Tata Tiago EV: ಮೊದಲ ವರ್ಷದ ಅವಲೋಕನ
ಟಾಟಾ ಟಿಯಾಗೋ ಇವಿ ಗಾಗಿ sonny ಮೂಲಕ ಸೆಪ್ಟೆಂಬರ್ 29, 2023 06:31 pm ರಂದು ಮಾರ್ಪಡಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಭಾರತದಲ್ಲಿ ಪ್ರವೇಶ ಹಂತದ ಏಕೈಕ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಎನಿಸಿರುವ ಟಿಯಾಗೊ EV ಕಾರಿನ ಕೈಗೆಟಕುವ ಬೆಲೆಯು ದೇಶದಲ್ಲಿ EV ವಾಹನಗಳ ಅಳವಡಿಕೆಗೆ ಹೆಚ್ಚಿನ ವೇಗ ನೀಡುವುದು ಖಂಡಿತ
ಟಾಟಾ ಸಂಸ್ಥೆಯು ಭಾರತದ EV ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದ್ದು ಟಾಟಾ ಟಿಯಾಗೊ EV ಕಾರು ಅದರ ಇತ್ತೀಚಿನ ಅತ್ಯಂತ ಹೊಸ ಎಲೆಕ್ಟ್ರಿಕ್ ಮಾದರಿ ಎನಿಸಿದೆ. ಇದರ ಬೆಲೆಗಳನ್ನು ಒಂದು ವರ್ಷದ ಹಿಂದೆ ಘೋಷಿಸಲಾಗಿದ್ದು, ಮೊದಲ ಬಾರಿಗೆ ಕಾರನ್ನು ಖರೀದಿಸಲು ಯೋಚಿಸುವವರ ಪಾಲಿಗೂ ಇದು ಅತ್ಯಂತ ಜನಪ್ರಿಯ ಆಯ್ಕೆ ಎನಿಸಿತ್ತು. ಇದು ಸದ್ಯದ ಮಟ್ಟಿಗೆ ದೇಶದ ಏಕೈಕ ಪ್ರವೇಶ ಹಂತದ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಎನಿಸಿದ್ದು, ಈ ಕಾರಿನ ವಿಚಾರದಲ್ಲಿ ಕಳೆದ 12 ತಿಂಗಳುಗಳಲ್ಲಿ ಏನೆಲ್ಲ ಬೆಳವಣಿಗೆಗಳು ಉಂಟಾಗಿವೆ ಎಂಬುದನ್ನು ಒಮ್ಮೆ ನೋಡೋಣ.
ವಿತರಣೆಯಲ್ಲಿ ವಿಳಂಬ
ಟಾಟಾ ಸಂಸ್ಥೆಯು ಟಿಯಾಗೊ EV ವಾಹನದ ಪರಿಚಯಾತ್ಮಕ ಬೆಲೆಗಳನ್ನು ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಬಹಿರಂಗಗೊಳಿಸಿದರೂ, ಪೂರ್ವನಿಗದಿಯಂತೆಯೇ ಡಿಸೆಂಬರ್ ತಿಂಗಳಿನಲ್ಲಿ ಗ್ರಾಹಕರಿಗೆ ವಾಹನಗಳನ್ನು ವಿತರಿಸಲು ಪ್ರಾರಂಭಿಸಲಾಯಿತು. ಬಿಡುಗಡೆಯಾದ ಎರಡು ವಾರಗಳ ನಂತರ ಬುಕಿಂಗ್ ಪ್ರಾರಂಭಗೊಂಡರೂ, 24 ಗಂಟೆಗಳೊಳಗೆ 10,000 ಜನರು ಹಣ ಠೇವಣಿ ಇಟ್ಟರು. ಆದರೆ, ಈ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರಿನ 10,000 ಘಟಕಗಳನ್ನು ಟಾಟಾ ಸಂಸ್ಥೆಯು 2023ರ ಮೇ ತಿಂಗಳ ಆರಂಭದಲ್ಲಷ್ಟೇ ವಿತರಿಸಿತು.
ಹೆಚ್ಚಿನ ಬುಕಿಂಗ್ ಗಳು ದೊಡ್ಡ ಬ್ಯಾಟರಿ ವೇರಿಯಂಟ್ ಗಳಿಗೆ ಸಂಬಂಧಿಸಿದ್ದ ಕಾರಣ, ಟಾಟಾ ಸಂಸ್ಥೆಯು ಈ ಆರ್ಡರ್ ಗಳ ವಿತರಣೆಗೆ ಆದ್ಯತೆ ನೀಡಿತು. ಪ್ರಸ್ತುತ, ಟಿಯಾಗೊ EV ಕಾರಿನ ಸರಾಸರಿ ಕಾಯುವಿಕೆ ಅವಧಿಯು ಸುಮಾರು 2 ತಿಂಗಳಾಗಿದ್ದು, ಇದು ಸಮರ್ಥನೀಯ ಅವಧಿ ಎನಿಸಿದೆ.
ಸಾಧಾರಣ ಬೆಲೆ ಏರಿಕೆ
ಟಾಟಾ ಟಿಯಾಗೊ ಸಂಸ್ಥೆಯ ಪರಿಚಯಾತ್ಮಕ ಬೆಲೆಯು ರೂ. 8.49 ಲಕ್ಷದಿಂದ ಪ್ರಾರಂಭವಾದರೆ, ತದನಂತರ ಎಲ್ಲಾ ವೇರಿಯಂಟ್ ಗಳ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಮೊದಲ ಬಾರಿಗೆ 2023ರ ಫೆಬ್ರುವರಿ ತಿಂಗಳಿನಲ್ಲಿ ಬೆಲೆಯನ್ನು ಏರಿಸಿದರೆ, ಏಕರೂಪವಾಗಿ ರೂ. 20,000 ರಷ್ಟು ಬೆಲೆಯನ್ನು ಹೆಚ್ಚಿಸಲಾಯಿತು. ಬಿಡುಗಡೆಯ ನಂತರ ಬೆಲೆಗಳಲ್ಲಿ ಉಂಟಾದ ಬದಲಾವಣೆಗಳ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ:
|
|||
ವೇರಿಯಂಟ್ |
ಬಿಡುಗಡೆಯ ಸಂದರ್ಭದ ಬೆಲೆ |
ಪ್ರಸ್ತುತ ಬೆಲೆ (28 ಸೆಪ್ಟೆಂಬರ್ 2023) |
ವ್ಯತ್ಯಾಸ |
XE MR |
ರೂ 8.49 ಲಕ್ಷ |
ರೂ 8.69 ಲಕ್ಷ |
ರೂ. 20,000 |
XT MR |
ರೂ 9.09 ಲಕ್ಷ |
ರೂ 9.29 ಲಕ್ಷ |
ರೂ. 20,000 |
XT LR |
ರೂ 9.99 ಲಕ್ಷ |
ರೂ 10.24 ಲಕ್ಷ |
ರೂ. 25,000 |
XZ+ LR |
ರೂ. 10.79 ಲಕ್ಷ/ ರೂ. 11.29 ಲಕ್ಷ (7.2kW) |
ರೂ. 11.04 ಲಕ್ಷ/ ರೂ. 11.54 ಲಕ್ಷ (7.2kW) |
ರೂ. 25,000 |
XZ+ Tech Lux LR |
ರೂ. 11.29 ಲಕ್ಷ/ ರೂ. 11.79 ಲಕ್ಷ (7.2kW) |
ರೂ. 11.54 ಲಕ್ಷ/ ರೂ. 12.04 ಲಕ್ಷ (7.2kW) |
ರೂ. 25,000 |
ಬಿಡುಗಡೆಯ ನಂತರ ಟಾಟಾ ಟಿಯಾಗೊ EV ಕಾರಿನ ಬೆಲೆಯಲ್ಲಿ ಕೇವಲ ರೂ. 25,000 ದಷ್ಟು ಹೆಚ್ಚಳ ಉಂಟಾಗಿದ್ದರೆ, ಸಣ್ಣ ಬ್ಯಾಟರಿ ಪ್ಯಾಕಿನ MR ವೇರಿಯಂಟ್ ಗಳಲ್ಲಿ ರೂ. 20,000 ದಷ್ಟು ಬೆಲೆ ಏರಿಕೆ ಕಂಡು ಬಂದಿದೆ.
ಇದನ್ನು ಸಹ ಓದಿರಿ: ಟಾಟಾ ಟಿಯಾಗೊ EV ವೇರಿಯಂಟ್ ಕುರಿತ ವಿಶ್ಲೇಷಣೆ: ನೀವು ಯಾವ ವೇರಿಯಂಟ್ ಅನ್ನು ಖರೀದಿಸಬೇಕು?
ಯಾವುದೇ ತಾಂತ್ರಿಕ ಬದಲಾವಣೆಗಳಿಲ್ಲ
ಟಾಟಾ ಸಂಸ್ಥೆಯು ಟಿಯಾಗೊ EV ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರ ಎಲೆಕ್ಟ್ರಿಕ್ ಪವರ್ ಟ್ರೇನ್ ಗೆ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ವಿವರಗಳು ಇಲ್ಲಿವೆ:
ಟಾಟಾ ಟಿಯಾಗೊ EV |
MR (ಮಿಡ್ ರೇಂಜ್) |
LR (ಲಾಂಗ್ ರೇಂಜ್) |
ಬ್ಯಾಟರಿ ಗಾತ್ರ |
19.2kWh |
24kWh |
ಪವರ್ |
61PS |
75PS |
ಟಾರ್ಕ್ |
110Nm |
114Nm |
ಕ್ಲೇಮು ಮಾಡಲಾದ ಶ್ರೇಣಿ (MIDC) |
250km |
315km |
ಇದು ಇನ್ನೂ ಅದೇ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದ್ದು, ಪ್ರಮಾಣಿತ 3.3kW AC ಚಾರ್ಜರ್ ಜೊತೆಗೆ ಎಲ್ಲಾ ವೇರಿಯಂಟ್ ಗಳು ಹೊಂದಿಕೊಳ್ಳುತ್ತವೆ. ಐಚ್ಛಿಕವಾಗಿ, ಟಾಪ್ ಸ್ಪೆಕ್ XZ+ ಮತ್ತು XZ+ Tech Lux ವೇರಿಯಂಟ್ ಗಳು 7.2kW AC ಚಾರ್ಜಿಂಗ್ ಅನ್ನು ಒದಗಿಸುತ್ತವೆ. ಅವುಗಳ ಕ್ಲೇಮು ಮಾಡಲಾದ ಬ್ಯಾಟರಿ ಚಾರ್ಜ್ ಸಮಯಗಳು ಈ ಕೆಳಗಿನಂತೆ ಇವೆ:
ಚಾರ್ಜಿಂಗ್ ಸಮಯ (10-100%) |
19.2kWh |
24kWh |
3.3kW AC ವಾಲ್ ಬಾಕ್ಸ್ ಚಾರ್ಜರ್ |
6.9 ಗಂಟೆಗಳು |
8.7 ಗಂಟೆಗಳು |
7.2kW AC ಫಾಸ್ಟ್ ಚಾರ್ಜರ್ |
2.6 ಗಂಟೆಗಳು |
3.6 ಗಂಟೆಗಳು |
15A ಪ್ಲಗ್ ಸಾಕೆಟ್ |
6.9 ಗಂಟೆಗಳು |
8.7 ಗಂಟೆಗಳು |
DC ಫಾಸ್ಟ್ ಚಾರ್ಜಿಂಗ್ |
58 ನಿಮಿಷಗಳು |
58 ನಿಮಿಷಗಳು |
ಅಚ್ಚರಿಯ ವಿಷಯವೇನೆಂದರೆ, ಡಿಫಾಲ್ಟ್ AC ವಾಲ್ ಬಾಕ್ಸ್ ಚಾರ್ಜರ್ ಮತ್ತು 15A ಹೋಂ ಸಾಕೆಟ್ ನ ಚಾರ್ಜಿಂಗ್ ಸಮಯಗಳು ಒಂದೇ ಆಗಿವೆ.
ಸಂಬಂಧಿತ: ಟಾಟಾ ಟಿಯಾಗೊ EV ಸಂಪೂರ್ಣವಾಗಿ ಚಾರ್ಜ್ ಆಗಲು ಎಷ್ಟು ಸಮಯ ಬೇಕು ನೋಡಿ
ವಿಶೇಷ ಆವೃತ್ತಿಯ ಟೀಸರ್
2023ರ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿನ ಟಾಟಾ ಸ್ಟಾಲ್ ಗಳಲ್ಲಿ, ಈ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಮಾದರಿಯ ಆಕರ್ಷಕ ಆವೃತ್ತಿ ಎನಿಸಿರುವ ಟಿಯಾಗೊ EV ಬ್ಲಿಟ್ಜ್ ಎನ್ನುವ ಕಾರು ನಮಗೆ ಕಾಣಸಿಕ್ಕಿದೆ. ಬಾಡಿ ಸ್ಕರ್ಟ್ ಮತ್ತು ಬಂಪರ್ ವಿಸ್ತರಣೆಯೊಂದಿಗೆ ಗ್ರಿಲ್, ವೀಲ್ ಗಳು, ಮೇಲ್ಭಾಗ ಮತ್ತು ORVM ಗಳಿಗೆ ಒಂದಷ್ಟು ಕಪ್ಪಾಗಿಸಿದ ನೋಟವನ್ನು ನೀಡಲಾಗಿದೆ. ಆದರೆ ಒಳಾಂಗಣದಲ್ಲಿ ನಾವು ಯಾವುದೇ ವಿಶೇಷ ಬದಲಾವಣೆಯನ್ನು ಗಮನಿಸಿಲ್ಲ. ಅಲ್ಲದೆ ಯಾಂತ್ರಿಕ ಪರಿಷ್ಕರಣೆಯ ಕುರಿತು ಯಾವುದೇ ಮಾಹಿತಿ ಇಲ್ಲ. ನೋಟದಲ್ಲಿ ಮಾತ್ರವೇ ಬದಲಾವಣೆಯನ್ನು ಕಂಡಿರುವ ಟಾಟಾ ಟಿಯಾಗೊ ಬ್ಲಿಟ್ಜ್ ಕಾರನ್ನು ನಾವು 2024ರಲ್ಲಿ ಶೋರೂಂಗಳಲ್ಲಿ ಕಾಣಬಹುದು.
ಸಾಮಾನ್ಯ ಟಿಯಾಗೊ EV ಯು 2023ರ IPL (ಇಂಡಿಯನ್ ಪ್ರೀಮಿಯರ್ ಲೀಗ್) ಸೀಸನ್ ನ ಅಧಿಕೃತ ಪ್ರಾಯೋಜಕ ವಾಹನವಾಗಿದ್ದ ಕಾರಣ ಬೇಸಿಗೆ ಕಾಲದಲ್ಲಿ ಒಂದಷ್ಟು ಹೆಚ್ಚುವರಿ ಸ್ಕ್ರೀನ್ ಸಮಯವನ್ನು ಪಡೆದಿತ್ತು.
ಸಮಗ್ರ ಪರೀಕ್ಷೆ
ಬಿಡುಗಡೆಯಾದ ನಂತರ ಟಾಟಾ ಟಿಯಾಗೊ EV ಕಾರಿನ ನೈಜ ಶ್ರೇಣಿ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸುವುದಕ್ಕಾಗಿ ಮತ್ತು ಕೆಲ ತಿಂಗಳ ನಂತರ ಬಿಡುಗಡೆಯಾದ ಇದರ ಹತ್ತಿರದ ಪ್ರತಿಸ್ಪರ್ಧಿ ಸಿಟ್ರಾನ್ eC3 ಜೊತೆಗೆ ಹೋಲಿಸುವುದಕ್ಕಾಗಿ ಈ ವಾಹನದ ಪರೀಕ್ಷೆ ನಡೆಸುವ ಅವಕಾಶ ನಮಗೆ ಲಭಿಸಿತ್ತು. ನಾವು ನಡೆಸಿದ ಪ್ರತಿ ಪರೀಕ್ಷೆ ಮತ್ತು ಇದರ ಫಲಿತಾಂಶದ ವಿವರ ಇಲ್ಲಿದೆ:
-
ಸಿಟ್ರಾನ್ eC3 vs ಟಾಟಾ ಟಿಯಾಗೊ EV: ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯ ಹೋಲಿಕೆ
-
0-100 KMPH ಓಟದಲ್ಲಿ ಟಾಟಾ ಟಿಯಾಗೊ EV ಕಾರು ಈ 10 ಕಾರುಗಳಿಗಿಂತ ಹೆಚ್ಚಿನ ವೇಗ ಹೊಂದಿದೆ
ಟಾಟಾ ಟಿಯಾಗೊ EV ಕಾರಿನ ಕುರಿತ ನಿಮ್ಮ ಅನಿಸಿಕೆಯನ್ನು ಕೆಳಗಿನ ಪ್ರತಿಕ್ರಿಯೆ ವಿಭಾಗದಲ್ಲಿ ಹಂಚಿಕೊಳ್ಳಿರಿ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಟಿಯಾಗೊ EV ಅಟೋಮ್ಯಾಟಿಕ್