• English
    • Login / Register

    Tata Nexon EV ಮತ್ತು Tata Tiago EVಯ ಬೆಲೆಗಳಲ್ಲಿ ಈಗ 1.2 ಲಕ್ಷ ರೂ.ವರೆಗೆ ಕಡಿತ

    ಟಾಟಾ ಟಿಯಾಗೋ ಇವಿ ಗಾಗಿ shreyash ಮೂಲಕ ಫೆಬ್ರವಾರಿ 14, 2024 07:57 pm ರಂದು ಮಾರ್ಪಡಿಸಲಾಗಿದೆ

    • 20 Views
    • ಕಾಮೆಂಟ್‌ ಅನ್ನು ಬರೆಯಿರಿ

    ಬ್ಯಾಟರಿ ಪ್ಯಾಕ್‌ನ ಬೆಲೆಯಲ್ಲಿನ ಕಡಿತದ ಕಾರಣದಿಂದಾಗಿ ಮೊಡೆಲ್‌ನ ಬೆಲೆಯನ್ನು ಕಡಿತ ಮಾಡಲಾಗಿದೆ

    Tata Nexon EV & Tiago EV

    • ಟಾಟಾ ನೆಕ್ಸಾನ್ ಇವಿಯ ಮೇಲೆ 1.2 ಲಕ್ಷ ರೂ.ವರೆಗೆ ಬೆಲೆ ಕಡಿತ ಮಾಡಲಾಗಿದೆ. 
    • ಟಾಟಾದ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 70,000 ರೂ.ವರೆಗೆ ಬೆಲೆ ಕಡಿತವನ್ನು ಪಡೆದುಕೊಂಡಿದೆ.
    • ಇತ್ತೀಚೆಗೆ ಬಿಡುಗಡೆಯಾದ ಟಾಟಾ ಪಂಚ್ ಇವಿ ಮತ್ತು ಟಿಗೋರ್ ಇವಿಗಳಿಗೆ ಯಾವುದೇ ಬೆಲೆ ಪರಿಷ್ಕರಣೆ ಮಾಡಲಾಗಿಲ್ಲ.

    ಎಲೆಕ್ಟ್ರಿಕ್ ವಾಹನಗಳಲ್ಲಿ (ಇವಿ), ಬ್ಯಾಟರಿ ಪ್ಯಾಕ್ ಅತ್ಯಂತ ದುಬಾರಿ ಅಂಶವಾಗಿದೆ. ಆದ್ದರಿಂದ ಬ್ಯಾಟರಿ ಪ್ಯಾಕ್ ಬೆಲೆಗಳಲ್ಲಿ ಇತ್ತೀಚಿಗೆ ಕಡಿತ ಕಂಡಿರುವುದರಿಂದ, ಟಾಟಾವು ತನ್ನ ಕಾರುಗಳಲ್ಲಿ ಹೆಚ್ಚು ಜನಪ್ರೀಯವಾಗಿರುವ ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ಟಿಯಾಗೊ ಇವಿಗಳ ಬೆಲೆ ಕಡಿತವನ್ನು ಘೋಷಿಸಿದೆ.  ಆದಾಗಿಯೂ, ಟಾಟಾ ಪಂಚ್ ಇವಿಯ ಬೆಲೆಗಳಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಲಾಗಿಲ್ಲ ಏಕೆಂದರೆ ಟಾಟಾ ಈಗಾಗಲೇ ಬ್ಯಾಟರಿ ಪ್ಯಾಕ್‌ನ ಬೆಲೆಯನ್ನು ತಮ್ಮ ಅಸ್ತಿತ್ವದಲ್ಲಿರುವ ಬೆಲೆ ಶ್ರೇಣಿಯೊಳಗೆ ಪರಿಗಣಿಸಿದೆ. ಅಲ್ಲದೆ, ಟಾಟಾ ಟಿಗೋರ್ ಇವಿ ಬೆಲೆಗಳು ಸಹ ಬದಲಾಗದೆ ಉಳಿದಿವೆ.

    ಟಿಯಾಗೋ ಇವಿ ಮತ್ತು ನೆಕ್ಸಾನ್‌ ಇವಿಗಳ ಪರಿಷ್ಕೃತ ಬೆಲೆಗಳನ್ನು ನೋಡೋಣ:

    ಟಾಟಾ ಟಿಯಾಗೋ ಇವಿ

    ವೇರಿಯಂಟ್ 

    ಹಳೆ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    XE ಮಿಡಿಯಮ್‌ ರೇಂಜ್ 

    8.69 ಲಕ್ಷ ರೂ

    7.99 ಲಕ್ಷ ರೂ

    (-)70,000 ರೂ.

    XT ಮಿಡಿಯಮ್‌ ರೇಂಜ್ 

    9.29 ಲಕ್ಷ ರೂ

    8.99 ಲಕ್ಷ ರೂ

    (-)30,000 ರೂ.

    XT ಲಾಂಗ್ ರೇಂಜ್ 

    10.24 ಲಕ್ಷ ರೂ

    9.99 ಲಕ್ಷ ರೂ

    (-) 25,000 ರೂ.

    XZ+ ಲಾಂಗ್ ರೇಂಜ್ 

    11.04 ಲಕ್ಷ ರೂ

    10.89 ಲಕ್ಷ ರೂ

    (-)15,000 ರೂ

    XZ+ ಟೆಕ್ ಲಕ್ಸುರಿ ಲಾಂಗ್ ರೇಂಜ್

    11.54 ಲಕ್ಷ ರೂ

    11.39 ಲಕ್ಷ ರೂ

    (-)15,000 ರೂ

    XZ+ ಲಾಂಗ್ ರೇಂಜ್ (7.2 ಕಿ.ವ್ಯಾಟ್‌ ಚಾರ್ಜರ್‌ನ ಜೊತೆಗೆ)

    11.54 ಲಕ್ಷ ರೂ

    11.39 ಲಕ್ಷ ರೂ

    (-)15,000 ರೂ

    XZ+ ಟೆಕ್ ಲಕ್ಸುರಿ ಲಾಂಗ್ ರೇಂಜ್ (7.2 ಕಿ.ವ್ಯಾಟ್‌ ಚಾರ್ಜರ್‌ನ ಜೊತೆಗೆ)

    12.04 ಲಕ್ಷ ರೂ

    11.89 ಲಕ್ಷ ರೂ

    (-)15,000 ರೂ

    • ಟಾಟಾ ಟಿಯಾಗೋ ಇವಿ ಈಗ 7.99 ಲಕ್ಷ ರೂ.ಯ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ, ಇದು ಮೊದಲಿಗಿಂತ 70,000 ರೂ.ವರೆಗೆ ಕಡಿಮೆಯಾಗಿದೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗೆ ಗರಿಷ್ಠ ಬೆಲೆ ಕಡಿತವು ಅದರ ಬೇಸ್-ಸ್ಪೆಕ್ ಎಕ್ಸ್‌ಇ ಆವೃತ್ತಿಯಾಗಿದೆ. 

    • ಟಿಯಾಗೋ ಇವಿಯ ಮಿಡ್-ಸ್ಪೆಕ್ ಎಕ್ಸ್‌ಟಿ ಆವೃತ್ತಿಗಳು ರೂ 30,000 ವರೆಗೆ ಬೆಲೆ ಕಡಿತವನ್ನು ಪಡೆದಿವೆ.

    • ಗ್ರಾಹಕರು ಟಿಯಾಗೋ ಇವಿಯ ಲೋವರ್‌-ವೇರಿಯೆಂಟ್‌ಗಳಲ್ಲಿ ಗಮನಾರ್ಹವಾಗಿ ರಿಯಾಯಿತಿಯನ್ನು ಪಡೆಯಬಹುದಾದರೂ, ಟಾಪ್-ಎಂಡ್‌ ಎಕ್ಸ್‌ಜೆಡ್‌+ ಆವೃತ್ತಿಗಳ ಬೆಲೆ ಕಡಿತಗಳು ಕೇವಲ 15,000 ರೂ. ಆಗಿರುತ್ತದೆ.

    • ಟಾಟಾ ಟಿಯಾಗೊ ಇವಿ ಬೆಲೆಗಳು ಈಗ 7.99 ಲಕ್ಷ ರೂ.ನಿಂದ 11.89 ಲಕ್ಷ ರೂ.ವರೆಗೆ ಇವೆ.

    ಇದನ್ನು ಸಹ ಓದಿ: ಭಾರತಕ್ಕೆ ಬ್ಲಾಸ್ಟ್-ಪ್ರೂಫ್ BMW 7 ಸಿರೀಸ್ ಪ್ರೊಟೆಕ್ಷನ್ ಆಗಮನ 

    ಟಾಟಾ ನೆಕ್ಸಾನ್‌

    2023 Tata Nexon EV

    ಮಿಡೀಯಂ ರೇಂಜ್‌

    ವೇರಿಯಂಟ್ 

    ಹಳೆ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಕ್ರಿಯೇಟಿವ್ ಪ್ಲಸ್

    14.74 ಲಕ್ಷ ರೂ

    14.49 ಲಕ್ಷ ರೂ

    (-)25,000 ರೂ.

    ಫಿಯರ್‌ಲೆಸ್‌

    16.19 ಲಕ್ಷ ರೂ

    15.99 ಲಕ್ಷ ರೂ

    (-)20,000 ರೂ.

    ಫಿಯರ್‌ಲೆಸ್‌ ಪ್ಲಸ್

    16.69 ಲಕ್ಷ ರೂ

    16.49 ಲಕ್ಷ ರೂ

    (-)20,000 ರೂ.

    ಫಿಯರ್‌ಲೆಸ್‌ ಪ್ಲಸ್ ಎಸ್

    17.19 ಲಕ್ಷ ರೂ

    16.99 ಲಕ್ಷ ರೂ

    (-)20,000 ರೂ.

    ಎಂಪವರ್‌ಡ್‌

    17.84 ಲಕ್ಷ ರೂ

    17.49 ಲಕ್ಷ ರೂ

    (-)35,000 ರೂ.

    ಇದನ್ನು ಸಹ ಪರಿಶೀಲಿಸಿ:  2024ರ ಜನವರಿಯ ಕಾರು ಮಾರಾಟದಲ್ಲಿ 10 ಕಾರ್ ಬ್ರಾಂಡ್‌ಗಳದ್ದೇ ಮೆಲುಗೈ: ಟಾಟಾವನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ಮರಳಿ ಪಡೆದ ಹ್ಯುಂಡೈ 

    ಲಾಂಗ್‌ ರೇಂಜ್‌

    ವೇರಿಯಂಟ್ 

    ಹಳೆ ಬೆಲೆ

    ಹೊಸ ಬೆಲೆ

    ವ್ಯತ್ಯಾಸ

    ಫಿಯರ್‌ಲೆಸ್‌

    18.19 ಲಕ್ಷ ರೂ

    16.99 ಲಕ್ಷ ರೂ.

    (-)1.2 ಲಕ್ಷ ರೂ.

    ಫಿಯರ್‌ಲೆಸ್‌ ಪ್ಲಸ್

    18.69 ಲಕ್ಷ ರೂ

    17.49 ಲಕ್ಷ ರೂ.

    (-)1.2 ಲಕ್ಷ ರೂ.

    ಫಿಯರ್‌ಲೆಸ್‌ ಪ್ಲಸ್ ಎಸ್

    19.19 ಲಕ್ಷ ರೂ

    17.99 ಲಕ್ಷ ರೂ.

    (-)1.2 ಲಕ್ಷ ರೂ.

    ಎಂಪವರ್‌ಡ್‌ ಪ್ಲಸ್‌

    19.94 ಲಕ್ಷ ರೂ

    19.29 ಲಕ್ಷ ರೂ.

    (-) 65,000 ರೂ.

    • ಟಾಟಾ ನೆಕ್ಸಾನ್ ಇವಿಯ ಮಿಡ್-ಸ್ಪೆಕ್ ಲಾಂಗ್‌-ರೇಂಜ್‌ನ ಫಿಯರ್‌ಲೆಸ್ ಟ್ರಿಮ್‌ಗಳು ರೂ 1.2 ಲಕ್ಷದವರೆಗೆ ಹೆಚ್ಚು ಕಡಿತ ಕಂಡಿದೆ. ಆದಾಗಿಯೂ, ನೆಕ್ಸಾನ್ ಇವಿಯ ಟಾಪ್-ಸ್ಪೆಕ್ ಎಂಪವರ್ಡ್ ಪ್ಲಸ್ ಲಾಂಗ್‌-ರೇಂಜ್‌ ಟ್ರಿಮ್ 65,000 ರೂಪಾಯಿಗಳ ಬೆಲೆಯನ್ನು ಕಡಿಮೆ ಮಾಡಿದೆ. 

    • ಮಿಡ್‌-ರೇಂಜ್‌ನ ವೇರಿಯೆಂಟ್‌ಗಳ ಕುರಿತು ಹೇಳುವುದಾದರೆ, ಅವುಗಳು  35,000 ರೂ.ವರೆಗೆ ಬೆಲೆ ಕಡಿತವನ್ನು  ಪಡೆದಿದೆ.

    • ಟಾಟಾ ನೆಕ್ಸಾನ್ ಇವಿ ಬೆಲೆಗಳು ಈಗ ರೂ 14.49 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು  19.29 ಲಕ್ಷ ರೂ. ವರೆಗೆ ಇರಲಿದೆ. 

    ಆದ್ದರಿಂದ, ಟಾಟಾ ತನ್ನ ಎರಡು ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರುಗಳ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಬ್ಯಾಟರಿ ಬೆಲೆ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಈ ಕಡಿತವು ಈ ಕಾರುಗಳ ICE (ಆಂತರಿಕ ದಹನಕಾರಿ ಎಂಜಿನ್) ಮತ್ತು EV ಆವೃತ್ತಿಗಳ ನಡುವಿನ ಅಂತರವನ್ನು ನಿಧಾನವಾಗಿ ಕಡಿಮೆ ಮಾಡುತ್ತಿದೆ. ಇದರ ಬಗ್ಗೆ ನಿಮ್ಮ ಆಲೋಚನೆಗಳೇನು? ಈ ಬೆಲೆ ಕಡಿತದೊಂದಿಗೆ, ನೀವು ಎಲೆಕ್ಟ್ರಿಕ್ ಕಾರು ಪಡೆಯುತ್ತೀರಾ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

    ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳಾಗಿವೆ

    ಇದರ ಬಗ್ಗೆ ಇನ್ನಷ್ಟು ಓದಿ: ಟಿಯಾಗೋ ಇವಿ ಆಟೋಮ್ಯಾಟಿಕ್‌

    was this article helpful ?

    Write your Comment on Tata Tia ಗೋ EV

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience