Login or Register ಅತ್ಯುತ್ತಮ CarDekho experience ಗೆ
Login

Tata Punch ಕ್ಯಾಮೊ ಎಡಿಷನ್‌ ಬಿಡುಗಡೆ, ಬೆಲೆಗಳು 8.45 ಲಕ್ಷ ರೂ.ನಿಂದ ಪ್ರಾರಂಭ

ಟಾಟಾ ಪಂಚ್‌ ಗಾಗಿ shreyash ಮೂಲಕ ಅಕ್ಟೋಬರ್ 04, 2024 07:00 pm ರಂದು ಪ್ರಕಟಿಸಲಾಗಿದೆ

ಪಂಚ್ ಕ್ಯಾಮೊ ಎಡಿಷನ್‌ ಅನ್ನು ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತಿದೆ

  • ಪಂಚ್ ಕ್ಯಾಮೊ ಎಡಿಷನ್‌ ಹೊಸ ಸೀವೀಡ್ ಗ್ರೀನ್ ಬಾಡಿ ಕಲರ್‌ ಅನ್ನು ಹೊಂದಿದೆ.

  • ಎಕ್ಸ್‌ಟಿರಿಯರ್‌ ಬದಲಾವಣೆಗಳಲ್ಲಿ 16-ಇಂಚಿನ ಡಾರ್ಕ್‌ ಗ್ರೇ ಅಲಾಯ್‌ ವೀಲ್‌ಗಳು ಮತ್ತು 'ಕ್ಯಾಮೊ' ಬ್ಯಾಡ್ಜ್‌ಗಳು ಸೇರಿವೆ.

  • ಒಳಭಾಗದಲ್ಲಿ, ಇದು ಕ್ಯಾಮೊ ಥೀಮ್‌ನ ಸೀಟ್ ಕವರ್‌ ಅನ್ನು ಪಡೆಯುತ್ತದೆ.

  • ಫೀಚರ್‌ನ ಹೈಲೈಟ್‌ಗಳು 10.25-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿ ಸೇರಿವೆ.

  • ಸುರಕ್ಷತೆಯನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ನೋಡಿಕೊಳ್ಳುತ್ತವೆ.

  • 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.

2024ರ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾದ ವಿಶೇಷ ಮತ್ತು ಲಿಮಿಟೆಡ್‌ ಎಡಿಷನ್‌ಗಳ ಪಟ್ಟಿಗೆ ಟಾಟಾ ಪಂಚ್ ಕ್ಯಾಮೊ ಎಡಿಷನ್‌ನೊಂದಿಗೆ ಸೇರಿಕೊಂಡಿದೆ, ಇದರ ಎಕ್ಸ್ ಶೋರೂಂ ಬೆಲೆ 8.45 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಕ್ಯಾಮೊ ಎಡಿಷನ್‌ ಅನ್ನು 2022ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು, ಮತ್ತು ತಾಂತ್ರಿಕ ಕಾರಣಗಳಿದಾಗಿ ಇದನ್ನು 2023 ರಲ್ಲಿ ಸ್ಥಗಿತಗೊಳಿಸಲಾಯಿತು. ಈ ಬಾರಿಯೂ ಪಂಚ್ ಕ್ಯಾಮೊ ಎಡಿಷನ್‌ ಲಿಮಿಟೆಡ್‌ ಸಂಖ್ಯೆಯ ಯೂನಿಟ್‌ಗಳಲ್ಲಿ ಲಭ್ಯವಿದೆ.

ಬೆಲೆಗಳು

ಪಂಚ್ ಕ್ಯಾಮೊ ಎಡಿಷನ್‌ ಅನ್ನು ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಕ್ರಿಯೇಟಿವ್ ಪ್ಲಸ್

ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತಿದೆ. ವೇರಿಯಂಟ್‌ವಾರು ಬೆಲೆಗಳು ಈ ಕೆಳಗಿನಂತಿವೆ:

ವೇರಿಯೆಂಟ್‌ಗಳು

ರೆಗುಲರ್‌ ಬೆಲೆ

ಕ್ಯಾಮೊ ಎಡಿಷನ್‌

ವ್ಯತ್ಯಾಸ

ಮ್ಯಾನುಯಲ್‌

ಆಕಂಪ್ಲಿಶ್ಡ್‌ ಪ್ಲಸ್‌

8.30 ಲಕ್ಷ ರೂ.

8.45 ಲಕ್ಷ ರೂ.

+ 15,000 ರೂ.

ಆಕಂಪ್ಲಿಶ್ಡ್‌ ಪ್ಲಸ್‌ ಎಸ್‌

8.80 ಲಕ್ಷ ರೂ.

8.95 ಲಕ್ಷ ರೂ.

+ 15,000 ರೂ.

ಆಕಂಪ್ಲಿಶ್ಡ್‌ ಪ್ಲಸ್‌ ಸಿಎನ್‌ಜಿ

9.40 ಲಕ್ಷ ರೂ.

9.55 ಲಕ್ಷ ರೂ.

+ 15,000 ರೂ.

ಆಕಂಪ್ಲಿಶ್ಡ್‌ ಪ್ಲಸ್‌ ಎಸ್‌ ಸಿಎನ್‌ಜಿ

9.90 ಲಕ್ಷ ರೂ.

10.05 ಲಕ್ಷ ರೂ.

+ 15,000 ರೂ.

ಕ್ರಿಯೇಟಿವ್ ಪ್ಲಸ್

9 ಲಕ್ಷ ರೂ.

9.15 ಲಕ್ಷ ರೂ.

+ 15,000 ರೂ.

ಕ್ರಿಯೇಟಿವ್ ಪ್ಲಸ್ ಎಸ್

9.45 ಲಕ್ಷ ರೂ.

9.60 ಲಕ್ಷ ರೂ.

+ 15,000 ರೂ.

ಆಟೋಮ್ಯಾಟಿಕ್‌ (ಎಎಮ್‌ಟಿ)

ಆಕಂಪ್ಲಿಶ್ಡ್‌ ಪ್ಲಸ್‌

8.90 ಲಕ್ಷ ರೂ.

9.05 ಲಕ್ಷ ರೂ.

+ 15,000 ರೂ.

ಆಕಂಪ್ಲಿಶ್ಡ್‌ ಪ್ಲಸ್‌ ಎಸ್‌

9.40 ಲಕ್ಷ ರೂ.

9.55 ಲಕ್ಷ ರೂ.

+ 15,000 ರೂ.

ಕ್ರಿಯೇಟಿವ್ ಪ್ಲಸ್

9.60 ಲಕ್ಷ ರೂ.

9.75 ಲಕ್ಷ ರೂ.

+ 15,000 ರೂ.

ಕ್ರಿಯೇಟಿವ್ ಪ್ಲಸ್ ಎಸ್

10 ಲಕ್ಷ ರೂ.

10.15 ಲಕ್ಷ ರೂ.

+ 15,000 ರೂ.

ಪಂಚ್ ಕ್ಯಾಮೊ ಎಡಿಷನ್‌ ಅದರ ಅನುಗುಣವಾದ ರೆಗುಲರ್‌ ವೇರಿಯೆಂಟ್‌ಗಳಿಗಿಂತ 15,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.

ಎಕ್ಸ್‌ಟಿರಿಯರ್‌ನ ಬದಲಾವಣೆಗಳು

2024ರ ಪಂಚ್ ಕ್ಯಾಮೊ ಎಡಿಷನ್‌ ಈಗ ಸೀವೀಡ್ ಗ್ರೀನ್ ಬಾಡಿ ಕಲರ್‌ನೊಂದಿಗೆ ಬಿಳಿ ರೂಫ್‌ನೊಂದಿಗೆ ಬರುತ್ತದೆ, ಇದು ಪಂಚ್ ಕ್ಯಾಮೊದ ಹಿಂದಿನ ಆವೃತ್ತಿಯೊಂದಿಗೆ ಲಭ್ಯವಿರುವ ಫೋಲೇಜ್ ಗ್ರೀನ್ ಬಣ್ಣಕ್ಕಿಂತ ಭಿನ್ನವಾಗಿದೆ. ಹೊರಭಾಗದಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ ಅದರ 16-ಇಂಚಿನ ಡಾರ್ಕ್‌ ಗ್ರೇ ಅಲಾಯ್‌ ವೀಲ್‌ಗಳು ಮತ್ತು ಈ ಲಿಮಿಟೆಡ್‌ ಎಡಿಷನ್‌ನ ಮೈಕ್ರೋ ಎಸ್‌ಯುವಿಯನ್ನು ಸುಲಭವಾಗಿ ಗುರುತಿಸಲು ಸೈಡ್ ಫೆಂಡರ್‌ನಲ್ಲಿ 'ಕ್ಯಾಮೊ' ಬ್ಯಾಡ್ಜ್ ಕೂಡ ಇದೆ.

ಇದನ್ನೂ ಸಹ ಓದಿ: ಬುಕ್ಕಿಂಗ್‌ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Mahindra Thar Roxx

ಕ್ಯಾಬಿನ್‌ ಮತ್ತು ಫೀಚರ್‌ಗಳು

ಒಳಭಾಗದಲ್ಲಿ, 2024ರ ಪಂಚ್ ಕ್ಯಾಮೊ ಸ್ಪೇಷಲ್‌ ಎಡಿಷನ್‌ ಥೀಮ್‌ನ ಭಾಗವಾಗಲು ಸಂಪೂರ್ಣ ಕಪ್ಪು ಸೀಟ್ ಕವರ್‌ ಅನ್ನು ಪಡೆಯುತ್ತದೆ, ಜೊತೆಗೆ ಸಂಪೂರ್ಣ ಕಪ್ಪಾದ ಡೋರ್ ಓಪನಿಂಗ್ ಲಿವರ್‌ಗಳನ್ನು ಹೊಂದಿದೆ. ಡೋರ್ ಪ್ಯಾಡ್‌ಗಳಲ್ಲಿ ಕ್ಯಾಮೊ ಗ್ರಾಫಿಕ್ಸ್ ಅನ್ನು ಸಹ ಒದಗಿಸಲಾಗಿದೆ.

ಫೀಚರ್‌ಗಳ ವಿಷಯದಲ್ಲಿ, ಇದು ಈಗ 10.25-ಇಂಚಿನ ಟಚ್‌ಸ್ಕ್ರೀನ್, ಅರೆ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಲೋಡ್ ಆಗುತ್ತದೆ. ಇದರ ಸುರಕ್ಷತಾ ಫೀಚರ್‌ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

ಪವರ್‌ಟ್ರೈನ್‌ ಆಯ್ಕೆಗಳು

ಟಾಟಾ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಪಂಚ್ ಅನ್ನು ನೀಡುತ್ತದೆ. ಅವರ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

1.2-ಲೀಟರ್ ಪೆಟ್ರೋಲ್ + ಸಿಎನ್‌ಜಿ

ಪವರ್‌

88 ಪಿಎಸ್‌

73.5 ಪಿಎಸ್‌

ಟಾರ್ಕ್‌

115 ಎನ್‌ಎಮ್‌

103 ಎನ್‌ಎಮ್‌

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುವಲ್‌/ 5-ಸ್ಪೀಡ್‌ ಎಎಮ್‌ಟಿ

5-ಸ್ಪೀಡ್‌ ಮ್ಯಾನುವಲ್‌

ಬೆಲೆ ರೇಂಜ್‌ ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಟಾಟಾ ಪಂಚ್‌ನ ಎಕ್ಸ್ ಶೋರೂಂ ಬೆಲೆಗಳು 6.13 ಲಕ್ಷ ರೂ.ನಿಂದ 10.15 ಲಕ್ಷ ರೂ.ಗಳ ನಡುವೆ ಇರುತ್ತದೆ. ಇದು ಹ್ಯುಂಡೈ ಎಕ್ಸ್‌ಟರ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ, ಆದರೆ ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್‌ಗೆ ಪರ್ಯಾಯವಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಟಾಟಾ ಪಂಚ್ ಎಎಮ್‌ಟಿ

Share via

Write your Comment on Tata ಪಂಚ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ