• English
  • Login / Register

5 ಡೋರ್‌ Mahindra Thar Roxxನ ಅನಾವರಣ ಯಾವಾಗ ?

published on ಆಗಸ್ಟ್‌ 13, 2024 06:45 pm by rohit for ಮಹೀಂದ್ರ ಥಾರ್‌ roxx

  • 49 Views
  • ಕಾಮೆಂಟ್‌ ಅನ್ನು ಬರೆಯಿರಿ

ಥಾರ್ ರೋಕ್ಸ್ ಆಗಸ್ಟ್ 15 ರಂದು ಮಾರಾಟವಾಗಲಿದೆ ಮತ್ತು ಆರಂಭಿಕ ಬೆಲೆ 12.99 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ

Mahindra Thar Roxx reveal date confirmed

  • ಮಹೀಂದ್ರಾ ಥಾರ್ ರೋಕ್ಸ್ ಮಹೀಂದ್ರಾದ ಎಸ್‌ಯುವಿ ಶ್ರೇಣಿಯಲ್ಲಿ ಥಾರ್ 3-ಡೋರ್‌ ಮೊಡೆಲ್‌ಗಿಂತ ಮೇಲಿನ ಸ್ಥಾನದಲ್ಲಿರಲಿದೆ.

  • ಹೊರಭಾಗದ ಅಂಶಗಳು 6-ಸ್ಲ್ಯಾಟ್ ಗ್ರಿಲ್, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು C-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿವೆ.

  • ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್ ಮತ್ತು ಬಿಳಿ ಲೆಥೆರೆಟ್ ಸೀಟ್‌ಗಳನ್ನು ಒಳಗೊಂಡಿರಬಹುದು. 

  • ಡ್ಯುಯಲ್-ಡಿಜಿಟಲ್ ಡಿಸ್‌ಪ್ಲೇಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಎಡಿಎಎಸ್ ನಂತಹ ಫೀಚರ್‌ಗಳನ್ನು ಪಡೆಯಬಹುದೆಂದು ಅಂದಾಜಿಸಲಾಗಿದೆ. 

  • ಥಾರ್ 3-ಡೋರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಬರಬಹುದೆಂದು ನಿರೀಕ್ಷಿಸಲಾಗಿದೆ.

ಮಹೀಂದ್ರಾ ಥಾರ್ ರೋಕ್ಸ್ ಆಗಸ್ಟ್ 15 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅದರ ಬೆಲೆ ಘೋಷಣೆಗೆ ಮುಂಚಿತವಾಗಿ, ಕಾರು ತಯಾರಕರು ನಾಳೆ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಅನಾವರಣ ಮಾಡಲಿದ್ದಾರೆ ಎಂಬ ಸುದ್ದಿ ನಮಗೆ ಬಲ್ಲಮೂಲಗಳಿಂದ ತಿಳಿದುಬಂದಿದೆ. ಇಲ್ಲಿಯವರೆಗೆ, ನಾವು ಇದನ್ನು ಕೆಲವು ಟೀಸರ್ ಚಿತ್ರಗಳು ಮತ್ತು ವೀಡಿಯೊಗಳಲ್ಲಿ ಮಾತ್ರ ನೋಡಿದ್ದೇವೆ, ಅದು ಅದರ ಕೆಲವು ಫೀಚರ್‌ಗಳ ಪ್ರಸ್ತಾಪವನ್ನು ಸೂಚಿಸುತ್ತದೆ. ಹೊಸ ಮಹೀಂದ್ರಾ ಎಸ್‌ಯುವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:

ಇಲ್ಲಿಯವರೆಗೆ ಬಹಿರಂಗಪಡಿಸಲಾದ ವಿನ್ಯಾಸದ ವಿವರಗಳು

Mahindra Thar Roxx

ಇಲ್ಲಿಯವರೆಗೆ ಬಿಡುಗಡೆಯಾದ ಕೆಲವು ಟೀಸರ್ ಚಿತ್ರಗಳು ಮತ್ತು ವೀಡಿಯೊಗಳಲ್ಲಿ ತೋರಿಸಿರುವ ಅಂಶಗಳನ್ನು ಆಧರಿಸಿ,  ಥಾರ್ ರೋಕ್ಸ್ ಮೊಡೆಲ್‌ ಥಾರ್ 3-ಡೋರ್‌ಗಿಂತ ಭಿನ್ನವಾಗಿ 6-ಸ್ಲ್ಯಾಟ್ ಗ್ರಿಲ್ ಅನ್ನು ಹೊಂದಿದೆ, 3-ಡೋರ್‌ ಆವೃತ್ತಿಯು 7-ಸ್ಲ್ಯಾಟ್ ಗ್ರಿಲ್ ಅನ್ನು ಹೊಂದಿದೆ. ಇತರ ಹೊರಭಾಗದ ಹೈಲೈಟ್ಸ್‌ಗಳು ಸಿ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್ಇಡಿ ಹೆಡ್‌ಲೈಟ್‌ಗಳು, ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು ಮತ್ತು ಎಲ್ಇಡಿ ಟೈಲ್ ಲೈಟ್‌ಗಳಲ್ಲಿ ಸಿ-ಆಕಾರದ ಆಂತರಿಕ ಅಂಶಗಳನ್ನು ಒಳಗೊಂಡಿದೆ.

ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಥೀಮ್ ಜೊತೆಗೆ ಬಿಳಿ ಲೆಥೆರೆಟ್ ಸೀಟ್‌ಗಳು ಮತ್ತು ಕವರ್‌ ಅನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ಅನ್ನು ಕಪ್ಪು ಲೆಥೆರೆಟ್ ಪ್ಯಾಡಿಂಗ್‌ನಲ್ಲಿ ಕವರ್‌ ಮಾಡಲಾಗಿದೆ, ಜೊತೆಗೆ ವ್ಯತಿರಿಕ್ತ ತಾಮ್ರದ ಸ್ಟಿಚ್ಚಿಂಗ್‌ ಹಾಕಲಾಗುತ್ತದೆ.

ಇದು ಯಾವ ಫೀಚರ್‌ಗಳನ್ನು ಪಡೆಯುತ್ತದೆ?

Mahindra Thar Roxx touchscreen system

ಥಾರ್ ರೋಕ್ಸ್ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಆಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್ ಮತ್ತು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳೊಂದಿಗೆ (ಪ್ರತಿಯೊಂದಕ್ಕೂ 10.25-ಇಂಚಿನ ಡಿಸ್‌ಪ್ಲೇಗಳು ಇರಬಹುದು) ಬರಲಿದೆ ಎಂದು ಮಹೀಂದ್ರಾ ದೃಢಪಡಿಸಿದೆ. ಇತರ ನಿರೀಕ್ಷಿತ ಸೌಕರ್ಯಗಳಲ್ಲಿ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿವೆ.

ಅದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳನ್ನು (ADAS) ಒಳಗೊಂಡಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇದನ್ನೂ ಸಹ ಓದಿ: Mahindra Thar Roxxನ ಮುಂಭಾಗದ ಮೊದಲ ಸ್ಪಷ್ಟ ನೋಟ ಇಲ್ಲಿದೆ

ಬಹು ಪವರ್‌ಟ್ರೇನ್‌ಗಳನ್ನು ಪಡೆಯುವ ನಿರೀಕ್ಷೆ

ನಿಖರವಾದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಥಾರ್ ರೋಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡನ್ನೂ ಪಡೆಯುವ ಸಾಧ್ಯತೆಯಿದೆ. ಪರಿಷ್ಕೃತ ಪರ್ಫಾರ್ಮೆನ್ಸ್‌ನೊಂದಿಗೆ ಥಾರ್ 3-ಡೋರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಮಹೀಂದ್ರಾ ಇದನ್ನು ನೀಡುವ ನಿರೀಕ್ಷೆಯಿದೆ. ಈ ಆಯ್ಕೆಗಳು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿವೆ, ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಹಿಂಬದಿ-ಚಕ್ರ-ಡ್ರೈವ್ (RWD) ಮತ್ತು ನಾಲ್ಕು-ಚಕ್ರ-ಡ್ರೈವ್‌ (4WD) ಎರಡೂ ಸಂರಚನೆಗಳು ಸಹ ಇದರಲ್ಲಿರುವ ಸಾಧ್ಯತೆ ಇದೆ. 

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮಹೀಂದ್ರಾ ಥಾರ್ ರೋಕ್ಸ್ ಆರಂಭಿಕ ಬೆಲೆ 12.99 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಫೋರ್ಸ್ ಗೂರ್ಖಾ 5-ಡೋರ್‌ ವಿರುದ್ಧ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಒಡ್ಡಲಿದ್ದು, ಹಾಗೆಯೇ, ಇದು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಲಿದೆ. ಮಹೀಂದ್ರಾ ಕಾರುಗಳ ಕುರಿತ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ. 

ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌ ROXX

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience