• English
  • Login / Register

ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್‌ಶಿಪ್‌ಗಳಿಗೆ ತಲುಪಿರುವ Citroen C3 Aircross Automatic

ಸಿಟ್ರೊನ್ aircross ಗಾಗಿ shreyash ಮೂಲಕ ಜನವರಿ 23, 2024 01:33 pm ರಂದು ಪ್ರಕಟಿಸಲಾಗಿದೆ

  • 123 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೆಲವು ಸಿಟ್ರೊನ್ ಡೀಲರ್‌ಶಿಪ್‌ಗಳು ಈಗಾಗಲೇ C3 ಏರ್‌ಕ್ರಾಸ್ ಆಟೋಮ್ಯಾಟಿಕ್ ಬುಕಿಂಗ್‌ಗಳನ್ನು (ಅನಧಿಕೃತವಾಗಿ) ಸ್ವೀಕರಿಸುತ್ತಿವೆ

Citroen C3 Aircross Automatic

  • ಸಿಟ್ರೊನ್ C3 ಏರ್‌ಕ್ರಾಸ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುತ್ತದೆ.
  • ಇದನ್ನು SUV ಯ ಈಗಾಗಲೇ ಇರುವ 110 PS 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗೆ ಜೋಡಿಸಲಾಗುವುದು.
  • ಫೀಚರ್ ಗಳ ಪಟ್ಟಿಗೆ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ
  • ಆಟೋಮ್ಯಾಟಿಕ್ ವೇರಿಯಂಟ್ ಗಳು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ವೇರಿಯಂಟ್ ಗೆ ಹೋಲಿಸಿದರೆ ರೂ 1.3 ಲಕ್ಷದವರೆಗೆ ಪ್ರೀಮಿಯಂ ಅನ್ನು ಪಡೆಯಬಹುದು.

 ಸಿಟ್ರೊನ್ C3 ಏರ್‌ಕ್ರಾಸ್ ಈ ತಿಂಗಳ ಅಂತ್ಯದ ವೇಳೆಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ (AT) ರೂಪದಲ್ಲಿ ಅಪ್ಡೇಟ್ ಅನ್ನು ಪಡೆಯಲಿದೆ. ಜನವರಿ 29 ರಂದು ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಸಿಟ್ರೊನ್ C3 ಆಟೋಮ್ಯಾಟಿಕ್‌ನ ಆಟೋಮ್ಯಾಟಿಕ್‌ ವೇರಿಯಂಟ್ ಗಳು ಡೀಲರ್‌ಶಿಪ್‌ಗಳನ್ನು ತಲುಪಿವೆ. ಭಾರತದಾದ್ಯಂತ ಹಲವಾರು ಸಿಟ್ರೊನ್ ಡೀಲರ್‌ಶಿಪ್‌ಗಳು ಈಗಾಗಲೇ C3 ಏರ್‌ಕ್ರಾಸ್ ಆಟೋಮ್ಯಾಟಿಕ್ ಗಾಗಿ ಆಫ್‌ಲೈನ್ ಬುಕಿಂಗ್‌ಗಳನ್ನು ಸ್ವೀಕರಿಸಲು ಶುರುಮಾಡಿವೆ.

 Citroen C3 Aircross Automatic

 ಮೇಲಿನ ಚಿತ್ರದಲ್ಲಿ ತೋರಿಸಿದಂತೆ, ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಲಿವರ್ ಇರುವುದನ್ನು ಹೊರತುಪಡಿಸಿ ಸಿಟ್ರೊನ್ C3 ಏರ್‌ಕ್ರಾಸ್‌ನ AT ವೇರಿಯಂಟ್ ಗಳ ಕ್ಯಾಬಿನ್ ಡಿಸೈನ್ ಅದರ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ವೇರಿಯಂಟ್ ಗೆ ಹೋಲುತ್ತದೆ. C3 ಏರ್‌ಕ್ರಾಸ್‌ನ ಆಟೋಮ್ಯಾಟಿಕ್ ವರ್ಷನ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಯೂನಿಟ್ ಆಗಿದ್ದು, ಅದನ್ನು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗೆ (110 PS / 190 Nm) ಜೋಡಿಸಲಾಗಿದೆ. ಪ್ರಸ್ತುತ, ಸಿಟ್ರೊನ್ C3 ಏರ್‌ಕ್ರಾಸ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

 ಇದನ್ನು ಕೂಡ ಓದಿ: ಗ್ರಾಹಕರು ಇಂದಿನಿಂದ ಟಾಟಾ ಪಂಚ್ EV ಯ ಡೆಲಿವರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಬಹುದು

 

 ಫೀಚರ್ ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ

Citroen C3 Aircross Automatic Interior

 ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಹೊರತುಪಡಿಸಿ C3 ಏರ್‌ಕ್ರಾಸ್‌ನಲ್ಲಿ ಯಾವುದೇ ಫೀಚರ್ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. SUVಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್ ಗಳು ಮತ್ತು ಮೂರನೇ ಸಾಲಿನ ಸೀಟುಗಳಿಗೆ ಮೀಸಲಾದ ವೆಂಟ್ ನೊಂದಿಗೆ ಮ್ಯಾನುಯಲ್ AC ಅನ್ನು ಹೊಂದಿದೆ.

 C3 ಏರ್‌ಕ್ರಾಸ್‌ನಲ್ಲಿನ ಸುರಕ್ಷತಾ ಫೀಚರ್ ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿಯರ್ ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಸಿಟ್ರೊನ್ C3 ಏರ್‌ಕ್ರಾಸ್‌ನ ಆಟೋಮ್ಯಾಟಿಕ್ ವೇರಿಯಂಟ್ ಗಳು ಅವುಗಳ ಮ್ಯಾನುವಲ್ ವೇರಿಯಂಟ್ ಗಳಿಗೆ ಹೋಲಿಸಿದರೆ ಸರಿಸುಮಾರು ರೂ 1.3 ಲಕ್ಷದ ಪ್ರೀಮಿಯಂನಲ್ಲಿ ಬರುವ ನಿರೀಕ್ಷೆಯಿದೆ. ಪ್ರಸ್ತುತ, ಇದರ ಬೆಲೆ ರೂ 9.99 ಲಕ್ಷ ಮತ್ತು ರೂ 12.75 ಲಕ್ಷದ ನಡುವೆ ಇದೆ (ಎಕ್ಸ್ ಶೋರೂಂ ದೆಹಲಿ). ಇದು ಹೋಂಡಾ ಎಲಿವೇಟ್, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಫಾಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು MG ಆಸ್ಟರ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಬರಲಿದೆ.

 ಇನ್ನಷ್ಟು ಓದಿ: ಸಿಟ್ರೊನ್ C3 ಏರ್‌ಕ್ರಾಸ್‌ ಆನ್ ರೋಡ್ ಬೆಲೆ

was this article helpful ?

Write your Comment on Citroen aircross

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience