ಭಾರತದಲ್ಲಿ ಮಾರಾಟವಾಗುವ ಈ 7 ಕಾರುಗಳಲ್ಲಿ ಸಿಗುತ್ತದೆ ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್‌ಕ್ಯಾಮ್
ಹುಂಡೈ ಎಕ್ಸ್‌ಟರ್ ಗಾಗಿ shreyash ಮೂಲಕ ಸೆಪ್ಟೆಂಬರ್ 27, 2023 03:05 pm ರಂದು ಪ್ರಕಟಿಸಲಾಗಿದೆ
- 59 Views
- ಕಾಮೆಂಟ್ ಅನ್ನು ಬರೆಯಿರಿ
ಹುಂಡೈ ಎಕ್ಸ್‌ಟರ್ ಮತ್ತು ಹುಂಡೈ ವೆನ್ಯೂ ಎನ್ ಲೈನ್ ಹೊರತುಪಡಿಸಿ, ಬೇರೆ ಮಾಡೆಲ್‌ಗಳ ಸ್ಪೆಷಲ್ ಎಡಿಶನ್ ವೇರಿಯಂಟ್‌ಗಳಲ್ಲಿ ಡ್ಯಾಶ್‌ಕ್ಯಾಮ್ ಒದಗಿಸಲಾಗುತ್ತಿದೆ
ನಿಮಗೆ ಅಥವಾ ನಿಮ್ಮ ಕಾರಿಗೆ ಹಾನಿ ಉಂಟುಮಾಡಬಲ್ಲ ಎಲ್ಲಾ ರೀತಿಯ ಘಟನೆಗಳೂ ನಡೆಯುವ ಭಾರತದಂತಹ ದೇಶಗಳಲ್ಲಿ, ಡ್ಯಾಶ್‌ಕ್ಯಾಮ್ ಬಹಳ ಮುಖ್ಯವಾಗುತ್ತದೆ. ಘಟನಾಸ್ಥಳದಲ್ಲಿ ನಿಜವಾಗಿಯೂ ನಡೆದಿದ್ದೇನು ಎಂಬುದರ ಬಗ್ಗೆ ವಿಡಿಯೋ ರೆಕಾರ್ಡಿಂಗ್ ಮೂಲಕ ನಿಖರ ಪುರಾವೆ ಒದಗಿಸುವ ಮೂಲಕ, ಇದು ನಿಮ್ಮನ್ನು ತೊಂದರೆಯಿಂದ ಪಾರುಮಾಡುತ್ತದೆ. ಈಗ, ಹ್ಯುಂಡೈ, ರೆನಾಲ್ಟ್ ಮತ್ತು ಸ್ಕೋಡಾ ಸೇರಿದಂತೆ ಹಲವಾರು ವಾಹನ ತಯಾರಕರು ಆಯ್ದ ಮಾಡೆಲ್‌ಗಳಲ್ಲಿ ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್‌ಕ್ಯಾಮ್ ನೀಡುತ್ತಿದ್ದಾರೆ. ಈ ಪ್ರತಿಯೊಂದು ಮಾಡೆಲ್‌ಗಳನ್ನು ಹತ್ತಿರದಿಂದ ಗಮನಿಸೋಣ ಬನ್ನಿ.
ಹ್ಯುಂಟೈ ಎಕ್ಸ್‌ಟರ್
ಈ ಹೊಸ ಟ್ರೆಂಡ್ ಶುರುವಾಗಿದ್ದು ಜುಲೈನಲ್ಲಿ ಹ್ಯುಂಡೈ ಎಕ್ಸ್‌ಟರ್ ಲಾಂಚ್ ಆದಾಗಿನಿಂದ. ಇದರಲ್ಲಿ ಮುಂಭಾಗದ ವ್ಯೂ ಹಾಗೂ ಕ್ಯಾಬಿನ್‌ನ ದೃಶ್ಯಗಳನ್ನು ಕವರ್ ಮಾಡಲು ಡ್ಯುಯಲ್ ಕ್ಯಾಮೆರಾ ಸೆಟಪ್ ಇರುವ ಡ್ಯಾಶ್‌ಕ್ಯಾಮ್ ಇದೆ. ಈ ವೈಶಿಷ್ಟ್ಯವು ಈ ಮೈಕ್ರೋ ಎಸ್‌ಯುವಿಯ ಟಾಪ್ ಸ್ಪೆಕ್ ಎಸ್‌ಎಕ್ (ಓ) ಕನೆಕ್ಟ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದ್ದು, ಈ ವೇರಿಯಂಟ್‌ನ ಬೆಲೆಯು ರೂ. 9.32 ಲಕ್ಷದಿಂದ ರೂ. 10.10 ಲಕ್ಷದವರೆಗೆ ಇರಲಿದೆ.
ರೆನಾಲ್ಟ್ ಟ್ರೈಬರ್
ಫೆಸ್ಟಿವ್ ಸೀಸನ್‌ಗಾಗಿ ರೆನಾಲ್ಟ್ ಟ್ರೈಬರ್ ಇತ್ತೀಚೆಗೆ ಒಂದು ಅರ್ಬನ್ ನೈಟ್ ಎಡಿಶನ್ ಬಿಡುಗಡೆ ಮಾಡಿದೆ. ಇದರಲ್ಲಿ ಹೊಸಾ ಎಕ್ಸ್‌ಟೀರಿಯರ್ ಶೇಡ್ ಹಾಗೂ ಒಳಗಡೆ 9.66-ಇಂಚಿನ ಸ್ಮಾರ್ಟ್ ವ್ಯೂ ಮಾನಿಟರ್ ಇದೆ. ಈ ಮಾನಿಟರ್ ಎರಡು ಉದ್ದೇಶಗಳನ್ನು ಈಡೇರಿಸುತ್ತದೆ: ಒಂದು, ಇದು ಅಡ್ಜಸ್ಟೆಬಲ್ ಆಂಗಲ್‌ಗಳನ್ನು ಹೊಂದಿರುವ ಇಂಟೀರಿಯರ್ ರೇರ್ ವ್ಯೂ ಮಿರರ್ (IRVM) ಆಗಿ ಕೆಲಸ ಮಾಡುತ್ತದೆ. ಎರಡನೆಯದಾಗಿ, ಫ್ರಂಟ್ ಹಾಗೂ ರೇರ್ ಕ್ಯಾಮೆರಾ ಹೊಂದಿರುವ ಡ್ಯಾಶ್‌ಕ್ಯಾಮ್ ಆಗಿಯೂ ಕೆಲಸ ಮಾಡುತ್ತದೆ. ಇದಲ್ಲದೇ, ಇದರಲ್ಲಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಇದ್ದು, ರೆಕಾರ್ಡ್ ಆದ ಕಂಟೆಂಟ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಲು ನೆರವಾಗುತ್ತದೆ.
ಟ್ರೈಬರ್‌ನ ಈ ಸ್ಪೆಷಲ್ ಎಡಿಶನ್, ಅದರ ಟಾಪ್-ಸ್ಪೆಕ್ RXZ ವೇರಿಯಂಟ್ ಅನ್ನು ಆಧರಿಸಿದ್ದು, ಗ್ರಾಹಕರು ಇದನ್ನು ಪಡೆಯಲು ರೆನಾಲ್ಟ್ ಟ್ರೈಬರ್‌ನ ಟಾಪ್-ಸ್ಪೆಕ್ ವೇರಿಯಂಟ್ ಮೇಲೆ 14,999 ರೂಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ರೆನಾಲ್ಟ್ ಟ್ರೈಬರ್ ಅರ್ಬನ್ ಬ್ಲಾಕ್ ಎಡಿಶನ್‌ನ 300 ಯುನಿಟ್‌ಗಳು ಮಾತ್ರ ಮಾರಾಟವಾಗಲಿವೆ.
ಇದನ್ನೂ ಓದಿ: ಭಾರತದಲ್ಲಿ 2 ವರ್ಷಗಳನ್ನು ಪೂರೈಸಿದ ವೋಕ್ಸ್‌ವ್ಯಾಗನ್ ಟೈಗುನ್, ಇಲ್ಲಿಗೆ ಸಧ್ಯದ ಸ್ಥಿತಿಗತಿಯ ವಿವರ
ರೆನಾಲ್ಟ್ ಕಿಗರ್
ಟ್ರೈಬರ್‌ನ ಹಾಗೆಯೇ, ರೆನಾಲ್ಟ್ ಕಿಗರ್ ಕೂಡಾ ವಿಶೇಷವಾದ 'ಅರ್ಬನ್ ನೈಟ್' ಎಡಿಶನ್‌ನಲ್ಲಿ ಅದೇ ರೀತಿಯ ಹೊರಭಾಗದ ಫಿನಿಶ್ ಮತ್ತು ಸ್ಮಾರ್ಟ್ ವ್ಯೂ ಮಾನಿಟರ್ ಹೊಂದಿದ್ದು, ಅದು ಡ್ಯುಯಲ್ ಕ್ಯಾಮೆರಾ ಡ್ಯಾಶ್‌ಕ್ಯಾಮ್‌ನಂತೆ ಕೆಲಸ ಮಾಡುತ್ತದೆ. ಈ ವಿಶೇಷ ಆವೃತ್ತಿಯೂ ಸಹ ಕಿಗರ್‌ನ ಟಾಪ್-ಸ್ಪೆಕ್ RXZ ಟ್ರಿಮ್ ಅನ್ನು ಆಧರಿಸಿದ್ದು, ಅದರ ಸ್ಪೆಷಲ್ ಎಡಿಶನ್‌ಗೆ ರೂ.14,999 ಹೆಚ್ಚುವರಿಯಾಗಿ ಪಾವತಿಸಬೇಕು. ರೆನಾಲ್ಟ್ MPVಯಂತೆಯೇ, ಕಿಗರ್‌ನ ಈ ಸ್ಪೆಷಲ್ ಎಡಿಶನ್‌ನ 300 ಘಟಕಗಳನ್ನು ಮಾತ್ರ ಚಿಲ್ಲರೆ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತದೆ.
ಹ್ಯುಂಡೈ ಕ್ರೆಟಾ
ಭಾರತದ ಬಹುಬೇಡಿಕೆಯ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾದ ಹುಂಡೈ ಕ್ರೆಟಾ, ಆಗಸ್ಟ್‌ನಲ್ಲಿ ವಿಶೇಷ ಲಿಮಿಟೆಡ್-ರನ್ 'ಅಡ್ವೆಂಚರ್' ಎಡಿಶನ್ ವೇರಿಯಂಟ್ ಅನ್ನು ಪರಿಚಯಿಸಿದೆ. ಹೊಸ ಹೊರಗಿನ ಮತ್ತು ಒಳಗಿನ ಶೇಡ್‌ಗಳ ಜೊತೆಗೆ, ಈ ಎಡಿಶನ್‌ನಲ್ಲಿ ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಸಹ ಇದೆ. ಕ್ರೆಟಾದ ಈ ವಿಶೇಷ ಆವೃತ್ತಿಯು ಅದರ ಮಿಡ್-ಸ್ಪೆಕ್ SX ಮತ್ತು ಟಾಪ್-ಸ್ಪೆಕ್ SX(O) ವೇರಿಯಂಟ್‌ಗಳನ್ನು ಆಧರಿಸಿದ್ದು, ಅದರ ಬೆಲೆ ರೂ. 15.17 ಲಕ್ಷದಿಂದ ರೂ. 17.89 ಲಕ್ಷದವರೆಗೆ ಇರುತ್ತದೆ.
ಇದನ್ನೂ ನೋಡಿ: 2024 ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ನಲ್ಲಿದೆ ADAS, 360-ಡಿಗ್ರಿ ಕ್ಯಾಮೆರಾ & ಇನ್ನಷ್ಟು
ಹ್ಯುಂಡೈ ಅಲ್ಕಾಜರ್
ಕ್ರೆಟಾದಂತೆಯೇ, ಹ್ಯುಂಡೈ ಅಲ್ಕಾಜರ್ ಕೂಡಾ ವಿಶೇಷ 'ಅಡ್ವೆಂಚರ್' ಎಡಿಶನ್ ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚುವರಿ ಫೀಚರ್ ಆಗಿ ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಇದೆ. ಅಲ್ಕಾಜರ್‌ನ ಮಿಡ್-ಸ್ಪೆಕ್ ಪ್ಲಾಟಿನಂ ಮತ್ತು ಟಾಪ್-ಸ್ಪೆಕ್ ಸಿಗ್ನೇಚರ್ (O) ವೇರಿಯಂಟ್‌ಗಳಲ್ಲಿ ಈ ಎಡಿಶನ್ ಲಭ್ಯವಿದ್ದು, ಇದರ ಬೆಲೆ ರೂ. 19.04 ಲಕ್ಷದಿಂದ ರೂ. 21.24 ಲಕ್ಷದವರೆಗೆ ಇರುತ್ತದೆ.
ಸ್ಕೋಡಾ ಸ್ಲಾವಿಯಾ
ಇತ್ತೀಚಿನ ಫೆಸ್ಟಿವ್ ಸೀಸನ್‌ನಲ್ಲಿ ಸ್ಕೋಡಾದಿಂದ ಸ್ಲಾವಿಯಾದ ಅತ್ಯಂತ ಕೈಗೆಟುಕುವ 'ಆಂಬಿಷನ್ ಪ್ಲಸ್' ಮಿಡ್-ಸ್ಪೆಕ್ ವೇರಿಯಂಟ್ ಬಿಡುಗಡೆಯಾಗಿದೆ. ಕೆಲವು ಸಣ್ಣ ಕಾಸ್ಮೆಟಿಕ್ ಬದಲಾವಣೆಗಳ ಜೊತೆಗೆ, ಈ ಸ್ಲಾವಿಯಾ ವೇರಿಯಂಟ್ ಸಹ ಬಿಲ್ಟ್-ಇನ್ ಡ್ಯಾಶ್‌ಕ್ಯಾಮ್ ಹೊಂದಿದೆ. ಆದರೆ, ಇದು ಈ ಪಟ್ಟಿಯಲ್ಲಿರುವ ಬೇರೆಲ್ಲಾ ಮಾಡೆಲ್‌ಗಳಿಗಿಂತ ಭಿನ್ನ. ಏಕೆಂದರೆ ಇದರಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಇಲ್ಲ. ಅದರ ಬದಲಿಗೆ ಫ್ರಂಟ್ ವ್ಯೂ ರೆಕಾರ್ಡ್ ಮಾಡಲು ಒಂದೇ ಒಂದು ಕ್ಯಾಮರಾ ಇದೆ. ಸ್ಕೋಡಾ ಸ್ಲಾವಿಯಾದ ಈ ಆಂಬಿಷನ್ ಪ್ಲಸ್ ವೇರಿಯಂಟ್‌ನ ಬೆಲೆ, ರೂ. 12.49 ಲಕ್ಷದಿಂದ ರೂ. 13.79 ಲಕ್ಷದವರೆಗೆ ಇದೆ.
ಹ್ಯುಂಡೈ ವೆನ್ಯೂ
ಕಳೆದ ತಿಂಗಳು ಹ್ಯುಂಡೈ ವೆನ್ಯೂ, ಹೊಚ್ಚಹೊಸ 'ನೈಟ್ ಎಡಿಶನ್' ಅನ್ನು ಪರಿಚಯಿಸಿತು. ಇದಕ್ಕೆ ಒಳಗೂ-ಹೊರಗೂ ಆಲ್-ಬ್ಲಾಕ್ ಟ್ರೀಟ್‌ಮೆಂಟ್ ನೀಡಲಾಗಿದ್ದು, ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಹೊಂದಿದೆ. ಹುಂಡೈ ಕಂಪನಿಯು ಈ ವೈಶಿಷ್ಟ್ಯವನ್ನು ವೆನ್ಯೂ ಎನ್ ಲೈನ್‌ನ N6 ಟ್ರಿಮ್‌ಗೂ ವಿಸ್ತರಿಸಿದ್ದು, ಇದು ಸಬ್‌ಕಾಂಪ್ಯಾಕ್ಟ್ ಹ್ಯುಂಡೈ SUV ಯ ಸ್ಪೋರ್ಟಿಯರ್ ಆವೃತ್ತಿಯಾಗಿದೆ.
ವೆನ್ಯೂ ನೈಟ್ ಎಡಿಶನ್‌ನ ಬೆಲೆ ರೂ.10 ಲಕ್ಷದಿಂದ ರೂ.13.48 ಲಕ್ಷದವರೆಗೆ ಇದ್ದರೆ, ವೆನ್ಯೂ ಎನ್ ಲೈನ್ ನ ಎನ್6 ವೆರಿಯಂಟ್ ಬೆಲೆ ರೂ.12 ಲಕ್ಷದಿಂದ ರೂ.12.82 ಲಕ್ಷದವರೆಗೆ ಇದೆ.
ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್‌ಕ್ಯಾಮ್ ಹೊಂದಿರುವ ಏಳು ಮಾಸ್-ಮಾರ್ಕೆಟ್ ಮಾಡೆಲ್‌ಗಳು ಹೀಗಿವೆ. ಇಲ್ಲಿ ಡ್ಯಾಶ್‌ಕ್ಯಾಮ್ ಒಂದು ಆಕ್ಸೆಸರಿ ಅಲ್ಲ. ಆದರೂ, ಅವುಗಳಲ್ಲಿ ಹೆಚ್ಚಿನವು ಲಿಮಿಟೆಡ್ ಎಡಿಶನ್ ಮಾಡೆಲ್‌ಗಳಾಗಿವೆ. ಎಲ್ಲಾ ಕಾರು ತಯಾರಕರು ತಮ್ಮ ಪ್ರೀಮಿಯಂ ಮಾಡೆಲ್‌ಗಳಲ್ಲಿ ಕಡ್ಡಾಯವಾಗಿ ಈ ಫೀಚರ್ ಸೇರಿಸಬೇಕು ಎಂದು ನಿಮಗೆ ಎನಿಸುತ್ತದೆಯೇ? ಕಾಮೆಂಟ್ ಸೆಕ್ಷನ್‌ನಲ್ಲಿ ನಿಮ್ಮ ಅನಿಸಿಕೆ ತಿಳಿಸಿ.
ಎಲ್ಲಾ ಬೆಲೆಗಳೂ ದೆಹಲಿಯ ಎಕ್ಸ್-ಶೋರೂಮ್ ಬೆಲೆಗಳು
ಹೆಚ್ಚಿನ ಮಾಹಿತಿಗಾಗಿ: ಹ್ಯುಂಡೈ ಎಕ್ಸ್‌ಟರ್ ಎಎಂಟಿ