2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...
ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 18, 2023 11:23 am ರಂದು ಪ್ರಕಟಿಸಲಾಗಿದೆ
- 89 Views
- ಕಾಮೆಂಟ್ ಅನ್ನು ಬರೆಯಿರಿ
2024 ಸೋನೆಟ್ ವಾಹನವು iMT ಆಯ್ಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಡೀಸೆಲ್ - ಮ್ಯಾನುವಲ್ ಆಯ್ಕೆಯನ್ನು ಮರುಪರಿಚಯಿಸಿದೆ
- ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲೇ ಪರಿಷ್ಕೃತ ಕಿಯಾ ಸೋನೆಟ್ ವಾಹನದ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದೆ.
- ಕಿಯಾ ಸಂಸ್ಥೆಯು ಪರಿಷ್ಕೃತ SUV ಯನ್ನು ಏಳು ವೇರಿಯಂಟ್ ಗಳಲ್ಲಿ ನೀಡಲಿದೆ.
- ಡೀಸೆಲ್ ಎಂಜಿನ್ ಈಗ ಮೂರು ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ಪಡೆಯಲಿದೆ: MT, iMT ಮತ್ತು AT.
- ಟಾಪ್ ಸ್ಪೆಕ್ ವೇರಿಯಂಟ್ ಗಳನ್ನು ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳ ಜೊತೆಗೆ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಗಳ ಜೊತೆಗೆ ಮಾತ್ರವೇ ನೀಡಲಾಗುತ್ತದೆ.
- 360 ಡಿಗ್ರಿ ಕ್ಯಾಮರಾ, ಪವರ್ಡ್ ಡ್ರೈವರ್ ಸೀಟ್, ಮತ್ತು ADAS ಇದರಲ್ಲಿರುವ ಇತರ ವೈಶಿಷ್ಟ್ಯಗಳೆನಿಸಿವೆ.
- ಇದು 2024ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
ಕಿಯಾ ಸೋನೆಟ್ ಫೇಸ್ ಲಿಫ್ಟ್ ವಾಹನವು ಭಾರತದಲ್ಲಿ ಇತ್ತೀಚೆಗಷ್ಟೇ ಅನಾವರಣಗೊಂಡಿದ್ದು, ಡಿಸೆಂಬರ್ 20ರಿಂದ ಬುಕಿಂಗ್ ಆರಂಭವಾಗಲಿದೆ. ಕಿಯಾ ಸಂಸ್ಥೆಯು ಇದರ ಬೆಲೆಯನ್ನು ಹೊರತುಪಡಿಸಿ ವೇರಿಯಂಟ್ ವಾರು ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳ ಪರಿಷ್ಕೃತ ಪಟ್ಟಿಯನ್ನು ಘೋಷಿಸಿದೆ. ಇದರಲ್ಲಿ ದೊರೆಯಲಿರುವ ಪವರ್ ಟ್ರೇನ್ ಸಂಯೋಜನೆಗಳನ್ನು ನೋಡೋಣ.
ವೇರಿಯಂಟ್ ವಾರು ಆಯ್ಕೆ
ವೇರಿಯಂಟ್ |
HTE |
HTK |
HTK+ |
HTX |
HTX+ |
GTX+ |
X-Line |
1.2-ಲೀಟರ್ ಪೆಟ್ರೋಲ್ 5MT |
✅ |
✅ |
✅ |
– |
– |
– |
– |
1-ಲೀಟರ್ ಟರ್ಬೊ ಪೆಟ್ರೋಲ್ 6iMT |
– |
– |
✅ |
✅ |
✅ |
– |
– |
1-ಲೀಟರ್ ಟರ್ಬೊ ಪೆಟ್ರೋಲ್ 7DCT |
– |
– |
– |
✅ |
– |
✅ |
✅ |
1.5-ಲೀಟರ್ ಡೀಸೆಲ್ 6MT |
✅ |
✅ |
✅ |
✅ |
✅ |
– |
– |
1.5-ಲೀಟರ್ ಡೀಸೆಲ್ 6iMT |
– |
– |
– |
✅ |
✅ |
– |
– |
1.5-ಲೀಟರ್ ಡೀಸೆಲ್ 6AT |
– |
– |
– |
✅ |
– |
✅ |
✅ |
ಕೋಷ್ಟಕದಲ್ಲಿ ಉಲ್ಲೇಖಿಸಿದಂತೆ ಕಿಯಾ ಸಂಸ್ಥೆಯು ಎಲ್ಲಾ ಟ್ರಾನ್ಸ್ ಮಿಶನ್ ಆಯ್ಕೆಗಳೊಂದಿಗೆ ಎಲ್ಲಾ ವೇರಿಯಂಟ್ ಗಳನ್ನು ನೀಡುತ್ತಿಲ್ಲ. ಹೈಯರ್ ಸ್ಪೆಕ್ HTX ವೇರಿಯಂಟ್, ಅಧಿಕ ಸಂಖ್ಯೆಯ ಪವರ್ ಟ್ರೇನ್ ಗಳ ಜೊತೆಗೆ ಬರುತ್ತದೆ. ಇದೇ ವೇಳೆ, ಡೀಸೆಲ್ ಮ್ಯಾನುವಲ್ ಕೋಂಬೋ ಅನ್ನು ಅಧಿಕ ಸಂಖ್ಯೆಯ ವೇರಿಯಂಟ್ ಗಳೊಂದಿಗೆ ನೀಡಲಾಗುತ್ತದೆ.
ಪವರ್ ಟ್ರೇನ್ ಗಳ ವಿವರಗಳು:
ಕಿಯಾ ಸೋನೆಟ್ ಈಗಲೂ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಈ ಪರಿಷ್ಕೃತ SUVಯನ್ನು ಐದು ಟ್ರಾನ್ಸ್ ಮಿಶನ್ ಆಯ್ಕೆಗಳೊಂದಿಗೆ ಪಡೆಯಬಹುದಾಗಿದೆ. ಇದರ ಮಾಹಿತಿ ಇಲ್ಲಿದೆ:
-
1.2 ಲೀಟರ್ ಪೆಟ್ರೋಲ್ (83 PS/115 Nm): 5-ಸ್ಪೀಡ್ MT
-
1 ಲೀಟರ್ ಟರ್ಬೊ ಪೆಟ್ರೋಲ್ (120 PS/172 Nm): 6-ಸ್ಪೀಡ್ iMT, 7-ಸ್ಪೀಡ್ DCT
-
1.5 ಲೀಟರ್ ಡೀಸೆಲ್ (116 PS/250 Nm): 6-ಸ್ಪೀಡ್ MT (ಹೊಸತು), 6-ಸ್ಪೀಡ್ iMT, 6-ಸ್ಪೀಡ್ AT
ಕಿಯಾ ಸಂಸ್ಥೆಯ ಎಲ್ಲಾ ಉತ್ಪನ್ನಗಳಿಂದ 2023ರ ಆರಂಭದಲ್ಲಿ ತೆಗೆದು ಹಾಕಲಾಗಿದ್ದ ಡೀಸೆಲ್ ಮ್ಯಾನುವಲ್ ಕೋಂಬೊ ಮತ್ತೆ ವಾಪಾಸಾಗಿದೆ.
ಇದನ್ನು ಸಹ ಓದಿರಿ: ಭಾರತದಲ್ಲಿ ಕಿಯಾದಲ್ಲಿ 2023ರಲ್ಲಿ ಕಾಣಿಸಿಕೊಂಡು ಎಲ್ಲಾ ಹೊಸ ವೈಶಿಷ್ಟ್ಯಗಳು
ಸಲಕರಣೆ ಮತ್ತು ಸುರಕ್ಷತೆ
2024 ಸೋನೆಟ್ ವಾಹನವು 10.25 ಇಂಚಿನ ಡಿಸ್ಪ್ಲೇ (ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೊಟೈನ್ ಮೆಂಟ್ ಗಾಗಿ), 4 ವೇ ಪವರ್ಡ್ ಡ್ರೈವರ್ ಸೀಟ್, 70+ ಸಂಪರ್ಕಿತ ಕಾರ್ ಟೆಕ್ ವೈಶಿಷ್ಟ್ಯಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಸನ್ ರೂಫ್ ಮತ್ತು ಬಿಲ್ಟ್ ಇನ್ ಏರ್ ಪ್ಯೂರಿಫೈರ್ ಜೊತೆಗೆ ಬರಲಿದೆ.
ಇದರ ಸುರಕ್ಷತಾ ಪಟ್ಟಿಯಲ್ಲಿ 10 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು (ADAS), ಆರು ಏರ್ ಬ್ಯಾಗ್ ಗಳು (ಈಗ ಪ್ರಮಾಣಿತ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360 ಡಿಗ್ರಿ ಕ್ಯಾಮರಾ, ಮತ್ತು ಮುಂದಿನ ಹಾಗೂ ಹಿಂದಿನ ಪಾರ್ಕಿಂಗ್ ಸೆನ್ಸಾರ್ ಒಳಗೊಂಡಿವೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧೆ
ಪರಿಷ್ಕೃತ ಕಿಯಾ ಸೋನೆಟ್ ಕಾರು 2024ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ರೂ. 8 ಲಕ್ಷದಷ್ಟು (ಎಕ್ಸ್ - ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಈ ಪರಿಷ್ಕೃತ ಸಬ್-4m SUV ಯು ಹ್ಯುಂಡೈ ವೆನ್ಯು, ಮಾರುತಿ ಬ್ರೆಜ್ಜಾ, ಮಹೀಂದ್ರಾ XUV300, ಟಾಟಾ ನೆಕ್ಸನ್, ನಿಸಾನ್ ಮ್ಯಾಗ್ನೈಟ್, ರೆನೋ ಕೈಗರ್ ಹಾಗೂ ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ SUV ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಿಯಾ ಸೋನೆಟ್ ಅಟೋಮ್ಯಾಟಿಕ್
0 out of 0 found this helpful