ಸಿಟ್ರಾನ್ C3 ಏರ್‌ಕ್ರಾಸ್ ಎಸ್‌ಯುವಿ ಅನ್ನು ಈ 12 ಚಿತ್ರಗಳಲ್ಲಿ ಪರಿಶೀಲಿಸಿ

published on ಮೇ 04, 2023 06:49 am by ansh for ಸಿಟ್ರೊನ್ ಸಿ3 ಏರ್‌ಕ್ರಾಸ್‌

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಕಾಂಪ್ಯಾಕ್ಟ್ ಎಸ್‌ಯುವಿ ಅನ್ನು ಅಂತಿಮವಾಗಿ ಅನಾವರಣಗೊಳಿಸಲಾಗಿದೆ ಮತ್ತು  ವರ್ಷದ ಕೊನೆಯಲ್ಲಿ ಇದರ ಬಿಡುಗಡೆಯನ್ನು ನಿಗದಿಪಡಿಸಲಾಗಿದೆ

Citroen C3 Aircross

ಫ್ರೆಂಚ್ ಕಾರು ತಯಾರಕರ ಇತ್ತೀಚಿನ ಕೊಡುಗೆಯು ಸಿಟ್ರಾನ್‌ನ 5- ಮತ್ತು 7-ಸೀಟುಗಳ ವಿನ್ಯಾಸವನ್ನು ಹೊಂದಿರುವ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ, ಇದನ್ನು ಸಿಟ್ರಾನ್ C3 ಏರ್‌ಕ್ರಾಸ್ ಎಂದು ಕರೆಯಲಾಗುತ್ತದೆ. ಕಾರುತಯಾರಕರು ಈ ಎಸ್‌ಯುವಿಯನ್ನು ಅನಾವರಣಗೊಳಿಸಿದ್ದಾರೆ; ಮತ್ತು ಇದರ ಬೆಲೆಗಳು ಮತ್ತು ಬುಕ್ಕಿಂಗ್ ವಿವರಗಳಿಗೆ ಕಾಯುತ್ತಿರುವಾಗ, C3 ಏರ್‌ಕ್ರಾಸ್‌ನ ನೋಟವು ಹೇಗಿದೆ ಎಂಬುದನ್ನು ನಾವು ನೋಡಬಹುದು.

 

ಮುಂಭಾಗ

Citroen C3 Aircross Front

Citroen C3 Aircross Headlamp

 C3 ಏರ್‌ಕ್ರಾಸ್‌ನ ಮುಂಭಾಗವು C3 ಮತ್ತು C5 ಏರ್‌ಕ್ರಾಸ್ ನ ಮುಂಭಾಗದ ಮಿಶ್ರಣವಾಗಿದೆ. ಇದರ ಬೃಹತ್ ಮತ್ತು ದೃಢವಾದ ಮುಂಭಾಗವು, C5 ಏರ್‌ಕ್ರಾಸ್‌ನಂತೆಯೇ ಕಾಣುತ್ತದೆ, ಆದರೆ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳ ವಿನ್ಯಾಸವು C3 ಹ್ಯಾಚ್‌ಬ್ಯಾಕ್ ಅನ್ನು ಹೋಲುತ್ತದೆ. ಇದರಲ್ಲಿನ ಫಾಗ್‌ಲ್ಯಾಂಪ್‌ನ ಸ್ಥಾನವೂ ಸಹ C3 ಹ್ಯಾಚ್‌ಬ್ಯಾಕ್ ಅನ್ನು ಹೋಲುತ್ತದೆ.

ಇದನ್ನೂ ಓದಿ: ಸಿಟ್ರಾನ್ C3 ಏರ್‌ಕ್ರಾಸ್‌ನ ಕುರಿತು ನೀವು ಅರಿಯಲೇಬೇಕಾದ 5 ಹೈಲೈಟ್‌ಗಳು

ಇಲ್ಲಿಂದ, ಹ್ಯಾಚ್‌ಬ್ಯಾಕ್‌ಗಿಂತ ಈ ಎಸ್‌ಯುವಿನಲ್ಲಿ ಹೆಚ್ಚು ಅಗಲವನ್ನು ಗಮನಿಸಬಹುದಾಗಿದ್ದು ದೃಢವಾದ ಸ್ಟ್ಯಾನ್ಸ್‌ಗೆ ಧನ್ಯವಾದಗಳನ್ನು ಅರ್ಪಿಸಬೇಕು.

ಸೈಡ್

Citroen C3 Aircross Side

 ಈ ಕಾಂಪ್ಯಾಕ್ಟ್ SUV, C3 ಮೇಲೆ ಆಧಾರಿತವಾಗಿದ್ದರೆ, ಮೂರನೇ ಸಾಲಿಗೆ ಸ್ಥಳಾವಕಾಶವನ್ನು ಕಲ್ಪಿಸಲು ಗಮನಾರ್ಹವಾಗಿ ಉದ್ದವಾಗಿದೆ. ಕ್ಯಾಬಿನ್‌ ಅನ್ನು ಹೆಚ್ಚು ಅನುಕೂಲಕರವಾಗಿಸಲು ವ್ಹೀಲ್‌ಬೇಸ್ ಅನ್ನು 100mm ಗಿಂತಲೂ ಹೆಚ್ಚು ವಿಸ್ತರಿಸಲಾಗಿದೆ. ಆಯಾಮದ ವಿಷಯದಲ್ಲಿ ಹೇಳುವುದಾದರೆ ಈ C3 ಏರ್‌ಕ್ರಾಸ್ ಈ ಕಾರುತಯಾರಕರ ಇತರ ಎರಡು ಮಾಡೆಲ್‌ಗಳ ನಡುವಿನ ಸ್ಥಾನವನ್ನು ಪಡೆಯುತ್ತದೆ. ಪಾರ್ಶ್ವದಿಂದ, ಇದು ಹ್ಯಾಚ್‌ಬ್ಯಾಕ್‌ಗೆ ಹೋಲುವ ಡೋರ್‌ಹ್ಯಾಂಡಲ್‌ಗಳೊಂದಿಗೆ ಉದ್ದವಾದ ಫ್ಲ್ಯಾಟ್‌ಬಾಡಿಯನ್ನು ಪಡೆಯುತ್ತದೆ ಮತ್ತು ಇದು ಇತರ ಎರಡೂ ಮಾಡೆಲ್‌ಗಳಿಗೆ ಹೋಲಿಕೆಯಾಗುವ ಡೋರ್ ಕ್ಲಾಡಿಂಗ್ ಅನ್ನು ಪಡೆಯುತ್ತದೆ.

Citroen C3 Aircross Alloy Wheel

ಮತ್ತೊಂದೆಡೆ, ಇದರ ಅಲಾಯ್ ವ್ಹೀಲ್‌ಗಳು, ಉಳಿದೆರಡು ಮಾಡೆಲ್‌ಗಳಿಗಿಂತ ಭಿನ್ನವಾಗಿದೆ. ಈ C3 ಏರ್‌ಕ್ರಾಸ್ 4-ಸ್ಪೋಕ್, ಕಪ್ಪು ಮತ್ತು ಬೆಳ್ಳಿಯ ಬಣ್ಣದ ಫಿನಿಶಿಂಗ್ ಅನ್ನು ಹೊಂದಿರುವ  17-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ. 

ಹಿಂಭಾಗ

Citroen C3 Aircross Rear

 ಇದರ ಹಿಂದಿನ ಪ್ರೊಫೈಲ್ ಕೂಡಾ ದೃಢವಾಗಿದೆ. ಈ ಎಸ್‌ಯುವಿಯು ಎರಡು ರಿಫ್ಲೆಕ್ಟರ್‌ಗಳನ್ನು ಹೊಂದಿರುವ ಕಪ್ಪು ಮತ್ತು ಬೂದು ಬಣ್ಣದ ಬಂಪರ್‌ನೊಂದಿಗೆ ವಿಶಾಲವಾದ ಹಿಂಭಾಗವನ್ನು ಪಡೆಯುತ್ತದೆ. ಭಾರತದಲ್ಲಿನ ಕಾರು ತಯಾರಕರ ಇತರ ಎರಡು ಮಾಡೆಲ್‌ಗಳ ವಿನ್ಯಾಸದಲ್ಲಿ ಕಾಣಸಿಗದಿರುವ ಟೈಲ್ ಲ್ಯಾಂಪ್‌ಗಳ ನಡುವೆ ಸಂಪರ್ಕಿತ ಅಂಶವನ್ನು ಸಹ ಈ C3 ಏರ್‌ಕ್ರಾಸ್ ಪಡೆಯುತ್ತದೆ.

Citroen C3 Aircross Tail Lamp

ಆದರೆ ಇದರ ಟೈಲ್ ಲ್ಯಾಂಪ್‌ಗಳು ಎರಡು ಲೈಟ್ ಎಲಿಮೆಂಟ್‌ಗಳು ಹೊರಗೆ ಚಾಚಿಕೊಂಡಂತೆ ವಿನ್ಯಾಸವನ್ನು ಹೊಂದಿದ್ದು, ಇದು C3 ಹ್ಯಾಚ್‌ಬ್ಯಾಕ್‌ನಲ್ಲಿನ ವಿನ್ಯಾಸವನ್ನು ಹೋಲುತ್ತದೆ. ಈ ಲ್ಯಾಂಪ್‌ನಲ್ಲಿ ನೀವೊಂದು ವಿಶೇಷ ಅಂಶವನ್ನು ಗಮನಿಸಬಹುದು, ಅದೇನೆಂದರೆ ಇಂಡಿಕೇಟರ್‌ಗಳ ಮೇಲಿನ ಫ್ರಾಸ್ಟೆಡ್ ಬಾಣದ ಗುರುತುಗಳು. 

ಕ್ಯಾಬಿನ್ ಮತ್ತು ಫೀಚರ್‌ಗಳು

Citroen C3 Aircross Cabin

 ಈಗ ಎಕ್ಸ್‌ಟೀರಿಯರ್‌ನಿಂದ ಮುಂದೆ ಹೋಗಿ, C3 ಏರ್‌ಕ್ರಾಸ್‌ನ ಕ್ಯಾಬಿನ್ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಇದು C3 ಹ್ಯಾಚ್‌ಬ್ಯಾಕ್‌ಗೆ ಸ್ವಲ್ಪಮಟ್ಟಿಗೆ ಹೋಲುತ್ತದೆಯಾದರೂ, ಇದನ್ನು ಸ್ವಲ್ಪ ಟ್ವೀಕ್ ಮಾಡಲಾಗಿದೆ ಮತ್ತು ಕಪ್ಪು ಹಾಗೂ ಬೀಜ್ ಕ್ಯಾಬಿನ್ ಥೀಮ್‌ನಲ್ಲಿ ನೀಡಲಾಗಿದೆ. 

Citroen C3 Aircross Infotainment Display

ಇದು ಅದೇ 10-ಇಂಚಿನ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ ಮತ್ತು ಎಸಿ ವೆಂಟ್‌ಗಳು ಹಾಗೂ ಡ್ಯಾಶ್‌ಬೋರ್ಡ್‌ಗೆ ಅದೇ ರೀತಿಯ ವಿನ್ಯಾಸವನ್ನು ಸಹ ಪಡೆಯುತ್ತದೆ. ಆದರೆ C3 ಹ್ಯಾಚ್‌ಗಿಂತ ಇದು ಹೊಂದಿರುವ ಒಂದು ಪ್ರಮುಖ ವ್ಯತ್ಯಾಸವೆಂದರೆ 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಇದು ಒಳಗೊಂಡಿದೆ.

Citroen C3 Aircross Digital Driver's Display

ಈ C3 ಏರ್‌ಕ್ರಾಸ್ ಮ್ಯಾನ್ಯುವಲ್ ಎಸಿ ಅನ್ನು ಮಾತ್ರ ಪಡೆಯುತ್ತದೆ ಆದರೆ ಸ್ವತಂತ್ರ ಫ್ಯಾನ್ ಕಂಟ್ರೋಲ್ ಜೊತೆಗೆ ರೂಫ್-ಮೌಂಟೆಡ್ ರಿಯರ್ ಎಸಿ ವೆಂಟ್‌ಗಳನ್ನು ಹೊಂದಿದೆ. ಇದರಲ್ಲಿನ ಸುರಕ್ಷತಾ ಫೀಚರ್‌ಗಳೆಂದರೆ ಬಹು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ ವಾಷರ್ ಮತ್ತು ವೈಪರ್, ಮತ್ತು ರಿಯರ್ ವ್ಯೂ ಕ್ಯಾಮರಾ.

Citroen C3 Aircross Third-row Folded

 ಹಿಂಭಾಗದಲ್ಲಿ, ರೆನಾಲ್ಟ್ ಟ್ರೈಬರ್ ನಂತೆಯೇ ಇದು ಕೊನೆಯ ಸಾಲಿನ ಸೀಟುಗಳನ್ನು ತೆಗೆಯಬಹುದಾದ 3-ಸಾಲಿನ ಸೀಟಿಂಗ್ ವಿನ್ಯಾಸವನ್ನು ಪಡೆಯುತ್ತದೆ. ಆದರೆ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಟ್ಟುನಿಟ್ಟಾಗಿ 5-ಸೀಟುಗಳ ವಿನ್ಯಾಸದಲ್ಲಿ ನೀಡಲಾಗುವುದು ಆದರೆ ಇದು ರೂಫ್-ಇಂಟಿಗ್ರೇಟೆಡ್ ರಿಯರ್ ಎಸಿ ವೆಂಟ್‌ಗಳನ್ನು ಕಳೆದುಕೊಳ್ಳುತ್ತದೆ.

 

 ಪವರ್‌ಟ್ರೇನ್

Citroen C3 Aircross Engine

ಈ C3 ಏರ್‌ಕ್ರಾಸ್, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾದ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಯೂನಿಟ್ ಅನ್ನು C3 ಹ್ಯಾಚ್‌ನೊಂದಿಗೆ ಬರುತ್ತದೆ ಮತ್ತು 110PS ಹಾಗೂ 190Nm ಅನ್ನು ಬಿಡುಗಡೆ ಮಾಡುತ್ತದೆ. ಸದ್ಯಕ್ಕೆ, ಈ 3-ಸಾಲಿನ ಕಾಂಪ್ಯಾಕ್ಟ್ ಎಸ್‌ಯುವಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುವುದಿಲ್ಲ ಆದರೆ ಭವಿಷ್ಯದಲ್ಲಿ ಇದನ್ನು ಸೇರಿಸಬಹುದು.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಈ C3 ಏರ್‌ಕ್ರಾಸ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ನಿರೀಕ್ಷಿತ ಆರಂಭಿಕ ಬೆಲೆ ರೂ. 9 ಲಕ್ಷ (ಎಕ್ಸ್-ಶೋರೂಮ್). ಈ ಕಾಂಪ್ಯಾಕ್ಟ್ ಎಸ್‌ಯುವಿ ಹ್ಯುಂಡೈ ಕ್ರೆಟಾಕಿಯಾ ಸೆಲ್ಟೋಸ್ಫೋಕ್ಸ್‌ವ್ಯಾಗನ್ ಟೈಗನ್ಸ್ಕೋಡಾ ಕುಶಾಕ್ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಇನ್ನಷ್ಟು ಇಲ್ಲಿ ಓದಿ : C3 ಆನ್ ರೋಡ್ ಬೆಲೆ

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸಿಟ್ರೊನ್ ಸಿ3 Aircross

1 ಕಾಮೆಂಟ್
1
S
sandeep singh
Apr 29, 2023, 4:14:42 PM

Beautiful car for indian;s

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience