Login or Register ಅತ್ಯುತ್ತಮ CarDekho experience ಗೆ
Login

2024ರ ಹೆಚ್ಚು ಮಾರಾಟವಾದ ಕಾರುಗಳಲ್ಲಿ Tata Punchಗೆ ಮೊದಲ ಸ್ಥಾನ..! ಮಾರುತಿಯ 40 ವರ್ಷಗಳ ಪ್ರಾಬಲ್ಯವನ್ನು ಮುರಿದ ಟಾಟಾ..

ಟಾಟಾ ಪಂಚ್‌ ಗಾಗಿ dipan ಮೂಲಕ ಜನವರಿ 09, 2025 09:37 pm ರಂದು ಪ್ರಕಟಿಸಲಾಗಿದೆ

2024 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ವ್ಯಾಗನ್ ಆರ್ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಎಂಪಿವಿ ಹ್ಯಾಚ್‌ಬ್ಯಾಕ್ ಆದ ಎರ್ಟಿಗಾ ಮೂರನೇ ಸ್ಥಾನವನ್ನು ಪಡೆದುಕೊಂಡಿತು

40 ವರ್ಷಗಳ ನಂತರ, ಒಂದು ವರ್ಷದಲ್ಲಿ ಹೆಚ್ಚು ಮಾರಾಟವಾಗುವ ಕಾರು ಯಾವುದೇ ಮಾರುತಿ ಮೊಡೆಲ್‌ ಆಲ್ಲ. ಹೌದು, 2024ರಲ್ಲಿ ಟಾಟಾ ಪಂಚ್ ಒಟ್ಟು 2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ಡೆಲಿವೆರಿ ನೀಡುವ ಮೂಲಕ ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದೆ. ಟಾಟಾ ಪಂಚ್ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ, ಇತರ ಎರಡು ಸ್ಥಾನಗಳನ್ನು ಕ್ರಮವಾಗಿ ಮಾರುತಿ ವ್ಯಾಗನ್ ಆರ್ ಮತ್ತು ಮಾರುತಿ ಎರ್ಟಿಗಾ ಪಡೆದುಕೊಂಡಿದೆ. ಡೆಲಿವೆರಿ ನೀಡಲಾದ ಒಟ್ಟು ಕಾರುಗಳ ಸಂಖ್ಯೆಯು ಮೈಕ್ರೋ-ಎಸ್‌ಯುವಿಯಾದ ಪಂಚ್‌ನ ಇಂಧನ ಚಾಲಿತ ಎಂಜಿನ್ (ICE) ಮತ್ತು EV ಆವೃತ್ತಿಗಳನ್ನು ಒಳಗೊಂಡಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. 2024 ರಲ್ಲಿ ಡೆಲಿವೆರಿ ನೀಡಲಾದ ನಿಖರವಾದ ತಿಂಗಳಾವಾರು ಕಾರುಗಳ ಸಂಖ್ಯೆಯನ್ನು ನೋಡೋಣ.

ತಿಂಗಳು

ಕಾರುಗಳ ಸಂಖ್ಯೆ

ಜನವರಿ

17,978 ಕಾರುಗಳು

ಫೆಬ್ರವರಿ

18,438ಕಾರುಗಳು

ಮಾರ್ಚ್‌

17,547 ಕಾರುಗಳು

ಏಪ್ರಿಲ್‌

19,158 ಕಾರುಗಳು

ಮೇ

18,949 ಕಾರುಗಳು

ಜೂನ್‌

18,238 ಕಾರುಗಳು

ಜುಲೈ

16,121 ಕಾರುಗಳು

ಆಗಸ್ಟ್‌

15,643 ಕಾರುಗಳು

ಸಪ್ಟೆಂಬರ್‌

13,711 ಕಾರುಗಳು

ಆಕ್ಟೋಬರ್‌

15,740 ಕಾರುಗಳು

ನವೆಂಬರ್‌

15,435 ಕಾರುಗಳು

ಡಿಸೆಂಬರ್‌

15,073 ಕಾರುಗಳು

ಒಟ್ಟು

2,02,031 ಕಾರುಗಳು

2024ರ ಜೂನ್‌ವರೆಗೆ ಟಾಟಾ ಪಂಚ್ ಸರಾಸರಿಯಾಗಿ 17,000 ಕ್ಕೂ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ, ಹಾಗೆಯೇ ಏಪ್ರಿಲ್‌ನಲ್ಲಿ 19,000 ಕ್ಕಿಂತಲೂ ಹೆಚ್ಚಿನ ಕಾರುಗಳ ಡೆಲಿವೆರಿಯನ್ನು ನೀಡಿದೆ. ಆದರೆ, ಜುಲೈನಿಂದ ಸೆಪ್ಟೆಂಬರ್ ವರೆಗೆ ಮಾರಾಟದಲ್ಲಿ ಕುಸಿತವನ್ನು ಕಂಡಿತು. ಅಕ್ಟೋಬರ್‌ನಲ್ಲಿ, ಹಬ್ಬದ ಸೀಸನ್‌ನಲ್ಲಿ EV ಆವೃತ್ತಿಯ ಬೆಲೆಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿದಾಗ, ಮಾರಾಟವು ಮತ್ತೆ 15,000 ಯೂನಿಟ್‌ಗಳಿಗಿಂತ ಹೆಚ್ಚಾಯಿತು. ವರ್ಷದ ಕೊನೆಯ ಎರಡು ತಿಂಗಳುಗಳಲ್ಲಿಯೂ ಇದೇ ರೀತಿಯ ಮಾರಾಟದ ಅಂಕಿ ಅಂಶವನ್ನು ಕಾಯ್ದುಕೊಳ್ಳಲಾಗಿದೆ.

ಇದನ್ನೂ ಓದಿ: 2024ರ ಡಿಸೆಂಬರ್‌ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ..

ಟಾಟಾ ಪಂಚ್: ಇದರ ಜನಪ್ರಿಯತೆಗೆ ಕಾರಣವೇನು?

ಟಾಟಾ ಪಂಚ್ ಅನ್ನು 2021 ರಲ್ಲಿ ಸಬ್-4ಎಮ್‌ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಬಿಡುಗಡೆ ಮಾಡಲಾಯಿತು ಮತ್ತು ಇದು ಹೊಸ ಮೈಕ್ರೋ-ಎಸ್‌ಯುವಿ ಸೆಗ್ಮೆಂಟ್‌ ಅನ್ನು ಸೃಷ್ಟಿಸಿತು. ಹ್ಯುಂಡೈ ಎಕ್ಸ್‌ಟರ್ ಇದರ ಏಕೈಕ ಪ್ರತಿಸ್ಪರ್ಧಿಯಾಗಿದೆ. ಹೊಸ ವಿಭಾಗವು ಎಸ್‌ಯುವಿ ಬಾಡಿ ಶೈಲಿಯನ್ನು ಜನಸಾಮಾನ್ಯರಿಗೆ ಹೆಚ್ಚು ಕೈಗೆಟಕುವಂತೆ ಮಾಡಿತು, ಹೀಗಾಗಿ ಸಂಭಾವ್ಯ ಖರೀದಿದಾರರ ಹೆಚ್ಚಿನ ಗಮನವನ್ನು ಸೆಳೆಯಿತು.

ಟಾಟಾದ ಇತರ ಕಾರುಗಳಂತೆ, ಪಂಚ್ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿತು, ಇದು ಪ್ರಾರಂಭದ ಸಮಯದಲ್ಲಿ ಈ ಬೆಲೆಯಲ್ಲಿ ಈ ರೇಟಿಂಗ್‌ ವಿಶಿಷ್ಟವಾಗಿತ್ತು. ಇದು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಆಟೋ ಎಸಿಯಂತಹ ಸೌಕರ್ಯಗಳನ್ನು ಒಳಗೊಂಡಂತೆ ಉತ್ತಮ ಫೀಚರ್‌ಗಳ ಸೂಟ್‌ನೊಂದಿಗೆ ಬಂದಿತು. ಎಕ್ಸ್‌ಟರ್ ಬಿಡುಗಡೆಯಾದ ನಂತರ, ಟಾಟಾವು ಪಂಚ್‌ನಲ್ಲಿ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ನಂತಹ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಅದಕ್ಕೆ ಟಕ್ಕರ್‌ ನೀಡಿತು, ಇದು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಆಕರ್ಷಕ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ.

ಇದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 88 ಪಿಎಸ್‌ ಮತ್ತು 115 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. 2023ರ ಆಗಸ್ಟ್ CNG ಆವೃತ್ತಿಯನ್ನು ಸಹ ಪರಿಚಯಿಸಲಾಯಿತು, ಅಲ್ಲಿ ಪಂಚ್ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆದುಕೊಂಡಿತು, ಇದು ಪ್ರಾಯೋಗಿಕ ಮತ್ತು ಚಲಾಯಿಸಲು ಮಿತವ್ಯಯಕಾರಿಯಾಗಿದೆ.

2024 ರ ಆರಂಭದಲ್ಲಿ, ಟಾಟಾ ಪಂಚ್ ಇವಿ ಎಂದು ಹೆಸರಿಸಲಾದ ಮೈಕ್ರೋ-ಎಸ್‌ಯುವಿಯ ಎಲೆಕ್ಟಿಕ್‌ ಆವೃತ್ತಿಯನ್ನು ಪರಿಚಯಿಸಲಾಯಿತು, ಇದು ಫೀಚರ್‌ಗಳಿಂದ ತುಂಬಿದ ಇವಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಿತು. ಟಾಟಾ ಕಂಪನಿಯು ಪಂಚ್ ಇವಿಯನ್ನು ಇಂಧನ ಚಾಲಿತ ಮೊಡೆಲ್‌ನಿಂದ ಪ್ರತ್ಯೇಕಿಸಲು ಪ್ರಯತ್ನಿಸಿತು, ಅದಕ್ಕೆ ಮರುವಿನ್ಯಾಸಗೊಳಿಸಲಾದ ಮುಂಭಾಗ, ಹೆಚ್ಚು ಆಧುನಿಕ ಲೈಟಿಂಗ್‌ ಅಂಶಗಳು ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ನಂತಹ ಸಾಕಷ್ಟು ಉನ್ನತ ಮಟ್ಟದ ಫೀಚರ್‌ಗಳನ್ನು ನೀಡಿತು. ಪಂಚ್ ಇವಿ ಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆರು ಏರ್‌ಬ್ಯಾಗ್‌ಗಳನ್ನು ಸಹ ಪರಿಚಯಿಸಲಾಯಿತು. ಮತ್ತು ಇತರ ಎಲ್ಲಾ ಟಾಟಾ ಕಾರುಗಳಂತೆ, ಪಂಚ್ ಇವಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಟಾಟಾ ಪಂಚ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಮತ್ತು MIDC-ಕ್ಲೇಮ್ ಮಾಡಿದ 365 ಕಿ.ಮೀ.ರೇಂಜ್‌ ಅನ್ನು ಹೊಂದಿದೆ.

ಇವೆಲ್ಲವೂ ಪಂಚ್ ಅನ್ನು ಅದರ ಬೆಲೆಯಲ್ಲಿ ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ ಮತ್ತು ಇದು ಒಂದು ಪ್ಯಾಕೇಜ್ ಆಗಿದ್ದು, ನಾವು ಹಣಕ್ಕೆ ತಕ್ಕ ಮೌಲ್ಯವನ್ನು ಪರಿಗಣಿಸುತ್ತೇವೆ. ICE ಮೊಡೆಲ್‌ನ ಬೆಲೆ 6.13 ಲಕ್ಷ ರೂ.ಗಳಿಂದ 10.15 ಲಕ್ಷ ರೂ.ಗಳವರೆಗೆ ಇರುತ್ತದೆ. ಮತ್ತೊಂದೆಡೆ, ಟಾಟಾ ಪಂಚ್ ಇವಿ ಬೆಲೆಗಳು 9.99 ಲಕ್ಷ ರೂ.ಗಳಿಂದ 14.29 ಲಕ್ಷ ರೂ.ಗಳವರೆಗೆ ಇವೆ.

ಎಲ್ಲಾ ಬೆಲೆಗಳು ಭಾರತಾದ್ಯಂತ ಪರಿಚಯಾತ್ಮಕ ಎಕ್ಸ್-ಶೋರೂಂ ಆಗಿದೆ

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Tata ಪಂಚ್‌

explore similar ಕಾರುಗಳು

ಟಾಟಾ ಪಂಚ್‌

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.99 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ