Login or Register ಅತ್ಯುತ್ತಮ CarDekho experience ಗೆ
Login

ಇಲ್ಲಿದೆ Tata Altroz Racerನ ಅತ್ಯಾಕರ್ಷಕವಾದ ಚಾಂಪಿಯನ್‌ ವೇರಿಯಂಟ್

published on ಜೂನ್ 25, 2024 06:39 am by rohit for ಟಾಟಾ ಆಲ್ಟ್ರೋಜ್ ರೇಸರ್

ಹೆಚ್ಚು ಐಷಾರಾಮಿ ಕ್ಯಾಬಿನ್ ಅನುಭವಕ್ಕಾಗಿ ಟಾಟಾ ಆಲ್ಟ್ರೋಜ್‌ನ ಸ್ಪೋರ್ಟಿಯರ್ ಆವೃತ್ತಿಯು ಅನೇಕ ಹೊಸ ಫೀಚರ್ ಗಳೊಂದಿಗೆ ಬಂದಿದೆ

ನಾವು ಇತ್ತೀಚೆಗೆ ಟಾಟಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿಯರ್ ವರ್ಷನ್ ಆಗಿರುವ ಟಾಟಾ ಆಲ್ಟ್ರೋಜ್ ರೇಸರ್ ಅನ್ನು ಡ್ರೈವ್ ಮಾಡಿದ್ದೇವೆ. ಇದು ಒಳಗೆ ಮತ್ತು ಹೊರಗೆ ಕೆಲವು ಬದಲಾವಣೆಗಳನ್ನು, ಉತ್ತಮ ಕಾರ್ಯಕ್ಷಮತೆಯನ್ನು ಪಡೆದಿದೆ ಮತ್ತು ಸಾಮಾನ್ಯ ಹ್ಯಾಚ್‌ಬ್ಯಾಕ್‌ನಿಂದ ವಿಭಿನ್ನವಾಗಿ ಕಾಣಲು ಹೆಚ್ಚಿನ ಫೀಚರ್ ಗಳನ್ನು ಹೊಂದಿದೆ. ಆಲ್ಟ್ರೋಝ್ ರೇಸರ್ ಅನ್ನು ಮೂರು ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ - R1, R2 ಮತ್ತು R3 - ಮತ್ತು ಬೆಲೆಯು ರೂ 9.49 ಲಕ್ಷದಿಂದ ರೂ 10.99 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಇದೆ. ಖರೀದಿಸಲು ಉತ್ತಮವಾದ ವೇರಿಯಂಟ್ ಯಾವುದು ಎಂದು ನೀವು ನೋಡುತ್ತಿದ್ದರೆ, ಸರಿಯಾದ ವೇರಿಯಂಟ್ ಅನ್ನು ಆಯ್ಕೆ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ:

ನಮ್ಮ ವಿಶ್ಲೇಷಣೆ

R1: ಇದು ಸಾಕಷ್ಟು ಫೀಚರ್ ಗಳನ್ನು ಹೊಂದಿದೆ ಮತ್ತು ಸುರಕ್ಷತೆಯ ಮೇಲೆ ಗಮನ ನೀಡಲಾಗಿದೆ. ನೀವು ಹೆಚ್ಚುವರಿ ಸೌಕರ್ಯವನ್ನು ಬಯಸಿದರೆ ಸ್ವಲ್ಪ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಬಹುದು.

R2: ಇದು ಆಲ್ಟ್ರೋಜ್ ರೇಸರ್‌ನ ಅತ್ಯುತ್ತಮ ವರ್ಷನ್ ಆಗಿದೆ. ಇದು ಹಿಂದಿನ R1 ಮಾಡೆಲ್ ನ ಎಲ್ಲಾ ಸೌಕರ್ಯಗಳು ಮತ್ತು ಅನುಕೂಲತೆಗಳನ್ನು ಒಳಗೊಂಡಿದೆ, ಜೊತೆಗೆ ಸನ್‌ರೂಫ್, ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಹೊಸ ಫೀಚರ್ ಗಳನ್ನು ಕೂಡ ಒಳಗೊಂಡಿದೆ.

R3: ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್ ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲಜಿಗಳಂತಹ ಫೀಚರ್ ಗಳೊಂದಿಗೆ ಟಾಟಾ ಆಲ್ಟ್ರೋಜ್ ರೇಸರ್‌ನ ಸಂಪೂರ್ಣ ಪ್ರೀಮಿಯಂ ಅನುಭವವನ್ನು ಪಡೆಯಲು ನೀವು ಬಯಸಿದರೆ ನೀವು ಇದನ್ನು ಆಯ್ಕೆ ಮಾಡಬಹುದು.

ಆಲ್ಟ್ರೋಜ್ ​​ರೇಸರ್ R2: ಇದು ಅತ್ಯುತ್ತಮ ವೇರಿಯಂಟ್ ಆಗಿದೆಯೇ?

ವೇರಿಯಂಟ್ ಹೆಸರು

ಬೆಲೆ*

R2

ರೂ. 10.49 ಲಕ್ಷ

*ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ

ನಮ್ಮ ವಿಶ್ಲೇಷಣೆಯ ಆಧಾರದ ಮೇಲೆ, ಟಾಟಾ ಆಲ್ಟ್ರೊಜ್ ​​ರೇಸರ್‌ನ ಮಿಡ್-ಸ್ಪೆಕ್ R2 ವೇರಿಯಂಟ್ ಅನೇಕ ಸೌಕರ್ಯ ಹೊಂದಿರುವ ಫೀಚರ್ ಗಳನ್ನು ಮತ್ತು ಅದರ ಬೆಲೆಗೆ ತಕ್ಕ ಸಮಗ್ರ ಸುರಕ್ಷತಾ ಪ್ಯಾಕೇಜ್ ಅನ್ನು ಒದಗಿಸುತ್ತದೆ. ಇದರ ಹೊರಭಾಗವು ಹುಡ್ ಮತ್ತು ರೂಫ್ ಮೇಲೆ ಪೇಂಟೆಡ್ ಸ್ಟ್ರೈಪ್‌ಗಳು, 'ರೇಸರ್' ಬ್ಯಾಡ್ಜ್‌ಗಳು ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್‌ನಂತಹ ಹೆಚ್ಚುವರಿ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳೊಂದಿಗೆ ಅತ್ಯಾಕರ್ಷಕವಾಗಿ ಕಾಣುತ್ತದೆ.

ಪವರ್‌ಟ್ರೇನ್ ಮತ್ತು ಪರ್ಫಾರ್ಮೆನ್ಸ್

ಸ್ಪೆಸಿಫಿಕೇಷನ್

1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್

120 ಪಿಎಸ್‌

ಟಾರ್ಕ್

170 ಎನ್‌ಎಮ್‌

ಟ್ರಾನ್ಸ್‌ಮಿಷನ್

6-ಸ್ಪೀಡ್ ಮ್ಯಾನುಯಲ್‌

ಇದೀಗ, ಟಾಟಾ ತನ್ನ ಆಲ್ಟ್ರೋಜ್ ರೇಸರ್ ಅನ್ನು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಮಾರಾಟ ಮಾಡುತ್ತಿದೆ, ಆದರೆ ಭವಿಷ್ಯದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಬಹುದು.

ಪ್ರಮುಖ ಫೀಚರ್ ಗಳು

ಆಲ್ಟ್ರೋಜ್ ರೇಸರ್ R2 ವೇರಿಯಂಟ್ ನಲ್ಲಿರುವ ಎಲ್ಲಾ ಫೀಚರ್ ಗಳ ಪಟ್ಟಿ ಇಲ್ಲಿದೆ:

ಹೊರಭಾಗ

ಒಳಭಾಗ

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್ಮೆಂಟ್

ಸುರಕ್ಷತೆ

  • ಆಟೋ-ಪ್ರೊಜೆಕ್ಟರ್ ಹೆಡ್ ಲೈಟ್ ಗಳು
  • ಎಲ್‌ಇಡಿ ಡಿಆರ್‌ಎಲ್‌ಗಳು
  • ಮುಂಭಾಗದ ಫಾಗ್ ಲ್ಯಾಂಪ್ ಗಳು
  • 16-ಇಂಚಿನ ಅಲೊಯ್ ವೀಲ್ ಗಳು
  • ಲೆಥೆರೆಟ್ ಸೀಟ್ ಗಳು
  • ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್
  • ಸ್ಟೋರೇಜ್ ನೊಂದಿಗೆ ಮುಂಭಾಗಕ್ಕೆ ಸ್ಲೈಡ್ ಆಗುವ ಆರ್ಮ್‌ರೆಸ್ಟ್
  • ಡ್ಯಾಶ್‌ಬೋರ್ಡ್‌ನಲ್ಲಿ ಆಂಬಿಯೆಂಟ್ ಲೈಟಿಂಗ್
  • ವಾಯ್ಸ್-ಎನೇಬಲ್ಡ್ ಎಲೆಕ್ಟ್ರಿಕ್ ಸನ್‌ರೂಫ್
  • 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ
  • ವೈರ್‌ಲೆಸ್ ಫೋನ್ ಚಾರ್ಜರ್
  • ಎಕ್ಸ್ಪ್ರೆಸ್ ಕೂಲ್
  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮತ್ತು ಆಟೋ ಫೋಲ್ಡ್ ಮಾಡಬಹುದಾದ ORVM ಗಳು
  • ಕೀಲೆಸ್ ಎಂಟ್ರಿ
  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್
  • ಎಲ್ಲಾ ನಾಲ್ಕು ಪವರ್ ವಿಂಡೋಗಳು
  • ಹಿಂಭಾಗದ ವೆಂಟ್ ಗಳೊಂದಿಗೆ ಆಟೋ AC
  • ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟು
  • ಕ್ರೂಸ್ ಕಂಟ್ರೋಲ್
  • 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ
  • 8 ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ (4 ಟ್ವೀಟರ್‌ಗಳು ಸೇರಿದಂತೆ)
  • ರೈನ್-ಸೆನ್ಸಿಂಗ್ ವೈಪರ್‌ಗಳು
  • 6 ಏರ್ ಬ್ಯಾಗ್ ಗಳು
  • EBD ಜೊತೆಗೆ ABS
  • ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಗಳು
  • ISOFIX ಚೈಲ್ಡ್ ಸೀಟ್ ಆಂಕರ್‌ಗಳು
  • ಡಿಫೊಗರ್ ನೊಂದಿಗೆ ರಿಯರ್ ವೈಪರ್ ಮತ್ತು ವಾಷರ್
  • 360 ಡಿಗ್ರಿ ಕ್ಯಾಮೆರಾ

ಆಲ್ಟ್ರೊಜ್ ರೇಸರ್ R2 ಎಲ್ಲಾ ವಿಭಾಗಗಳಲ್ಲಿ ಫೀಚರ್ ಗಳ ಉತ್ತಮ ಪ್ಯಾಕೇಜ್‌ನೊಂದಿಗೆ ಬರುತ್ತದೆ. ಟಾಟಾ ಇದನ್ನು 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಉತ್ತಮ ಫೀಚರ್ ಗಳೊಂದಿಗೆ ಸಜ್ಜುಗೊಳಿಸಿದೆ.

ಇದನ್ನು ಕೂಡ ಓದಿ: ಟಾಟಾ ಆಲ್ಟ್ರೋಜ್ ರೇಸರ್ ಟೆಸ್ಟ್ ಡ್ರೈವ್‌: ಇಲ್ಲಿದೆ 5 ಆಶ್ಚರ್ಯಕರ ಸಂಗತಿಗಳು

ಅಂತಿಮ ಮಾತು

ಟಾಟಾ ಆಲ್ಟ್ರೋಜ್ ರೇಸರ್‌ನ R2 ವೇರಿಯಂಟ್ ಅದರ ಮಾರುಕಟ್ಟೆಯ ಬೆಲೆಗೆ ಹೋಲಿಸಿದರೆ ಸಾಕಷ್ಟು ಫೀಚರ್ ಗಳನ್ನು ನೀಡುತ್ತದೆ. ಇದು ಅತ್ಯಾಕರ್ಷಕ ಡಿಸೈನ್ ಮತ್ತು ಉತ್ತಮ ಗುಣಮಟ್ಟದ ಕ್ಯಾಬಿನ್ ಮಾತ್ರವಲ್ಲದೆ ಸಾಕಷ್ಟು ಉಪಯುಕ್ತ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಸ್ಪೋರ್ಟಿಯರ್ ಆಲ್ಟ್ರೋಜ್ ಮಾಡೆಲ್ ಅಗತ್ಯ ಫೀಚರ್ ಗಳು ಮತ್ತು ಬೇಕಾಗುವ ಅಪ್ಡೇಟ್ ಗಳ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ. ನೀವು ಆಲ್ಟ್ರೊಜ್ ರೇಸರ್‌ನ ಸಂಪೂರ್ಣ ಪ್ರೀಮಿಯಂ ಅನುಭವವನ್ನು ಪಡೆಯಲು ಬಯಸಿದರೆ, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳಂತಹ ಕೆಲವು ಹೆಚ್ಚುವರಿ ಫೀಚರ್ ಇರುವ ಟಾಪ್-ಸ್ಪೆಕ್ R3 ವೇರಿಯಂಟ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.

ಟಾಟಾ ಆಲ್ಟ್ರೋಜ್ ರೇಸರ್‌ಗೆ ಹ್ಯುಂಡೈ i20 N ಲೈನ್ ಪ್ರಮುಖ ಪ್ರತಿಸ್ಪರ್ಧಿಯಾಗಿದೆ ಮತ್ತು ಪರ್ಯಾಯ ಆಯ್ಕೆಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನ ಟರ್ಬೊ-ಪೆಟ್ರೋಲ್ ವೇರಿಯಂಟ್ ಗಳು ಕೂಡ ಸೇರಿವೆ.

ಕಾರುಗಳ ಬಗ್ಗೆ ಹೆಚ್ಚಿನ ಅಪ್ಡೇಟ್ ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಟಾಟಾ ಆಲ್ಟ್ರೋಜ್ ರೇಸರ್ ಆನ್ ರೋಡ್ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 85 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಆಲ್ಟ್ರೋಝ್ Racer

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ