & Dark Edition Variants Prices Detailed

  •  ಆಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಶನ್‌ಗಳೆರಡೂ ಹ್ಯಾರಿಯರ್‌ನ ಬೇಸ್ ಪ್ಯೂರ್ ವೇರಿಯೆಂಟ್‌ನ ಒಂದು ಹಂತ ಮೇಲಿನ ವೇರಿಯೆಂಟ್ ಆಗಿದೆ
  •  ಪ್ರವೇಶ ಮಟ್ಟದ ಆಟೋಮ್ಯಾಟಿಕ್ ಆಯ್ಕೆ ಹೊರತುಪಡಿಸಿ, ಎಲ್ಲಾ ಇತರ ಆಟೋಮ್ಯಾಟಿಕ್ ಮಾದರಿಗಳು ತಮ್ಮ ಅನುಗುಣವಾದ ಮ್ಯಾನ್ಯುವಲ್ ವೇರಿಯೆಂಟ್‌ಗಳಿಗಿಂತ ರೂ. 1.4 ಲಕ್ಷಗಳ ದುಬಾರಿಯಾಗಿದೆ.
  •  ಇದು 170PS ಮತ್ತು 350Nm ಅನ್ನು ಬಿಡುಗಡೆಗೊಳಿಸುವ 2-ಲೀಟರ್ ಡಿಸೇಲ್ ಎಂಜಿನ್ ಅನ್ನು ಹೊಂದಿದೆ.
  •  ಟಾಟಾ ನವೀಕೃತ ಹ್ಯಾರಿಯರ್ ಅನ್ನು ರೂ. 15.49 ಲಕ್ಷದಿಂದ (ಎಕ್ಸ್-ಶೋರೂಮ್ ದೆಹಲಿ) ನಿಗದಿಪಡಿಸಿದೆ.

 ಈ ಟಾಟಾ ಹ್ಯಾರಿಯರ್ ಇತ್ತೀಚಿಗಷ್ಟೇ ಸಮಗ್ರವಾಗಿ ಬದಲಾವಣೆಯನ್ನು ಕಂಡಿತು ಮತ್ತು ಈಗ ರೂ. 15.49 ಲಕ್ಷದೊಂದಿಗೆ (ಎಕ್ಸ್-ಶೋರೂಮ್ ದೆಹಲಿ) ಮಾರಾಟದಲ್ಲಿದೆ. ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಮತ್ತು ಡಾರ್ಕ್ ಎಡಿಶನ್ ಮಾಡೆಲ್‌ಗಳ ಸಂಪೂರ್ಣ ಬೆಲೆ ಪಟ್ಟಿಯನ್ನು ಹೊರತುಪಡಿಸಿ, ಹೊಸ ಹ್ಯಾರಿಯರ್‌ನ ಫೀಚರ್‌ಗಳು ಮತ್ತು ವಿಶೇಷಣಗಳ ಕುರಿತು ಟಾಟಾ ಈಗಾಗಲೇ ಎಲ್ಲಾ ವಿವರಗಳನ್ನು ಒದಗಿಸಿದೆ. ಮತ್ತು ಈಗ ಕೆಳಗಿನ ಟೇಬಲ್‌ನಲ್ಲಿ ವೆರಿಯೆಂಟ್‌ವಾರು ಬೆಲೆಗಳನ್ನು ನಾವು ವಿವರಿಸಿದ್ದೇವೆ.

 ಹ್ಯಾರಿಯರ್ ಆಟೋಮ್ಯಾಟಿಕ್ ವೇರಿಯೆಂಟ್ ಬೆಲೆಗಳು

ವೇರಿಯೆಂಟ್‌ಗಳು

ಬೆಲೆ

ಪ್ಯೂರ್+ AT

ರೂ 19.99 ಲಕ್ಷ

ಪ್ಯೂರ್+ S AT

ರೂ 21.09 ಲಕ್ಷ

ಅಡ್ವೆಂಚರ್+ AT

ರೂ 23.09 ಲಕ್ಷ

ಅಡ್ವೆಂಚರ್ + A AT

ರೂ 24.09 ಲಕ್ಷ

ಫಿಯರ್‌ಲೆಸ್ ಡ್ಯುಯಲ್-ಟೋನ್ AT

ರೂ 24.39 ಲಕ್ಷ

ಫಿಯರ್‌ಲೆಸ್+ ಡ್ಯುಯಲ್-ಟೋನ್ AT

ರೂ 25.89 ಲಕ್ಷ

 ಟಾಟಾ ಹ್ಯಾರಿಯರ್‌ನ ಆಟೋಮ್ಯಾಟಿಕ್ ವೇರಿಯೆಂಟ್‌ಗಳನ್ನು ರೂ 19.99 ಲಕ್ಷದಿಂದ ರೂ 25.89 ಲಕ್ಷದವರೆಗೆ (ಡಾರ್ಕ್ ವೇರಿಯೆಂಟ್‌ಗಳನ್ನು ಹೊರತುಪಡಿಸಿ) ಬೆಲೆಯನ್ನು ನಿಗದಿಪಡಿಸಿದೆ. 6-ಸ್ಪೀಡ್ ಆಟೋಮ್ಯಾಟಿಕ್‌ನ ಅನುಕೂಲಕ್ಕಾಗಿ ಪ್ರವೇಶ ಮಟ್ಟದ ಆಯ್ಕೆಯನ್ನು ಹೊರತುಪಡಿಸಿ ಉಳಿದವುಗಳೆಗ ರೂ. 1.4 ಲಕ್ಷದಷ್ಟು ಪ್ರೀಮಿಯಂ ಅನ್ನು ನಿಗದಿಪಡಿಸಲಾಗಿದ್ದು ಇದರ ಪ್ರೀಮಿಯಂ ರೂ. 10,000 ದಷ್ಟು ಕಡಿಮೆಯಾಗುತ್ತದೆ.

 ನವೀಕೃತ ಹ್ಯಾರಿಯರ್‌ನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮಾಡೆಲ್‌ಗಳ ಬೆಲೆಗಳಿಗಾಗಿ ನಮ್ಮ  ಬಿಡುಗಡೆ ಸ್ಟೋರಿಯನ್ನು ಇಲ್ಲಿ ಪರಿಶೀಲಿಸಿ.

 ಡಾರ್ಕ್ ಎಡಿಶನ್‌ಗಳು

Tata Harrier Facelift Automatic & Dark Edition Variants Prices Detailed

ವೇರಿಯೆಂಟ್‌ಗಳು

ಬೆಲೆ MT

ಬೆಲೆ AT

ಪ್ಯೂರ್+ S ಡಾರ್ಕ್

ರೂ 19.99 lakh

ರೂ 21.39 ಲಕ್ಷ

ಅಡ್ವೆಂಚರ್+ ಡಾರ್ಕ್

ರೂ 22.24 lakh

ರೂ 23.64 ಲಕ್ಷ

ಫಿಯರ್‌ಲೆಸ್ ಡಾರ್ಕ್

ರೂ 23.54  lakh

ರೂ 24.94  ಲಕ್ಷ

ಫಿಯರ್‌ಲೆಸ್ ಡಾರ್ಕ್+

ರೂ 25.04 lakh

ರೂ 26.44 ಲಕ್ಷ

 ಟಾಟಾ ಹ್ಯಾರಿಯರ್‌ನ ಡಾರ್ಕ್ ಎಡಿಶನ್ ಅನ್ನು ಪ್ಯೂರ್ ಬೇಸ್‌ನ ಒಂದು ಹಂತ ಮೇಲಿನಿಂದ ಪ್ರಾರಂಭಿಸುತ್ತಿದ್ದು ಇದರ ಬೆಲೆಯು ರೂ 19.99 ಲಕ್ಷವಾಗಿದೆ. ಡಾರ್ಕ್ ಎಡಿಶನ್ ಅಲ್ಲಿ ಈ ವೇರಿಯೆಂಟ್ ವಿಹಂಗಮ ಸನ್‌ರೂಫ್ ಅನ್ನು ಪಡೆಯುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ, ಅಲ್ಲದೇ ಟಾಪ್-ಸ್ಪೆಕ್ ಡಾರ್ಕ್ ಎಡಿಶನ್ ಮ್ಯಾನ್ಯುವಲ್ ವೇರಿಯೆಂಟ್‌ಗೆ ರೂ. 25.04 ಲಕ್ಷದಿಂದ ಬೆಲೆಯನ್ನು ನಿಗದಿಪಡಿಸಲಾಗಿದೆ.

ಡಾರ್ಕ್ ಆಟೋಮ್ಯಾಟಿಕ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ. 21.39 ಲಕ್ಷದಿಂದ ರೂ. 26.44 ಲಕ್ಷದವರೆಗೆ ನಿಗದಿಪಡಿಸಲಾಗಿದ್ದು ಇದು ಮ್ಯಾನ್ಯುವಲ್‌ಗಿಂತ ರೂ 1.4 ಲಕ್ಷದಷ್ಟು ಹೆಚ್ಚು ಪ್ರೀಮಿಯಂ ಬೆಲೆಯಾಗಿದೆ. ಡಾರ್ಕ್ ಎಡಿಶನ್‌ಗಳು ಎಕ್ಸ್‌ಟೀರಿಯರ್‌ನಲ್ಲಿ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ ಮತ್ತು ವೇರಿಯೆಂಟ್ ಅನ್ನು ಅವಲಂಬಿಸಿ 19-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ. 

ಫೀಚರ್‌ಗಳು ಮತ್ತು ಸುರಕ್ಷತೆ

2023 Tata Harrier Facelift Cabin

2023 ಟಾಟಾ ಹ್ಯಾರಿಯರ್ 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು 10-ಸ್ಪೀಕರ್ JBL ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ. ಇಷ್ಟು ಮಾತ್ರವಲ್ಲದೇ ಬಹು-ವರ್ಣದ ಆ್ಯಂಬಿಯಂಟ್ ಲೈಟಿಂಗ್, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಎಸಿ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, 6-ವೇ ಪವರ್ಡ್ ಚಾಲಕರ ಸೀಟ್, 4-ವೇ ಪವರ್ಡ್ ಸಹ-ಚಾಲಕರ ಸೀಟ್, ವಿಹಂಗಮ ಸನ್‌ರೂಫ್ (ಮೂಡ್ ಲೈಟಿಂಗ್‌ನೊಂದಿಗೆ),  ಮತ್ತು ಗೆಸ್ಚರ್-ಸಕ್ರಿಯತೆಯ ಪವರ್ಡ್ ಟೈಲ್‌ಗೇಟ್ ಅನ್ನು ಸಹ ಇದು ಪಡೆಯುತ್ತದೆ.

ಸುರಕ್ಷತೆಯ ವಿಷಯದಲ್ಲಿ, ಇದರಲ್ಲಿ ನವೀಕೃತ ಹ್ಯಾರಿಯರ್ 7 ಏರ್‌ಬ್ಯಾಗ್‌ಗಳು (ಪ್ರಮಾಣಿತವಾಗಿ 6), ಹಿಲ್ ಅಸಿಸ್ಟ್ ಜೊತೆಗೆ ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ನೀಡಲಾಗಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಜೊತೆಗೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಯನ್ನು ಸಹ ಹೊಂದಿದೆ (ಕೇವಲ ಆಟೋಮ್ಯಾಟಿಕ್‌ಗಳೊಂದಿಗೆ). ಗ್ಲೋಬಲ್ NCAP ಪರೀಕ್ಷಿಸಿದಂತೆ ಇದು ಭಾರತ-ನಿರ್ಮಿತ ಸುರಕ್ಷತಾ ಕಾರುಗಳಲ್ಲಿ ಒಂದಾಗಿದೆ.

 ಡೀಸೆಲ್ ಪವರ್‌ಟ್ರೇನ್

2023 Tata Harrier Facelift Engine

ನವೀಕೃತ ಟಾಟಾ ಹ್ಯಾರಿಯರ್ 170PS ಮತ್ತು 350Nm ಅನ್ನು ಬಿಡುಗಡೆಗೊಳಿಸುವ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಸಂಯೋಜಿಸಲಾಗಿದೆ. ಈ SUV ಗಾಗಿ ಇತರ ಪವರ್‌ಟ್ರೇನ್ ಆಯ್ಕೆಗಳು ಅಭಿವೃದ್ಧಿ ಹಂತದಲ್ಲಿವೆ ಮತ್ತು ಇವಿ ಸೇರಿದಂತೆ ಪೆಟ್ರೋಲ್ ಆಯ್ಕೆಗಳು 2024 ರಲ್ಲಿ ಬರಲಿವೆ.

 ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

 ನವೀಕೃತ ಟಾಟಾ ಹ್ಯಾರಿಯರ್‌ನ ಬೆಲೆಗಳನ್ನು ರೂ 15.49 ಲಕ್ಷದಿಂದ ರೂ 26.44 ಲಕ್ಷದವರೆಗೆ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ. ಇದು ಎಂಜಿ ಹೆಕ್ಟಾರ್, ಮಹೀಂದ್ರಾ XUV700ಗಳ 5-ಸೀಟರ್ ವೇರಿಯೆಂಟ್‌ಗಳು ಮತ್ತು ಹ್ಯುಂಡಾ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಹೈ-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್ ದೆಹಲಿ

ಇನ್ನಷ್ಟು ಇಲ್ಲಿ ಓದಿ : ಹ್ಯಾರಿಯರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience