Tata Nexon Facelift: ಈತನಕ ಗಮನಿಸಿದ ಎಲ್ಲಾ ಬದಲಾವಣೆಗಳು ಇಲ್ಲಿವೆ..!
ಟಾಟಾ ನೆಕ್ಸಾನ್ ಗಾಗಿ rohit ಮೂಲಕ ಆಗಸ್ಟ್ 28, 2023 04:55 pm ರಂದು ಮಾರ್ಪಡಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರ ೆಯಿರಿ
ನೆಕ್ಸಾನ್ ಇನ್ನೂ ತನ್ನ ಅತ್ಯಂತ ಮಹತ್ವದ ನವೀಕರಣವನ್ನು ಪಡೆಯಲಿದೆ ಮತ್ತು ಈ ಬದಲಾವಣೆಗಳನ್ನು ಇವಿ ಆವೃತ್ತಿಗೂ ಅನ್ವಯಿಸುತ್ತವೆ
-
ಈ ಎಸ್‌ಯುವಿಯು 2017 ರಲ್ಲಿ ಬಿಡುಗಡೆಯಾದಾಗಿನಿಂದ ಟಾಟಾ ನೆಕ್ಸಾನ್ ತನ್ನ ಎರಡನೇ ಪ್ರಮುಖ ನವೀಕರಣವನ್ನು ಪಡೆಯಲಿದೆ
-
ನವೀಕೃತ ಎಸ್‌ಯುವಿಯ ಹಲವಾರು ಸ್ಪೈ ಶಾಟ್‌ಗಳು ಸ್ಲಿಮ್ಮರ್ LED ಲೈಟಿಂಗ್ ಮತ್ತು ಹೊಸ ಸ್ಟಿರಿಂಗ್ ವ್ಹೀಲ್‌ನಂತಹ ವಿವರಗಳನ್ನು ಬಹಿರಂಗಪಡಿಸಿದೆ.
-
ನಾವು ನಿರೀಕ್ಷಿಸಿದ ಹೊಸ ಫೀಚರ್‌ಗಳು, 360-ಡಿಗ್ರಿ ಕ್ಯಾಮರಾ, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಬಹುಶಃ ADAS ಅನ್ನು ಒಳಗೊಂಡಿವೆ.
-
ಪ್ರಸ್ತುತ ಮಾದರಿಯಂತೆಯೇ ಅದೇ ಟರ್ಬೋ-ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ.
-
ಹೊಸ ನೆಕ್ಸಾನ್ DCT ಆಯ್ಕೆಯೊಂದಿಗೆ ಟಾಟಾದ ಹೊಸ 1.2-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ ಅನ್ನು ಸಹ ಪಡೆಯುವ ಸಾಧ್ಯತೆಯಿದೆ.
-
ಸೆಪ್ಟೆಂಬರ್‌ನಲ್ಲಿ ರೂ. 8 ಲಕ್ಷದ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯೊಂದಿಗೆ ಮಾರಾಟವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿಗಳಲ್ಲಿ ಒಂದಾದ, ಟಾಟಾ ನೆಕ್ಸಾನ್ ಶೀಘ್ರದಲ್ಲೇ ದೊಡ್ಡ ನವೀಕರಣವನ್ನು ಪಡೆಯುವ ಸಿದ್ಧವಾಗಿದ್ದು, ಇದು 2020 ರ ನಂತರ ಎರಡನೇ ಪ್ರಮುಖ ನವೀಕರಣವಾಗಿದೆ. 2023 ರ ಆರಂಭದಿಂದಲೂ, ನವೀಕೃತ ಟಾಟಾ ನೆಕ್ಸಾನ್‌ನ ಸಾಕಷ್ಟು ಸ್ಪೈ ಶಾಟ್‌ಗಳನ್ನು ನಾವು ಪಡೆದಿದ್ದು, ಈ ಅವಧಿಯಲ್ಲಿ ವಿವಿಧ ವಿವರಗಳನ್ನು ಪಡೆದಿದ್ದೇವೆ. ಇದರ ಚೊಚ್ಚಲ ಬಿಡುಗಡೆಯನ್ನು ನಾವು ಸಮೀಪಿಸುತ್ತಿರುವುದರಿಂದ, 2023 ಟಾಟಾ ನೆಕ್ಸಾನ್‌ನಲ್ಲಿ ಇಲ್ಲಿಯವರೆಗೆ ಏನನ್ನು ಗಮನಿಸಿದ್ದೇವೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ:
ಎಕ್ಸ್‌ಟೀರಿಯರ್
ಇತ್ತೀಚೆಗೆ, ಈ ಎಸ್‌ಯುವಿಯ ಮುಂಭಾಗ ಮತ್ತು ಹಿಂಭಾಗವು ಯಾವುದೇ ಮುಚ್ಚಿಗೆಯಿಲ್ಲದೇ ಭಾಗಶಃ ನಮಗೆ ಗೋಚರಿಸಿದ್ದು, ಎಲ್ಲಾ ವಿನ್ಯಾಸದ ಅಪ್‌ಡೇಟ್‌ಗಳನ್ನು ನಮಗೆ ನೀಡುತ್ತದೆ. ಮುಂಭಾಗದಲ್ಲಿ, ಹೊಸ ನೆಕ್ಸಾನ್ ನವೀನ LED ಹೆಡ್‌ಲೈಟ್ ಸೆಟ್‌ಗಳನ್ನು (ಈಗ ಬಂಪರ್‌ನಲ್ಲಿ ಲಂಬವಾಗಿ ಇರಿಸಲಾಗಿದೆ), ಅನುಕ್ರಮ ಟರ್ನ್ ಇಂಡಿಕೇಟರ್‌ಗಳೊಂದಿಗೆ LED DRLಗಳನ್ನು, ಮತ್ತು ದೊಡ್ಡ ಗ್ರಿಲ್ ಅನ್ನು ಪಡೆಯುತ್ತದೆ. ಟಾಟಾ ಕರ್ವ್ ಮತ್ತು ಹ್ಯಾರಿಯರ್ ಇವಿ ಕಾನ್ಸೆಪ್ಟ್‌ನಿಂದ ಇದು ವಿನ್ಯಾಸ ಸ್ಪೂರ್ತಿಯನ್ನು ಪಡೆದಿದೆ ಎಂಬುದು ಸ್ಪಷ್ಟವಾಗುತ್ತದೆ.
ಪಾರ್ಶ್ವದಲ್ಲಿ ಹೆಚ್ಚು ಬದಲಾವಣೆಗಳನ್ನು ಪಡೆಯದ ನೆಕ್ಸಾನ್ ಹೊಸ ಅಲಾಯ್ ವ್ಹೀಲ್‌ಗಳನ್ನು ಪಡೆಯುತ್ತದೆ. ಇತ್ತೀಚಿನ ಮತ್ತೊಂದು ಸ್ಪೈ ಶಾಟ್‌ಗಳಲ್ಲಿ, ನವೀಕೃತ ನೆಕ್ಸಾನ್‌ನ ಹಿಂಭಾಗವು ಯಾವುದೇ ಮುಚ್ಚಿಗೆಯಿಲ್ಲದೇ ಕಂಡುಬಂದಿದೆ ಹಿಂಭಾಗದಲ್ಲಿರುವ ಅತ್ಯಂತ ಮಹತ್ವದ ನವೀಕರಣವೆಂದರೆ ಡ್ಯಾಪರ್ ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್‌ಗಳು, ಟ್ವೀಕ್ ಮಾಡಲಾದ ಬಂಪರ್ ಮತ್ತು ಹೆಚ್ಚು ಎದ್ದುಕಾಣುವ ಟೈಲ್‌ಲೈಟ್ ಮತ್ತು ಎತ್ತರದ ರಿಫ್ಲೆಕ್ಟರ್ ಹೌಸಿಂಗ್‌ಗಳು.
ಇದನ್ನೂ ಓದಿ: ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾದ ಟಾಟಾ ಪಂಚ್ ಇವಿ
ಟಾಟಾ ನೆಕ್ಸಾನ್ ಇವಿಗೆ ಸಹ ಬದಲಾವಣೆಗಳನ್ನು ನೀಡುತ್ತಿದ್ದು ಪ್ರಮಾಣಿತ ನವೀಕೃತ ನೆಕ್ಸಾನ್ ಬಿಡುಗಡೆಯ ಸಮಯದಲ್ಲಿಯೇ ಇದೂ ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಾರೆ ಕಾಸ್ಮೆಟಿಕ್ ಅಪ್‌ಡೇಟ್‌ಗಳು ಇನ್ನೂ ಒಂದೇ ಆಗಿದ್ದರೂ, ಅದರ ಸಂಪೂರ್ಣ-ಎಲೆಕ್ಟ್ರಿಕ್ ಸ್ವರೂಪವನ್ನು ಪ್ರತ್ಯೇಕಿಸಲು ಕೆಲವು ಬ್ಲ್ಯೂ-ಟಚ್‌ಗಳು ಮತ್ತು ಮುಚ್ಚಿದ-ಆಫ್ ಪ್ಯಾನಲ್‌ಗಳನ್ನು ಪಡೆಯುತ್ತದೆ.
ಇಂಟೀರಿಯರ್
ನವೀಕೃತ ಟಾಟಾ ನೆಕ್ಸಾನ್‌ನ ವಿವಿಧ ಪರೀಕ್ಷಾ ವಾಹನಗಳಿಂದ ಈ ಎಸ್‌ಯುವಿ ಮರುವಿನ್ಯಾಸಗೊಳಿಸಲಾದ ಮತ್ತು ಕ್ಲೀನ್ ಕ್ಯಾಬಿನ್ ವಿನ್ಯಾಸದೊಂದಿಗೆ ಬರಲಿದೆ ಎಂಬುದನ್ನು ನಾವು ಅರಿತಿದ್ದೇವೆ. ವಿವರಗಳಲ್ಲಿ ಸ್ಲೀಕರ್ ಎಸಿ ವೆಂಟ್‌ಗಳು, ಕ್ಲೈಮೆಟ್ ಕಂಟ್ರೋಲ್‌ಗಳಿಗಾಗಿ ಹೊಸ ಟಚ್-ಇನ್‌ಪುಟ್ ಪ್ಯಾನಲ್, ಸೀಟುಗಳ ಪರಿಷ್ಕೃತ ಮೇಲ್ಗವಸು ಮತ್ತು ಟಾಟಾ ಅವಿನ್ಯು ಕಾನ್ಸೆಪ್ಟ್‌ನಲ್ಲಿ ಕಂಡುಬರುವ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಸೇರಿವೆ.
ಇದನ್ನೂ ಓದಿ: 1 ಲಕ್ಷ ಮಾರಾಟ ದಾಟಿದ ಟಾಟಾ ಇವಿಗಳು - ನೆಕ್ಸಾನ್ EV, ಟಿಯಾಗೋ EV ಮತ್ತು ಟಿಗರ್ EV
ನವೀಕೃತ ಟಾಟಾ ನೆಕ್ಸಾನ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೈಮೆಟ್ ಕಂಟ್ರೋಲ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಹೊಂದಿರುತ್ತದೆ. ಸುರಕ್ಷತಾ ದೃಷ್ಟಿಯಿಂದ ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು, 360-ಡಿಗ್ರಿ ಕ್ಯಾಮರಾ, ಮತ್ತು ಮುಂಭಾಗ ಹಾಗೂ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಕಾರು ತಯಾರಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಅಳವಡಿಸಬಹುದು, ಇವು ಅವುಗಳನ್ನು ಪಡೆಯುವ ಮೊದಲ ಸಬ್-4m ಎಸ್‌ಯುವಿ ಆಗಿರುತ್ತದೆ.
ಪವರ್‌ಟ್ರೇನ್‌ಗಳ ಕುರಿತು
ಹೊಸ ನೆಕ್ಸಾನ್ ಪ್ರಸ್ತುತ ಮಾದರಿಯ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಅಥವಾ 6-ಸ್ಪೀಡ್ AMT ಗೆ ಜೊತೆಯಾದ 1.5-ಲೀಟರ್ ಡಿಸೇಲ್ ಎಂಜಿನ್ (115PS/160Nm) ಅನ್ನು ಪಡೆಯುತ್ತದೆ. ಇದು, ಹೊಸ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಹೊಂದಿರುವ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (125PS/225Nm) ಅನ್ನು ಸಹ ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಆಗಸ್ಟ್ 2023 ರಲ್ಲಿ ಹ್ಯುಂಡೈ ಎಕ್ಸ್‌ಟರ್‌ಗಿಂತ ಸುಲಭವಾಗಿ ಲಭ್ಯವಾಗುವ ಟಾಟಾ ಪಂಚ್
ನವೀಕೃತ ನೆಕ್ಸಾನ್ ಇವಿಯ ಪವರ್‌ಟ್ರೇನ್ ವಿವರಗಳನ್ನು ನಾವಿನ್ನೂ ಪಡೆದಿಲ್ಲವಾದರೂ, ನಾವು ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಟಾಟಾ ಪ್ರಸ್ತುತ ಎಲ್ಲಾ-ಎಲೆಕ್ಟ್ರಿಕ್ ಎಸ್‌ಯುವಿ ಎಸ್‌ಯುವಿಗಳನ್ನು ಎರಡು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ: ಪ್ರೈಮ್ (30.2kWh ಬ್ಯಾಟರಿ ಪ್ಯಾಕ್; 312km ARAI-ಕ್ಲೈಮ್ ರೇಂಜ್) ಮತ್ತು ಮ್ಯಾಕ್ಸ್ (40.5kWh ಬ್ಯಾಟರಿ ಪ್ಯಾಕ್; 453km ARAI-ಕ್ಲೈಮ್ ರೇಂಜ್).
ನಿರೀಕ್ಷಿತ ಆಗಮನ ಮತ್ತು ಬೆಲೆ
ಟಾಟಾ, ಈ ನವೀಕೃತ ನೆಕ್ಸಾನ್ ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಈ ನವೀಕೃತ ಎಸ್‌ಯುವಿಯು ಹೆಚ್ಚಿನ ಹೊಸ ಫೀಚರ್‌ಗಳನ್ನು ಪಡೆಯುವ ಟ್ರಿಮ್‌ಗಳಿಗೆ ಪ್ರೀಮಿಯಂನೊಂದಿಗೆ ರೂ 8 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದುವ ಸಾಧ್ಯತೆಯಿದೆ. ಈ ಟಾಟಾ ನೆಕ್ಸಾನ್ ಕಿಯಾ ಸೊನೆಟ್, ಮಾರುತಿ ಬ್ರೆಝಾ, ರೆನಾಲ್ಟ್ ಕೈಗರ್, ಮಹೀಂದ್ರಾ XUV300, ಹ್ಯುಂಡೈ ವೆನ್ಯು, ನಿಸಾನ್ ಮ್ಯಾಗ್ನೈಟ್ ಮಾತ್ರವಲ್ಲದೇ ಮಾರುತಿ ಫ್ರಾಂಕ್ಸ್ ಮತ್ತು ಸಿಟ್ರಾನ್ C3 ಯಂತಹ ಕ್ರಾಸ್‌ಓವರ್‌ಗಳಿಗೂ ಸಹ ಪೈಪೋಟಿಯನ್ನು ನೀಡುತ್ತದೆ.
ಇನ್ನಷ್ಟು ಇಲ್ಲಿ ಓದಿ : ನೆಕ್ಸಾನ್ ಆಟೋಮ್ಯಾಟಿಕ್
0 out of 0 found this helpful