Login or Register ಅತ್ಯುತ್ತಮ CarDekho experience ಗೆ
Login

LED ಹೆಡ್‌ ಲೈಟ್‌ ಮತ್ತು ಸರ್ಕ್ಯುಲರ್ DRL ಗಳೊಂದಿಗೆ ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಹೀಂದ್ರಾ ಥಾರ್

ಅಕ್ಟೋಬರ್ 19, 2023 07:27 pm ರಂದು ansh ಮೂಲಕ ಪ್ರಕಟಿಸಲಾಗಿದೆ
108 Views

ಈ ಉದ್ದನೆಯ ಥಾರ್‌ ವಾಹನವು ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಹೊಸ ಕ್ಯಾಬಿನ್‌ ಥೀಮ್‌ ಗಳೊಂದಿಗೆ ರಸ್ತೆಗಿಳಿಯಲಿದೆ.

  • 5 ಬಾಗಿಲುಗಳ ಥಾರ್‌ ವಾಹನವು 2024ರ ಸುಮಾರಿಗೆ ಬಿಡುಗಡೆಗೊಳ್ಳಲಿದೆ
  • ಸನ್‌ ರೂಫ್‌ ಜೊತೆಗೆ ಫಿಕ್ಸ್ಡ್‌ ಮೆಟಲ್‌ ರೂಫ್‌, ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಹೊಸ ಕ್ಯಾಬಿನ್‌ ಥೀಮ್‌ ಅನ್ನು ಪಡೆಯಲಿದೆ.
  • ತನ್ನ 3 ಬಾಗಿಲುಗಳ ಆವೃತ್ತಿಯಲ್ಲಿದ್ದ 2 ಲೀಟರ್‌ ಪೆಟ್ರೋಲ್‌ ಮತ್ತು 2.2 ಲೀಟರ್‌ ಡೀಸೆಲ್‌ ಎಂಜಿನ್‌ ಆಯ್ಕೆಗಳನ್ನೇ ಇದು ಮುಂದುವರಿಸಲಿದ್ದರೂ ಬೇರೆಯೇ ಟ್ಯೂನ್‌ ಅನ್ನು ಹೊಂದಿರುವ ಸಾಧ್ಯತೆ ಇದೆ.
  • ಇದರ ಬೆಲೆಯು ಸುಮಾರು ರೂ. 15 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.

ಐದು ಬಾಗಿಲುಗಳ ಮಹೀಂದ್ರಾ ಥಾರ್ ವಾಹನವು 2024 ರಲ್ಲಿ ರಸ್ತೆಗಳಿಯಲಿದ್ದು, ಇದರ ಪರೀಕ್ಷಾರ್ಥ ವಾಹನವು ಮರೆಮಾಚಿದ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದೆ. ಈ ಪರೀಕ್ಷಾರ್ಥ ವಾಹನದ ಇತ್ತೀಚಿನ ಸ್ಪೈ ಶಾಟ್‌ ಗಳಲ್ಲಿ ಸರ್ಕ್ಯುಲರ್‌ LED DRL ಗಳ ಜೊತೆಗೆ LED ಹೆಡ್‌ ಲೈಟ್‌ ಸೆಟಪ್‌ ಕಾಣಿಸಿಕೊಂಡಿದೆ. ಹೊಸ ವಿನ್ಯಾಸದತ್ತ ಒಮ್ಮೆ ಬೆಳಕು ಹರಿಸೋಣ.

ಹೊಸ ಹೆಡ್‌ ಲ್ಯಾಂಪ್‌ ವ್ಯವಸ್ಥೆ

ಮಹೀಂದ್ರಾ ಥಾರ್‌ ಮಾದರಿಯ 3 ಬಾಗಿಲುಗಳ ಆವೃತ್ತಿಯು ಹ್ಯಾಲೋಜೆನ್‌ ಹೆಡ್‌ ಲೈಟುಗಳೊಂದಿಗೆ ಬರುತ್ತಿದ್ದರೆ, ಈ ಉದ್ದದ ಆವೃತ್ತಿಯಲ್ಲಿ ಮಹೀಂದ್ರಾ ಸಂಸ್ಥೆಯು, ಈ ವಾಹನದ ಬೆಲೆಗೆ ಸೂಕ್ತವೆನಿಸುವ LED ಸೆಟಪ್‌ ಅನ್ನು ಅಳವಡಿಸಲು ನಿರ್ಧರಿಸಿದೆ. ಇದು ಹೆಡ್‌ ಲೈಟುಗಳ ದುಂಡಗಿನ ಆಕಾರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದು, ಇದರ LED ಘಟಕಗಳ ಸುತ್ತಲೂ ಉಂಗುರಾಕಾರದ LED DRL ಗಳನ್ನು ಕಾಣಬಹುದು.

ಲೈಟಿಂಗ್‌ ಸೆಟಪ್‌ ಮಾತ್ರವಲ್ಲದೆ, 5 ಬಾಗಿಲುಗಳ ಈ ಥಾರ್‌ ವಾಹನದ ವಿನ್ಯಾಸದ ಬದಲಾವಣೆಯ ಅಂಗವಾಗಿ ಉದ್ದನೆಯ ವೀಲ್‌ ಬೇಸ್‌, 2 ಹೆಚ್ಚುವರಿ ಬಾಗಿಲುಗಳು, ಹೊಸ ಕ್ಯಾಬಿನ್‌ ವಿನ್ಯಾಸ ಮತ್ತು ಸನ್‌ ರೂಫ್‌ ಅನ್ನು ಕಾಣಬಹುದು.

ವೈಶಿಷ್ಟ್ಯಗಳ ಪಟ್ಟಿ

ಐದು ಬಾಗಿಲುಗಳ ಥಾರ್‌ ವಾಹನವು ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಪಟ್ಟಿಯಲ್ಲಿ ದೊಡ್ಡದಾದ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌ ಸೇರಿದೆ. ಇದು ಬಹುಶಃ 10.25 ಇಂಚಿನಷ್ಟು ಗಾತ್ರವನ್ನು ಹೊಂದಿರುವ ಸಾಧ್ಯತೆ ಇದ್ದು, ಇತ್ತೀಚಿನ ಸ್ಪೈ ಶಾಟ್‌ ಗಳಲ್ಲಿ ಕಾಣಿಸಿಕೊಂಡಿದೆ. ಇದು ಫಿಕ್ಸ್ಡ್‌ ಮೆಟಲ್‌ ಹಾರ್ಡ್‌ ಟಾಪ್‌ ಅನ್ನು ಬಳಸುವುದರಿಂದ ಈ ವಾಹನಕ್ಕೆ ಸನ್‌ ರೂಫ್‌ ಅನ್ನು ಅಳವಡಿಸಲಾಗುತ್ತದೆ. ಐದು ಬಾಗಿಲುಗಳ ಈ ಥಾರ್‌ ವಾಹನವು ಹಿಂಭಾಗದ AC ವೆಂಟ್‌ ಗಳ ಜೊತೆಗೆ ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಅನ್ನು ಸಹ ಪಡೆಯಲಿದೆ.

ಇದನ್ನು ಸಹ ಓದಿರಿ: ಕೊನೆಗೂ ರಸ್ತೆಗಿಳಿದ ಮಹೀಂದ್ರಾ ಬೊಲೋರೊ ನಿಯೋ+, ಆದರೆ ಸದ್ಯಕ್ಕೆ ಆಂಬುಲೆನ್ಸ್‌ ಆಗಿ ಮಾತ್ರ

ಸುರಕ್ಷೆಯತ್ತ ಗಮನ ಹರಿಸುವುದಾದರೆ, ಇದು ಆರು ಏರ್‌ ಬ್ಯಾಗುಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC),‌ ಮತ್ತು ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಟ್ರಾಕ್ಷನ್‌ ಕಂಟ್ರೋಲ್‌, ಹಿಲ್‌ ಹೋಲ್ಡ್‌ ಮತ್ತು ಡೆಸೆಂಟ್‌ ಕಂಟ್ರೋಲ್‌, ರಿಯರ್‌ ಪಾರ್ಕಿಂಗ್‌ ಕ್ಯಾಮರಾ ಇತ್ಯಾದಿಗಳನ್ನು ಇದು ಪಡೆಯಲಿದೆ.

ಪವರ್‌ ಟ್ರೇನ್‌ ವಿವರಗಳು

ಐದು ಬಾಗಿಲುಗಳ ಈ ಥಾರ್‌ ಮಾದರಿಯು, ತನ್ನ ಸಣ್ಣ ಆವೃತ್ತಿಯಲ್ಲಿ ಹೊಂದಿರುವಂತೆಯೇ 2 ಲೀಟರ್‌ ಪೆಟ್ರೋಲ್‌ ಮತ್ತು 2.2 ಲೀಟರ್‌ ಡೀಸೆಲ್‌ ಎಂಜಿನ್‌ ಗಳನ್ನು ಹೊಂದಿರಲಿದ್ದರೂ, ಅಧಿಕ ಹಂತದ ಟ್ಯೂನ್‌ ಅನ್ನು ಪಡೆಯಲಿದೆ. ಮಹೀಂದ್ರಾ ಸಂಸ್ಥೆಯು, ಈ ಎಂಜಿನ್‌ ಗಳ ಜೊತೆಗೆ 6 ಸ್ಪೀಡ್‌ ಮ್ಯಾನುವಲ್‌ ಮತ್ತು 6 ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳನ್ನು ಒದಗಿಸಲಿದೆ. ಅಲ್ಲದೆ, 3 ಬಾಗಿಲುಗಳ ಆವೃತ್ತಿಯಲ್ಲಿ ಇರುವಂತೆಯೇ, 5 ಬಾಗಿಲುಗಳ ಥಾರ್‌ ಕಾರು ಸಹ ರಿಯರ್‌ ವೀಲ್‌ ಡ್ರೈವ್‌ ಮತ್ತು ಫೋರ್‌ ವೀಲ್‌ ಡ್ರೈವ್‌ ಎರಡೂ ಇದರಲ್ಲಿ ಲಭ್ಯ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮಹೀಂದ್ರಾ ಸಂಸ್ಥೆಯು 5 ಬಾಗಿಲುಗಳ ಥಾರ್‌ ಅನ್ನು ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದ್ದು, ಬೆಲೆಯು ರೂ. 15 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭವಾಗುವ ಸಾಧ್ಯತೆ ಇದೆ. ಉದ್ದನೆಯ ಥಾರ್‌ ವಾಹನವು ಮಾರುತಿ ಜಿಮ್ನಿ ಮತ್ತು 5-ಡೋರ್‌ ಫೋರ್ಸ್‌ ಗೂರ್ಖಾ ಮಾದರಿಗಳ ಜೊತೆಗೆ ಸ್ಪರ್ಧಿಸಲಿದೆ.

ಚಿತ್ರದ ಮೂಲ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಥಾರ್‌ ಅಟೋಮ್ಯಾಟಿಕ್

Share via

Write your Comment on Mahindra ಥಾರ್‌ ROXX

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ