Kushaqನಿಂದ Skodaದ ಹೊಸ ಸಬ್-4m ಎಸ್‌ಯುವಿ ಪಡೆಯಬಹುದಾದ 5 ವಿಷಯಗಳು
ಮಾರ್ಚ್ 01, 2024 06:19 pm ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಸ್ಕೋಡಾ ಎಸ್‌ಯುವಿಯನ್ನು 2025ರ ಮಾರ್ಚ್‌ನೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಇದರ ಎಕ್ಸ್ ಶೋರೂಂ ಬೆಲೆಗಳು 8.5 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ
2025 ಕ್ಕೆ ನಿಗದಿಪಡಿಸಲಾದ ದೊಡ್ಡ ಹೊಸ ಬಿಡುಗಡೆಗಳಲ್ಲಿ ಹೊಸ ಸ್ಕೋಡಾ ಸಬ್ -4ಎಮ್ ಎಸ್‌ಯುವಿಯು ಒಂದು ಆಗಿರುತ್ತದೆ, ಇದನ್ನು ಈಗಾಗಲೇ ದೃಢೀಕರಿಸಲಾಗಿದೆ. ಇದು ಸ್ಕೋಡಾದ ಭಾರತದ ಕಾರುಗಳ ಪಟ್ಟಿಯಲ್ಲಿ ಕುಶಾಕ್‌ನ ಕೆಳಗೆ ಸ್ಲಾಟ್ ಆಗುತ್ತದೆ ಮತ್ತು ಈ ಕಾರು ತಯಾರಕರ ಹೊಸ ಎಂಟ್ರಿ ಲೆವೆಲ್ ಎಸ್‌ಯುವಿಯಾಗಿದೆ.
ಹೊಸ ಸಬ್-4ಎಮ್ ಎಸ್‌ಯುವಿ ಮತ್ತು ಸ್ಕೋಡಾ ಕುಶಾಕ್ ನಡುವೆ ಸಾಮಾನ್ಯವಾಗಿರುವ ಐದು ವಿಷಯಗಳು ಇಲ್ಲಿವೆ:
ಪ್ರೀಮಿಯಂ ಡಿಸೈನ್ ಮತ್ತು ಸ್ಟೈಲಿಂಗ್
ಸ್ಕೋಡಾ ತನ್ನ ಮುಂಬರುವ ಸಬ್-4ಎಮ್ ಎಸ್‌ಯುವಿಯ ಮೊದಲ ವಿನ್ಯಾಸದ ಸ್ಕೆಚ್ ಟೀಸರ್ ಅನ್ನು ಆಧರಿಸಿ, ಅದರ ಫ್ಯಾಸಿಯಾವು ಪ್ರೀಮಿಯಂ ಸ್ಟೈಲಿಂಗ್ ಮತ್ತು ಕುಶಾಕ್‌ನಂತಹ ಬುಚ್ ವಿನ್ಯಾಸದ ಸ್ಪರ್ಶವನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ, ಆಧುನಿಕ ಸ್ಕೋಡಾ ಕೊಡುಗೆಗಳಲ್ಲಿ ಕಂಡುಬರುವಂತೆ ಇದು ಸ್ಪ್ಲಿಟ್-ಹೆಡ್‌ಲೈಟ್ ಸೆಟಪ್ ಮತ್ತು ಗ್ರಿಲ್‌ಗಾಗಿ ಬಟರ್‌ಫ್ಲೈ ಮಾದರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಬಹುದು.
ಒಂದೇ ಫ್ಲ್ಯಾಟ್‌ಫಾರ್ಮ್
ಸ್ಕೋಡಾ ತನ್ನ ಎಸ್‌ಯುವಿ ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಗೆ ಸ್ಪರ್ಧೆ ಒಡ್ಡಲು ಕುಶಾಕ್‌ನ MQB-A0-IN ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುತ್ತದೆ. ಆದಾಗಿಯೂ ಇದನ್ನು ಸಬ್-4ಎಮ್ ಸೆಗ್ಮೆಂಟ್‌ನ ನಿಯಮಗಳಿಗೆ ಬದ್ಧವಾಗಿರುವಂತೆ ಇದನ್ನು ರೂಪಿಸಲಾಗುವುದು.
ಮಾಹಿತಿಗಾಗಿ, ಈ ಪ್ಲಾಟ್‌ಫಾರ್ಮ್ ಅನ್ನು ಸ್ಕೋಡಾ ಸ್ಲಾವಿಯಾ ಸೆಡಾನ್ ಮತ್ತು ವೋಕ್ಸ್‌ವ್ಯಾಗನ್‌ನ ಎಸ್‌ಯುವಿ ಮತ್ತು ಸೆಡಾನ್‌ನ ಅವಳಿಗಳಾದ ಟೈಗುನ್ ಮತ್ತು ವರ್ಟಸ್‌ಗಳಿಗೆ ಸಹ ಇದು ಅಧಾರವಾಗಿದೆ.
ಒಂದೇ ರೀತಿಯ ವೈಶಿಷ್ಟ್ಯಗಳ ಪಟ್ಟಿ
ಕುಶಾಕ್‌ನ 10-ಇಂಚಿನ ಟಚ್‌ಸ್ಕ್ರೀನ್ ಚಿತ್ರವನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ
ಕುಶಾಕ್ 10-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಸೌಕರ್ಯಗಳೊಂದಿಗೆ ಸಾಕಷ್ಟು ಸುಸಜ್ಜಿತವಾದ ಕಾಂಪ್ಯಾಕ್ಟ್ SUV ಆಗಿದೆ. ಸ್ಕೋಡಾದ ಹೊಸ ಸಬ್-4ಎಮ್ ಎಸ್‌ಯುವಿಯಲ್ಲಿಯೂ ಸಹ ಮೇಲೆ ತಿಳಿಸಲಾದ ಕೆಲವು ಪ್ರಮುಖ ವೈಶಿಷ್ಟ್ಯಗಳು (ಎಲ್ಲವೂ ಅಲ್ಲ) ಲಭ್ಯವಾಗುವಂತೆ ನಾವು ನಿರೀಕ್ಷಿಸುತ್ತಿದ್ದೇವೆ. ಈ ಮೂಲಕ ಅದರ ವೈಶಿಷ್ಟ್ಯ-ಲೋಡ್ ಮಾಡಿದ ಪ್ರತಿಸ್ಪರ್ಧಿಗಳ ಜೊತೆಗೆ ಸ್ಪರ್ಧಾತ್ಮಕ ಸ್ಥಾನದಲ್ಲಿ ಇರಿಸಬಹುದು.
ಇದಕ್ಕೆ ಸಂಬಂಧಿಸಿದಂತೆ: Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ
ಒಂದು ದೃಢವಾದ ಸುರಕ್ಷತಾ ಸೆಟಪ್
ಸುರಕ್ಷತೆಯ ದೃಷ್ಟಿಯಿಂದಲೂ, ಹೊಸ ಸ್ಕೋಡಾ ಎಸ್‌ಯುವಿಯು ಕುಶಾಕ್‌ನೊಂದಿಗೆ ಕೆಲವು ಸಾಮಾನ್ಯತೆಗಳನ್ನು ಹೊಂದಿದೆ ಎಂದು ನಾವು ನಿರೀಕ್ಷಿಸಬಹುದು, ಇದರ ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸ್ಕೋಡಾ ತನ್ನ ಮುಂಬರುವ ಸಬ್-4ಎಮ್ ಎಸ್‌ಯುವಿಯನ್ನು 360-ಡಿಗ್ರಿ ಕ್ಯಾಮೆರಾದೊಂದಿಗೆ ಸಜ್ಜುಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ, ಇದು ಈಗಾಗಲೇ ಮಾರುತಿ ಬ್ರೆಝಾ ಮತ್ತು ಕಿಯಾ ಸೋನೆಟ್ ಸೇರಿದಂತೆ ಅದರ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿದೆ. ಆದಾಗಿಯೂ, ಸ್ಕೋಡಾ ತನ್ನ ಮುಂಬರುವ ಭಾರತದ ಮೊಡೆಲ್‌ಗಳಿಗಾಗಿ ADAS ತಂತ್ರಜ್ಞಾನವನ್ನು ನೀಡಲು ಪ್ರಾರಂಭಿಸುತ್ತದೆಯೇ ಎಂದು ಹೇಳುವುದು ಈಗ ಸ್ವಲ್ಪ ಕಷ್ಟವಾಗಬಹುದು.
ಕುಶಾಕ್‌ನ ಸುರಕ್ಷತಾ ಸೌಲಭ್ಯಗಳ ಮತ್ತೊಂದು ಪ್ರಮುಖ ಅಂಶವೆಂದರೆ ಜಾಗತಿಕ NCAP ಟೆಸ್ಟ್‌ನಲ್ಲಿ ಪಡೆದಿರುವ ಫೈವ್ ಸ್ಟಾರ್ ರೇಟಿಂಗ್. ಹೊಸ ಎಸ್‌ಯುವಿ ಸಹ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ, ಇದು ಪ್ರಯಾಣಿಕರ ರಕ್ಷಣೆಯನ್ನು ಅದೇ ಗುಣಮಟ್ಟದಲ್ಲಿ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಸಣ್ಣ ಪವರ್‌ಟ್ರೇನ್
ಕುಶಾಕ್ ಎರಡು ಟರ್ಬೊ-ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ಬರುತ್ತದೆ, ಮೊದಲನೆಯದು 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಎರಡನೆಯದು 1.5-ಲೀಟರ್ ಟರ್ಬೊ-ಪೆಟ್ರೋಲ್. ಆದರೆ ಸ್ಕೋಡಾ ತನ್ನ ಹೊಸ ಎಸ್‌ಯುವಿಯಲ್ಲಿ ಸಣ್ಣ ಪವರ್‌ಟ್ರೇನ್ ಅನ್ನು ನೀಡುವ ಸಾಧ್ಯತೆಯಿದೆ. ಇದು ಸಣ್ಣ ಡಿಸ್‌ಪ್ಲೇಸ್‌ಮೆಂಟ್ ಇಂಜಿನ್‌ಗಳಿಗೆ ಸೆಗ್ಮೆಂಟ್‌ನ ಪ್ರಯೋಜನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ಹೊಸ ಮೊಡೆಲ್ ಅದೇ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಇದನ್ನು ಸಹ ಓದಿ: ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು
ಬಿಡುಗಡೆಯ ಸಮಯ, ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಸಬ್-4ಎಮ್ ಎಸ್‌ಯುವಿಯು 2025ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತು ಇದರ ಎಕ್ಸ್ ಶೋರೂಂ ಬೆಲೆಗಳು 8.5 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಮಹೀಂದ್ರಾ XUV300, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4ಎಮ್ ಕ್ರಾಸ್ಒವರ್ ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ಇನ್ನಷ್ಟು ಓದಿ : ಕುಶಾಕ್ ಆನ್ ರೋಡ್‌ಬೆಲೆ