ಇವುಗಳು 2024ರ ಜನವರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳು

published on ಫೆಬ್ರವಾರಿ 16, 2024 07:09 pm by rohit for ಮಾರುತಿ ವ್ಯಾಗನ್ ಆರ್‌

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಪಟ್ಟಿಯಲ್ಲಿರುವ ಆರು ಮಾದರಿಗಳಲ್ಲಿ, ಮಾರುತಿ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಮಾತ್ರ ಒಟ್ಟು 10,000 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.

Top-selling compact and midsize hatchbacks in January 2024

ಇಂದು ಹೊಸ-ತಲೆಮಾರಿನ ಕಾರು ಖರೀದಿದಾರರು ಎಸ್‌ಯುವಿಗಳನ್ನು ಹೆಚ್ಚು ಇಷ್ಟಪಟ್ಟರೂ ಸಹ, ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳು ಇನ್ನೂ ಜನಪ್ರಿಯ ಆಯ್ಕೆಯಾಗಿದೆ. ಟಾಟಾ ಮತ್ತು ಹ್ಯುಂಡೈನ ಮೊಡೆಲ್‌ಗಳು ಪಟ್ಟಿಯಲ್ಲಿ ಕಾಣಿಸಿಕೊಂಡರೂ, ಈ ಜನವರಿಯಲ್ಲಿ ಎಂದಿನಂತೆ ಮಾರುತಿ ಹ್ಯಾಚ್‌ಬ್ಯಾಕ್‌ಗಳು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದವು. 2024ರ ಜನವರಿಯಲ್ಲಿ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ವಿವರವಾದ ಮಾರಾಟ ವರದಿ ಇಲ್ಲಿದೆ:

ಮೊಡೆಲ್‌ಗಳು

2024ರ ಜನವರಿ 

2023ರ ಜನವರಿ 

2023ರ ಡಿಸೆಂಬರ್

ಮಾರುತಿ ವ್ಯಾಗನ್ ಆರ್

17,756

20,466

8,578

ಮಾರುತಿ ಸ್ವಿಫ್ಟ್

15,370

16,440

11,843

ಹುಂಡೈ ಗ್ರಾಂಡ್ ಐ10 ನಿಯೋಸ್

6,865

8,760

5,247

ಟಾಟಾ ಟಿಯಾಗೊ

6,482

9,032

4,852

ಮಾರುತಿ ಸೆಲೆರಿಯೊ

4,406

3,418

247

ಮಾರುತಿ ಇಗ್ನಿಸ್

2,598

5,842

392

ಇದನ್ನು ಸಹ ಓದಿ: ಇವುಗಳು 2024ರ ಜನವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು

ಗಮನಿಸಬೇಕಾದ ಅಂಶಗಳು

Maruti Wagon R

  •  ಮಾರುತಿ ಸುಜುಕಿ ವ್ಯಾಗನ್ ಆರ್‌ 2024ರ ಜನವರಿಯಲ್ಲಿ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು, ತಿಂಗಳಿನಿಂದ ತಿಂಗಳಿಗೆ (MoM) 100 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿತು.

  • 15,000 ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ, ವ್ಯಾಗನ್ ಆರ್ ನಂತರ ಮಾರುತಿ ಸ್ವಿಫ್ಟ್ 10,000 ಯುನಿಟ್‌ಗಳಿಗಿಂತ ಹೆಚ್ಚು ಮಾರಾಟಕ್ಕೆ ಸಾಕ್ಷಿಯಾದ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ.

Hyundai Grand i10 Nios

  •  ಪಟ್ಟಿಯಲ್ಲಿನ ನಂತರದ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಹ್ಯುಂಡೈ ಗ್ರಾಂಡ್ i10 ನಿಯೋಸ್ ಆಗಿದ್ದು, ಸುಮಾರು 7,000 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅದರ ತಿಂಗಳಿನಿಂದ ತಿಂಗಳ ಅಂಕಿಅಂಶವು 31 ಪ್ರತಿಶತದಷ್ಟು ಬೆಳೆದರೆ, ಅದರ ವರ್ಷದಿಂದ ವರ್ಷದ (YoY) ಸಂಖ್ಯೆಯು 22 ಪ್ರತಿಶತದಷ್ಟು ಕಡಿಮೆಯಾಗಿದೆ.

  • ಟಾಟಾ ಟಿಯಾಗೊದ ಸುಮಾರು 6,500 ಯೂನಿಟ್‌ಗಳನ್ನು  2024ರ ಜನವರಿಯಲ್ಲಿ ಮಾರಾಟ ಮಾಡಲಾಗಿದೆ, ಇದು ಪಟ್ಟಿಯಲ್ಲಿ 5,000 ಯೂನಿಟ್‌ಗಳಿಗಿಂತ ಹೆಚ್ಚಿನ ಮಾರಾಟವನ್ನು ಹೊಂದಿರುವ ಕೊನೆಯ ಮಾದರಿಯಾಗಿದೆ. ಈ ಸಂಖ್ಯೆಗಳು ಟಾಟಾ ಟಿಯಾಗೊ EV ಯ ಮಾರಾಟವನ್ನೂ ಒಳಗೊಂಡಿವೆ.

Maruti Celerio

  • ಮಾರುತಿ ಸೆಲೆರಿಯೊ, 4,400 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ, ಚಾರ್ಟ್‌ನಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು MoM ಮತ್ತು YoY ಮಾರಾಟದಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡಿತು.

  • ಮಾರುತಿ ಇಗ್ನಿಸ್ ವರ್ಷದಿಂದ ವರ್ಷದ ಮಾರಾಟದ ಅಂಕಿಅಂಶಗಳಲ್ಲಿ ಭಾರಿ ಜಿಗಿತವನ್ನು ಕಂಡರೂ, ಅದರ ಮಾಸಿಕ ಮಾರಾಟದ ಅಂಕಿ ಅಂಶವು 50 ಪ್ರತಿಶತದಷ್ಟು ಕಡಿಮೆಯಾಗಿದೆ. ಇದರ ಹೆಚ್ಚುತ್ತಿರುವ ಮಾರಾಟದ ಸಂಖ್ಯೆಯು  2024 ರ ಜನವರಿಯಲ್ಲಿ ಕೇವಲ 2,500 ಯುನಿಟ್ ಮಾರ್ಕ್ ಅನ್ನು ದಾಟಿತ್ತಷ್ಟೆ.

ಇನ್ನಷ್ಟು ಓದಿ : ಮಾರುತಿ ವ್ಯಾಗನ್ ಆರ್ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ವೇಗನ್ ಆರ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience