Login or Register ಅತ್ಯುತ್ತಮ CarDekho experience ಗೆ
Login

Volkswagen Virtus ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ಗಳ ಬಿಡುಗಡೆ

ವೋಕ್ಸ್ವ್ಯಾಗನ್ ವಿಟರ್ಸ್ ಗಾಗಿ ansh ಮೂಲಕ ಅಕ್ಟೋಬರ್ 04, 2024 12:17 pm ರಂದು ಮಾರ್ಪಡಿಸಲಾಗಿದೆ

ವೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಟೈಗುನ್ ಎರಡಕ್ಕೂ ಹೊಸ ಮಿಡ್-ಸ್ಪೆಕ್ ಹೈಲೈನ್ ಪ್ಲಸ್ ವೇರಿಯೆಂಟ್‌ ಅನ್ನು ಪರಿಚಯಿಸಿದೆ ಮತ್ತು ಟೈಗನ್ ಜಿಟಿ ಲೈನ್ ಅನ್ನು ಸಹ ಹೆಚ್ಚಿನ ಫೀಚರ್‌ಗಳೊಂದಿಗೆ ಆಪಡೇಟ್‌ ಮಾಡಲಾಗಿದೆ

  • ವರ್ಟಸ್‌ ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ಗಳ ಬೆಲೆಗಳು 14.08 ಲಕ್ಷ ರೂ.ನಿಂದ 19.40 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇದೆ.

  • ಜಿಟಿ ಲೈನ್ ವೇರಿಯೆಂಟ್‌ಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದ್ದರೆ, ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ಗಳು 1.5-ಲೀಟರ್ ಎಂಜಿನ್‌ನಿಂದ ಚಾಲಿತವಾಗಿವೆ.

  • ವರ್ಟಸ್‌ ಮತ್ತು ಟೈಗುನ್‌ ಎರಡರ ಹೈಲೈನ್ ಪ್ಲಸ್ ವೇರಿಯೆಂಟ್‌ಗಳು ಚಿಕ್ಕದಾದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತವೆ.

  • ಟೈಗುನ್ ಜಿಟಿ ಲೈನ್ ವೇರಿಯೆಂಟ್‌ಗಳು ಈಗ ಡ್ರೈವರ್‌ಗಾಗಿ 8-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಪುಶ್-ಬಟನ್ ಸ್ಟಾರ್ಟ್ ಸ್ಟಾಪ್‌ನಂತಹ ಹೆಚ್ಚಿನ ಫೀಚರ್‌ಗಳನ್ನು ಪಡೆಯುತ್ತವೆ.

  • ಗ್ರಾಹಕರು ಈಗ ಈ ಎರಡು ಕಾರುಗಳ ರೆಗುಲರ್‌ ವೇರಿಯೆಂಟ್‌ಗಳನ್ನು ಕ್ರೋಮ್‌ ಲೈನ್‌ಅಪ್‌ನ ಅಡಿಯಲ್ಲಿ ಆಯ್ಕೆ ಮಾಡಬಹುದು ಮತ್ತು ಸ್ಪೋರ್ಟ್ಸ್ ಲೈನ್‌ಅಪ್‌ನಿಂದ ಬ್ಲ್ಯಾಕ್ಡ್-ಔಟ್ ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು.

ವೋಕ್ಸ್‌ವ್ಯಾಗನ್ ವರ್ಟಸ್ ಇದೀಗ ಎರಡು ಹೊಸ ವೇರಿಯೆಂಟ್‌ಗಳನ್ನು ಪಡೆದುಕೊಂಡಿದೆ, ಅದುವೇ, ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್. ಇದು ಕಾಂಪ್ಯಾಕ್ಟ್ ಸೆಡಾನ್‌ನ ರೆಗುಲರ್‌ ವೇರಿಯೆಂಟ್‌ಗಳ ಮೇಲೆ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ ಮತ್ತು ಅವುಗಳ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಬಿಡುಗಡೆಯ ಜೊತೆಗೆ, ವೋಕ್ಸ್‌ವ್ಯಾಗನ್ ಹೊಸ ಹೈಲೈನ್ ಪ್ಲಸ್ ವೇರಿಯೆಂಟ್‌ ಅನ್ನು ವರ್ಟಸ್ ಮತ್ತು ಟೈಗುನ್ ಎರಡಕ್ಕೂ ಪರಿಚಯಿಸಿದೆ ಮತ್ತು ಎಸ್‌ಯುವಿಯ GT ಲೈನ್ ವೇರಿಯೆಂಟ್‌ಗಳು ಸಹ ಹೊಸ ಫೀಚರ್‌ಗಳನ್ನು ಪಡೆದುಕೊಂಡಿವೆ. ಬೆಲೆಗಳಿಂದ ಪ್ರಾರಂಭಿಸಿ, ಹೊಸದೆಲ್ಲದರ ಕುರಿತ ವಿವರವಾದ ಅಂಶಗಳು ಇಲ್ಲಿದೆ.

ವೇರಿಯೆಂಟ್‌

ಬೆಲೆ (ಎಕ್ಸ್‌ ಶೋರೂಮ್‌)

ವರ್ಟಸ್ ಜಿಟಿ ಲೈನ್ 1-ಲೀಟರ್ ಟಿಎಸ್‌ಐ ಮ್ಯಾನುವಲ್‌

14.08 ಲಕ್ಷ ರೂ.

ವರ್ಟಸ್ ಜಿಟಿ ಲೈನ್ 1-ಲೀಟರ್ ಟಿಎಸ್‌ಐ ಆಟೋಮ್ಯಾಟಿಕ್‌

15.18 ಲಕ್ಷ ರೂ.

ವರ್ಟಸ್ ಜಿಟಿ ಪ್ಲಸ್ ಸ್ಪೋರ್ಟ್ 1.5-ಲೀಟರ್ ಟಿಎಸ್‌ಐ ಮ್ಯಾನುವಲ್‌

17.85 ಲಕ್ಷ ರೂ.

ವರ್ಟಸ್ ಜಿಟಿ ಪ್ಲಸ್ ಸ್ಪೋರ್ಟ್ 1.5-ಲೀಟರ್ ಟಿಎಸ್‌ಐ ಡಿಸಿಟಿ

19.40 ಲಕ್ಷ ರೂ.

ಮ್ಯಾನುವಲ್‌ ವೇರಿಯೆಂಟ್‌ಗಿಂತ, ವರ್ಟಸ್‌ನ ಜಿಟಿ ಲೈನ್‌ ಲೈನ್ ಆಟೋಮ್ಯಾಟಿಕ್ ಆವೃತ್ತಿಯು 1.10 ಲಕ್ಷ ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ಆದರೆ ಜಿಟಿ ಪ್ಲಸ್ ಸ್ಪೋರ್ಟ್ ಆಟೋಮ್ಯಾಟಿಕ್ 1.55 ಲಕ್ಷ ರೂ.ನಷ್ಟು ಪ್ರೀಮಿಯಂನಲ್ಲಿ ಬರುತ್ತದೆ.

ಇದನ್ನೂ ಓದಿ: ಭಾರತದಲ್ಲಿ Jeep Compass ಆನಿವರ್ಸರಿ ಎಡಿಷನ್‌ ಬಿಡುಗಡೆ, ಬೆಲೆ 25.26 ಲಕ್ಷ ರೂ ನಿಗದಿ

ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್ ಎರಡಕ್ಕೂ ಹೊಸ ಹೈಲೈನ್ ಪ್ಲಸ್ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ, ಇದು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಅದರ ಬೆಲೆಗಳನ್ನು ಕೆಳಗೆ ವಿವರಿಸಲಾಗಿದೆ.

ವೇರಿಯೆಂಟ್‌

ಬೆಲ (ಎಕ್ಸ್‌ ಶೋರೂಮ್‌)

ಟೈಗುನ್ ಹೈಲೈನ್ ಪ್ಲಸ್ ಮ್ಯಾನುವಲ್‌

14.27 ಲಕ್ಷ ರೂ.

ಟೈಗುನ್ ಹೈಲೈನ್ ಪ್ಲಸ್ ಆಟೋಮ್ಯಾಟಿಕ್‌

15.37 ಲಕ್ಷ ರೂ.

ವರ್ಟಸ್ ಹೈಲೈನ್ ಪ್ಲಸ್ ಮ್ಯಾನುವಲ್‌

13.88 ಲಕ್ಷ ರೂ.

ವರ್ಟಸ್ ಹೈಲೈನ್ ಪ್ಲಸ್ ಆಟೋಮ್ಯಾಟಿಕ್‌

14.98 ಲಕ್ಷ ರೂ.

ವರ್ಟಸ್ ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್

ಎರಡೂ ವೇರಿಯೆಂಟ್‌ಗಳು ಹೊರಭಾಗದಲ್ಲಿ ಒಂದೇ ರೀತಿಯ ವಿನ್ಯಾಸವನ್ನು ಪಡೆಯುತ್ತವೆ. ಈ ಹೊಸ ವೇರಿಯೆಂಟ್‌ಗಳು ಸಂಪೂರ್ಣ ಕಪ್ಪಾದ ಥೀಮ್‌ನೊಂದಿಗೆ ಬರುತ್ತವೆ, ಅಲ್ಲಿ ಗ್ರಿಲ್, ಬಂಪರ್‌ಗಳು, "ವರ್ಟಸ್‌" ಬ್ಯಾಡ್ಜ್‌ಗಳು ಮತ್ತು 16-ಇಂಚಿನ ಅಲಾಯ್‌ ವೀಲ್‌ಗಳನ್ನು ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಸ್ಮೋಕ್‌ಡ್‌ ಎಫೆಕ್ಸ್‌ನಿಂದಾಗಿ ಸಂಪೂರ್ಣ ಕಪ್ಪಾದ ಟ್ರೀಟ್‌ಮೆಂಟ್ ಅನ್ನು ಪಡೆಯುತ್ತವೆ. ವಿಂಡೋ ಬೆಲ್ಟ್‌ಲೈನ್ ಅನ್ನು ಕೂಡ ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ. ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ ಹೆಚ್ಚುವರಿಯಾಗಿ ಸುತ್ತಲೂ ಕೆಂಪು "GT" ಬ್ಯಾಡ್ಜ್‌ಗಳನ್ನು ಪಡೆಯುತ್ತದೆ, ಕಪ್ಪು ಹಿಂಭಾಗದ ಸ್ಪಾಯ್ಲರ್, ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ಡ್ಯುಯಲ್-ಟೋನ್ ರೂಫ್ ಮತ್ತು ಬಂಪರ್‌ಗಳಿಗಾಗಿ ಏರೋ ಕಿಟ್, ಡೋರ್ ಕ್ಲಾಡಿಂಗ್ ಮತ್ತು ಡಿಫ್ಯೂಸರ್‌ ಅನ್ನು ಪಡೆಯುತ್ತದೆ.

ಒಳಭಾಗದಲ್ಲಿ, ಈ ವೇರಿಯೆಂಟ್‌ಗಳು ಸಂಪೂರ್ಣ-ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತವೆ ಮತ್ತು ಡ್ಯಾಶ್‌ಬೋರ್ಡ್‌ನ ಕೆಂಪು ಇನ್ಸರ್ಟ್‌ ಅನ್ನು ಹೊಳಪು ಕಪ್ಪು ಬಣ್ಣಗಳಿಂದ ಬದಲಾಯಿಸಲಾಗಿದೆ. ಎರಡೂ ವೇರಿಯೆಂಟ್‌ಗಳು ಅಲ್ಯೂಮಿನಿಯಂ ಪೆಡಲ್‌ಗಳೊಂದಿಗೆ ಬರುತ್ತವೆ ಮತ್ತು ಡೋರ್ ಹ್ಯಾಂಡಲ್‌ಗಳು, ಸನ್‌ವೈಸರ್‌ಗಳು ಮತ್ತು ಗ್ರಾಬ್ ಹ್ಯಾಂಡಲ್‌ಗಳಂತಹ ಅಂಶಗಳು ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ.

ಜಿಟಿ ಲೈನ್ ವೇರಿಯೆಂಟ್‌ಗಳು ಕಪ್ಪು ಸೆಮಿ-ಲೆಥೆರೆಟ್ ಸೀಟ್‌ಗಳನ್ನು ಪಡೆಯುತ್ತವೆ ಆದರೆ ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ಗಳು ವ್ಯತಿರಿಕ್ತ ಕೆಂಪು ಸ್ಟಿಚ್ಚಿಂಗ್‌ ಅನ್ನು ಒಳಗೊಂಡಿರುವ ಕಪ್ಪು ಲೆಥೆರೆಟ್ ಕವರ್‌ನೊಂದಿಗೆ ಬರುತ್ತವೆ. ಈ ವೇರಿಯೆಂಟ್‌ ಸ್ಟೀರಿಂಗ್ ಚಕ್ರದಲ್ಲಿ ಕೆಂಪು ಇನ್ಸರ್ಟ್‌ ಅನ್ನು ಪಡೆಯುತ್ತದೆ.

ಫೀಚರ್‌ಗಳ ವಿಷಯದಲ್ಲಿ, ಜಿಟಿ ಲೈನ್ ವೇರಿಯೆಂಟ್‌ಗಳು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಕ್ರೂಸ್ ಕಂಟ್ರೋಲ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕೆಂಪು ಆಂಬಿಯೆಂಟ್ ಲೈಟಿಂಗ್‌ನಂತಹ ಫೀಚರ್‌ಗಳೊಂದಿಗೆ ಬರುತ್ತವೆ. ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ನೀಡುತ್ತದೆ.

ಇದನ್ನೂ ಓದಿ: ನವೆಂಬರ್ 4 ರಂದು 2024ರ Maruti Dzire ಬಿಡುಗಡೆಯಾಗುವ ಸಾಧ್ಯತೆ

ಜಿಟಿ ಲೈನ್‌ಗಿಂತ ಹೆಚ್ಚುವರಿಯಾಗಿ, ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ ಗಾಳಿಯಾಡುವ ಮುಂಭಾಗದ ಸೀಟುಗಳು ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳನ್ನು ನೀಡುತ್ತದೆ.

ಜಿಟಿ ಲೈನ್‌

ಜಿಟಿ ಪ್ಲಸ್‌ ಸ್ಪೋರ್ಟ್‌

ಎಂಜಿನ್‌

1-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

115 ಪಿಎಸ್‌

150 ಪಿಎಸ್‌

ಟಾರ್ಕ್‌

178 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುವಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುವಲ್‌, 7-ಸ್ಪೀಡ್ ಡಿಸಿಟಿ*

*ಡಿಸಿಟಿ - ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

GT ಲೈನ್ ವೇರಿಯೆಂಟ್‌ಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತವೆ, ಆದರೆ GT ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ಗಳು ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್‌ನಿಂದ ಚಾಲಿತವಾಗಿವೆ. ಈ ಎರಡೂ ವೇರಿಯೆಂಟ್‌ಗಳು ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಲಭ್ಯವಿದೆ.

ಟೈಗುನ್ ಜಿಟಿ ಲೈನ್

ಕೆಲ ಸಮಯಗಳಿಂದ ಮಾರಾಟದಲ್ಲಿರುವ ಟೈಗುನ್ ಜಿಟಿ ಲೈನ್ ವೇರಿಯೆಂಟ್‌ಗಳನ್ನು ಸಹ ಹೊಸ ಫೀಚರ್‌ಗಳೊಂದಿಗೆ ಆಪ್‌ಡೇಟ್‌ ಮಾಡಲಾಗಿದೆ. ಇವುಗಳು ಈಗ ತಮ್ಮ ಅಸ್ತಿತ್ವದಲ್ಲಿರುವ ಫೀಚರ್‌ನ ಪಟ್ಟಿಗಿಂತ ಹೆಚ್ಚುವರಿಯಾಗಿ 8-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್ ಸ್ಟಾಪ್, ಅಲ್ಯೂಮಿನಿಯಂ ಪೆಡಲ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಆಟೋಮ್ಯಾಟಿಕ್‌ ಹೆಡ್‌ಲ್ಯಾಂಪ್‌ಗಳನ್ನು ಒದಗಿಸುತ್ತದೆ.

ವರ್ಟಸ್‌ ಜಿಟಿ ಲೈನ್‌ನಂತೆಯೇ, ಟೈಗುನ್ ಜಿಟಿ ಲೈನ್ ವೇರಿಯೆಂಟ್‌ಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತವೆ, ಹಾಗೆಯೇ, ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳನ್ನು ಪಡೆಯುತ್ತವೆ.

ವರ್ಟಸ್ ಮತ್ತು ಟೈಗನ್ ಹೈಲೈನ್ ಪ್ಲಸ್ ವೇರಿಯೆಂಟ್‌ಗಳು

ಹೆಚ್ಚುವರಿಯಾಗಿ, ವರ್ಟಸ್‌ ಮತ್ತು ಟೈಗುನ್ ಎರಡಕ್ಕೂ ಹೊಸ ವೇರಿಯೆಂಟ್‌ಗಳ ಸೇರ್ಪಡೆಯನ್ನು ವೋಕ್ಸ್‌ವ್ಯಾಗನ್ ಮಾಡಿದೆ, ಇದು ಮಿಡ್‌-ಸ್ಪೆಕ್ ಹೈಲೈನ್ ವೇರಿಯೆಂಟ್‌ಗಿಂತ ಮೇಲೆ ಇರುತ್ತದೆ. ಈ ವೇರಿಯೆಂಟ್‌ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗಳನ್ನು ಪಡೆಯುತ್ತದೆ.

ಇದನ್ನೂ ಓದಿ: ಬುಕ್ಕಿಂಗ್‌ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Mahindra Thar Roxx

ಫೀಚರ್‌ಗಳ ವಿಷಯದಲ್ಲಿ, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್‌ವ್ಯೂ ಕ್ಯಾಮೆರಾದಂತಹ ಅಸ್ತಿತ್ವದಲ್ಲಿರುವ ಫೀಚರ್‌ಗಿಂತ ಹೈಲೈನ್ ಪ್ಲಸ್ ವೇರಿಯೆಂಟ್‌ಗಳು ಹೆಚ್ಚುವರಿಯಾಗಿ 8-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪೇ, ಆಟೋ-ಡಿಮ್ಮಿಂಗ್‌ IRVM, ಪುಶ್-ಬಟನ್ ಸ್ಟಾರ್ಟ್ ಸ್ಟಾಪ್, ಸಿಂಗಲ್-ಪೇನ್ ಸನ್‌ರೂಫ್, ಆಟೋ ಹೆಡ್‌ಲ್ಯಾಂಪ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಲೈಟ್‌ಗಳಿಗಾಗಿ ಫಾಲೋ-ಮಿ-ಹೋಮ್ ಮತ್ತು ಲೀಡ್-ಮಿ-ಟು-ವೆಹಿಕಲ್ ಫಂಕ್ಷನ್‌ಗಳನ್ನು ಪಡೆಯುತ್ತವೆ.

ಹೊಸ ವೇರಿಯೆಂಟ್‌ಗಳ ಸ್ಥಾನ

ವರ್ಟಸ್‌ ಮತ್ತು ಟೈಗುನ್‌ ಎರಡೂ ಈಗ ಕ್ರೋಮ್ ಮತ್ತು ಸ್ಪೋರ್ಟ್ ನಾಮಕರಣದ ಅಡಿಯಲ್ಲಿ ಲಭ್ಯವಿದೆ. ಎಕ್ಸ್‌ಟಿರಿಯರ್‌ನಲ್ಲಿ ಕ್ರೋಮ್ ಅಂಶಗಳಿಗೆ ಆದ್ಯತೆ ನೀಡುವವರು, ಕ್ರೋಮ್ ಲೈನ್‌ಅಪ್‌ನಿಂದ ರೆಗುಲರ್‌ ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು. ಆದರೆ ಒಳಗೆ ಮತ್ತು ಹೊರಗೆ ಕಪ್ಪು ವಿನ್ಯಾಸವನ್ನು ಬಯಸುವವರು ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್‌ಗಳನ್ನು ಒಳಗೊಂಡಿರುವ ಸ್ಪೋರ್ಟ್ ರೇಂಜ್‌ ಅನ್ನು ಆರಿಸಿಕೊಳ್ಳಬಹುದು.

ಬೆಲೆ ಪ್ರತಿಸ್ಪರ್ಧಿಗಳು

ಫೋಕ್ಸ್‌ವ್ಯಾಗನ್ ವರ್ಟಸ್ ಬೆಲೆ 11.56 ಲಕ್ಷ ರೂ.ನಿಂದ 19.41 ಲಕ್ಷ ರೂ.ವರೆಗೆ ಇದೆ ಮತ್ತು ಇದು ಸ್ಕೋಡಾ ಸ್ಲಾವಿಯಾ, ಹ್ಯೂಂಡೈ ವೆರ್ನಾ, ಮಾರುತಿ ಸಿಯಾಜ್ ಮತ್ತು ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗಿದೆ. ಟೈಗುನ್‌ನ ಬೆಲೆಗಳು 11.70 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಇರುತ್ತದೆ ಮತ್ತು ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ವರ್ಟಸ್‌ ಆನ್‌ರೋಡ್‌ ಬೆಲೆ

Share via

Write your Comment on Volkswagen ವಿಟರ್ಸ್

N
naresh kumar bhasin
Oct 17, 2024, 12:17:54 PM

Problems faced in polo. 1. Window glass stops, A C stopped working, break do not work on bumpy roads, alignment and suspension is not up to the mark. 6 Tyre were disposed off driving only 50000 k.M.

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ