• English
  • Login / Register

Maruti Celerio VXi CNG ವರ್ಸಸ್‌ Tata Tiago XM ಸಿಎನ್‌ಜಿ: ಸಂಪೂರ್ಣ ಹೋಲಿಕೆ

ಮಾರುತಿ ಸೆಲೆರಿಯೊ ಗಾಗಿ dipan ಮೂಲಕ ಜೂನ್ 28, 2024 07:51 am ರಂದು ಪ್ರಕಟಿಸಲಾಗಿದೆ

  • 67 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರಡು ಸಿಎನ್‌ಜಿ-ಚಾಲಿತ ಹ್ಯಾಚ್‌ಬ್ಯಾಕ್‌ಗಳು ಅವುಗಳ ಬೆಲೆಗೆ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ. ನೀವು ಯಾವುದನ್ನು ಆಯ್ಕೆ ಮಾಡುವಿರಿ?

Maruti Celerio VXi CNG vs Tata Tiago XM CNG: Specifications Compared

ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೊ ಬಹಳ ಹಿಂದಿನಿಂದಲೂ ಮಾರುಕಟ್ಟೆಯಲ್ಲಿವೆ. ಈ ಮೊಡೆಲ್‌ಗಳು ಮಾಸಿಕ ಹ್ಯಾಚ್‌ಬ್ಯಾಕ್ ಮಾರಾಟ ಚಾರ್ಟ್‌ನಲ್ಲಿ ಆಗಾಗ್ಗೆ ಸ್ಪರ್ಧೆಯನ್ನು ಒಡ್ಡುವುದನ್ನು ನಾವು ಕಾಣಬಹುದು.  ಹೋಲಿಸಬಹುದಾದ ಬೆಲೆ ಮತ್ತು ವೈಶಿಷ್ಟ್ಯದ ಸೆಟ್‌ಗಳೊಂದಿಗೆ, ಈ ಹ್ಯಾಚ್‌ಬ್ಯಾಕ್‌ಗಳು ಸಿಎನ್‌ಜಿ ಆಯ್ಕೆಯನ್ನು ಪಡೆಯುತ್ತವೆ. ನಿಮಗೆ ಯಾವುದು ಉತ್ತಮ ಕಾರು ಎಂದು ತಿಳಿಯಲು ನಾವು ಎರಡೂ ಕಾರುಗಳ ವಿಶೇಷಣಗಳನ್ನು ಹೋಲಿಸಿದ್ದೇವೆ. 

ಬೆಲೆ

ಮೊಡೆಲ್‌ಗಳು

ಮಾರುತಿ ಸೆಲೆರಿಯೋ ವಿಎಕ್ಸ್‌ಐ ಸಿಎನ್‌ಜಿ

ಟಾಟಾ ಟಿಯಾಗೋ ಎಕ್ಸ್‌ಇ ಸಿಎನ್‌ಜಿ

ಟಾಟಾ ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿ

ಬೆಲೆಗಳು

6.74 ಲಕ್ಷ ರೂ.

  6.60 ಲಕ್ಷ ರೂ.

6.95 ಲಕ್ಷ ರೂ.

ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ 

ಬೇಸ್‌ ಮೊಡೆಲ್‌ಗಿಂತ ಒಂದು ಮೇಲಿನ ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿಗೆ ನೇರ ಪ್ರತಿಸ್ಪರ್ಧಿ ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿ ಆಗಿದ್ದರೆ, ಬೇಸ್-ಸ್ಪೆಕ್ ಟಿಯಾಗೋ ಎಕ್ಸ್‌ಇ ಸಿಎನ್‌ಜಿ ಇಲ್ಲಿ ಅಗ್ಗದ ಆಯ್ಕೆಯಾಗಿ ಈ ಹೋಲಿಕೆಯಲ್ಲಿ ಸೇರಿಸಲು ಸಾಕಷ್ಟು ಹತ್ತಿರದಲ್ಲಿದೆ.‌ ಟಾಟಾ ಟಿಯಾಗೊದ ಎಂಟ್ರಿ ಲೆವೆಲ್‌ನ ಎಕ್ಸ್‌ಇ ಆವೃತ್ತಿಯು ಮಾರುತಿ ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿ ಅವೃತ್ತಿಗಿಂತ 14,000 ರೂ.ನಷ್ಟು ಕಡಿಮೆ ಬೆಲೆಯನ್ನು ಹೊಂದಿದೆ, ಇದು ಸೆಲೆರಿಯೊ ಮೊಡೆಲ್‌ನಲ್ಲಿರುವ ಏಕೈಕ ಸಿಎನ್‌ಜಿ ಆವೃತ್ತಿಯಾಗಿದೆ. ಟಿಯಾಗೋದ ಮತ್ತೊಂದು ಎಕ್ಸ್‌ಎಮ್‌ ಸಿಎನ್‌ಜಿ ಆವೃತ್ತಿಯಿದೆ, ಇದು ಸೆಲೆರಿಯೊ ಸಿಎನ್‌ಜಿಗಿಂತ 21,000 ರೂ.ವರೆಗೆ ಕಡಿಮೆ ಬೆಲೆಯಲ್ಲಿದೆ. 

Celerio VXi CNG

ಗಾತ್ರಗಳು

 

ಮಾರುತಿ ಸೆಲೆರಿಯೊ ಸಿಎನ್‌ಜಿ

ಟಾಟಾ ಟಿಯಾಗೋ ಸಿಎನ್‌ಜಿ

ಉದ್ದ

3695 ಮಿ.ಮೀ

3765 ಮಿ.ಮೀ

ಆಗಲ

1655 ಮಿ.ಮೀ

1677 ಮಿ.ಮೀ

ಎತ್ತರ

1555 ಮಿ.ಮೀ

1535 ಮಿ.ಮೀ

ವೀಲ್‌ಬೇಸ್‌

2435 ಮಿ.ಮೀ

2400 ಮಿ.ಮೀ

Tata Tiago CNG XM trim

ಪವರ್‌ಟ್ರೈನ್‌

 

ಮಾರುತಿ ಸೆಲೆರಿಯೊ ಸಿಎನ್‌ಜಿ

ಟಾಟಾ ಟಿಯಾಗೋ ಸಿಎನ್‌ಜಿ

ಎಂಜಿನ್‌

1-ಲೀಟರ್‌ 3 ಸಿಲಿಂಡರ್‌ ಎಂಜಿನ್‌ 

1.2-ಲೀಟರ್‌ 3 ಸಿಲಿಂಡರ್‌ ಎಂಜಿನ್‌

ಪವರ್‌

57 ಪಿಎಸ್‌

73 ಪಿಎಸ್‌

ಟಾರ್ಕ್‌

82 ಎನ್‌ಎಮ್‌

95 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುಯಲ್‌

5-ಸ್ಪೀಡ್‌ ಮ್ಯಾನುಯಲ್‌

ಮೈಲೇಜ್‌

ಪ್ರತಿ ಕೆಜಿ.ಗೆ 35.60 ಕಿ.ಮೀ

ಪ್ರತಿ ಕೆಜಿ.ಗೆ 26.49 ಕಿ.ಮೀ

ಟಿಯಾಗೋ ಸಿಎನ್‌ಜಿ  ಹೆಚ್ಚು ಶಕ್ತಿಶಾಲಿ ಎಂಜಿನ್‌ಅನ್ನು ಹೊಂದಿದೆ, ಸೆಲೆರಿಯೊ ಸಿಎನ್‌ಜಿಗಿಂತ 16 ಪಿಎಸ್‌ ಮತ್ತು 13 ಪಿಎಸ್‌ ಹೆಚ್ಚು ಉತ್ಪಾದಿಸುತ್ತದೆ. ಎರಡೂ ಕಾರುಗಳ ಸಿಎನ್‌ಜಿ ಆವೃತ್ತಿಗಳು  5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿವೆ. ಆದರೆ, ಟಾಟಾ ಟಿಯಾಗೊ ಸಿಎನ್‌ಜಿ ಅದರ ಟಾಪ್‌ ಮೊಡೆಲ್‌ಗಳಲ್ಲಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅನ್ನು ಸಹ ಪಡೆಯುತ್ತದೆ.

Automatic transmission in the higher variants of Tiago CNG

(ಫೋಟೊವನ್ನು ಮಾಹಿತಿಯ ಉದ್ದೇಶದಿಂದ ಬಳಸಲಾಗಿದೆ)

ಫೀಚರ್‌ಗಳು

ಫೀಚರ್‌ಗಳು

ಮಾರುತಿ ಸೆಲೆರಿಯೋ ವಿಎಕ್ಸ್‌ಐ ಸಿಎನ್‌ಜಿ

ಟಾಟಾ ಟಿಯಾಗೋ ಎಕ್ಸ್‌ಇ ಸಿಎನ್‌ಜಿ

ಟಾಟಾ ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿ

ಎಕ್ಸ್‌ಟಿರೀಯರ್‌

ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಬಾಡಿ ಕಲರ್‌ನ ಡೋರ್‌ ಹ್ಯಾಂಡಲ್‌ಗಳು ಮತ್ತು ಹೊರಗಿನ ಹಿಂಬದಿ-ವ್ಯೂನ ಕನ್ನಡಿಗಳು (ORVMs)

ಮುಂಭಾಗದ ಗ್ರಿಲ್‌ನಲ್ಲಿ ಕ್ರೋಮ್‌ ಬಳಕೆ

ಪೂರ್ಣ ವೀಲ್‌ ಕವರ್ ಹೊಂದಿರುವ 14-ಇಂಚಿನ ಸ್ಟೀಲ್‌ನ ಚಕ್ರಗಳು

ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಕಪ್ಪು ಕಲರ್‌ನ ಡೋರ್‌ ಹ್ಯಾಂಡಲ್‌ಗಳು ಮತ್ತು ಹೊರಗಿನ ಹಿಂಬದಿ-ವ್ಯೂನ ಕನ್ನಡಿಗಳು (ORVMs)

ಕವರ್‌ಗಳಿಲ್ಲದ 14-ಇಂಚಿನ ಸ್ಟೀಲ್‌ನ ಚಕ್ರಗಳು

ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಕಪ್ಪು ಕಲರ್‌ನ ಡೋರ್‌ ಹ್ಯಾಂಡಲ್‌ಗಳು ಮತ್ತು ಹೊರಗಿನ ಹಿಂಬದಿ-ವ್ಯೂನ ಕನ್ನಡಿಗಳು (ORVMs)

ORVM ಗಳಲ್ಲಿ ಎಲ್‌ಇಡಿ ಇಂಡಿಕೇಟರ್‌ಗಳು

ಪೂರ್ಣ ವೀಲ್‌ ಕವರ್ ಹೊಂದಿರುವ 14-ಇಂಚಿನ ಸ್ಟೀಲ್‌ನ ಚಕ್ರಗಳು

ಇಂಟಿರೀಯರ್‌

ಡೇ-ನೈಟ್‌ ಒಳಗಿನ ಹಿಂಬದಿ ನೋಟದ ಮಿರರ್‌ (IRVM)

ಮುಂಭಾಗದ ಕ್ಯಾಬಿನ್ ಲೈಟ್‌

60:40 ಸ್ಪ್ಲಿಟ್ ಫೋಲ್ಡಿಂಗ್ ಮಾಡಬಹುದಾದ  ಹಿಂಬದಿಯ ಸೀಟ್

ಹಿಂಭಾಗದ ಪಾರ್ಸೆಲ್ ಟ್ರೇ

ಸಹ-ಚಾಲಕ ಸನ್‌ವೈಸರ್‌ನಲ್ಲಿ ವ್ಯಾನಿಟಿ ಮಿರರ್

ಮುಂಭಾಗದ ಸೀಟಿನ ಹಿಂಭಾಗದಲ್ಲಿ ಪಾಕೆಟ್ಸ್

ಫ್ಯಾಬ್ರಿಕ್ ಸೀಟ್‌ಗಳು

ಮುಂಭಾಗ ಮತ್ತು ಹಿಂಭಾಗ ಸೀಟ್‌ಗಳಲ್ಲಿ ಇಂಟಿಗ್ರೇಟೆಡ್ ಹೆಡ್‌ರೆಸ್ಟ್‌ಗಳು

ಡೇ-ನೈಟ್‌ ಒಳಗಿನ ಹಿಂಬದಿ ನೋಟದ ಮಿರರ್‌ (IRVM)

ಬಾಗಿಕೊಳ್ಳಬಹುದಾದ ಗ್ರಾಬ್ ಹ್ಯಾಂಡಲ್‌ಗಳು

ಫ್ಯಾಬ್ರಿಕ್ ಸೀಟ್‌ಗಳು

ಮುಂಭಾಗದಲ್ಲಿ ಎಡ್ಜಸ್ಟ್‌ ಮಾಡಬಹುದಾದ ಹೆಡ್‌ರೆಸ್ಟ್‌ಗಳು

ಡೇ-ನೈಟ್‌ ಒಳಗಿನ ಹಿಂಬದಿ ನೋಟದ ಮಿರರ್‌ (IRVM)

ಬಾಗಿಕೊಳ್ಳಬಹುದಾದ ಗ್ರಾಬ್ ಹ್ಯಾಂಡಲ್‌ಗಳು

ಫ್ಯಾಬ್ರಿಕ್ ಸೀಟ್‌ಗಳು

ಮುಂಭಾಗದಲ್ಲಿ ಎಡ್ಜಸ್ಟ್‌ ಮಾಡಬಹುದಾದ ಹೆಡ್‌ರೆಸ್ಟ್‌ಗಳು

ಇಂಫೋಟೈನ್‌ಮೆಂಟ್‌

ಯಾವುದೇ ಇಂಫೋಟೈನ್‌ಮೆಂಟ್‌ ಇಲ್ಲ

ಯಾವುದೇ ಇಂಫೋಟೈನ್‌ಮೆಂಟ್‌ ಇಲ್ಲ

3.5-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ

2 ಸ್ಪೀಕರ್‌ಗಳು

ಬ್ಲೂಟೂತ್ ಸಂಪರ್ಕ

ಸೌಕರ್ಯ ಮತ್ತು ಸೌಲಭ್ಯ

ಮಲ್ಟಿ-ಇನ್‌ಫಾರ್ಮೆಶನ್‌ ಡಿಸ್‌ಪ್ಲೇಯೊಂದಿಗೆ ಅನಲಾಗ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್

ಮ್ಯಾನುಯಲ್ ಎಸಿ

ಡ್ರೈವರ್ ಸೈಡ್‌ನಲ್ಲಿ ಆಟೋಮ್ಯಾಟಿಕ್‌ ಮೇಲಕ್ಕೆ/ಕೆಳಗೆ ಇರುವ ಎಲ್ಲಾ ನಾಲ್ಕು ಪವರ್ ವಿಂಡೋಗಳು

ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಹೊರಗಿನ ಹಿಂಬದಿಯ ವ್ಯೂ ಮಿರರ್‌ಗಳು (ORVMs)

ಮುಂಭಾಗದ ಪವರ್ ಔಟ್ಲೆಟ್ (12V)

ಇಂಜಿನ್ ಐಡಲ್ ಸ್ಟಾರ್ಟ್/ಸ್ಟಾಪ್

ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್

ಮ್ಯಾನುಯಲ್ ಎಸಿ

ಮುಂಭಾಗದ ಪವರ್ ಔಟ್ಲೆಟ್ (12V)

ಮ್ಯಾನುಯಲ್‌ ವಿಂಡೋಗಳು

ಮ್ಯಾನುಯಲ್‌ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು

ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್

ಮ್ಯಾನುಯಲ್ ಎಸಿ

ಎಲ್ಲಾ ನಾಲ್ಕು ಪವರ್‌ ವಿಂಡೋಗಳು

ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ORVM ಗಳು

ಮುಂಭಾಗದ ಪವರ್ ಔಟ್ಲೆಟ್ (12V)

ಸುರಕ್ಷತೆ

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ಸ್ಪೀಡ್‌ ಮತ್ತು ಡಿಕ್ಕಿ ಸಂವೇದಿ ಆಟೋ ಡೋರ್ ಲಾಕ್

ಫ್ರಂಟ್ ಡಿಸ್ಕ್ ಬ್ರೇಕ್‌ಗಳು

ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ISOFIX ಚೈಲ್ಡ್ ಸೀಟ್ ಮೌಂಟ್‌ಗಳು

ಸೆಂಟ್ರಲ್ ಲಾಕಿಂಗ್

ಇಂಜಿನ್ ಇಮೊಬಿಲೈಸರ್

ಮುಂಭಾಗದ ಡಿಸ್ಕ್ ಬ್ರೇಕ್‌ಗಳು

ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ISOFIX ಚೈಲ್ಡ್ ಸೀಟ್ ಮೌಂಟ್‌ಗಳು

ಸೆಂಟ್ರಲ್ ಲಾಕಿಂಗ್

ಇಂಜಿನ್ ಇಮೊಬಿಲೈಸರ್

ಮುಂಭಾಗದ ಡಿಸ್ಕ್ ಬ್ರೇಕ್‌ಗಳು

ರಿವರ್ಸ್ ಪಾರ್ಕಿಂಗ್ ಡಿಸ್‌ಪ್ಲೇಗಳು ಮತ್ತು ಸೆನ್ಸಾರ್‌ಗಳು 

ಇಲ್ಲಿರುವ ಮೂರು ಆಯ್ಕೆಗಳಲ್ಲಿ, ಟಾಟಾ ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿಯು ಬಾಹ್ಯ ವಿನ್ಯಾಸದಲ್ಲಿ ಲೀಡ್ ಅನ್ನು ಪಡೆಯುತ್ತದೆ, ORVM ನಲ್ಲಿ ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳೊಂದಿಗೆ ಇದು ಹೊರಗಿನಿಂದ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಒಳಭಾಗದಲ್ಲಿ, ಸೆಲೆರಿಯೊ ಮತ್ತು ಟಿಯಾಗೊ ಒಂದೇ ರೀತಿಯ ಅಂಶಗಳನ್ನು ಒಳಗೊಂಡಿದೆ. ಆದರೆ ಮೊದಲನೆಯದು ಸ್ಪ್ಲಿಟ್ ಫೋಲ್ಡಿಂಗ್ ಮಾಡಬಹುದಾದ ಹಿಂಬದಿ ಸೀಟ್, ಹಿಂಭಾಗದ ಪಾರ್ಸೆಲ್ ಟ್ರೇ ಮತ್ತು ಮ್ಯಾಗಜೀನ್ ಪಾಕೆಟ್‌ಗಳಂತಹ ಅನುಕೂಲಗಳನ್ನು ಒಳಗೊಂಡಿದೆ.

ಮತ್ತೊಂದೆಡೆ,  ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿಯು ಬ್ಲೂಟೂತ್ ಸಂಪರ್ಕ ಮತ್ತು ಎರಡು ಸ್ಪೀಕರ್‌ಗಳೊಂದಿಗೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಸಣ್ಣ ಡಿಸ್‌ಪ್ಲೇಯೊಂದಿಗೆ) ಹೊಂದಿದೆ, ಇವೆಲ್ಲವೂ ಸೆಲೆರಿಯೊ  ವಿಎಕ್ಸ್‌ಐ ಸಿಎನ್‌ಜಿಯಲ್ಲಿ ಮಿಸ್‌ ಆಗಿದೆ.

ಸೌಕರ್ಯದ ವಿಷಯದಲ್ಲಿ, ಎಲ್ಲಾ ಆಯ್ಕೆಗಳು ಮ್ಯಾನುಯಲ್‌ ಎಸಿಯನ್ನು ನೀಡುತ್ತವೆ, ಮತ್ತು ಬೇಸ್-ಲೆವೆಲ್ ಟಿಯಾಗೋ ಸಿಎನ್‌ಜಿಯಲ್ಲಿ ಮಾತ್ರ ಪವರ್ ವಿಂಡೋಗಳು ಲಭ್ಯವಿರುವುದಿಲ್ಲ. ಆದರೆ ಡ್ರೈವರ್‌ನ ವಿಂಡೋದಲ್ಲಿ ಒನ್-ಟಚ್ ಅಪ್-ಡೌನ್ ಫೀಚರ್‌ಅನ್ನು ಸೇರಿಸುವ ಮೂಲಕ ಸೆಲೆರಿಯೊ ಇಲ್ಲಿ ಉತ್ತಮ ಮೌಲ್ಯವನ್ನು ಹೊಂದಿದೆ, ಇದನ್ನು ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿ ಸಹ ಪಡೆಯುವುದಿಲ್ಲ.  ಟಾಟಾ ಟಿಯಾಗೊ ಸಿಎನ್‌ಜಿ ಆವೃತ್ತಿಗಳಲ್ಲಿ ಮುಂಭಾಗದ ಹೆಡ್‌ರೆಸ್ಟ್‌ಗಳು ಎಡ್ಜಸ್ಟ್‌ ಮಾಡಬಹುದು, ಆದರೆ ಸೆಲೆರಿಯೊದಲ್ಲಿ, ಅವುಗಳನ್ನು ಸೀಟ್‌ಗಳೊಂದಿಗೆ ಫಿಕ್ಸ್‌ ಮಾಡಲಾಗಿದೆ.

ಸುರಕ್ಷತಾ ಸೂಟ್ ಕೂಡ ಹೋಲುತ್ತದೆ, ಆದರೆ ಟಿಯಾಗೋವು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒದಗಿಸುತ್ತದೆ, ಇದು ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳಿಗೆ ಸುರಕ್ಷಿತವಾಗಿದೆ.

ಬೂಟ್ ಬಗ್ಗೆ ಹೇಳುವುದಾದರೆ ?

ಟಾಟಾ ಟಿಯಾಗೊ ಸಿಎನ್‌ಜಿಯು ಮಾರುತಿ ಸೆಲೆರಿಯೊ ಸಿಎನ್‌ಜಿಯನ್ನು ಹಿಂದಿಕ್ಕಲು ಹೊಂದಿರುವ ಒಂದು ಅಂಶವೆಂದರೆ ಬೂಟ್‌ನ ಪ್ರಾಯೋಗಿಕತೆ. ಟಿಯಾಗೋ ಬೂಟ್ ಫ್ಲೋರ್‌ನ ಕೆಳಗೆ ಡ್ಯುಯಲ್ ಸಿಎನ್‌ಜಿ ಟ್ಯಾಂಕ್‌ಗಳನ್ನು ಹೊಂದಿದ್ದು, ಬಳಸಬಹುದಾದ ಶೇಖರಣಾ ಸ್ಥಳವನ್ನು ನೀಡುತ್ತದೆ, ಆದರೆ ಸೆಲೆರಿಯೊ ಒಂದೇ ಟ್ಯಾಂಕ್ ಅನ್ನು ಹೊಂದಿದ್ದು, ಆದರೂ ಅದು ಪೆಟ್ರೋಲ್-ಚಾಲಿತ ಸೆಲೆರಿಯೊದಲ್ಲಿ ನೀಡಲಾದ 313-ಲೀಟರ್ ಬೂಟ್‌ನ ಹೆಚ್ಚಿನ ಜಾಗವನ್ನು ತೆಗೆದುಕೊಳ್ಳುತ್ತದೆ.

Tata Tiago CNG dual-cylinder CNG tank

ಅಂತಿಮ ಮಾತು

ಈ ಎರಡು ಪ್ರವೇಶ ಮಟ್ಟದ ಸಿಎನ್‌ಜಿ ಹ್ಯಾಚ್‌ಬ್ಯಾಕ್‌ಗಳ ನಡುವೆ ಆಯ್ಕೆ ಮಾಡುವುದು ಕಷ್ಟಕರವಾಗಿರುತ್ತದೆ, ಆದರೆ ಟಾಟಾ ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿಯು ಇವರೆಡರಲ್ಲಿ ಹೆಚ್ಚಿನ ಪ್ರೀಮಿಯಂ ಆಗಿರುವ ಫೀಚರ್‌ಗಳನ್ನು ನೀಡುತ್ತದೆ. ಇದು ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್ ಮತ್ತು ಹೆಚ್ಚಿನ ಬೇಸಿಕ್‌ ಕಂಫರ್ಟ್‌ನ ಫೀಚರ್‌ಗಳನ್ನು ಒಳಗೊಂಡಿರುವ ವೈಶಿಷ್ಟ್ಯದ ಸೆಟ್ ಅನ್ನು ಹೊಂದಿದೆ.

ಮತ್ತೊಂದೆಡೆ, ಮಾರುತಿ ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿಯು ಹೆಚ್ಚು ಸಂಸ್ಕರಿಸಿದ ಎಂಜಿನ್ ಅನ್ನು ಹೊಂದಿದೆ, ಅದು ಗಮನಾರ್ಹವಾಗಿ ಕಡಿಮೆ ಶಕ್ತಿಯನ್ನು ಉತ್ಪಾದಿಸುತ್ತದೆ. ಗಮನಾರ್ಹವಾಗಿ, ಪ್ರಸ್ತುತ ಸೆಲೆರಿಯೊ ಶ್ರೇಣಿಯಲ್ಲಿ ಲಭ್ಯವಿರುವ ಏಕೈಕ ಸಿಎನ್‌ಜಿ ಆವೃತ್ತಿಯಾಗಿದೆ. ಟಿಯಾಗೋ ಎಕ್ಸ್‌ಎಮ್‌ ಸಿಎನ್‌ಜಿಗೆ ಹೋಲಿಸಿದರೆ ನೀವು ಉಳಿಸಿದ ಹಣವನ್ನು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಬಿಡಿಭಾಗಗಳಿಗೆ ಬಳಸಬಹುದು. ಮಾರುತಿ ತನ್ನ ಮಾರಾಟದ ನಂತರದ ಸೌಕರ್ಯಗಳಿಗೂ ಉತ್ತಮ ಖ್ಯಾತಿಯನ್ನು ಹೊಂದಿದೆ.

ಹಾಗೆಯೇ, ಇಲ್ಲಿ ಅತ್ಯಂತ ಕೈಗೆಟುಕುವ ಆಯ್ಕೆಯಾದ ಟಿಯಾಗೋ ಎಕ್ಸ್‌ಇ ಸಿಎನ್‌ಜಿಯು, ಅದರ ಪರವಾಗಿ ಬಹಳ ಕಡಿಮೆ ಅಂಶಗಳನ್ನು ಹೊಂದಿದೆ, ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿಗಾಗಿ ಪ್ರೀಮಿಯಂ ಸೇರಿಸಿದ ಅನುಕೂಲಗಳಿಗೆ ಸುಲಭವಾಗಿ ಸಮರ್ಥಿಸಬಹುದಾಗಿದೆ.

ಸಾರಾಂಶದಲ್ಲಿ, ಟಾಟಾ ಟಿಯಾಗೊ ಎಕ್ಸ್‌ಎಮ್‌ ಸಿಎನ್‌ಜಿಯು ಮಾರು‌ತಿ  ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿಗಿಂತ ಒಟ್ಟಾರೆಯಾಗಿ ಉತ್ತಮ ಮೌಲ್ಯವನ್ನು ನೀಡುತ್ತದೆ. ಟಾಟಾ ಟಿಯಾಗೊ ಎಕ್ಸ್‌ಎಮ್‌ ಸಿಎನ್‌ಜಿ ಮತ್ತು ಮಾರುತಿ ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿ ನಡುವೆ ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

 ಆಟೋಮೋಟಿವ್ ಪ್ರಪಂಚದ ಕುರಿತ ಸುದ್ದಿ,ವಿವರ ಮತ್ತು ವಿಮರ್ಶೆಗಳನ್ನು ಬಯಸುವಿರಾ? ಈಗಲೇ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋಮಾಡಿ

ಇನ್ನಷ್ಟು ಓದಿ: ಮಾರುತಿ ಸೆಲೆರಿಯೊ ಎಎಮ್‌ಟಿ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಸೆಲೆರಿಯೊ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience