Login or Register ಅತ್ಯುತ್ತಮ CarDekho experience ಗೆ
Login

5-ಡೋರ್ ಮಹೀಂದ್ರಾ ಥಾರ್‌ನ ಜಾಗತಿಕ ಅನಾವರಣ ಯಾವಾಗ?

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ tarun ಮೂಲಕ ಜೂನ್ 27, 2023 02:33 pm ರಂದು ಪ್ರಕಟಿಸಲಾಗಿದೆ

5-ಡೋರ್ ಮಹೀಂದ್ರಾ ಥಾರ್ ಅನ್ನು 3-ಡೋರ್ ಆವೃತ್ತಿಯಂತೆಯೇ ವಿನ್ಯಾಸಗೊಳಿಸಲಾಗಿದ್ದು, ಇದು ಹೆಚ್ಚಿನ ಫೀಚರ್‌ಗಳು ಮತ್ತು ಪ್ರಾಯೋಗಿಕತೆಯನ್ನು ಪಡೆಯುತ್ತದೆ

2023 ರಲ್ಲಿ ಮಹೀಂದ್ರಾದ ಯಾವುದೇ ಹೊಸ ಮಾಡೆಲ್‌ಗಳು ಮಾರುಕಟ್ಟೆಗೆ ಪ್ರವೇಶಿಸುವುದಿಲ್ಲ ಎಂಬ ದೃಢೀಕರಣವನ್ನು ನಾವು ಪಡೆದಿದ್ದರೂ, ಈ ವರ್ಷ ಹೆಚ್ಚು ನಿರೀಕ್ಷಿತ ಅನಾವರಣವೊಂದು ನಡೆಯುವ ಸಾಧ್ಯತೆಯಿದೆ: 5-ಡೋರ್ ಮಹೀಂದ್ರಾ ಥಾರ್. ಸ್ವಾತಂತ್ರ್ಯೋತ್ಸವದಂದು ಇದು ಜಾಗತಿಕವಾಗಿ ಅನಾವರಣಗೊಳ್ಳಲಿದೆ ಎಂದು ಅನೇಕ ವರದಿಗಳು ಸೂಚಿಸುತ್ತಿವೆಯಾದರೂ ನಮ್ಮ ಮಹೀಂದ್ರಾ ಮೂಲಗಳು ಇದು ಸುಳ್ಳೆಂದು ನಿರಾಕರಿಸಿವೆ.

ಈ ವರ್ಷ 5-ಡೋರ್ ಥಾರ್ ಅನ್ನು ನೋಡುತ್ತೇವೆಯೇ?

ಮಹೀಂದ್ರಾ ಸಾಮಾನ್ಯವಾಗಿ ಗಣರಾಜ್ಯೋತ್ಸವ (XUV400 ಬುಕ್ಕಿಂಗ್‌ಗಳು ತೆರೆದಿವೆ), ಸ್ವಾತಂತ್ರ್ಯೋತ್ಸವ, ಮತ್ತು ಗಾಂಧಿ ಜಯಂತಿ (3-ಡೋರ್ ಥಾರ್ ಬಿಡುಗಡೆ) ಯಂತಹ ರಾಷ್ಟ್ರೀಯ ರಜಾದಿನಗಳಲ್ಲಿ ಅನಾವರಣ ಮತ್ತು ಬಿಡುಗಡೆಯನ್ನು ಯೋಜಿಸುತ್ತದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯಾಗಿದೆ. ಈ ಆಗಸ್ಟ್ 15 ಗೆ ಸಹ ಮಹೀಂದ್ರಾ ಈವೆಂಟ್ ಅನ್ನು ನಿಗದಿಪಡಿಸಿದೆ, ಆದರೆ ಇದು 5-ಬಾಗಿಲಿನ ಥಾರ್ ಅನಾವರಣಕ್ಕಲ್ಲ ಎಂಬುದು ನಮ್ಮ ಮೂಲಗಳ ಮಾತು.

ಬದಲಾಗಿ, ಈ ಈವೆಂಟ್‌ನ ಉದ್ದೇಶವು, 2025 ರಿಂದ ಮಾರಾಟವಾಗಲಿರುವ ಅದರ ಹೊಸ ಎಲೆಕ್ಟ್ರಿಕ್ ವಾಹನ ಶ್ರೇಣಿಯ ಕುರಿತಾಗಿದೆ. ಅದರ ವಿಸ್ತಾರವಾದ ಇವಿ ಶ್ರೇಣಿಯ ಮಧ್ಯದಲ್ಲಿ, 5-ಡೋರ್ ಥಾರ್ ಸರಿಯಾಗಿ ಹೊಂದಿಕೆಯಾಗದಿರಬಹುದು ಮಾತ್ರವಲ್ಲದೇ ತನ್ನಗೆಂದೇ ಮೀಸಲಾದ ಸ್ವಂತ ಈವೆಂಟ್‌ಗೆ ಅರ್ಹವಾಗಿದೆ. ಉದ್ದವಾದ ಆಫ್-ರೋಡರ್‌ನ ಅನಾವರಣ ಮತ್ತು ಬಿಡುಗಡೆಯು 2024ರಲ್ಲಿ ಅದೇ ದಿನದಂದು ನಡೆಯಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ.

ಇದನ್ನೂ ಓದಿ: 2023ರಲ್ಲಿ ಯಾವುದೇ ಹೊಸ ಮಾಡೆಲ್ ಅನ್ನು ದೃಢೀಕರಿಸದ ಮಹೀಂದ್ರಾ; 2024ರಲ್ಲಿ ಭಾರಿ ಬಿಡುಗಡೆಗೆ ಸಜ್ಜು!

ಹಾಗಾದರೆ, ಆಗಸ್ಟ್ 15 ರಂದು ನಾವೇನು ನೋಡುತ್ತೇವೆ?

ಮಹೀಂದ್ರಾ ತನ್ನ ಇವಿ ಶ್ರೇಣಿಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವ ನಿರೀಕ್ಷೆಯಿದೆ. ಈ ಲಿಸ್ಟ್ ಹಿಂದೆ XUV e8 ಎಂದು ಬಹಿರಂಗಪಡಿಸಿದ ಸಂಪೂರ್ಣ-ಎಲೆಕ್ಟ್ರಿಕ್ XUV700 ಅನ್ನು ಹೊಂದಿದೆ, ಪೂರ್ಣ-ಗಾತ್ರದ ಇವಿ (ಇದು XUV700 ಗಿಂತ ದೊಡ್ಡದಾಗಿದೆ), ಕಾಂಪ್ಯಾಕ್ಟ್ ಎಸ್‌ಯುವಿ ಇವಿ, ‘ಬಾರ್ನ್ ಇವಿಗಳು’ ಎಂದು ಕರೆಯಲಾಗುವ ಮೂರು ಮೀಸಲಾದ ಕೇವಲ-ಇವಿ (three dedicated EV-only) ಮಾಡೆಲ್‌ಗಳನ್ನು ಒಳಗೊಂಡಿದೆ. ಈ XUV 700 ಇವಿ ಮೊದಲು ಮಾರುಕಟ್ಟೆಗೆ ಬರುವ ಇವಿಯಾಗಿದ್ದು ನಾವು ಅದರ ಉತ್ಪಾದನೆಗೆ ಸಿದ್ಧವಾದ ಆವೃತ್ತಿಯನ್ನು ನೋಡಬಹುದು.

5-ಡೋರ್ ಥಾರ್‌ನ ಇತ್ತೀಚಿನ ವಿವರಗಳು

ತನ್ನ ಉತ್ಪಾದನಾ ಸಿದ್ಧವಾದ ಅವತಾರವು ಸಮೀಪಿಸುತ್ತಿರುವುದರಿಂದ ಥಾರ್‌ನ –ಡೋರ್ ಆವೃತ್ತಿಯನ್ನು ಅನೇಕ ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು 3-ಬಾಗಿಲಿನ ಮಾಡೆಲ್‌ನಂತೆಯೇ ಅದೇ ಬಾಕ್ಸಿ ಹಳೆಯ ಸ್ಟೈಲ್‌ನ ಸಿಲೂಯೆಟ್ ಅನ್ನು ಹೊಂದಿದೆ ಹಾಗೂ ವಿಸ್ತರಿಸಲ್ಪಟ್ಟ ಬಾಡಿ ಮತ್ತು ಇನ್ನೂ ಎರಡು ಬಾಗಿಲುಗಳನ್ನು ಪಡೆದಿದೆ ಎಂದು ಇದರ ಸ್ಪೈ ಶಾಟ್‌ಗಳು ತಿಳಿಸುತ್ತವೆ. ಇದು ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಸಂಪೂರ್ಣ ಮೆಟಲ್ ಹಾರ್ಡ್ ಟಾಪ್, ಸಿ-ಪಿಲ್ಲರ್ ಮೌಂಟೆಡ್ ಡೋರ್ ಹ್ಯಾಂಡಲ್‌ಗಳು ಮತ್ತು ಹಿಂಭಾಗದ ವೈಪರ್ ಅನ್ನು ಪಡೆದಿದೆ.

ಇಂಟೀರಿಯರ್ ಥಾರ್‌ನಂತೆಯೇ ಇರುತ್ತದೆ, ಜತೆಗೆ ಹೆಚ್ಚುವರಿ ಸೌಕರ್ಯ ಮತ್ತು ಅನುಕೂಲಕ್ಕಾಗಿ ಕೆಲವು ಫೀಚರ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಎಸ್‌ಯುವಿಯ ಈ ಪ್ರಾಯೋಗಿಕ ಆವೃತ್ತಿಯು ಶಕ್ತಿಯನ್ನು ಗಳಿಸುವುದು, ಉತ್ತಮ ಸ್ಥಿತಿಯಲ್ಲಿರುವ ಅದೇ 2-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ಗಳಾಗಿರುತ್ತವೆ. ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗಳು ಎರಡೂ ಎಂಜಿನ್‌ಗಳಿಗೆ ನೀಡಿರುವ ಆಯ್ಕೆಗಳಾಗಿರುತ್ತವೆ.

ಇದನ್ನೂ ಓದಿ: ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್ ಪೆಟ್ರೋಲ್ – ಇಂಧನ ದಕ್ಷತೆ ಅಂಕಿಅಂಶ ಹೋಲಿಕೆ

ಮಾರುತಿ ಜಿಮ್ನಿಗೆ ಹೆಚ್ಚು ಪ್ರೀಮಿಯಂ ಮತ್ತು ದೊಡ್ಡ ಪರ್ಯಾಯವಾಗಿರುವ 5-ಬಾಗಿಲಿನ ಥಾರ್ ಸುಮಾರು 15-ಲಕ್ಷ (ಎಕ್ಸ್-ಶೋರೂಮ್) ದಿಂದ ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ.

ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ ಥಾರ್ ಡಿಸೇಲ್

Share via

Write your Comment on Mahindra ಥಾರ್‌ ROXX

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ