ಗ್ಲೋಬಲ್ NCAP ನಲ್ಲಿ ಮಾರುತಿ ವ್ಯಾಗನ್ ಆರ್‌ನಿಂದ ಇನ್ನೊಂದು ಅನಿಶ್ಚಿತ ಪ್ರದರ್ಶನ
2023 ವ್ಯಾಗನ್ ಆರ್‌ನ ಫೂಟ್‌ವೆಲ್ ಏರಿಯಾ ಮತ್ತು ಬಾಡಿಶೆಲ್ ಇಂಟೆಗ್ರಿಟಿಯನ್ನು “ಅಸ್ಥಿರ” ಎಂದು ಪರಿಗಣಿಸಲಾಗಿದೆ.
- ಇದು ಕ್ರಮವಾಗಿ ವಯಸ್ಕರ ರಕ್ಷಣೆಯಲ್ಲಿ ಒಂದು ಸ್ಟಾರ್ ಮತ್ತು ಮಕ್ಕಳ ರಕ್ಷಣೆಯಲ್ಲಿ ಶೂನ್ಯ ಸಾಧಿಸಿದೆ.
- ಈ ವ್ಯಾಗನ್ ಆರ್ ಅನ್ನು 2019 ರಲ್ಲಿ ಕ್ರ್ಯಾಶ್-ಟೆಸ್ಟ್ ಮಾಡಲಾಗಿದ್ದು, ಅಲ್ಲಿ ಅದು ಪ್ರತಿಯೊಂದರಲ್ಲೂ ಎರಡು ಸ್ಟಾರ್‌ಗಳನ್ನು ಪಡೆದಿದೆ.
- ಈ 2023 ರ ವ್ಯಾಗನ್ ಆರ್ 34 ಅಂಕಗಳಲ್ಲಿ 19.69 ಗಳನ್ನು ಗಳಿಸಿತು.
- ಇದರಲ್ಲಿನ ಮಕ್ಕಳ ರಕ್ಷಣೆಯ ಸ್ಕೋರ್ 49 ಅಂಕಗಳಲ್ಲಿ 3.40 ಅಂಕಗಳಾಗಿದೆ.
- ಪ್ರಮಾಣಿತ ಸುರಕ್ಷತಾ ಫೀಚರ್‌ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.
ಗ್ಲೋಬಲ್ NCAP ತನ್ನ #SaferCarsForIndia ಅಭಿಯಾನದ ಅಡಿಯಲ್ಲಿ 2023 ಮಾರುತಿ ವ್ಯಾಗನ್ ಆರ್ ಸೇರಿದಂತೆ ಹೊಸ ಕಾರನ್ನು ಕ್ರ್ಯಾಶ್-ಟೆಸ್ಟ್ ನಡೆಸಿದೆ. ಇದು ವಯಸ್ಕರ ರಕ್ಷಣೆಯಲ್ಲಿ ಕಳಪೆ ಒನ್-ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಗಾಗಿ ಶೂನ್ಯವನ್ನು ಸಾಧಿಸಿದೆ. ನಿಮಗೆ ನೆನಪಿಸಬೇಕಾದ ವಿಷಯವೆಂದರೆ, ಈ ಹ್ಯಾಚ್‌ಬ್ಯಾಕ್ ಅನ್ನು 2019 ರಲ್ಲಿ ಸಹ ಒಮ್ಮೆ ಪರೀಕ್ಷಿಸಲಾಗಿತ್ತು ಮತ್ತು ಆಗ ಪ್ರತಿ ವಿಭಾಗದಲ್ಲೂ ಎರಡು ಸ್ಟಾರ್‌ಗಳನ್ನು ಪಡೆದುಕೊಂಡಿತ್ತು. ಆಗ ಪರೀಕ್ಷೆಗಳು ಈಗಿನಂತೆ ಕಟ್ಟುನಿಟ್ಟಾಗಿರಲಿಲ್ಲ, ಸೈಡ್ ಇಂಪ್ಯಾಕ್ಟ್‌ನೊಂದಿಗೆ, ಸೈಡ್ ಪೋಲ್ ಇಂಪ್ಯಾಕ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಪರೀಕ್ಷೆಗಳು ಸಹ ಈಗ ಕಣಕ್ಕೆ ಸೇರುತ್ತವೆ.
ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಎಬಿಡಿ ಜೊತೆ ಇಬಿಡಿಯನ್ನು ಹೊಂದಿರುವ ಈ 2023 ವ್ಯಾಗನ್ ಆರ್ ನ ಅತಿ ಬೇಸಿಕ್ ಆವೃತ್ತಿಯನ್ನು ಪರೀಕ್ಷೆಗೊಳಪಡಿಸಲಾಯಿತು. ವ್ಯಾಗನ್ ಆರ್ ಸೈಡ್ ಏರ್‌ಬ್ಯಾಗ್‌ಗಳನ್ನು ಹೊಂದಿರದ ಕಾರಣ ಅದರ ಸೈಡ್ ಇಂಪ್ಯಾಕ್ಟ್ ಪೋಲ್ ಪರೀಕ್ಷೆಯನ್ನು ನಡೆಸಲಾಗಿಲ್ಲ. ESC ಪರೀಕ್ಷೆಗೆ ಸಂಬಂಧಿಸಿದಂತೆ ಕಾರು ತಯಾರಕರು ಹ್ಯಾಚ್‌ಬ್ಯಾಕ್‌ನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ನೀಡುವ ಮೊದಲು ಇದನ್ನು ನಡೆಸಲಾಗಿದೆ ಎಂದು ನಾವು ನಂಬುತ್ತೇವೆ.
ಫ್ರಂಟಲ್ ಇಂಪ್ಯಾಕ್ಟ್ (64kmph)
2023 ರ ವ್ಯಾಗನ್ ಆರ್ ವಯಸ್ಕರ ರಕ್ಷಣೆಯಲ್ಲಿ 34 ರಲ್ಲಿ 19.69 ಅಂಕಗಳನ್ನು ಗಳಿಸಿತು (ಹಿಂದೆ ಇದು 17 ರಲ್ಲಿ 6.93 ಅಂಕಗಳನ್ನು ಪಡೆದಿತ್ತು). ಚಾಲಕನ ತಲೆಗೆ ನೀಡಲಾದ ರಕ್ಷಣೆ “ಸಾಕಷ್ಟು” ಆದರೆ ಪ್ರಯಾಣಿಕರಿಗೆ “ಉತ್ತಮ” ಎಂದು ಪರಿಗಣಿಸಲಾಗಿದ್ದು ಅವರುಗಳ ಕತ್ತಿಗೆ “ಉತ್ತಮ” ರಕ್ಷಣೆ ಒದಗಿಸುತ್ತದೆ. ಚಾಲಕನ ಎದೆಗೆ ನೀಡಲಾದ ರಕ್ಷಣೆಯನ್ನು “ದುರ್ಬಲ” ಎಂದು ಕರೆಯಲಾಗಿದ್ದರೂ, ಅದನ್ನು ಪ್ರಯಾಣಿಕರ ಎದೆಗೆ “ಸಮರ್ಪಕ” ಎಂದು ಪರಿಗಣಿಸಲಾಗಿದೆ. ಚಾಲಕ ಮತ್ತು ಪ್ರಯಾಣಿಕರ ಮೊಣಕಾಲುಗಳು “ಅಲ್ಪ ಪ್ರಮಾಣದ” ರಕ್ಷಣೆಯನ್ನು ತೋರಿಸಿದವು.
ಚಾಲಕನ ಟಿಬಿಯಾಸ್ “ಸಾಕಷ್ಟು ಮತ್ತು ದುರ್ಬಲ” ರಕ್ಷಣೆಯನ್ನು ಒದಗಿಸಿದರೆ ಪ್ರಯಾಣಿಕರ ಟಿಬಿಯಾಸ್ “ಉತ್ತಮ” ರಕ್ಷಣೆಯನ್ನು ಒದಗಿಸುತ್ತದೆ. ಈ ಹ್ಯಾಚ್‌ಬ್ಯಾಕ್‌ನ ಫೂಟ್‌ವೆಲ್ ಏರಿಯಾವನ್ನು “ಅಸ್ಥಿರ” ಎಂದು ರೇಟ್ ಮಾಡಲಾಗಿದೆ ಮತ್ತು ಬಾಡಿಶೆಲ್ ಹಾಗೂ ಕಾರನ್ನು ಮತ್ತಷ್ಟು ಲೋಡಿಂಗ್‌ಗಳನ್ನು ತಡೆದುಕೊಳ್ಳಲು ಅಸಮರ್ಥವಾಗಿದೆ ಎಂದು ಪರಿಗಣಿಸಲಾಗಿದೆ.
ಸೈಡ್ ಇಂಪ್ಯಾಕ್ಟ್ (50kmph)
ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ತಲೆಗೆ ರಕ್ಷಣೆ, ಹೊಟ್ಟೆ ಮತ್ತು ಸೊಂಟದ ರಕ್ಷಣೆಯನ್ನು “ಉತ್ತಮ” ಎಂದು ಉಲ್ಲೇಖಿಸಲಾಗಿದೆ ಆದರೆ ಎದೆಯ ರಕ್ಷಣೆಯನ್ನು “ಅಲ್ಪ ಪ್ರಮಾಣ” ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ವಿಫ್ಟ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ ಆಲ್ಟೊ K10
ಪ್ರಯಾಣಿಕ ಮಕ್ಕಳ ರಕ್ಷಣೆ
ಈ ವ್ಯಾಗನ್ ಆರ್ ಪ್ರಯಾಣಿಕ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 3.40 ಅಂಕಗಳನ್ನು ಪಡೆದುಕೊಂಡಿದೆ. 2019 ರ ಕ್ರ್ಯಾಶ್ ಟೆಸ್ಟ್‌ನಲ್ಲಿ, ಹ್ಯಾಚ್ ಬ್ಯಾಕ್ ಈ ವಿಭಾಗದಲ್ಲಿ ಎರಡು ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು 49 ರಲ್ಲಿ 16.33 ಅಂಕಗಳನ್ನು ಪಡೆದಿದೆ.
ಫ್ರಂಟಲ್ ಇಂಪ್ಯಾಕ್ಟ್ (64kmph)
ಮೂರು ವರ್ಷ ವಯಸ್ಸಿನ ಮಕ್ಕಳ ಆಸನವನ್ನು ಮುಂದಕ್ಕೆ ಮುಖ ಮಾಡಿ ಸ್ಥಾಪಿಸಲಾಗಿದ್ದು ಯಾವುದೇ ಘಟನೆಯ ಸಂದರ್ಭದಲ್ಲಿ ಈ ಆಸನವು ಹೆಚ್ಚು ಮುಂದಕ್ಕೆ ಚಲಿಸುವುದನ್ನು ತಡೆಯಲು ಸಾಧ್ಯವಿಲ್ಲದ ಕಾರಣ ತಲೆಗೆ ಹೆಚ್ಚು ಗಾಯಗಳಾಗುವ ಅಪಾಯವು ಅಧಿಕವಾಗಿರುತ್ತದೆ. ಇನ್ನೊಂದೆಡೆ, ಒಂದೂವರೆ ವರ್ಷ ವಯಸ್ಸಿನ ಮಕ್ಕಳ ಡಮ್ಮಿ ಆಸನವನ್ನು ಹಿಂಭಾಗಕ್ಕೆ ಎದುರಾಗಿ ಇರಿಸಲಾಗಿದ್ದು ತಲೆಗೆ ಹೆಚ್ಚು ಅಪಾಯವನ್ನು ಮತ್ತು ಎದೆಗೆ “ದುರ್ಬಲ” ರಕ್ಷಣೆಯನ್ನು ತೋರಿಸುತ್ತದೆ.
ಎಲ್ಲಾ ಸೀಟುಗಳ ಸ್ಥಾನಗಳಲ್ಲಿ ವ್ಯಾಗನ್ ಆರ್‌ನ ಮೂರು ಪಾಯಿಂಟ್ ಸೀಟ್ ಬೆಲ್ಟ್‌ಗಳ ಕೊರತೆಯು ಮಕ್ಕಳ ರಕ್ಷಣೆಯ ಶೂನ್ಯ ಸ್ಟಾರ್ ಪಡೆಯುವಿಕೆಗೆ ಕಾರಣವಾಯಿತು ಎಂದು ಸುರಕ್ಷತಾ ಮೌಲ್ಯಮಾಪನ ಸಂಸ್ಥೆ ಹೇಳಿದೆ. ಮುಂಭಾಗದ ಪ್ರಯಾಣಿಕರ ಸ್ಥಾನದಲ್ಲಿ ಮಕ್ಕಳ ನಿರ್ಬಂಧ ವ್ಯವಸ್ಥೆ (CRS) ಅನ್ನು ಸ್ಥಾಪಿಸಿದರೆ ಸಹ-ಚಾಲಕ ಏರ್‌ಬ್ಯಾಗ್ ಅನ್ನು ಸಂಪರ್ಕ ಕಡಿತಗೊಳಿಸುವ ಸಾಧ್ಯತೆಯನ್ನು ಮಾರುತಿ ಸುಝುಕಿ ನೀಡುವುದಿಲ್ಲ.
2023 ಮಾರುತಿ ವ್ಯಾಗನ್ ಆರ್‌ನಲ್ಲಿ ಸುರಕ್ಷತಾ ಕಿಟ್
ಮಾರುತಿಯು ವ್ಯಾಗನ್ ಆರ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಇಎಸ್‌ಪಿ, ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಪ್ರಮಾಣಿತವಾಗಿ ನೀಡುತ್ತದೆ. ಈ ಮೂಲಭೂತ ಸುರಕ್ಷತಾ ಫೀಚರ್‌ಗಳ ಹೊರತಾಗಿ ವ್ಯಾಗನ್ ಆರ್ ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಮೂರು ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಒಳಗೊಂಡಂತೆ ಹೆಚ್ಚು ಅಗತ್ಯವಿರುವ ಯಾವುದೇ ಉಪಕರಣವನ್ನು ಒದಗಿಸುವುದಿಲ್ಲ.
ವ್ಯಾಗನ್ ಆರ್ ಪ್ರಸ್ತುತ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: LXi, VXi, ZXi ಮತ್ತು ZXi+. ಇದರ ಬೆಲೆಯನ್ನು ರೂ. 5.53 ಲಕ್ಷದಿಂದ ರೂ. 7.41 ಲಕ್ಷಗಳವರೆಗೆ (ಎಕ್ಸ್-ಶೋರೂಮ್ ದೆಹಲಿ) ನಿಗದಿಪಡಿಸಲಾಗಿದೆ.
ಇನ್ನಷ್ಟು ಇಲ್ಲಿ ಓದಿ : ವ್ಯಾಗನ್ ಆರ್ ಆನ್ ರೋಡ್ ಬೆಲೆ