ಸಿಟ್ರಾನ್ ಇಸಿ3 ಯ ಟೆಸ್ಟ್ ಡ್ರೈವ್ ನಡೀತಿದೆ, ಈಗಲೇ ಪರಿಶೀಲಿಸಿ
ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಬೆಲೆಗಳು ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
- ರೂ.25,000 ಟೋಕನ್ ನೀಡಿ ಇಸಿ3 ಅನ್ನು ಕಾಯ್ದಿರಿಸಬಹುದು.
- ಇದು 29.2kWh ಬ್ಯಾಟರಿ ಪ್ಯಾಕ್ ಬಳಸುತ್ತದೆ ಹಾಗೂ 320km ರೇಂಜ್ ನೀಡುತ್ತದೆ.
- ಇದರ ಎಲೆಕ್ಟ್ರಿಕ್ ಮೋಟಾರ್ 57PS ಮತ್ತು 143Nm ಉತ್ಪಾದಿಸುತ್ತದೆಂದು ರೇಟ್ ಮಾಡಲಾಗಿದೆ.
- ಸಾಮಾನ್ಯ ಸಿ3ಯ ಆಧಾರಿತವಾಗಿದ್ದು, ಅದೇ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ.
- ಸಿಟ್ರಾನ್‌ನ ಬೆಲೆ ರೂ. 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು.
ಭಾರತದಲ್ಲಿನ ಸಿಟ್ರಾನ್‌ನ ಮೊದಲ ಎಲೆಕ್ಟ್ರಿಕ್ ಕೊಡುಗೆಯಾದ ಇಸಿ3, ಡೀಲರ್‌ಶಿಪ್‌ಗಳನ್ನು ತಲುಪಲು ಆರಂಭವಾಗಿದೆ. ಲಭ್ಯತೆಯನ್ನು ಅವಲಂಬಿಸಿಕೊಂಡು, ಗ್ರಾಹಕರು ಟೆಸ್ಟ್ ಡ್ರೈವ್‌ಗಳನ್ನು ಕೂಡಾ ತೆಗೆದುಕೊಳ್ಳಬಹುದು. ಇಸಿ3 ಹ್ಯಾಚ್‌ಬ್ಯಾಕ್‌ನ ಬೆಲೆಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದರೂ, ತಿಂಗಳಿನಿಂದ ಇದರ ಬುಕಿಂಗ್‌ಗಳು ತೆರೆದಿದ್ದು ರೂ 25,000 ಟೋಕನ್ ಮೊತ್ತವಾಗಿದೆ.
ಇದರ ಲುಕ್ ಹೇಗಿದೆ?
ಬಲ ಫ್ರಂಟ್ ಫೆಂಡರ್‌ನಲ್ಲಿರುವ ಇವಿ ಚಾರ್ಜಿಂಗ್ ಫ್ಲಾಪ್ ಹೊರತುಪಡಿಸಿದರೆ, ಇಸಿ3 ಯು ಸರಿಸುಮಾರು ಸಾಮಾನ್ಯ ಸಿ3 ಹ್ಯಾಚ್‌ಬ್ಯಾಕ್ ಕ್ರಾಸ್‌ಓವರ್‌ನಂತೆಯೇ ಕಾಣುತ್ತದೆ. ಶೋರೂಂಗೆ ಆಗಮಿಸಿರುವ ಯುನಿಟ್ ಅನಾವರಣದ ಅದೇ ಸ್ಪೆಸಿಫಿಕೇಶನ್‌ಗಳೊಂದಿಗೆ ಝೆಸ್ಟಿ ಆರೆಂಜ್ ಬಣ್ಣದಲ್ಲಿದ್ದರೆ, ರೂಫ್‌ನ ಬಣ್ಣ ಪೋಲಾರ್ ವೈಟ್ ಆಗಿದೆ.
ಇದನ್ನೂ ಓದಿ: ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನೊಂದಿಗೆ ಫ್ಲೀಟ್ ಮಾರ್ಕೆಟ್ ಪ್ರವೇಶಿಸಲಿದೆ ಸಿಟ್ರಾನ್
ಒಳಭಾಗದಲ್ಲಿ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಸಿ3 ನಲ್ಲಿ ಹೊಂದಿರುವ ಅದೇ ಸೌಲಭ್ಯಗಳನ್ನು ಹೊಂದಿದೆ. ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇನೊಂದಿಗಿನ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಮ್, ಮ್ಯಾನುವಲ್ ಎಸಿ ಹಾಗೂ ಡಿಜಿಟಲೈಸ್ಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಫೀಚರ್‌ಗಳಾಗಿ ಹೊಂದಿದೆ. ಗಮನಾರ್ಹ ವ್ಯತ್ಯಾಸವೆಂದರೆ, ಗಿಯರ್ ಸೆಲೆಕ್ಟರ್ ಬದಲಾಗಿ ಟಾಗಲ್ ಡ್ರೈವ್ ಮೋಡ್ ಸೆಲೆಕ್ಟರ್ ಇದೆ.
ಅವಳಿ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಹಾಗೂ ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳ ಮೂಲಕ ಪ್ರಯಾಣಿಕರ ಸುರಕ್ಷತೆಯ ಕುರಿತು ಗಮನ ಹರಿಸಲಾಗಿದೆ.
ಇದನ್ನೂ ನೋಡಿ: ಮತ್ತೆ ಕ್ಯಾಮರಾ ಕಣ್ಣಿಗೆ ಬಿದ್ದ 3-ಸಾಲಿನ ಸಿಟ್ರಾನ್ ಸಿ3, ಈ ಬಾರಿ ಕಾಣಸಿಕ್ಕಿದೆ ಇಂಟೀರಿಯರ್
ಇವಿ ಪವರ್‌ಟ್ರೇನ್ ಮತ್ತು ಚಾರ್ಜಿಂಗ್ ವಿವರಗಳು
ಈ ಕೆಳಗಿನ ಆಯ್ಕೆಗಳನ್ನು ಬಳಸಿಕೊಂಡು ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಚಾರ್ಜ್ ಮಾಡಬಹುದು:
15A ಪ್ಲಗ್ ಪಾಯಿಂಟ್ (10 ರಿಂದ 100%) |
10 ಗಂಟೆ ಮತ್ತು 30 ನಿಮಿಷಗಳು |
ಡಿಸಿ ಫಾಸ್ಟ್ ಚಾರ್ಜರ್ (10 ರಿಂದ 80%) |
57 ನಿಮಿಷಗಳು |
ಸಿಟ್ರಾನ್ ಇನ್ನೂ ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಬೆಲೆಗಳನ್ನು ಪ್ರಕಟಿಸಿಲ್ಲ, ಆದರೆ ರೂ. 11 ಲಕ್ಷ (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ಇದು ಲೈವ್ ಮತ್ತು ಫೀಲ್ ಎಂಬ ಕೇವಲ ಎರಡು ವೇರಿಯೆಂಟ್‌ಗಳನ್ನು ನೀಡಲಿದೆ, ವಿಶುವಲ್ ವೈಯಕ್ತೀಕರಣಗಳ ಆಯ್ಕೆಯನ್ನು ನೀಡಲಿದೆ. ಇದು ಟಾಟಾ ಟಿಯಾಗೋ ಇವಿ ಮತ್ತು ಟಾಟಾ ಟಿಗೋರ್ ಇವಿಯ ಪ್ರತಿಸ್ಪರ್ಧೆಯನ್ನು ಎದುರಿಸಲಿದೆ.