Login or Register ಅತ್ಯುತ್ತಮ CarDekho experience ಗೆ
Login

ಟಾಪ್-ಸ್ಪೆಕ್ Hyundai Exter ವರ್ಸಸ್ ಬೇಸ್-ಸ್ಪೆಕ್ Tata Punch EV: ಇದರಲ್ಲಿ ಯಾವ ಮೈಕ್ರೋ SUV ನಿಮಗೆ ಸೂಕ್ತವಾಗಿದೆ?

ಫೆಬ್ರವಾರಿ 01, 2024 03:29 pm ರಂದು ansh ಮೂಲಕ ಪ್ರಕಟಿಸಲಾಗಿದೆ
31 Views

ಎರಡೂ ಕಾರುಗಳು ಒಂದೇ ರೀತಿಯ ಆನ್-ರೋಡ್ ಬೆಲೆಯನ್ನು ಹೊಂದಿವೆ. ಹಾಗಾದರೆ ನೀವು ಹ್ಯುಂಡೈ ICE ಬದಲು ಟಾಟಾ EV ಅನ್ನು ಆಯ್ಕೆ ಮಾಡಬೇಕೇ?

ಹ್ಯುಂಡೈ ಎಕ್ಸ್‌ಟರ್ ಕಳೆದ ವರ್ಷ ಟಾಟಾ ಪಂಚ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಿತು ಮತ್ತು ಟಾಟಾ ಮೈಕ್ರೋ-SUV ಯಷ್ಟೇ ಬೆಲೆಗೆ ಅದಕ್ಕಿಂತ ಹೆಚ್ಚಿನ ಡಿಸೈನ್, ಕ್ಯಾಬಿನ್ ಮತ್ತು ಫೀಚರ್ ಗಳನ್ನು ನೀಡಿತು. ಎಕ್ಸ್‌ಟರ್ ಲಾಂಚ್ ಆದ ದಿನದಿಂದ, ಟಾಟಾ ತನ್ನ ಪಂಚ್‌ಗೆ ಅಪ್ಡೇಟ್ ಗಳನ್ನು ನೀಡುತ್ತಿದೆ ಮತ್ತು ಆ ಮೂಲಕ ಸ್ಪರ್ಧೆಯಲ್ಲಿ ಮುಂದೆ ಉಳಿಯಲು ಪ್ರಯತ್ನಿಸುತ್ತಿದೆ. ಈಗ, ಟಾಟಾ ತನ್ನ ಪಂಚ್ EV ಅನ್ನು ಬಿಡುಗಡೆ ಮಾಡಿದೆ, ಮತ್ತು ಇದರ ಆರಂಭಿಕ ಬೆಲೆಯು ಎಕ್ಸ್‌ಟರ್‌ನ ಟಾಪ್-ಸ್ಪೆಕ್ ವೇರಿಯಂಟ್ ಬೆಲೆಯಷ್ಟೇ ಇದೆ.

ಇದನ್ನು ಕೂಡ ಓದಿ: ಟಾಟಾ ತನ್ನ ನೆಕ್ಸಾನ್ SUVಯ 6 ಲಕ್ಷ ಯುನಿಟ್‌ಗಳನ್ನು ಹೊರತಂದಿದೆ

ನೀವು ಸುಮಾರು 10-11 ಲಕ್ಷ ರೂಪಾಯಿ ಬೆಲೆಯ ಹೊಸ ಮೈಕ್ರೋ-SUVಯನ್ನು ಖರೀದಿಸಲು ನೋಡುತ್ತಿದ್ದರೆ, ಟಾಪ್-ಸ್ಪೆಕ್ ಹ್ಯುಂಡೈ ಎಕ್ಸ್‌ಟರ್‌ ಅನ್ನು ತೆಗೆದುಕೊಳ್ಳಬಹುದೇ ಅಥವಾ ಬೇಸ್-ಸ್ಪೆಕ್ ಟಾಟಾ ಪಂಚ್ EV ಅನ್ನು ಪರಿಗಣಿಸಬೇಕೇ? ಹೋಲಿಕೆಗಳನ್ನು ಮಾಡುವ ಮೊದಲು, ವೇರಿಯಂಟ್ ಗಳು ಮತ್ತು ಅವುಗಳ ಬೆಲೆಯನ್ನು ನೋಡೋಣ:

ಬೆಲೆ

ಹುಂಡೈ ಎಕ್ಸ್‌ಟರ್ SX ಆಪ್ಟ್ ಕನೆಕ್ಟ್ DT

ಟಾಟಾ ಪಂಚ್ EV ಸ್ಮಾರ್ಟ್

ಎಕ್ಸ್ ಶೋರೂಂ ಬೆಲೆ

ರೂ. 10.28 ಲಕ್ಷ

ರೂ. 10.99 ಲಕ್ಷ

ಆನ್ ರೋಡ್ ಬೆಲೆ (ದೆಹಲಿ)

ರೂ. 11.92 ಲಕ್ಷ

ರೂ. 11.54 ಲಕ್ಷ

ಈ ಕಾರುಗಳ ಎರಡೂ ವೇರಿಯಂಟ್ ಗಳು ಒಂದೇ ಬೆಲೆ ಬ್ರಾಕೆಟ್ ಅಡಿಯಲ್ಲಿ ಬರುತ್ತವೆ. ಪಂಚ್ EVಯ ಎಕ್ಸ್ ಶೋರೂಂ ಬೆಲೆ ಎಕ್ಸ್‌ಟರ್‌ಗಿಂತ ಹೆಚ್ಚಿದ್ದರೂ ಕೂಡ, ಎಲೆಕ್ಟ್ರಿಕ್ ಕಾರುಗಳ ಮೇಲಿನ ಕಡಿಮೆ ತೆರಿಗೆಯಿಂದಾಗಿ ಅದರ ಆನ್-ರೋಡ್ ಬೆಲೆ ಕಡಿಮೆಯಾಗುತ್ತದೆ. ಡಿಸೈನ್ ವಿಷಯದಲ್ಲಿ ಈ ಮಾಡೆಲ್ ಗಳಲ್ಲಿ ಏನೇನಿವೆ ಎಂಬುದನ್ನು ಈಗ ನೋಡೋಣ.

ಡಿಸೈನ್

ಎರಡೂ ಮಾಡೆಲ್ ಗಳು ತಮ್ಮದೇ ಆದ ಡಿಸೈನ್ ಪರಿಭಾಷೆಯನ್ನು ಹೊಂದಿವೆ. ಎಕ್ಸ್‌ಟರ್ ಪ್ರೀಮಿಯಂ ಡಿಸೈನ್ ಅಂಶಗಳೊಂದಿಗೆ ಸ್ಕ್ವಾರಿಶ್ ಒರಟಾದ ಲುಕ್ ಅನ್ನು ಹೊಂದಿದೆ, ಹಾಗೆಯೇ ಪಂಚ್ EV ಅದರ ಎಲೆಕ್ಟ್ರಿಕ್ ವಾಹನದ ಸ್ವರೂಪವನ್ನು ತೋರಿಸುವ ಆಧುನಿಕ ಡಿಸೈನ್ ಅನ್ನು ಹೊಂದಿದೆ.

ಇದನ್ನು ಕೂಡ ಓದಿ: ಲೀಕ್ ಆಗಿದೆ: 2024 ಹ್ಯುಂಡೈ ಕ್ರೆಟಾ N ಲೈನ್ ಒರಿಜಿನಲ್ ಸ್ಪೈ ಶಾಟ್ಸ್ ಆನ್‌ಲೈನ್ ನಲ್ಲಿ ಬಂದಿವೆ

ಇಲ್ಲಿ, ಟಾಪ್-ಸ್ಪೆಕ್ ಎಕ್ಸ್‌ಟರ್ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, LED ಟೈಲ್ ಲೈಟ್‌ಗಳು ಮತ್ತು LED DRLಗಳನ್ನು ನೀಡುತ್ತದೆ. ಇದು 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್, ರೂಫ್ ರೈಲ್ಸ್, ಬ್ಲಾಕ್ ಬಂಪರ್‌ಗಳು, ಸಿಲ್ವರ್ ಸ್ಕಿಡ್ ಪ್ಲೇಟ್ ಮತ್ತು ಡ್ಯುಯಲ್-ಟೋನ್ ಕಲರ್ ಆಯ್ಕೆಗಳನ್ನು ಕೂಡ ಪಡೆಯುತ್ತದೆ.

ಮತ್ತೊಂದೆಡೆ ಬೇಸ್-ಸ್ಪೆಕ್ ಪಂಚ್ EV, LED ಟೈಲ್ ಲೈಟ್‌ಗಳ ಜೊತೆಗೆ LED ಹೆಡ್‌ಲೈಟ್‌ಗಳು ಮತ್ತು DRLಗಳನ್ನು ಕೂಡ ಪಡೆಯುತ್ತದೆ. ಇಲ್ಲಿ ವೀಲ್ ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್ ವೀಲ್ಸ್, ಬಾಡಿ-ಕಲರ್ ನ ಬಂಪರ್‌ಗಳನ್ನು ಮಾತ್ರ ನೀಡಲಾಗಿದೆ ಮತ್ತು ರೂಫ್ ರೈಲ್ಸ್ ಮತ್ತು ಡ್ಯುಯಲ್-ಟೋನ್ ಶೇಡ್ ಗಳು ಲಭ್ಯವಿಲ್ಲ.

ಒಳಭಾಗ

ಕಲರ್ ಆಯ್ಕೆಗಳಲ್ಲಿ ಎಕ್ಸ್‌ಟರ್ ಮಲ್ಟಿಪಲ್ ಡ್ಯುಯಲ್-ಟೋನ್ ಥೀಮ್‌ಗಳೊಂದಿಗೆ ಬರುತ್ತದೆ. ಇದು ಸ್ಟೀರಿಂಗ್ ವೀಲ್ ಮತ್ತು ಡ್ರೈವ್ ಸೆಲೆಕ್ಟರ್‌ನಲ್ಲಿ ಸೆಮಿ-ಲೆಥೆರೆಟ್ ಅಪ್ಹೋಲ್ಸ್ಟರಿ ಮತ್ತು ಲೆದರ್ ಎಲಿಮೆಂಟ್ ಗಳನ್ನು ಪಡೆಯುತ್ತದೆ.

ಬೇಸ್-ಸ್ಪೆಕ್ ಪಂಚ್ EV ಡ್ಯುಯಲ್-ಟೋನ್ ಬ್ಲಾಕ್ ಮತ್ತು ವೈಟ್ ಕ್ಯಾಬಿನ್‌ನಲ್ಲಿ ಸಂಪೂರ್ಣ ಫ್ಯಾಬ್ರಿಕ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ. ಇಲ್ಲಿ, ಇದು ಬ್ಯಾಕ್‌ಲಿಟ್ ಲೋಗೋದೊಂದಿಗೆ ಟಾಟಾದ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ, ಆದರೆ ಯಾವುದೇ ಲೆದರ್ ಅಥವಾ ಕ್ರೋಮ್ ಎಲಿಮೆಂಟ್ ಗಳನ್ನು ಪಡೆಯುವುದಿಲ್ಲ.

ಫೀಚರ್ ಗಳು

ಈ ಬೆಲೆಗೆ ಯಾವ ಕಾರು ಹೆಚ್ಚು ಫೀಚರ್ ಗಳನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಗೊಂದಲವಿಲ್ಲ. ಟಾಪ್-ಸ್ಪೆಕ್ ಎಕ್ಸ್‌ಟರ್ ಇಲ್ಲಿ ನೀಡಿರುವ ಬೆಲೆಗೆ ಹೆಚ್ಚು ಫೀಚರ್ ಗಳನ್ನು ನೀಡುತ್ತಿದೆ. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್-ಪೇನ್ ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಸೆಟಪ್‌ನೊಂದಿಗೆ ಬರುತ್ತದೆ.

ಬೇಸ್-ಸ್ಪೆಕ್ ಪಂಚ್ EVಯು ಎಕ್ಸ್‌ಟರ್ ನಷ್ಟು ಫೀಚರ್ ಗಳನ್ನು ಪಡೆಯುವುದಿಲ್ಲ ಮತ್ತು ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ (ಟಚ್ ಕಂಟ್ರೋಲ್‌ಗಳೊಂದಿಗೆ), ಬಿಲ್ಟ್-ಇನ್ ಏರ್ ಪ್ಯೂರಿಫೈಯರ್, ಸೆಮಿ-ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ಮಲ್ಟಿ-ಮೋಡ್ ರೀಜನರೇಟಿವ್ ಬ್ರೇಕಿಂಗ್ ಮತ್ತು ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವ್ ಸೀಟ್ ನೊಂದಿಗೆ ಬರುತ್ತದೆ. ಇಲ್ಲಿ ಯಾವುದೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇಲ್ಲದಿರುವುದು ಈ ಬೆಲೆಗೆ ಅತ್ಯಂತ ದೊಡ್ಡ ಮಿಸ್ ಆಗಿದೆ.

ಆದರೆ, ಪಂಚ್ EVಯು ತನ್ನ ಟಾಪ್ ವೇರಿಯಂಟ್ ಗಳಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ ಡ್ಯುಯಲ್ 10.25-ಇಂಚಿನ ಸ್ಕ್ರೀನ್‌, ವೈರ್‌ಲೆಸ್ ಚಾರ್ಜಿಂಗ್, ಅನಿಮೇಟೆಡ್ ಸೀಕ್ವೆನ್ಸ್‌ಗಳೊಂದಿಗೆ ಕನೆಕ್ಟೆಡ್ LED DRL ಗಳು, 16-ಇಂಚಿನ ಅಲಾಯ್ ವೀಲ್ಸ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ನೀಡುತ್ತದೆ.

ಸುರಕ್ಷತೆ

ಸುರಕ್ಷತೆಯ ವಿಷಯಕ್ಕೆ ಬಂದರೆ, ಎರಡೂ ಕಾರುಗಳು ಸಾಕಷ್ಟು ಸುಸಜ್ಜಿತವಾಗಿವೆ. ಟಾಪ್-ಸ್ಪೆಕ್ ಎಕ್ಸ್‌ಟರ್ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್‌ವ್ಯೂ ಕ್ಯಾಮೆರಾ, ಎಲ್ಲಾ ಪ್ಯಾಸೆಂಜರ್ ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ ಗಳೊಂದಿಗೆ ಬರುತ್ತದೆ.

ಹಿಂಬದಿಯ ಕ್ಯಾಮರಾ ಮತ್ತು ಎಲ್ಲಾ ಪ್ಯಾಸೆಂಜರ್ ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಹೊರತುಪಡಿಸಿ ಬೇಸ್-ಸ್ಪೆಕ್ ಪಂಚ್ EVಯು ಟಾಪ್-ಸ್ಪೆಕ್ ಎಕ್ಸ್‌ಟರ್‌ನಲ್ಲಿರುವ ಎಲ್ಲಾ ಸುರಕ್ಷತಾ ಫೀಚರ್ ಗಳನ್ನು ಪಡೆಯುತ್ತದೆ. ಟಾಟಾ ಎಲೆಕ್ಟ್ರಿಕ್ ಮೈಕ್ರೋ-SUVಯ ಮೇಲ್ಮಟ್ಟದ ವೇರಿಯಂಟ್ ಗಳು 360-ಡಿಗ್ರಿ ಕ್ಯಾಮೆರಾವನ್ನು ಕೂಡ ಪಡೆಯುತ್ತವೆ.

ಪವರ್‌ಟ್ರೇನ್

ಹುಂಡೈ ಎಕ್ಸ್‌ಟರ್ SX ಆಪ್ಟ್ ಕನೆಕ್ಟ್ AMT

ಬೇಸ್-ಸ್ಪೆಕ್ ಟಾಟಾ ಪಂಚ್ EV ಸ್ಮಾರ್ಟ್

ಇಂಜಿನ್

1.2-ಲೀಟರ್ ಪೆಟ್ರೋಲ್

ಬ್ಯಾಟರಿ ಪ್ಯಾಕ್

25 kWh

ಪವರ್

83 PS

ಪವರ್

82 PS

ಟಾರ್ಕ್

114 Nm

ಟಾರ್ಕ್

114 Nm

ಕ್ಲೇಮ್ ಮಾಡಿರುವ ಮೈಲೇಜ್

19.2 kmpl (AMT)

ಕ್ಲೇಮ್ ಮಾಡಿರುವ ಮೈಲೇಜ್

315 km

315 ಕಿ.ಮೀ

ಈ ಎರಡೂ ಕಾರುಗಳು ತಮ್ಮ ಪವರ್‌ಟ್ರೇನ್‌ಗಳ ವಿಷಯದಲ್ಲಿ ಬೇರೆ ಬೇರೆಯಾಗಿವೆ, ಆದರೆ ಒಂದೇ ರೀತಿಯ ಔಟ್‌ಪುಟ್ ಪರ್ಫಾರ್ಮೆನ್ಸ್ ಮತ್ತು ಎರಡು-ಪೆಡಲ್ ಡ್ರೈವಿಂಗ್‌ನ ಅನುಕೂಲತೆಯನ್ನು ನೀಡುತ್ತವೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ, ಎರಡೂ ಮಾಡೆಲ್ ಗಳ ಪವರ್ ಅಂಕಿಅಂಶಗಳು ಒಂದೇ ಆಗಿದ್ದರೂ ಕೂಡ, ಪಂಚ್ EV, ಎಲೆಕ್ಟ್ರಿಕ್ ಮಾಡೆಲ್ ಆಗಿರುವುದರಿಂದ, ಉತ್ತಮ ಆರಂಭಿಕ ಆಕ್ಸಿಲರೇಷನ್ ಅನ್ನು ನೀಡುತ್ತದೆ.

ಎಕ್ಸ್‌ಟರ್‌ನ ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯದ ಆಧಾರದ ಮೇಲೆ, ರೀಫಿಲ್ ಗಳ ನಡುವೆ 500 ಕಿಲೋಮೀಟರ್‌ಗಳಷ್ಟು ದೂರವನ್ನು ಸುಲಭವಾಗಿ ಓಡಿಸಬಹುದು. ಹಾಗೆಯೆ, ಬೇಸ್-ಸ್ಪೆಕ್ ಪಂಚ್ EV ಕೇವಲ 3.3kW AC ಚಾರ್ಜರ್‌ನೊಂದಿಗೆ ಬರುತ್ತದೆ, ಇದು 10 ರಿಂದ 100 ಪ್ರತಿಶತ ಚಾರ್ಜ್ ಮಾಡಲು 9.4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಇದು 50kW ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಇದು 56 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ತೀರ್ಪು

ಈ ಎರಡೂ ಮಾಡೆಲ್ ಗಳ ಬೆಲೆಯನ್ನು ಗಮನಿಸಿದರೆ, ಬೇಸ್-ಸ್ಪೆಕ್ ಟಾಟಾ ಪಂಚ್ EVಯ ಬದಲಿಗೆ ಟಾಪ್-ಸ್ಪೆಕ್ ಹ್ಯುಂಡೈ ಎಕ್ಸ್‌ಟರ್ ಅನ್ನು ಖರೀದಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ. ಟಾಪ್-ಸ್ಪೆಕ್ ಎಕ್ಸ್‌ಟರ್‌ನೊಂದಿಗೆ ನೀವು ಹೆಚ್ಚಿನ ಫೀಚರ್ ಗಳು, ಉತ್ತಮ ಸುರಕ್ಷತೆ ಮತ್ತು ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ಪಡೆಯುತ್ತೀರಿ.

ಆದರೆ, ನೀವು ಕಡಿಮೆ ರನ್ನಿಂಗ್ ವೆಚ್ಚವನ್ನು ನೋಡುತ್ತಿದ್ದರೆ ಮತ್ತು ಉಪಯೋಗಿಸಲು ಚಾರ್ಜಿಂಗ್ ಸ್ಟೇಷನ್‌ ಹತ್ತಿರದಲ್ಲಿದ್ದು ನಗರದೊಳಗೆ ಮಾತ್ರ ಕಾರನ್ನು ಬಳಸಲು ನೀವು ಯೋಚಿಸುತ್ತಿದ್ದರೆ, ನೀವು ಬೇಸ್-ಸ್ಪೆಕ್ ಪಂಚ್ EV ಯೊಂದಿಗೆ ಎಲೆಕ್ಟ್ರಿಕ್‌ ಅನ್ನು ಖರೀದಿಸಬಹುದು ಮತ್ತು ಸ್ವಲ್ಪ ಸಮಯದ ನಂತರ ಆಫ್ಟರ್-ಮಾರ್ಕೆಟ್ ಆಕ್ಸೆಸರಿಗಳೊಂದಿಗೆ ಕ್ಯಾಬಿನ್ ಅನ್ನು ಅಪ್ಡೇಟ್ ಮಾಡಬಹುದು.

ಇನ್ನಷ್ಟು ಓದಿ: ಹುಂಡೈ ಎಕ್ಸ್‌ಟರ್ AMT

Share via

Write your Comment on Hyundai ಎಕ್ಸ್‌ಟರ್

explore similar ಕಾರುಗಳು

ಹುಂಡೈ ಎಕ್ಸ್‌ಟರ್

4.61.2k ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್19.4 ಕೆಎಂಪಿಎಲ್
ಸಿಎನ್‌ಜಿ27.1 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ