Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ
ವಿಶೇಷ ಆವೃತ್ತಿಯು ವೋಕ್ಸ್‌ವ್ಯಾಗನ್‌ನ ಈ ಎರಡು ಕಾರುಗಳ ಜಿಟಿ ಅಲ್ಲದ ವೇರಿಯೆಂಟ್‌ಗಳಿಗೆ ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ನೀಡಬಹುದು.
- 'ಸೌಂಡ್' ಆವೃತ್ತಿಯು 2023 ರ ಆರಂಭದಲ್ಲಿ ಅನಾವರಣಗೊಂಡ ಎಸ್‌ಯುವಿಯ ಹೊಸ ಪರಿಕಲ್ಪನೆಯ ವಿಶೇಷ ಆವೃತ್ತಿಯಾಗಿದೆ.
- GT ಎಡ್ಜ್ ಟ್ರಯಲ್ ಎಡಿಷನ್‌ನಲ್ಲಿ ನೋಡಿದಂತೆ ಎರಡೂ ವಿಶೇಷ ಆವೃತ್ತಿಯ ಹೆಸರಿನ ಸ್ಟಿಕ್ಕರ್‌ಗಳನ್ನು ಪಡೆಯಬಹುದು.
- ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ; ವೋಕ್ಸ್‌ವ್ಯಾಗನ್ ನ ಈ ಜೋಡಿಯು 1-ಲೀಟರ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
ವೋಕ್ಸ್‌ವ್ಯಾಗನ್ ಟೈಗನ್‌ನ GT ಎಡ್ಜ್ ಟ್ರಯಲ್ ಆವೃತ್ತಿಯನ್ನು ಪರಿಚಯಿಸಿದ ಕೆಲವೇ ದಿನಗಳಲ್ಲಿ, ಜರ್ಮನ್ ಮೂಲದ ಈ ಕಾರು ತಯಾರಕರು ಈಗ ಕಾಂಪ್ಯಾಕ್ಟ್ ಎಸ್‌ಯುವಿಯ ಮತ್ತೊಂದು ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. 'ಸೌಂಡ್' ಆವೃತ್ತಿ ಎಂದು ಕರೆಯಲ್ಪಡುವ ಇದು ವೋಕ್ಸ್‌ವ್ಯಾಗನ್ ವರ್ಟಸ್‌ನೊಂದಿಗೆ ಸಹ ಲಭ್ಯವಿರುತ್ತದೆ ಮತ್ತು ನಾಳೆ ಬಿಡುಗಡೆಯಾಗಲಿದೆ.
ಇದು ಯಾವುದರ ಬಗ್ಗೆ ಆಗಿರಬಹುದು?
ಹೆಸರಿನ ಆಧಾರದ ಮೇಲೆ, ಫೋಕ್ಸ್‌ವ್ಯಾಗನ್ ತನ್ನ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಸೆಡಾನ್ ಕೊಡುಗೆಗಳ ವಿಶೇಷ ಆವೃತ್ತಿಗಳೊಂದಿಗೆ ಕೆಲವು ಆಡಿಯೊ ಅಥವಾ ಮ್ಯೂಸಿಕ್ ಸಿಸ್ಟಮ್ ಮೇಲೆ ನಿರ್ದಿಷ್ಟ ಬದಲಾವಣೆಗಳನ್ನು ಪರಿಚಯಿಸಬಹುದೇಂದು ನಾವು ನಿರೀಕ್ಷಿಸುತ್ತೇವೆ. ಸದ್ಯಕ್ಕೆ ಟೈಗುನ್ ಮತ್ತು ವರ್ಟಸ್‌ನ ಜಿಟಿ ಪ್ಲಸ್ ಮತ್ತು ಜಿಟಿ ಎಡ್ಜ್ ವೇರಿಯೆಂಟ್‌ಗಳು ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ಹೊಂದಿದೆ, ಇದನ್ನು ಡೈನಾಮಿಕ್ ಲೈನ್‌ನ ಅಡಿಯಲ್ಲಿ ಟಾಪ್-ಎಂಡ್ ವೇರಿಯೆಂಟ್‌ಗಳಿಗೂ ನೀಡಬಹುದು ಎಂದು ನಾವು ಭಾವಿಸುತ್ತೇವೆ.
ಸೆಕೆಂಡ್ ಹ್ಯಾಂಡ್ ಕಾರಿನ ಮೌಲ್ಯಮಾಪನ
ಕಾರ್‌ದೇಖೋ ಮೂಲಕ ನಿಮ್ಮ ಬಾಕಿ ಇರುವ ಚಲನ್‌ಗಳನ್ನು ಪಾವತಿಸಿ
ಭಾರತದಲ್ಲಿ ಮುಂದೆ ಬರಲಿರುವ ಕಾರುಗಳು
ಇದು ವಿಶೇಷ ಆವೃತ್ತಿಯಾಗಿರುವುದರಿಂದ, ಟೈಗುನ್‌ನ ಜಿಟಿ ಎಡ್ಜ್ ಟ್ರಯಲ್ ಆವೃತ್ತಿಯಲ್ಲಿ ನಾವು ನೋಡಿದಂತೆ ಹೆಸರಿನ ಕೆಲವು ವಿಶೇಷ ಸ್ಟಿಕ್ಕರ್‌ನಂತಹ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಸಹ ನೀವು ನಿರೀಕ್ಷಿಸಬಹುದು. ಈ ವಿಶೇಷ ಆವೃತ್ತಿಯು ವರ್ಷದ ಮೊದಲಾರ್ಧದಲ್ಲಿ ವೋಕ್ಸ್‌ವ್ಯಾಗನ್ ಅನಾವರಣಗೊಳಿಸಿದ ಮಾದರಿಗಳ ಸೆಟ್‌ಗಿಂತ ಭಿನ್ನವಾಗಿದೆ ಎಂಬುವುದು ನಾವಿಲ್ಲಿ ಗಮನಿಸಬೇಕಾದ ಸಂಗತಿ. ಅಲ್ಲದೆ, ಇತರ ಕಾರು ತಯಾರಕರು ಕಾಸ್ಮೆಟಿಕ್ ಬದಲಾವಣೆಗಳ ಸುತ್ತ ಕೇಂದ್ರೀಕೃತವಾಗಿರುವ ವಿಶೇಷ ಆವೃತ್ತಿಗಳನ್ನು ಪರಿಚಯಿಸುವಲ್ಲಿ ಪ್ರಮುಖವಾಗಿ ಗಮನಹರಿಸಿದ್ದರೆ, ಫೋಕ್ಸ್‌ವ್ಯಾಗನ್ ಮಾತ್ರ ಸೌಂಡ್-ಸ್ಪೇಷಲ್ ಆವೃತ್ತಿಯನ್ನು ಹೊರತರುತ್ತಿದೆ.
ಹುಡ್ ಅಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಇತ್ತೀಚಿನ ಈ ವಿಶೇಷ ಆವೃತ್ತಿಯು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆಯುತ್ತಿಲ್ಲ. ವೋಕ್ಸ್‌ವ್ಯಾಗನ್ ಟೈಗನ್ ಮತ್ತು ವರ್ಟಸ್‌ಗಳನ್ನು ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಮೊದಲನೆಯದು 1-ಲೀಟರ್ 3-ಸಿಲಿಂಡರ್ ಎಂಜಿನ್ (115 PS/178 Nm) ಮತ್ತು ಇನ್ನೊಂದು 1.5-ಲೀಟರ್ ಎಂಜಿನ್ (150 PS/250 Nm). ಎರಡೂ ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ. ಮೊದಲನೆಯದನ್ನು ಐಚ್ಛಿಕ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಹೊಂದಬಹುದಾದರೂ, ಎರಡನೆಯದು 7-ಸ್ಪೀಡ್ ಡಿಸಿಟಿ (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುತ್ತದೆ.
ಇದನ್ನೂ ಓದಿ: 20 ಲಕ್ಷದೊಳಗಿನ ಈ 5 ಎಸ್‌ಯುವಿಗಳಲ್ಲಿ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಲಭ್ಯ
ಪ್ರತಿಸ್ಪರ್ಧಿಗಳು ಮತ್ತು ಬೆಲೆ ರೇಂಜ್
ಮಾರುಕಟ್ಟೆಯಲ್ಲಿ ವೋಕ್ಸ್‌ವ್ಯಾಗನ್ ವರ್ಟಸ್‌ಗೆ ಕೇವಲ ನಾಲ್ಕು ಪ್ರತಿಸ್ಪರ್ಧಿಗಳಿವೆ. ಅವುಗಳೆಂದರೆ ಹೋಂಡಾ ಸಿಟಿ, ಹುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ ಮತ್ತು ಮಾರುತಿ ಸಿಯಾಜ್. ಮತ್ತೊಂದೆಡೆ, ವೋಕ್ಸ್‌ವ್ಯಾಗನ್ ಟೈಗನ್ ಗೆ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲಿವೇಟ್, ಎಂಜಿ ಆಸ್ಟರ್ ಮತ್ತು ಸಿಟ್ರೊಯೆನ್ ಸಿ 3 ಏರ್‌ಕ್ರಾಸ್ ನೇರ ಸ್ಪರ್ಧೆಯನ್ನು ಒಡ್ಡುತ್ತದೆ.
ದೆಹಲಿಯಲ್ಲಿ ಈ ಸೆಡಾನ್‌ನ ಎಕ್ಸ್‌ಶೋರೂಮ್ ಬೆಲೆ 11.48 ಲಕ್ಷ ರೂ.ನಿಂದ 19.29 ಲಕ್ಷ ರೂ.ವರೆಗೆ ಇದ್ದರೆ, ಫೋಕ್ಸ್‌ವ್ಯಾಗನ್ ಎಸ್‌ಯುವಿಯ ಬೆಲೆ 11.62 ಲಕ್ಷ ರೂ.ನಿಂದ 19.76 ಲಕ್ಷ ರೂ.ವರೆಗೆ ಇದೆ.
ಇನ್ನಷ್ಟು ಓದಿ: ವೋಕ್ಸ್‌ವ್ಯಾಗನ್ ಟೈಗನ್ ಆನ್‌ರೋಡ್ ಬೆಲೆ