Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ
ಫೆಬ್ರವಾರಿ 28, 2024 05:57 pm ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
SUV ಯ ಹೆಸರು ಸ್ಕೋಡಾದ ಮಾಮೂಲಿ SUV-ನಾಮಕರಣ ಶೈಲಿಯನ್ನು ಅನುಸರಿಸಿ 'K' ಇಂದ ಶುರುವಾಗಿ ಮತ್ತು 'Q' ನೊಂದಿಗೆ ಕೊನೆಗೊಳ್ಳಬೇಕು
- ಸ್ಪರ್ಧೆಗೆ ಎಂಟ್ರಿಗಳನ್ನು ಏಪ್ರಿಲ್ 12, 2024 ರವರೆಗೆ ಸಲ್ಲಿಸಬಹುದು.
- ಒಬ್ಬ ವಿಜೇತರು ಹೊಸ SUV ಅನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ, ಹಾಗೆಯೇ 10 ಅದೃಷ್ಟಶಾಲಿ ವಿಜೇತರು ಪ್ರೇಗ್‌ಗೆ ಪ್ರವಾಸವನ್ನು ಗೆಲ್ಲಬಹುದು.
- ಹೆಸರಿನ ಶೈಲಿಯು ಸ್ಕೋಡಾದ ಇತರ SUVಗಳಾದ ಕೊಡಿಯಾಕ್, ಕುಶಾಕ್ ಮತ್ತು ಕರೋಕ್‌ಗಳಿಗೆ ಅನುಗುಣವಾಗಿರಬೇಕು.
- ಸ್ಕೋಡಾದ ಶಾರ್ಟ್‌ಲಿಸ್ಟ್ ಮಾಡಿದ ಹೆಸರುಗಳಲ್ಲಿ ಕ್ವಿಕ್, ಕೈಲಾಕ್ ಮತ್ತು ಕೈರೋಕ್ ಸೇರಿವೆ.
- ಸ್ಕೋಡಾ ಸಬ್-4m SUV ಬೆಲೆಯು ರೂ 8.50 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋ ರೂಂ).
ಮಾರ್ಚ್ 2025 ರ ವೇಳೆಗೆ ಮಾರುಕಟ್ಟೆಗೆ ಪ್ರವೇಶಿಸಲು ಹೊಸ ಮೇಡ್-ಇನ್-ಇಂಡಿಯಾ ಸ್ಕೋಡಾ ಸಬ್-4m SUV ತಯಾರಾಗಿದೆ ಎಂದು ಇತ್ತೀಚೆಗೆ ದೃಢಪಡಿಸಲಾಗಿದೆ. ಆದರೆ, ಈ ಹೊಸ SUVಯ ಹೆಸರನ್ನು ಇನ್ನೂ ನಿರ್ಧರಿಸಲಾಗಿಲ್ಲ ಮತ್ತು ಜೆಕ್ ಕಾರು ತಯಾರಕರು ಈ ಅವಕಾಶವನ್ನು ಫ್ಯಾನ್ಸ್ ಗಳಿಗೆ ನೀಡಿದ್ದಾರೆ. ಹೊಸ ಸ್ಕೋಡಾ SUVಯ ಹೆಸರನ್ನು ಸೂಚಿಸುವ ತಮ್ಮ ಎಂಟ್ರಿಗಳನ್ನು ಸಲ್ಲಿಸಲು ಎಲ್ಲರಿಗೂ ಮುಕ್ತವಾಗಿರುವ ಹೆಸರಿಡುವ ಸ್ಪರ್ಧೆಯನ್ನು ಇವರು ಶುರುಮಾಡಿದ್ದಾರೆ.
ಸ್ಪರ್ಧೆಯ ವಿವರಗಳು
ಹೊಸ ಹೆಸರನ್ನು ಸೂಚಿಸಲು ಇರುವ ಒಂದೆರಡು ಷರತ್ತುಗಳೆಂದರೆ ಅದು 'K' ಅಕ್ಷರದಿಂದ ಪ್ರಾರಂಭವಾಗಬೇಕು ಮತ್ತು 'Q' ನೊಂದಿಗೆ ಕೊನೆಗೊಳ್ಳಬೇಕು ಮತ್ತು ಅದು 1 ಅಥವಾ 2 ಅಕ್ಷರಗಳ ಪದವಾಗಿರಬೇಕು. ಎಂಟ್ರಿಗಳು ಇದೀಗ ತೆರೆದಿವೆ ಮತ್ತು ಅಧಿಕೃತ ಸ್ಪರ್ಧೆಯ ವೆಬ್‌ಸೈಟ್‌ನಿಂದ ಅಥವಾ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ #NameYourSkoda ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಏಪ್ರಿಲ್ 12, 2024 ರವರೆಗೆ ಹೆಸರನ್ನು ಸಲ್ಲಿಸಬಹುದು. ಒಬ್ಬ ವಿಜೇತರು ಹೊಸ ಸ್ಕೋಡಾ SUVಯನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ, ಮತ್ತು 10 ಅದೃಷ್ಟಶಾಲಿ ವಿಜೇತರು ಪ್ರೇಗ್‌ಗೆ ಪ್ರವಾಸವನ್ನು ಗೆಲ್ಲಬಹುದು.
ಸ್ಕೋಡಾ ತನ್ನ ಮುಂಬರುವ ಸಬ್-4m SUV ಗಾಗಿ ಕೆಲವು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ, ಅವುಗಳನ್ನು ಅವುಗಳ ಅರ್ಥಗಳೊಂದಿಗೆ ಕೆಳಗೆ ವಿವರಿಸಲಾಗಿದೆ:
-
ಸ್ಕೋಡಾ ಕಾರಿಕ್ (ಇನ್ಸ್ಪಾಯರ್ ಮಾಡಲು ಕ್ರಾಫ್ಟ್ ಮಾಡಲಾಗಿದೆ) - ಹಿಂದಿ ಪದ 'ಕಾರಿಗರ್' ನಿಂದ ಬಂದಿದೆ
-
ಸ್ಕೋಡಾ ಕ್ವಿಕ್ (ಹಾರ್ಮನಿಯಲ್ಲಿ ಪವರ್ ಮತ್ತು ಇಂಟೆಲಿಜೆನ್ಸ್)- ಇಂಗ್ಲಿಷ್ ಪದ 'ಕ್ವಿಕ್' ನಿಂದ ಬಂದಿದೆ
-
ಸ್ಕೋಡಾ ಕೈಲಾಕ್ (ಟೈಮ್ಲೆಸ್ ಎಲೆಗೆನ್ಸ್)- ಸಂಸ್ಕೃತ ಪದ 'ಕೈಲಾಸ'ದಿಂದ ಬಂದಿದೆ
-
ಸ್ಕೋಡಾ ಕೈಮಾಕ್ (ನಿಮ್ಮಂತೆ ಪ್ರೆಶ್ಯಸ್)- ಹವಾಯಿಯನ್ ಪದ ‘ಕೈಮಾನ’ದಿಂದ ಬಂದಿದೆ
-
ಸ್ಕೋಡಾ ಕರೋಕ್ (ಬಿಲ್ಟ್ ಟು ರೂಲ್)- ಗ್ರೀಕ್ ಪದ 'ಕಿರಿಯೊಸ್' ನಿಂದ ಬಂದಿದೆ
ಇದನ್ನು ಕೂಡ ಓದಿ: 'ದಿ ಫ್ಯಾಮಿಲಿ ಮ್ಯಾನ್' ಸೀರೀಸ್ ನ ಪ್ರಿಯಾ ಮಣಿ ರಾಜ್ ಮರ್ಸಿಡಿಸ್ ಬೆಂಜ್ GLC SUVಯನ್ನು ಖರೀದಿಸಿದ್ದಾರೆ
ಅದರ ಹೆಸರಿಡುವ ಸ್ಟೈಲ್ ಗೆ ಅನುಗುಣವಾಗಿದೆ
ಸ್ಕೋಡಾ ಕಳೆದ ಕೆಲವು ಸಮಯದಿಂದ ಈ ರೀತಿಯ ಹೆಸರಿಡುವ ಮಾದರಿಯನ್ನು ಅನುಸರಿಸುತ್ತಿದೆ ಮತ್ತು ಈಗಾಗಲೇ ಇರುವ SUVಗಳ ಹೆಸರುಗಳು ಕ್ರಮವಾಗಿ 'K' ಮತ್ತು 'Q' ನೊಂದಿಗೆ ಪ್ರಾರಂಭವಾಗುತ್ತವೆ ಮತ್ತು ಕೊನೆಗೊಳ್ಳುತ್ತವೆ, ಉದಾಹರಣೆಗೆ Kushaq, Kodiaq ಮತ್ತು Karoq.
ಹೊಸ SUV ಯ ಸಂಕ್ಷಿಪ್ತ ವಿವರಗಳು
ಕುಶಾಕ್‌ನ 10-ಇಂಚಿನ ಟಚ್‌ಸ್ಕ್ರೀನ್ ಚಿತ್ರವನ್ನು ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ
ಇನ್ನೂ ಹೆಸರಿಡದ ಈ SUVಯು ಕುಶಾಕ್ ಕಾಂಪ್ಯಾಕ್ಟ್ SUV ಯಂತೆಯೇ ಅದೇ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಆದರೆ ಸಬ್-4m ಸೆಗ್ಮೆಂಟ್ ರೂಲ್ ಗಳಿಗೆ ಸರಿಹೊಂದುವಂತೆ ಅದನ್ನು ರೀಸೈಜ್ ಗೊಳಿಸಲಾಗುತ್ತದೆ. ಇದು ದೊಡ್ಡ ಟಚ್‌ಸ್ಕ್ರೀನ್, ಸನ್‌ರೂಫ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ನೀಡುವ ಮೂಲಕ ಒಂದು ಫೀಚರ್ ಭರಿತ ಕೊಡುಗೆಯಲಾಗಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಇದು ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ 5-ಸ್ಟಾರ್ ರೇಟಿಂಗ್ ಹೊಂದಿರುವ ಕುಶಾಕ್‌ನ MQB-A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಆದ್ದರಿಂದ ಈ ಹೊಸ SUV ಕೂಡ ಅದೇ ಮಟ್ಟದ ಸುರಕ್ಷತೆಯನ್ನು ನೀಡಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.
ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ನಾವು ಸುರಕ್ಷತಾ ತಂತ್ರಜ್ಞಾನದಲ್ಲಿ ನಿರೀಕ್ಷಿಸಬಹುದು.
ಇದರ ಎಂಜಿನ್ ಹೇಗಿರುತ್ತದೆ?
ಸೆಗ್ಮೆಂಟ್ ನ ಟ್ಯಾಕ್ಸ್ ಪ್ರಯೋಜನಗಳನ್ನು ನೀಡಲು ಕುಶಾಕ್‌ನ ಚಿಕ್ಕದಾದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS/ 178 Nm) ಅನ್ನು ಸ್ಕೋಡಾ ನೀಡುವ ನಿರೀಕ್ಷೆಯಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಈ ಎರಡೂ ಆಯ್ಕೆಗಳೊಂದಿಗೆ ಬರಬಹುದು.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಸಬ್-4m SUVಯ ಆರಂಭಿಕ ಬೆಲೆಯು 8.50 ಲಕ್ಷ (ಎಕ್ಸ್ ಶೋರೂಂ) ಇರಬಹುದು. ಇದು ಮಾರುತಿ ಬ್ರೆಝಾ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್‌ಒವರ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.