2024 Kia Sonet; ಬಿಡುಗಡೆಗೆ ಮೊದಲೇ ಈ ಕಾರಿನ ADAS ಸೌಲಭ್ಯಗಳ ವಿವರಗಳು ಬಹಿರಂಗ
ಪರಿಷ್ಕೃತ ಎಸ್‌ಯುವಿಯ ADAS ವೈಶಿಷ್ಟ್ಯಗಳು, ಅಂತಹ 10 ಸೌಲಭ್ಯಗಳನ್ನು ಹೊಂದಿರುವ ಹ್ಯುಂಡೈ ವೆನ್ಯು N ಲೈನ್ ಕಾರಿನ ವೈಶಿಷ್ಟ್ಯಗಳೊಂದಿಗೆ ತಾಳೆಯಾಗುತ್ತವೆ
- ಪರಿಷ್ಕೃತ ಸೋನೆಟ್ ವಾಹನವು ಭಾರತದಲ್ಲಿ ಡಿಸೆಂಬರ್ 14ರಂದು ಬಿಡುಗಡೆಯಾಗಲಿದೆ.
- ಹ್ಯುಂಡೈ ವೆನ್ಯು ಕಾರಿನ ನಂತರ ಭಾಗಶಃ ADAS ಸೂಟ್ ಅನ್ನು ಪಡೆದಿರುವ ಎರಡನೇ ಸಬ್-4m SUV ವಾಹನವು ಇದಾಗಿದೆ
- ಇದರ ADAS ವೈಶಿಷ್ಟ್ಯಗಳು ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್ ಮತ್ತು ಹೈ ಬೀಮ್ ಅಸಿಸ್ಟ್ ಅನ್ನು ಹೊಂದಿವೆ.
- ಜತೆಗೆ 360 ಡಿಗ್ರಿ ಕ್ಯಾಮರಾ, 6 ಏರ್ ಬ್ಯಾಗುಗಳು (ಪ್ರಮಾಣಿತ) ಮತ್ತು ಡ್ಯುವಲ್ ಡಿಸ್ಪ್ಲೇಗಳನ್ನು ಪಡೆಯಲಿದೆ.
- ಮೊದಲಿನಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳಲ್ಲಿ ಬರಲಿದ್ದು, ಡೀಸೆಲ್ ಎಂಜಿನ್ ಪುನಃ 6 ಸ್ಪೀಡ್ MT ಆಯ್ಕೆಯನ್ನು ಪಡೆಯಲಿದೆ.
- ಇದು 2024ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
ಪರಿಷ್ಕೃತ ಕಿಯಾ ಸೋನೆಟ್ ಕಾರಿನ ಬಿಡುಗಡೆಗೆ ಒಂದು ವಾರ ಮಾತ್ರವೇ ಬಾಕಿ ಇದ್ದು, ಸೋರಿಕೆಯಾದ ಅನೇಕ ಸುದ್ದಿಗಳು ಮತ್ತು ಟೀಸರ್ ಗಳು ಆನ್ಲೈನ್ ನಲ್ಲಿ ಹರಿದಾಡುತ್ತಿದ್ದು ಈ ಮಾರ್ಪಡಿಸಿದ SUV ಯ ಕುರಿತು ಹೊಸ ಮಾಹಿತಿಯನ್ನು ಹೊರಗೆಡಹಿವೆ. ಇತ್ತೀಚಿನ ಸುದ್ದಿಗಳು ಸೋನೆಟ್ ಕಾರಿನಲ್ಲಿ ಡೀಸೆಲ್ - ಮ್ಯಾನುವಲ್ ಆಯ್ಕೆಯ ವಾಪಸಾತಿಯ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದು, ಇದೀಗ ಈ ವಾಹನವು ಆಯ್ದ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಸಹ ವಾಪಾಸ್ ಬರುವುದು ದೃಢಪಟ್ಟಿದೆ. ಹ್ಯುಂಡೈ ವೆನ್ಯು N ಲೈನ್ ನಂತರ ಈ ಸುರಕ್ಷಾ ತಂತ್ರಜ್ಞಾನವನ್ನು ಪಡೆದ ಎರಡನೇ ಸಬ್4m SUV ಇದಾಗಿದೆ.
ADAS ವೈಶಿಷ್ಟ್ಯಗಳ ವಿವರಗಳು
ಸೋರಿಕೆಯಾದ ದಾಖಲೆಗಳ ಪ್ರಕಾರ ಪರಿಷ್ಕೃತ ಕಿಯಾ ಸೋನೆಟ್ ಕಾರು 10 ADAS ವೈಶಿಷ್ಟ್ಯಗಳೊಂದಿಗೆ ಬರಲಿದೆ. ಇದರಲ್ಲಿ ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ಡ್ರೈವರ್ ಅಟೆಂಟಿವ್ ನೆಸ್ ಅಲರ್ಟ್ ಮತ್ತು ಲೀಡಿಂಗ್ ವೆಹಿಕಲ್ ಡಿಪಾರ್ಚರ್ ಅಲರ್ಟ್ ಇತ್ಯಾದಿಗಳು ಸೇರಿವೆ. ಈ ADAS ವಿಶೇಷತೆಗಳು ಹ್ಯುಂಡೈ ವೆನ್ಯು N ಲೈನ್ ಕಾರಿನಲ್ಲೂ ಲಭ್ಯ. ಆದರೆ ಎರಡೂ SUV ಗಳ ADAS ಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಅನ್ನು ಹೊಂದಿಲ್ಲ. ಅಲ್ಲದೆ, ಸೋರಿಕೆಯಾಗಿರುವ ದಾಖಲೆಗಳ ಪ್ರಕಾರ ಕಿಯಾ ಸಂಸ್ಥೆಯು ADAS ಅನ್ನು 2024 ಸೋನೆಟ್ ಕಾರಿನ ಫುಲ್ಲಿ ಲೋಡೆಡ್ X ಲೈನ್ ಟ್ರಿಮ್ ನಲ್ಲಿ ಮಾತ್ರವೇ ಒದಗಿಸಲಿದೆ. ಅಂದರೆ ನೀವು ಮ್ಯಾಟ್ ಗ್ರೇ ಬಣ್ಣದ ವಾಹನದಲ್ಲಿ ಮಾತ್ರವೇ ಈ ತಂತ್ರಜ್ಞಾನವನ್ನು ಪಡೆಯಬಹುದು. ಆದರೆ ಅಂತಿಮವಾಗಿ ಬಿಡುಗಡೆಯಾಗುವ ಮಾದರಿ ಬದಲಾಗಬಹುದು.
ಇದರಲ್ಲಿರುವ ಇತರ ವೈಶಿಷ್ಟ್ಯಗಳು
ಕಿಯಾ ಸಂಸ್ಥೆಯು ಹೊಸ ಸೋನೆಟ್ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳು (ಪ್ರಮಾಣಿತ), ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಹಿಲ್ ಹೋಲ್ಡ್ ಅಸಿಸ್ಟ್, ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್ ಗಳನ್ನು ಒದಗಿಸಲಿದೆ.
ಅಲ್ಲದೆ ಕಿಯಾದ ಈ SUV ಯಲ್ಲಿ 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, 10.25 ಇಂಚಿನ ಟಚ್ ಸ್ಕ್ರೀನ್ ವ್ಯವಸ್ಥೆ, ಕ್ರೂಸ್ ಕಂಟ್ರೋಲ್, ಸನ್ ರೂಫ್ ಮತ್ತು 360 ಡಿಗ್ರಿ ಕ್ಯಾಮರಾವನ್ನು ಸಹ ಕಾಣಬಹುದಾಗಿದೆ. ಜತೆಗೆ ಈಗ ನಿವೃತ್ತಿಯನ್ನು ಕಾಣಲಿರುವ ಮಾದರಿಯಲ್ಲಿರುವ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್ ಲೆಸ್ ಫೋನ್ ಚಾರ್ಜಿಂಗ್, ಮತ್ತು ಅಟೋ AC ಫಂಕ್ಷನ್ ಅನ್ನು ಈ ವಾಹನವು ಸಹ ಹೊಂದಿರಲಿದೆ.
ಇದನ್ನು ಸಹ ಓದಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಇದರ ಎಂಜಿನ್ ಹೇಗಿರಲಿದೆ?
ಹೊಸ ಸೋನೆಟ್ ವಾಹನವು ಹಿಂದಿನ ವಾಹನದಲ್ಲಿದ್ದ ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ. ಆದರೆ ಒಂದು ಸಣ್ಣ ಬದಲಾವಣೆಯನ್ನು ಮಾಡಲಾಗಿದೆ. ಇದು 83 PS 1.2 ಲೀಟರ್ ಪೆಟ್ರೋಲ್ ಮತ್ತು 120 PS 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮುಂದುವರಿಸಲಿದೆ. ಮೊದಲನೆಯ ಆಯ್ಕೆಯು 5 ಸ್ಪೀಡ್ MT ಯನ್ನು ಪಡೆದರೆ ಎರಡನೆಯದ್ದು 6 ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು 7 ಸ್ಪೀಡ್ DCT ಆಯ್ಕೆಗಳೊಂದಿಗೆ ಬರಲಿದೆ.
ಕಿಯಾ ಸಂಸ್ಥೆಯು ಈ ಹಿಂದಿನಂತೆಯೇ 116 PS 1.5 ಲೀಟರ್ ಡೀಸೆಲ್ ಯೂನಿಟ್ ಅನ್ನು ಅದೇ 6 ಸ್ಪೀಡ್ iMT ಮತ್ತು 6 ಸ್ಪೀಡ್ AT ಟ್ರಾನ್ಸ್ ಮಿಶನ್ ಗಳ ಜೊತೆಗೆ ನೀಡಲಿದೆ. ಆದರೆ ಈ ಎಂಜಿನ್ ಜೊತೆಗೆ 6 ಸ್ಪೀಡ್ MT ಗೇರ್ ಬಾಕ್ಸ್ ಆಯ್ಕೆಯನ್ನು ಮತ್ತೆ ಪರಿಚಯಿಸಲಿದೆ.
ನಿರೀಕ್ಷಿತ ಬೆಲೆ ಮತ್ತು ಮಾರುಕಟ್ಟೆಗೆ ಆಗಮನ
ನಮ್ಮ ಪ್ರಕಾರ ಪರಿಷ್ಕೃತ ಕಿಯಾ ಸೋನೆಟ್ ಕಾರು 2024ರ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ವಾಹನವು ಸುಮಾರು ರೂ. 8 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಟಾಟಾ ನೆಕ್ಸನ್, ಮಹೀಂದ್ರಾ XUV300, ಹ್ಯುಂಡೈ ವೆನ್ಯು, ಮಾರುತಿ ಬ್ರೆಜ್ಜಾ, ನಿಸಾನ್ ಮ್ಯಾಗ್ನೈಟ್, ರೆನೋ ಕೈಗರ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗಿನ ಸ್ಪರ್ಧೆಯನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್