ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಸುಧಾರಿತ ನೆಕ್ಸಾನ್ ಅನ್ನು ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್
ಅಂತಿಮವಾಗಿ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ನ ಪರಿಚಯಾತ್ಮಕ ಬೆಲೆಯನ್ನು ನಿಗದಿಪಡಿಸಲಾಗಿದ್ದು, 8.10 ಲಕ್ಷ ರೂ ನಿಂದ ಬೆಲೆಗಳು ಪ್ರಾರಂಭವಾಗಲಿದೆ. ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ವಿಷಯದಲ್ಲಿ ನೆಕ್ಸಾನ್ ಪ್ರಮುಖ ಅಪ್ಡೇಟ್ ಗಳನ್ನು ಪಡೆಯುತ್ತದೆ, ಆದಾಗ್ಯೂ, ಇದು ಇನ್ನೂ ಅದೇ ಹಳೆಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರ ಬೆಲೆ ಎಷ್ಟು ಮತ್ತು ಯಾವೆಲ್ಲ ಕೊಡುಗೆಗಳನ್ನು ಒಳಗೊಂಡಿದೆ ಎಂಬುದು ಇಲ್ಲಿದೆ:
ಎಲ್ಲಾ ಹೊಸ ವಿನ್ಯಾಸ
2023 ರ ನೆಕ್ಸಾನ್ ಅನ್ನು ಮುಖ್ಯವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾಗಿದೆ. ಇದರ ಮುಂಭಾಗದ ಲುಕ್ ನಲ್ಲಿ ತೀಕ್ಷ್ಣವಾದ ಬಾನೆಟ್, ಅನುಕ್ರಮ ಎಲ್ಇಡಿ ಡಿಆರ್ ಎಲ್ ಗಳು ಮತ್ತು ಸ್ಲೀಕರ್ ಬಂಪರ್ ಅನ್ನು ಹೊಂದಿದೆ. ಇದು ಹ್ಯಾರಿಯರ್ EV ಪರಿಕಲ್ಪನೆಯಲ್ಲಿ ಕಂಡುಬರುವಂತೆಯೇ ಲಂಬವಾಗಿ ಇರಿಸಲಾದ LED ಹೆಡ್‌ಲೈಟ್‌ಗಳನ್ನು ಹೊಂದಿದೆ.
ಸೈಡ್ ಪ್ರೊಫೈಲ್ ನಲ್ಲಿ ಕೇವಲ ಒಂದು ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಅದೆಂದರೆ, - 6-ಇಂಚಿನ ಆ್ಯರೋಡೈನಾಮಿಕಲ್ ಶೈಲಿಯ ಅಲಾಯ್ ವ್ಹೀಲ್‌ಗಳು. ಆದರೆ ಹಿಂಭಾಗದ ಪ್ರೊಫೈಲ್ ನಲ್ಲಿ ಕನೆಕ್ಟೆಡ್ ಟೈಲ್ ಲ್ಯಾಂಪ್, ಒಟ್ಟಾರೆ ವಿನ್ಯಾಸ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ನೊಂದಿಗೆ ಹೊಸ ವಿನ್ಯಾಸವನ್ನು ಪಡೆಯುತ್ತದೆ.
ಇಂಟೀರಿಯರ್ ನಲ್ಲಿ ದೊಡ್ಡ ಬದಲಾವಣೆಗಳಾಗಿವೆ. AC ವೆಂಟ್‌ಗಳಂತಹ ಸ್ಲೀಕರ್ ಅಂಶಗಳೊಂದಿಗೆ ಡ್ಯಾಶ್‌ಬೋರ್ಡ್ ಹೆಚ್ಚು ನೇರವಾಗಿರುತ್ತದೆ. ಇದು ಬ್ಯಾಕ್‌ಲಿಟ್ ಟಾಟಾ ಲೋಗೋ, ದೊಡ್ಡ ಸೆಂಟರ್ ಡಿಸ್‌ಪ್ಲೇ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಕಡಿಮೆ ಬಟನ್ ನಿಯಂತ್ರಣಗಳೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ. ಟಾಟಾ ಹೊಸ ಕ್ಯಾಬಿನ್ ಥೀಮ್ ಬಣ್ಣಗಳನ್ನು ಕೂಡ ಸೇರಿಸಿದೆ, ಇದು ಆಯ್ದ ಬಣ್ಣದ ಆಯ್ಕೆಗಳೊಂದಿಗೆ ಹೊಂದಿಕೆಯಾಗುತ್ತದೆ.
ಹೆಚ್ಚಿನ ಸೌಕರ್ಯಗಳು!
ತನ್ನ ಬೆಲೆ ಮತ್ತು ವಿಭಾಗವನ್ನು ಗಮನಿಸಿದರೆ ಟಾಟಾ ನೆಕ್ಸಾನ್ ಈಗಾಗಲೇ ಸುಸಜ್ಜಿತವಾಗಿದೆ, ಆದರೆ ಟಾಟಾ ಈಗ ಅದರ ವೈಶಿಷ್ಟ್ಯಗಳ ಪಟ್ಟಿಯನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿದೆ. ಹೊಸ ವೈಶಿಷ್ಟ್ಯಗಳ ಪಟ್ಟಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪ್ಯಾಡಲ್ ಶಿಫ್ಟರ್‌ಗಳು ಮತ್ತು ಟಚ್ ನಲ್ಲಿ ನಿರ್ವಹಿಸಬಹುದಾದ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ನ್ನು ಒಳಗೊಂಡಿವೆ. ಈ ಹಿಂದಿನ ನೆಕ್ಸಾನ್‌ನಿಂದ ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್‌ನ ಪ್ರತಿಯೊಂದು ಆವೃತ್ತಿಗಳು ಪಡೆಯುವುದು ಇದನ್ನೇ
ಪ್ರಯಾಣಿಕರ ಸುರಕ್ಷತೆಗಾಗಿ, ಹೊಸ ಟಾಟಾ ನೆಕ್ಸಾನ್ 6 ಏರ್‌ಬ್ಯಾಗ್‌ಗಳನ್ನುಸ್ಟ್ಯಾಂಡರ್ಡ್ ಆಗಿ ಪಡೆಯುವುದರೊಂದಿಗೆ, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ವನ್ನು ಒಳಗೊಂಡಿದೆ.
ಅದೇ ಇಂಜಿನ್‌ಗಳು, ಹೆಚ್ಚಿನ ಟ್ರಾನ್ಸ್‌ಮಿಷನ್‌ಗಳು
ಎಂಜಿನ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
120 ಪಿಎಸ್ |
115 ಪಿಎಸ್ |
ಟಾರ್ಕ್ |
170 ಎನ್ಎಂ |
260 ಎನ್ಎಂ |
ಟ್ರಾನ್ಸ್ ಮಿಸನ್ |
5 ಮಾನ್ಯುಯಲ್. 6 ಮಾನ್ಯುಯಲ್, 6 ಆಟೋಮ್ಯಾಟಿಕ್ 7DCT |
6 ಮಾನ್ಯುಯಲ್ 6 ಆಟೋಮ್ಯಾಟಿಕ್ |
ಫೇಸ್‌ಲಿಫ್ಟ್ ಮಾಡುವ ಮೊದಲು ನೆಕ್ಸಾನ್‌ನಲ್ಲಿದ್ದ ಅದೇ ಎಂಜಿನ್ ಆಯ್ಕೆಗಳನ್ನು ಟಾಟಾ ಇದರಲ್ಲಿ ಬಳಸಿದೆ. ಆದರೆ, ಕಾರು ತಯಾರಕರು ಟರ್ಬೊ-ಪೆಟ್ರೋಲ್ ಎಂಜಿನ್ ಗೆ ಹೆಚ್ಚಿನ ಟ್ರಾನ್ಸ್ ಮಿಸನ್ ಆಯ್ಕೆಗಳನ್ನು ಸೇರಿಸಿದ್ದಾರೆ. 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಎಎಮ್‌ಟಿ ಎರಡೂ ಆಯ್ಕೆಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನಲ್ಲಿ ಸಾಮಾನ್ಯವಾಗಿದೆ ಮತ್ತು ಈ ಹಿಂದಿನ ನೆಕ್ಸಾನ್‌ನಲ್ಲಿಯೂ ಇದ್ದವು, ಆದರೆ ಟರ್ಬೊ-ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿಯ ಆಯ್ಕೆಯನ್ನು ಪಡೆಯುವುದಿಲ್ಲ. ಇದು ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಲಭ್ಯ. ಇದರ ಬಗ್ಗೆ ಇನ್ನಷ್ಟು ತಿಳಿಯುವುದು ಹೇಗೆ? ನಮ್ಮ ಮೊದಲ ಡ್ರೈವ್ ವಿಮರ್ಶೆಯನ್ನು ಇಲ್ಲಿ ಪರಿಶೀಲಿಸಿ.
ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್ ಈಗ ತನ್ನ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಮರಳಿದೆ ಮತ್ತು ಕಿಯಾ ಸೋನೆಟ್, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳಿಗೆ ವಿರುದ್ಧವಾಗಿ ಮಾರುಕಟ್ಟೆಯಲ್ಲಿ ತನ್ನ ಸ್ಪರ್ಧೆಯನ್ನು ಮುಂದುವರೆಸುತ್ತದೆ.
ಹೆಚ್ಚು ಓದಿ: ನೆಕ್ಸಾನ್ ಆಟೋಮ್ಯಾಟಿಕ್