ಈ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 8 ಕಾರುಗಳು
ಬಹುನಿರೀಕ್ಷಿತ ಮಹೀಂದ್ರಾ ಥಾರ್ ರೋಕ್ಸ್ ಹೊರತುಪಡಿಸಿ, 2024ರ ಆಗಸ್ಟ್ ನಮಗೆ ಎರಡು ಎಸ್‌ಯುವಿ-ಕೂಪ್‌ಗಳು ಮತ್ತು ಕೆಲವು ಐಷಾರಾಮಿ ಮತ್ತು ಪರ್ಫಾರ್ಮೆನ್ಸ್ ಕಾರುಗಳನ್ನು ಸಹ ನೀಡುತ್ತದೆ
2024ರ ಮೊದಲಾರ್ಧವು ಈಗಾಗಲೇ ಮುಗಿದಿದೆ ಮತ್ತು ಆ ಸಮಯದಲ್ಲಿ ಹಲವು ಹೊಸ ಕಾರುಗಳ ಬಿಡುಗಡೆಯನ್ನು ನಾವು ಸಂಭ್ರಮಿಸಿದ್ದೇವೆ. ಹಾಗೆಯೇ, ಈ ವರ್ಷದ ಉಳಿದಿರುವ ಮುಂಬರುವ ತಿಂಗಳುಗಳಲ್ಲಿ ಇನ್ನೂ ಕೆಲವು ಹೊಸ ಕಾರುಗಳು ಭಾರತೀಯ ರಸ್ತೆಗೆ ಇಳಿಯಲಿವೆ. 2024ರ ಆಗಸ್ಟ್‌ನಲ್ಲಿ ಇನ್ನೂ ಹಲವು ಕಾರುಗಳು ಮಾರಾಟಕ್ಕೆ ಸಿದ್ಧವಾಗಿವೆ, ಅವುಗಳಲ್ಲಿ ಕೆಲವು ಈ ವರ್ಷದ ಅತಿದೊಡ್ಡ ಕಾರು ಬಿಡುಗಡೆಗಳಾಗಿವೆ. ಮಹೀಂದ್ರಾದ ಥಾರ್ ರೋಕ್ಸ್‌ನಿಂದ ಮರ್ಸಿಡಿಸ್‌ನ ಐಷಾರಾಮಿ ಮತ್ತು ಪರ್ಫಾರ್ಮೆನ್ಸ್ ಕಾರುಗಳವರೆಗೆ, ಮುಂದಿನ ತಿಂಗಳು ಎಂಟು ಹೊಸ ಮೊಡೆಲ್‌ಗಳ ಬಿಡುಗಡೆಗೆ ನಾವು ಸಾಕ್ಷಿಯಾಗಲಿದ್ದೇವೆ ಮತ್ತು ಆ ಹೊಸ ಕಾರುಗಳ ಕುರಿತ ವಿವರಣೆಯು ಇಲ್ಲಿದೆ.
2024ರ ನಿಸ್ಸಾನ್ ಎಕ್ಸ್-ಟ್ರಯಲ್
ನಿರೀಕ್ಷಿತ ಬಿಡುಗಡೆ: ಆಗಸ್ಟ್ 1
ನಿರೀಕ್ಷಿತ ಬೆಲೆ: 40 ಲಕ್ಷ ರೂ.ನಿಂದ ಪ್ರಾರಂಭ
ನಾಲ್ಕನೇ ತಲೆಮಾರಿನ ನಿಸ್ಸಾನ್ ಎಕ್ಸ್-ಟ್ರಯಲ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಮೊದಲ ಕಾರು ಆಗಿರಬಹುದು. ಇದು ಒಂದು ದಶಕದ ನಂತರ ಭಾರತದಲ್ಲಿ ತನ್ನ ಪುನರಾಗಮನವನ್ನು ಮಾಡಲಿದೆ ಮತ್ತು ಇದು ವಿದೇಶದಲ್ಲಿ ಸಂಪೂರ್ಣವಾಗಿ ಸಿದ್ಧವಾಗಿರುವ ರೂಪದಲ್ಲಿ ಆಮದು ಆಗಿ ಭಾರತೀಯ ಮಾರುಕಟ್ಟೆಗೆ ಬರಲಿದೆ. X-ಟ್ರಯಲ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ, ಅದು 163 ಪಿಎಸ್ ಮತ್ತು 300 ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುವುದರೊಂದಿಗೆ ಸಿವಿಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸುತ್ತದೆ ಮತ್ತು ಇದು 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 7 ಏರ್‌ಬ್ಯಾಗ್‌ಗಳು ಮುಂತಾದ ಫಿಚರ್‌ಗಳನ್ನು ನೀಡುತ್ತದೆ.
ಟಾಟಾ ಕರ್ವ್ ಇವಿ
ಬಿಡುಗಡೆ: ಆಗಸ್ಟ್ 7
ನಿರೀಕ್ಷಿತ ಬೆಲೆ: 20 ಲಕ್ಷ ರೂ.ನಿಂದ ಪ್ರಾರಂಭ
ಟಾಟಾ ಇತ್ತೀಚೆಗೆ ತನ್ನ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್‌ನ ಹೊರಭಾಗವನ್ನು ಅನಾವರಣಗೊಳಿಸಿದೆ ಮತ್ತು ಅದರ ಇಂಟಿರೀಯರ್‌ನ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ. ಟಾಟಾ ಕರ್ವ್ ಇವಿ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಇದು ಟಾಟಾದ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ನಮಗೆ ತಿಳಿದಿದೆ ಮತ್ತು ಇದು ನೆಕ್ಸಾನ್ ಇವಿ ಲಾಂಗ್‌ರೇಂಜ್‌ಗಿಂತ ದೊಡ್ಡದಾದ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ ಎಂದು ನಾವು ನಿರೀಕ್ಷಿಸುತ್ತೇವೆ. 500 ಕಿಮೀ ವರೆಗಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಸಹ ಓದಿ: Tata Curvv ಮತ್ತು Tata Curvv EV ಯ ಅನಾವರಣ, ಇವುಗಳಲ್ಲಿ ಇವಿ ಆವೃತ್ತಿಯನ್ನು ಮೊದಲು ಬಿಡುಗಡೆ
ಫೀಚರ್‌ಗಳ ವಿಷಯದಲ್ಲಿ, ಇದು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತದೆ ಮತ್ತು ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಹೊಂದಿರುವ ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳೊಂದಿಗೆ (ADAS) ಸಜ್ಜುಗೊಳ್ಳುವ ಸಾಧ್ಯತೆಯಿದೆ.
ಮರ್ಸಿಡಿಸ್-ಎಎಮ್‌ಜಿ ಜಿಎಲ್‌ಸಿ 43 ಕೂಪ್
ಬಿಡುಗಡೆ: ಆಗಸ್ಟ್ 8
ನಿರೀಕ್ಷಿತ ಬೆಲೆ: 65 ಲಕ್ಷ ರೂ
ಮರ್ಸಿಡೀಸ್ ಬೆಂಜ್ ಆಗಸ್ಟ್‌ನಲ್ಲಿ ಎರಡು ಕಾರುಗಳನ್ನು ಬಿಡುಗಡೆ ಮಾಡಲಿದೆ ಮತ್ತು ಅವುಗಳಲ್ಲಿ ಒಂದು ಎರಡನೇ ತಲೆಮಾರಿನ ಮರ್ಸಿಡೀಸ್ ಎಎಮ್‌ಜಿ-ಜಿಎಲ್‌ಸಿ43 ಕೂಪ್ ಆಗಿರುತ್ತದೆ, ಇದು GLC ಶ್ರೇಣಿಯಲ್ಲಿನ ಟಾಪ್-ಸ್ಪೆಕ್ ಆವೃತ್ತಿಯಾಗಿದೆ. ಇದು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 421 ಪಿಎಸ್ ಮತ್ತು 500 ಎನ್‌ಎಮ್‌ನಷ್ಟು ಓಟ್‌ಪುಟ್ ಅನ್ನು ಉತ್ಪಾದಿಸುತ್ತದೆ, 9-ಸ್ಪೀಡ್ ಆಟೋಮ್ಯಾಟಿಕ್‌ಗೆ ಜೋಡಿಸಲಾಗಿದೆ, ಜಿಎಲ್‌ಸಿ 43 ಕೂಪ್ ಕೇವಲ 4.8 ಸೆಕೆಂಡುಗಳಲ್ಲಿ 0 ರಿಂದ 100 kmph ಗೆ ತಲುಪಲು ಶಕ್ತವಾಗಿದೆ.
ಮರ್ಸಿಡಿಸ್-ಬೆಂಜ್ ಸಿಎಲ್‌ಇ ಕ್ಯಾಬ್ರಿಯೊಲೆಟ್
ಬಿಡುಗಡೆ: ಆಗಸ್ಟ್ 8
ನಿರೀಕ್ಷಿತ ಬೆಲೆ: 1 ಕೋಟಿ ರೂ.
ಜರ್ಮನ್ ಕಾರು ತಯಾರಕರ ಎರಡನೇ ಮಾದರಿಯು ಮರ್ಸಿಡಿಸ್-ಬೆಂಜ್ ಸಿಎಲ್‌ಇ ಕ್ಯಾಬ್ರಿಯೊಲೆಟ್ ಆಗಿರುತ್ತದೆ. ಇಂಡಿಯಾ-ಸ್ಪೆಕ್ ಮಾಡೆಲ್‌ನ ಪವರ್‌ಟ್ರೇನ್ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಅಂತರರಾಷ್ಟ್ರೀಯ-ಸ್ಪೆಕ್ ಮೊಡೆಲ್ 2-ಲೀಟರ್ ಟರ್ಬೊ-ಪೆಟ್ರೋಲ್, 2-ಲೀಟರ್ ಡೀಸೆಲ್ ಮತ್ತು 3-ಲೀಟರ್ ಆರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಸೇರಿದಂತೆ ಅನೇಕ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇಂಡಿಯಾ-ಸ್ಪೆಕ್ ಮೊಡೆಲ್ 204 ಪಿಎಸ್ ಅಥವಾ 258 ಪಿಎಸ್ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.
ಲಂಬೋರ್ಗಿನಿ ಉರುಸ್ ಎಸ್‌ಇ
ಬಿಡುಗಡೆ: ಆಗಸ್ಟ್ 9
ನಿರೀಕ್ಷಿತ ಬೆಲೆ: 4.5 ಕೋಟಿ ರೂ.ನಿಂದ ಪ್ರಾರಂಭ
ಲಂಬೋರ್ಗಿನಿ ಉರುಸ್ ಎಸ್‌ಇಯು ಕಾರು ತಯಾರಕರ ಮೊದಲ ಪ್ಲಗ್-ಇನ್ ಹೈಬ್ರಿಡ್ ಸ್ಪೋರ್ಟ್ಸ್ ಎಸ್‌ಯುವಿ ಆಗಿದೆ ಮತ್ತು ಇದು ಈ ಆಗಸ್ಟ್‌ನಲ್ಲಿ ಭಾರತಕ್ಕೆ ಬರಲಿದೆ. ಈ ಪರ್ಫಾರ್ಮೆನ್ಸ್ ಎಸ್‌ಯುವಿಯು 4-ಲೀಟರ್ ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ, ಆಲ್-ವೀಲ್-ಡ್ರೈವ್ ಸಿಸ್ಟಮ್‌ನಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಈ ಸೆಟಪ್ ಅನ್ನು ಪ್ಲಗ್-ಇನ್ ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ, ಇದು 25.9 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು ಒಟ್ಟಿಗೆ 800 ಪಿಎಸ್ ಮತ್ತು 950 ಎನ್‌ಎಮ್‌ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ.
ಒಳಭಾಗವನ್ನು ಗಮನಿಸುವಾಗ, ಇದು ಲಂಬೋರ್ಘಿನಿ ರೆವುಲ್ಟೊದಿಂದ ಪ್ರೇರಿತವಾದ ಕ್ಯಾಬಿನ್ ಅನ್ನು ಹೊಂದಿದೆ ಮತ್ತು ಸ್ವಲ್ಪ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ಇದು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಚಾಲಿತ ಮತ್ತು ವೆಂಟಿಲೇಶನ್ ಇರುವ ಸೀಟುಗಳು, ಪ್ಯಾನರೋಮಿಕ್ ಸನ್‌ರೂಫ್, ಹಲವು ಏರ್‌ಬ್ಯಾಗ್‌ಗಳು, ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್ ಮತ್ತು ಡ್ರೈವರ್ ಅಸಿಸ್ಟೆಂಟ್ ಫೀಚರ್‌ಗಳನ್ನು ಪಡೆಯುತ್ತದೆ.
ಸಿಟ್ರೊಯೆನ್ ಬಸಾಲ್ಟ್
ನಿರೀಕ್ಷಿತ ಬಿಡುಗಡೆ: ಆಗಸ್ಟ್ ಆರಂಭದಲ್ಲಿ
ನಿರೀಕ್ಷಿತ ಬೆಲೆ: 10 ಲಕ್ಷ ರೂ.
ಆಗಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಮತ್ತೊಂದು ಎಸ್‌ಯುವಿ-ಕೂಪ್ ಅಂದರೆ ಅದು ಸಿಟ್ರೊಯೆನ್ ಬಸಾಲ್ಟ್ ಆಗಿದೆ. ಇದು ಸಿಟ್ರೊಯೆನ್‌ನ ಇಂಡಿಯಾ ಲೈನ್‌ಅಪ್‌ನಲ್ಲಿ ಐದನೇ ಕಾರು ಆಗಿದೆ ಮತ್ತು ಇದು C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್‌ಗೆ ಶಕ್ತಿ ನೀಡುವ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 ಪಿಎಸ್ ಮತ್ತು 205 ಎನ್‌ಎಮ್) ನೊಂದಿಗೆ ಬರಲಿದೆ.
ಇದನ್ನೂ ಓದಿ: Citroen Basaltನಲ್ಲಿ ಇಲ್ಲದ ಈ 5 ಫೀಚರ್‌ಗಳನ್ನು ಪಡೆಯಲಿರುವ Tata Curvv
ಇದರ ನಿರೀಕ್ಷಿತ ಫೀಚರ್‌ಗಳಲ್ಲಿ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಮತ್ತು ಒಂದು ಹಿಂಬದಿಯ ಕ್ಯಾಮರಾವನ್ನು ಒಳಗೊಂಡಿದೆ.
ಮಹೀಂದ್ರಾ ಥಾರ್ ರೋಕ್ಸ್
ಬಿಡುಗಡೆ: ಆಗಸ್ಟ್ 15
ನಿರೀಕ್ಷಿತ ಬೆಲೆ: 13 ಲಕ್ಷ ರೂ.ನಿಂದ ಪ್ರಾರಂಭ
ಈ ವರ್ಷದ ಅತ್ಯಂತ ದೊಡ್ಡ ಮತ್ತು ಬಹುನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿರುವ ಮಹೀಂದ್ರಾ ಥಾರ್ ರೋಕ್ಸ್ ಸಹ ಈ ಆಗಸ್ಟ್‌ನಲ್ಲಿ, ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಸುದಿನದಂದು ಬಿಡುಗಡೆಯಾಗಲಿದೆ. ಥಾರ್‌ನ ದೊಡ್ಡ ಆವೃತ್ತಿಯು 3-ಡೋರ್ ಆವೃತ್ತಿಯಂತೆ ಅದೇ 2.2-ಲೀಟರ್ ಡೀಸೆಲ್ ಮತ್ತು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳಿಂದ ಚಾಲಿತವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಔಟ್‌ಪುಟ್ ಅಂಕಿಅಂಶಗಳು ಅದಕ್ಕಿಂತ ಇದರಲ್ಲಿ ಹೆಚ್ಚು ಇರಬಹುದೆಂದು ಅಂದಾಜಿಸಲಾಗಿದೆ. ಇದನ್ನು ಹಿಂಬದಿ-ಚಕ್ರ-ಡ್ರೈವ್ (RWD), ಮತ್ತು ನಾಲ್ಕು-ಚಕ್ರ-ಡ್ರೈವ್ (4WD) ಕಾನ್ಫಿಗರೇಶನ್‌ಗಳಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Mahindra Thar Roxx ನ ಮತ್ತೊಂದು ಟೀಸರ್ ಬಿಡುಗಡೆ, ಪನೋರಮಿಕ್ ಸನ್‌ರೂಫ್ ಇರುವುದು ಕನ್ಫರ್ಮ್..!
ಮಹೀಂದ್ರಾವು ಇದನ್ನು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಬಹುಶಃ 10.25-ಇಂಚಿನ), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪ್ಯಾನರೋಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಸಜ್ಜುಗೊಳಿಸಬಹುದು.
ಎಮ್‌ಜಿ ಕ್ಲೌಡ್ ಇವಿ
ನಿರೀಕ್ಷಿತ ಬಿಡುಗಡೆ: ಆಗಸ್ಟ್‌ನ ಕೊನೆಯಲ್ಲಿ
ನಿರೀಕ್ಷಿತ ಬೆಲೆ: 20 ಲಕ್ಷ ರೂ.ನಿಂದ ಪ್ರಾರಂಭ
ಎಮ್‌ಜಿ ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ತಯಾರಿಯಲ್ಲಿದೆ ಮತ್ತು ಇದು ಕ್ರಾಸ್ಒವರ್ ಆಗಿರುತ್ತದೆ. ಎಮ್‌ಜಿ ಕ್ಲೌಡ್ ಇವಿಯು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವುಲಿಂಗ್ ಕ್ಲೌಡ್ EV ಎಂದು ಕರೆಯಲ್ಪಡುತ್ತದೆ, ಇದು 50.6 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಒಂದೇ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ ಮತ್ತು CLTC ಕ್ಲೈಮ್ ಮಾಡಲಾದ 460 ಕಿಮೀ ರೇಂಜ್ ಅನ್ನು ಹೊಂದಿದೆ.
ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಹೊರಬಿದ್ದಿದೆ MG Cloud EV ಟೀಸರ್, ಶೀಘ್ರದಲ್ಲೇ ಬಿಡುಗಡೆಯಾಗುವ ಸೂಚನೆ!
ಫೀಚರ್‌ಗಳನ್ನು ಗಮನಿಸುವಾಗ, ಇದು 15.6-ಇಂಚಿನ ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 6-ವೇ ಚಾಲಿತ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮತ್ತು ADASನ ಕೆಲವು ಫೀಚರ್‌ಗಳಾದ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ನಿರ್ಗಮನ ಎಚ್ಚರಿಕೆ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹುಗಳನ್ನು ಪಡೆಯಬಹುದು.
ಮುಂಬರುವ ಈ ಯಾವ ಕಾರುಗಳಲ್ಲಿ ನೀವು ಹೆಚ್ಚು ಆಸಕ್ತಿ ಹೊಂದಿರುವಿರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಎಲ್ಲಾ ಎಕ್ಸ್ ಶೋರೂಂ ಬೆಲೆಗಳಾಗಿವೆ
ಇತ್ತೀಚಿನ ಎಲ್ಲಾ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ