- + 6ಬಣ್ಣಗಳು
- + 32ಚಿತ್ರಗಳು
- shorts
- ವೀಡಿಯೋಸ್
ಎಂಜಿ ಕಾಮೆಟ್ ಇವಿ
ಎಂಜಿ ಕಾಮೆಟ್ ಇವಿ ನ ಪ್ರಮುಖ ಸ್ಪೆಕ್ಸ್
ರೇಂಜ್ | 230 km |
ಪವರ್ | 41.42 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 17.3 kwh |
ಚಾರ್ಜಿಂಗ್ ಸಮಯ | 3.3kw 7h (0-100%) |
ಆಸನ ಸಾಮರ್ಥ್ಯ | 4 |
no. of ಗಾಳಿಚೀಲಗಳು | 2 |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- ಆಟೋ ಡಿಮ್ಮಿಂಗ್ ಐಆರ್‌ವಿಎಮ್
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- voice commands
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- key ವಿಶೇಷಣಗಳು
- top ವೈಶಿಷ್ಟ್ಯಗಳು

ಕಾಮೆಟ್ ಇವಿ ಇತ್ತೀಚಿನ ಅಪ್ಡೇಟ್
ಎಮ್‌ಜಿ ಕಾಮೆಟ್ ಇವಿ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಎಮ್‌ಜಿ ವಿಂಡ್ಸರ್ ಇವಿಯೊಂದಿಗೆ ಮೊದಲು ಪರಿಚಯಿಸಲಾದ ಬ್ಯಾಟರಿ ಬಾಡಿಗೆ ಯೋಜನೆಯನ್ನು ಕಾಮೆಟ್ EV ಅಳವಡಿಸಿಕೊಂಡಿದೆ. ಈ ಮೂಲಕ ಇದರ ಬೆಲೆಯಲ್ಲಿ ಸುಮಾರು 2 ಲಕ್ಷ ರೂ.ನಷ್ಟು ಕಡಿಮೆಯಾಗುವಂತೆ ಮಾಡಿದೆ.
ಎಂಜಿ ಕಾಮೆಟ್ ಇವಿಯ ಬೆಲೆ ಎಷ್ಟು?
ಎಮ್‌ಜಿ ಕಾಮೆಟ್ ಇವಿಯ ಬೆಲೆಗಳು 7 ಲಕ್ಷ ರೂ.ನಿಂದ 9.65 ಲಕ್ಷ ರೂ.ವರೆಗೆ ಇರಲಿದೆ. ಇದು ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ ಲಭ್ಯವಿದೆ, ಇದು ಕಾರನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ಸ್ಕೀಮ್‌ನೊಂದಿಗೆ ಕಾಮೆಟ್ ಇವಿಯ ಬೆಲೆಗಳು 5 ಲಕ್ಷ ರೂ.ನಿಂದ 7.66 ಲಕ್ಷ ರೂ.ವರೆಗೆ ಇರುತ್ತದೆ, ಆದರೆ ನೀವು ಪ್ರತಿ ಕಿ.ಮೀಗೆ ರೂ. 2.5 ಚಂದಾದಾರಿಕೆ ವೆಚ್ಚವನ್ನು ಪಾವತಿಸಬೇಕಾಗುತ್ತದೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್).
ಕಾಮೆಟ್ ಇವಿಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?
ಎಮ್‌ಜಿ ಕಾಮೆಟ್ ಇವಿಯನ್ನು ಮೂರು ವೇರಿಯೆಂಟ್‌ಗಳನ್ನು ನೀಡಲಾಗುತ್ತಿದೆ:
-
ಎಕ್ಸಿಕ್ಯೂಟಿವ್
-
ಎಕ್ಸೈಟ್
-
ಎಕ್ಸ್‌ಕ್ಲೂಸಿವ್
ಎಕ್ಸ್‌ಕ್ಲೂಸಿವ್ ಟ್ರಿಮ್ ಆಧಾರಿತ ಸೀಮಿತ ಸಮಯದ '100-ಇಯರ್ ಲಿಮಿಟೆಡ್ ಎಡಿಷನ್' ವೇರಿಯೆಂಟ್ ಸಹ ಕೊಡುಗೆಯಲ್ಲಿದೆ.
ಕಾಮೆಟ್ ಇವಿಯಲ್ಲಿ ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಯಾವುದು ?
ಕಾಮೆಟ್ ಇವಿಯ ಎಕ್ಸೈಟ್ ವೇರಿಯೆಂಟ್ ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಆಗಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್, ಅದೇ ಸೈಜ್‌ನ ಡ್ರೈವರ್‌ನ ಡಿಸ್ಪ್ಲೇ ಮತ್ತು ಮ್ಯಾನ್ಯುವಲ್ ಎಸಿಯಂತಹ ಫೀಚರ್‌ಗಳನ್ನು ಪಡೆಯುತ್ತದೆ. ಇದರ ಸುರಕ್ಷತಾ ಸೂಟ್ ಎರಡು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಎಮ್‌ಜಿ ಕಾಮೆಟ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಎಮ್‌ಜಿ ಕಾಮೆಟ್ ಇವಿಯನ್ನು ಅದರ ಬೆಲೆಯನ್ನು ಪರಿಗಣಿಸಿದಾಗ ಉತ್ತಮ ರೀತಿಯ ಫೀಚರ್‌ಗಳನ್ನು ಪಡೆದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಎರಡು 10.25-ಇಂಚಿನ ಸ್ಕ್ರೀನ್‌ಗಳನ್ನು (ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ತಲಾ ಒಂದು ಸ್ಕ್ರೀನ್) ಹೈಲೈಟ್‌ಗಳು ಒಳಗೊಂಡಿವೆ. ಇದು ಮ್ಯಾನುವಲ್ ಎಸಿ, ಎರಡು ಸ್ಪೀಕರ್‌ಗಳು, ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳು (ಔಟ್‌ಸೈಡ್ ರಿಯರ್‌ವ್ಯೂ ಮಿರರ್‌ಗಳು) ಮತ್ತು ಕೀ ಲೆಸ್ ಎಂಟ್ರಿಯನ್ನು ಸಹ ಹೊಂದಿದೆ.
ಕಾಮೆಟ್ ಇವಿಯಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಎಮ್‌ಜಿ ಕಾಮೆಟ್ ಇವಿ 17.3 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು 42 ಪಿಎಸ್ ಮತ್ತು 110 ಎನ್‌ಎಮ್‌ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುವ ಹಿಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದು 230 ಕಿ.ಮೀ ವರೆಗಿನ ARAI-ಕ್ಲೈಮ್ ಮಾಡಿದ ರೇಂಜ್ ಅನ್ನು ಹೊಂದಿದೆ.
ಕಾಮೆಟ್ ಇವಿ ಎಷ್ಟು ಸುರಕ್ಷಿತವಾಗಿದೆ?
ಎಮ್‌ಜಿ ಕಾಮೆಟ್ ಇವಿಯನ್ನು ಭಾರತ್ ಎನ್‌ಸಿಎಪಿ ಅಥವಾ ಗ್ಲೋಬಲ್ ಎನ್‌ಸಿಎಪಿಯಲ್ಲಿ ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಿಲ್ಲ. ಇದರ ಸುರಕ್ಷತಾ ಸೂಟ್ ಕೂಡ ಬೇಸಿಕ್ ಆಗಿದೆ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಒಳಗೊಂಡಿದೆ. ಇದು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಸಹ ಪಡೆಯುತ್ತದೆ.
ಕಾಮೆಟ್ ಇವಿಯಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿವೆ?
ಎಮ್‌ಜಿ ಕಾಮೆಟ್ ಇವಿ ಐದು ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ:
-
ಅರೋರಾ ಸಿಲ್ವರ್
-
ಕ್ಯಾಂಡಿ ವೈಟ್
-
ಸ್ಟಾರ್ರಿ ಬ್ಲ್ಯಾಕ್
-
ಆಪಲ್ ಗ್ರೀನ್ (ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ)
-
ಕ್ಯಾಂಡಿ ವೈಟ್ (ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ)
-
ಬ್ರಿಟಿಷ್ ರೇಸಿಂಗ್ ಗ್ರೀನ್ (100-ವರ್ಷದ ಲಿಮಿಟೆಡ್ ಎಡಿಷನ್ ವೇರಿಯೆಂಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಿದೆ)
ನೀವು 2024ರ ಕಾಮೆಟ್ ಇವಿ ಖರೀದಿಸಬೇಕೇ?
ಎಮ್‌ಜಿ ಕಾಮೆಟ್ ಇವಿ ಒಂದು ಸಣ್ಣ ಕಾರಾಗಿದ್ದು, ಕಿರಿದಾದ ರಸ್ತೆಗಳಲ್ಲಿಯೂ ಸಹ ಯಾವುದೇ ಕಿರಿಕಿರಿಯಿಲ್ಲದೆ ಆರಾಮವಾಗಿ ಸಾಗಬಹುದು. ಇದು ಕ್ಯಾಬಿನ್‌ನಲ್ಲಿ ಹಲವು ಫೀಚರ್‌ಗಳನ್ನು ಹೊಂದಿದ್ದು ಮತ್ತು ದೊಡ್ಡ ಕಾರಿನಲ್ಲಿರುವ ಫೀಚರ್‌ನ ಅನುಭವವನ್ನು ನೀಡುತ್ತದೆ ಮತ್ತು ನಗರದ ರಸ್ತೆಗಳಲ್ಲಿಯೂ ಸುಲಭವಾಗಿ ಹ್ಯಾಂಡಲ್ ಮಾಡಬಹುದು. ಇದು ಕೈಗೆಟುಕುವ ಬೆಲೆಯಲ್ಲಿಯೂ ಬರುತ್ತದೆ, ಇದು ಆದರ್ಶವಾದ ಎರಡನೇ ಕಾರು ಆಗುವ ಲಕ್ಷಣಗಳನ್ನು ಹೊಂದಿದೆ.
ಹಾಗೆಯೇ, ನೀವು ಕೈಗೆಟುಕುವ ಬೆಲೆಯಲ್ಲಿ ಫ್ಯಾಮಿಲಿ ಇವಿಯನ್ನು ಹುಡುಕುತ್ತಿದ್ದರೆ, ಟಾಟಾ ಟಿಯಾಗೊ ಇವಿ ಉತ್ತಮ ಆಯ್ಕೆಯಾಗಿದೆ.
ಎಂಜಿ ಕಾಮೆಟ್ ಇವಿಗೆ ಪರ್ಯಾಯಗಳು ಯಾವುವು?
ಎಮ್‌ಜಿ ಕಾಮೆಟ್ ಇವಿ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ eC3 ಗೆ ಕೈಗೆಟುಕುವ ಪರ್ಯಾಯವಾಗಿದೆ.
ಕಾಮೆಟ್ ಇವಿ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)17.3 kwh, 230 km, 41.42 ಬಿಹೆಚ್ ಪಿ | Rs.7 ಲಕ್ಷ* | ||
ಕಾಮೆಟ್ ಇವಿ ಎಕ್ಸೈಟ್17.3 kwh, 230 km, 41.42 ಬಿಹೆಚ್ ಪಿ | Rs.8.08 ಲಕ್ಷ* | ||
ಅಗ್ರ ಮಾರಾಟ ಕಾಮೆಟ್ ಇವಿ ಎಕ್ಸೈಟ್ fc17.3 kwh, 230 km, 41.42 ಬಿಹೆಚ್ ಪಿ | Rs.8.56 ಲಕ್ಷ* | ||
ಕಾಮೆಟ್ ಇವಿ ಎಕ್ಸ್ಕ್ಲೂಸಿವ್17.3 kwh, 230 km, 41.42 ಬಿಹೆಚ್ ಪಿ | Rs.9.12 ಲಕ್ಷ* | ||
ಕಾಮೆಟ್ ಇವಿ ಎಕ್ಸ್ಕ್ಲೂಸಿವ್ fc17.3 kwh, 230 km, 41.42 ಬಿಹೆಚ್ ಪಿ | Rs.9.49 ಲಕ್ಷ* | ||
ಕಾಮೆಟ್ ಇವಿ 100 year ಲಿಮಿಟೆಡ್ ಎಡಿಷನ್(ಟಾಪ್ ಮೊಡೆಲ್)17.3 kwh, 230 km, 41.42 ಬಿಹೆಚ್ ಪಿ | Rs.9.65 ಲಕ್ಷ* |

ಎಂಜಿ ಕಾಮೆಟ್ ಇವಿ comparison with similar cars
![]() Rs.7 - 9.65 ಲಕ್ಷ* | ![]() Rs.7.99 - 11.14 ಲಕ್ಷ* | ![]() Rs.12.49 - 13.75 ಲಕ್ಷ* | ![]() Rs.9.99 - 14.44 ಲಕ್ಷ* | ![]() Rs.5 - 8.45 ಲಕ್ಷ* | ![]() Rs.9 - 17.80 ಲಕ್ಷ* | ![]() Rs.6 - 10.32 ಲಕ್ಷ* | ![]() Rs.11.13 - 20.51 ಲಕ್ಷ* |
Rating216 ವಿರ್ಮಶೆಗಳು | Rating276 ವಿರ್ಮಶೆಗಳು | Rating96 ವಿರ್ಮಶೆಗಳು | Rating117 ವಿರ್ಮಶೆಗಳು | Rating816 ವಿರ್ಮಶೆಗಳು | Rating50 ವಿರ್ಮಶೆಗಳು | Rating1.3K ವಿರ್ಮಶೆಗಳು | Rating408 ವಿರ್ಮಶೆಗಳು |
Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ |
Battery Capacity17.3 kWh | Battery Capacity19.2 - 24 kWh | Battery Capacity26 kWh | Battery Capacity25 - 35 kWh | Battery CapacityNot Applicable | Battery CapacityNot Applicable | Battery CapacityNot Applicable | Battery CapacityNot Applicable |
Range230 km | Range250 - 315 km | Range315 km | Range315 - 421 km | RangeNot Applicable | RangeNot Applicable | RangeNot Applicable | RangeNot Applicable |
Charging Time3.3KW 7H (0-100%) | Charging Time2.6H-AC-7.2 kW (10-100%) | Charging Time59 min| DC-18 kW(10-80%) | Charging Time56 Min-50 kW(10-80%) | Charging TimeNot Applicable | Charging TimeNot Applicable | Charging TimeNot Applicable | Charging TimeNot Applicable |
Power41.42 ಬಿಹೆಚ್ ಪಿ | Power60.34 - 73.75 ಬಿಹೆಚ್ ಪಿ | Power73.75 ಬಿಹೆಚ್ ಪಿ | Power80.46 - 120.69 ಬಿ ಹೆಚ್ ಪಿ | Power72.41 - 84.82 ಬಿಹೆಚ್ ಪಿ | Power114 - 118 ಬಿಹೆಚ್ ಪಿ | Power72 - 87 ಬಿಹೆಚ್ ಪಿ | Power113.42 - 157.81 ಬಿಹೆಚ್ ಪಿ |
Airbags2 | Airbags2 | Airbags2 | Airbags6 | Airbags2 | Airbags6 | Airbags2 | Airbags6 |
Currently Viewing | ಕಾಮೆಟ್ ಇವಿ vs ಟಿಯಾಗೋ ಇವಿ | ಕಾಮೆಟ್ ಇವಿ vs ಟಿಗೊರ್ ಇವಿ | ಕಾಮೆಟ್ ಇವಿ vs ಪಂಚ್ ಇವಿ | ಕಾಮೆಟ್ ಇವಿ vs ಟಿಯಾಗೋ | ಕಾಮೆಟ್ ಇವಿ vs syros | ಕಾಮೆಟ್ ಇವಿ vs ಪಂಚ್ | ಕಾಮೆಟ್ ಇವಿ vs ಸೆಲ್ಟೋಸ್ |

ಎಂಜಿ ಕಾಮೆಟ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್