Toyota ತನ್ನ Maruti Fronx ಆಧಾರಿತ ಕ್ರಾಸ್ಒವರ್‌ನ ಇಂದು ಮಾರುಕಟ್ಟೆಗೆ ಬಿಡುಗಡೆ
ಟೊಯೋಟಾ ಟೈಸರ್ ಗಾಗಿ anonymous ಮೂಲಕ ಏಪ್ರಿಲ್ 03, 2024 10:27 pm ರಂದು ಪ್ರಕಟಿಸಲಾಗಿದೆ
- 32 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಗ್ರಿಲ್ ಮತ್ತು LED DRL ಗಳೊಂದಿಗೆ ಅಪ್ಡೇಟ್ ಆಗಿರುವ ಮುಂಭಾಗದ ಫೇಸಿಯ ಬಗ್ಗೆ ಟೀಸರ್‌ಗಳು ಸುಳಿವು ನೀಡಿವೆ
ಮಾರುತಿ ಫ್ರಾಂಕ್ಸ್‌ನ ಟೊಯೋಟಾ ವರ್ಷನ್ ಆಗಮನವನ್ನು ಮೊದಲ ಬಾರಿಗೆ 2023 ರ ಕೊನೆಯಲ್ಲಿ ಘೋಷಿಸಲಾಯಿತು ಮತ್ತು ಇದು ಅಂತಿಮವಾಗಿ ಏಪ್ರಿಲ್ 3, 2024 ರಂದು ಜಾಗತಿಕವಾಗಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಅದರ ಕ್ರಾಸ್ಒವರ್ ಸೈಜ್ ನ ಹೊರತಾಗಿಯೂ, ಇದು ಭಾರತದಲ್ಲಿನ ಸಣ್ಣ SUV ಮಾರುಕಟ್ಟೆಗೆ ಟೊಯೋಟಾದ ರೀ-ಎಂಟ್ರಿಯನ್ನು ತೋರಿಸುತ್ತದೆ. ಈ ಹೊಸ ಮಾರುತಿ-ಆಧಾರಿತ ಟೊಯೋಟಾ ಮಾಡೆಲ್ ಗೆ "ಅರ್ಬನ್ ಕ್ರೂಸರ್ ಟೈಸರ್" ಎಂಬ ಹೆಸರನ್ನು ಇಡಬಹುದು. ಇದು ಈ ಹಿಂದೆ ಟೊಯೋಟಾದಿಂದ ನೋಂದಾಯಿಸಲ್ಪಟ್ಟ ಟ್ರೇಡ್‌ಮಾರ್ಕ್ ಆಗಿದೆ.
ಹೊರಭಾಗದ ಡಿಸೈನ್
ಮುಖ್ಯ ಬಾಡಿ ಡಿಸೈನ್ ಅನ್ನು ಹಾಗೆಯೇ ಇಟ್ಟುಕೊಂಡು, ಟೊಯೊಟಾ ಮಾರುತಿ ಸುಜುಕಿ ಫ್ರಾಂಕ್ಸ್‌ನಿಂದ ಪ್ರತ್ಯೇಕವಾಗಿ ಕಾಣಲು ವಿಶಿಷ್ಟವಾದ ಸ್ಟೈಲಿಂಗ್ ಅಂಶಗಳನ್ನು ಪರಿಚಯಿಸುತ್ತಿದೆ. ಈ ಬದಲಾವಣೆಗಳಲ್ಲಿ ಟೊಯೊಟಾ ಬ್ಯಾಡ್ಜಿಂಗ್ ಇರುವ ರೀಡಿಸೈನ್ ಗೊಳಿಸಲಾದ ಗ್ರಿಲ್, ಟ್ವೀಕ್ ಮಾಡಿದ ಬಂಪರ್‌ಗಳು, ವಿಶಿಷ್ಟವಾದ ಹೆಡ್‌ಲೈಟ್‌ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳು (DRLs) ಮತ್ತು ಟೈಲ್ ಲ್ಯಾಂಪ್ ಡಿಸೈನ್ ಗಳು ಸೇರಿವೆ. ಇತ್ತೀಚೆಗೆ ಮಾರುತಿ ಮತ್ತು ಟೊಯೋಟಾ ಎರಡೂ ಜೊತೆಯಾಗಿ ಹೊರತಂದಿರುವ SUV ಗಳು ತಮ್ಮದೇ ಆದ ವಿಶಿಷ್ಟ ಲುಕ್ ಅನ್ನು ಹೊಂದಿವೆ.
ಈ ಹೊಸ ಕ್ರಾಸ್‌ಒವರ್‌ಗಾಗಿ ಟೊಯೋಟಾ ತನ್ನ ಇತ್ತೀಚಿನ ಟೀಸರ್‌ನಲ್ಲಿ ಮೇಲೆ ತಿಳಿಸಲಾದ ಹಲವು ಬದಲಾವಣೆಗಳನ್ನು ದೃಢೀಕರಿಸಿದೆ. ಇದು ಹೊಸ ಆರೆಂಜ್ ಬಣ್ಣದಲ್ಲಿ ಬರಲಿದೆ, ಈ ಕಲರ್ ಫ್ರಾಂಕ್ಸ್‌ನಲ್ಲಿ ಲಭ್ಯವಿರಲಿಲ್ಲ.
ಒಳಭಾಗದ ಡಿಸೈನ್
ಡ್ಯಾಶ್‌ಬೋರ್ಡ್ ವಿನ್ಯಾಸವು ಫ್ರಾಂಕ್ಸ್‌ನಂತೆಯೇ ಇರಬಹುದು, ಆದರೆ ಟೊಯೋಟಾ ಕ್ಯಾಬಿನ್‌ನೊಳಗೆ ವಿವಿಧ ಕಲರ್ ಗಳನ್ನು ಬಳಸಬಹುದು. ಮಾರುತಿ ಮಾಡೆಲ್ ನಲ್ಲಿ ಇರುವ ಬ್ಲಾಕ್ ಮತ್ತು ಬರ್ಗಂಡಿಯ ಒಳಭಾಗಕ್ಕಿಂತ ಭಿನ್ನವಾಗಿ, ಟೊಯೋಟಾ ವರ್ಷನ್ ಲೈಟ್ ಬೀಜ್ ಇಂಟೀರಿಯರ್ ಅನ್ನು ನೀಡಬಹುದು.
ಇದನ್ನು ಕೂಡ ಓದಿ: ಟಾಪ್-ಸ್ಪೆಕ್ ಟೊಯೋಟಾ ಇನ್ನೋವಾ ಹೈಕ್ರಾಸ್ ಬೆಲೆಗಳನ್ನು ಹೆಚ್ಚಿಸಲಾಗಿದೆ ಮತ್ತು ಬುಕ್ಕಿಂಗ್ ರೀಓಪನ್ ಮಾಡಲಾಗಿದೆ
ನಿರೀಕ್ಷಿಸಲಾಗಿರುವ ಫೀಚರ್ ಗಳು
ಮಾರುತಿ ಫ್ರಾಂಕ್ಸ್‌ನ ಕ್ಯಾಬಿನ್ ಚಿತ್ರವನ್ನು ಕೇವಲ ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ
ಫ್ರಾಂಕ್ಸ್‌ನಲ್ಲಿ ಲಭ್ಯವಿರುವ ಎಲ್ಲಾ ಫೀಚರ್ ಗಳಾದ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಹೆಡ್ಸ್-ಅಪ್ ಡಿಸ್ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಇವೆಲ್ಲವನ್ನು ಟೊಯೋಟಾ ಟೈಸರ್‌ಗೆ ನೀಡುವ ನಿರೀಕ್ಷೆಯಿದೆ. ಸುರಕ್ಷತಾ ಫೀಚರ್ ಗಳಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.
ಅದೇ ಪವರ್‌ಟ್ರೇನ್ ಗಳು
ಹಿಂದಿನ ಮಾರುತಿ-ಟೊಯೋಟಾ ಕಾರುಗಳಂತೆಯೇ, ಟೊಯೋಟಾ ಕ್ರಾಸ್ಒವರ್ ಕೂಡ ಫ್ರಾಂಕ್ಸ್‌ನ ಅದೇ ಎಂಜಿನ್‌ಗಳು ಮತ್ತು ಗೇರ್‌ಬಾಕ್ಸ್‌ಗಳನ್ನು ಬಳಸಬಹುದು. ನಿರೀಕ್ಷಿಸಲಾಗಿರುವ ಪವರ್‌ಟ್ರೇನ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು AMT ಆಯ್ಕೆಗಳೊಂದಿಗೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿವೆ. ಇದರ ಜೊತೆಗೆ, 100 PS ಮತ್ತು 148 Nm ಟಾರ್ಕ್ ಅನ್ನು ಉತ್ಪಾದಿಸುವ 1-ಲೀಟರ್ ಟರ್ಬೊ-ಪೆಟ್ರೋಲ್ (ಬೂಸ್ಟರ್‌ಜೆಟ್) ಎಂಜಿನ್ ಅನ್ನು ಕೂಡ ನೀಡಬಹುದು, ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ. CNG ವರ್ಷನ್ ಆಮೇಲೆ ಬರಬಹುದು, ಆದರೆ ಅದು ಮಾರುಕಟ್ಟೆಗೆ ಬಂದಾಗ ಈ ಆಯ್ಕೆ ಬಹುಶಃ ಲಭ್ಯವಿರುವುದಿಲ್ಲ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಫ್ರಾಂಕ್ಸ್ ಬೆಲೆಗಳ ಆಧಾರದ ಮೇಲೆ, ಟೊಯೋಟಾ ಟೈಸರ್ ಬೆಲೆಯು 8 ಲಕ್ಷದಿಂದ 13 ಲಕ್ಷ ರೂಪಾಯಿಗಳವರೆಗೆ (ಶೋರೂಮ್ ವೆಚ್ಚಗಳನ್ನು ಹೊರತುಪಡಿಸಿ) ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಬಹುಶಃ ಫ್ರಾಂಕ್ಸ್‌ನ ಅದೇ ರೀತಿಯ ವರ್ಷನ್ ಗಳಿಗಿಂತ ಸ್ವಲ್ಪ ಹೆಚ್ಚು ಪ್ರೀಮಿಯಂ ಬೆಲೆ ಇರಬಹುದು.
ಮಾರುತಿ ಸುಜುಕಿ ಫ್ರಾಂಕ್ಸ್ ಹೊರತುಪಡಿಸಿ, ಇದು ಹುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಮುಂಬರುವ ಮಹೀಂದ್ರಾ XUV300 ಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಫ್ರಾಂಕ್ಸ್ AMT