Login or Register ಅತ್ಯುತ್ತಮ CarDekho experience ಗೆ
Login

Citroen C3 Aircross: 9.99 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ, ಇಂದಿನಿಂದಲೇ ಬುಕಿಂಗ್ ಶುರು

published on ಸೆಪ್ಟೆಂಬರ್ 15, 2023 02:10 pm by rohit for ಸಿಟ್ರೊನ್ ಸಿ3 ಏರ್‌ಕ್ರಾಸ್‌

ಅಕ್ಟೋಬರ್ 15 ರಿಂದ ಸಿಟ್ರೊಯೆನ್ ತನ್ನ C3 ಏರ್‌ಕ್ರಾಸ್ ಅನ್ನು ಗ್ರಾಹಕರಿಗೆ ಡೆಲಿವರಿ ನೀಡಲು ಪ್ರಾರಂಭಿಸಲಿದೆ.

  • ಆನ್‌ಲೈನ್ ಮತ್ತು ಸಿಟ್ರೊಯೆನ್ ಡೀಲರ್‌ಶಿಪ್‌ಗಳಲ್ಲಿ 25,000 ರೂ ನೀಡಿ ಬುಕ್ಕಿಂಗ್ ಮಾಡಬಹುದು.
  • C3 ಏರ್‌ಕ್ರಾಸ್ ಅನ್ನು 5- ಮತ್ತು 7-ಆಸನಗಳ ವಿನ್ಯಾಸಗಳೊಂದಿಗೆ ನೀಡಲಾಗುತ್ತದೆ.
  • ಹೊರಭಾಗದಲ್ಲಿ ಪ್ರಮುಖವಾಗಿ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ನಯವಾದ ಹೆಡ್‌ಲೈಟ್‌ಗಳು ಮತ್ತು C-ಆಕಾರದ ಟೈಲ್‌ಲೈಟ್‌ಗಳನ್ನು ಒಳಗೊಂಡಿವೆ.
  • ಒಳಭಾಗದಲ್ಲಿ, ಇದು 10.2-ಇಂಚಿನ ಟಚ್‌ಸ್ಕ್ರೀನ್, ಮ್ಯಾನುಯಲ್ ಎಸಿ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇಯನ್ನು ಪಡೆಯುತ್ತದೆ.
  • ಏಕೈಕ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಇದು ಚಲಿಸಲ್ಪಡುತ್ತದೆ, ಇದನ್ನು 6-ಸ್ಪೀಡ್ ಮ್ಯಾನುಯಲ್‌ಗೆ ಜೋಡಿಸಲಾಗಿದೆ.
  • ಬೋರ್ಡ್‌ನಲ್ಲಿರುವ ಸುರಕ್ಷತಾ ತಂತ್ರಜ್ಞಾನವು ಎರಡು ಏರ್‌ಬ್ಯಾಗ್‌ಗಳು, ಟಿಪಿಎಮ್‌ಎಸ್‌ ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.

ಸಿಟ್ರೊಯೆನ್ C3 ಏರ್‌ಕ್ರಾಸ್ ಆಗಮನದೊಂದಿಗೆ ಕಾಂಪ್ಯಾಕ್ಟ್ SUV ವಿಭಾಗವು ಶೀಘ್ರದಲ್ಲೇ ಇನ್ನಷ್ಟು ವಿಸ್ತರಿಸಲಿದೆ. ಸಿಟ್ರೊಯೆನ್ ತನ್ನ C3 ಏರ್‌ಕ್ರಾಸ್ ಗಾಗಿ ಅಡ್ವಾನ್ಸ್-ಬುಕಿಂಗ್ ಅನ್ನು ಪ್ರಾರಂಭವಾಗಲಿದೆ ಮತ್ತು ಭಾರತದಾದ್ಯಂತ ಪರಿಚಯಾತ್ಮಕವಾಗಿ ಇದರ ಎಕ್ಸ್-ಶೋರೂಮ್ ಬೆಲೆಯನ್ನು 9.99 ಲಕ್ಷ ರೂ. ನಿಂದ ನಿಗದಿಪಡಿಸಲಾಗಿದೆ ಎಂದು ಬಿಡುಗಡೆಗೆ ಮುಂಚಿತವಾಗಿ ಬಹಿರಂಗಪಡಿಸಿದೆ. ನೀವು ಆನ್‌ಲೈನ್‌ನಲ್ಲಿ ಅಥವಾ ಈ ಕಾರು ತಯಾರಕರ ಪ್ಯಾನ್-ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ 25,000 ರೂ ನೀಡಿ ಕಾಯ್ದಿರಿಸಬಹುದು. ಅಕ್ಟೋಬರ್ 15 ರಿಂದ ಸಿಟ್ರೊಯೆನ್ ಈ SUV ಯ ಡೆಲಿವರಿಯನ್ನು ಪ್ರಾರಂಭಿಸುತ್ತದೆ.

C3 ಏರ್‌ಕ್ರಾಸ್ ನಿಖರವಾಗಿ ಯಾವುದೆಲ್ಲ ಸೌಕರ್ಯಗಳನ್ನು ಒಳಗೊಂಡಿದೆ ಎಂಬುದರ ತ್ವರಿತ ಸಾರಾಂಶ ಇಲ್ಲಿದೆ:

ಪರಿಚಿತ ವಿನ್ಯಾಸ

C3 ಏರ್‌ಕ್ರಾಸ್‌ನ ಅತಿದೊಡ್ಡ ಗುರುತಿಸಬಹುದಾದ ಅಂಶವೆಂದರೆ C3 ಹ್ಯಾಚ್‌ಬ್ಯಾಕ್‌ ನಂತೆ ಒಂದೇ ರೀತಿಯ ವಿನ್ಯಾಸದ ಅಂಶಗಳು.ಎಸ್ಯುವಿಯ ಮುಂಭಾಗದಲ್ಲಿ ನಯಗೊಳಿಸಿದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಗ್ರಿಲ್ ಅನ್ನು ಸುತ್ತುವರೆದಿರುವ ಹೆಡ್‌ಲೈಟ್‌ಗಳನ್ನು ಒಳಗೊಂಡಂತೆ ಒಂದೇ ರೀತಿಯ ಶೈಲಿಯನ್ನು ಹೊಂದಿದೆ. ಇದು ದಪ್ಪವಾದ ಬಂಪರ್ ಅನ್ನು ಪಡೆಯುತ್ತದೆ ಆದರೆ ಅದರ ಹೆಚ್ಚಿನ ಭಾಗವನ್ನು ಏರ್ ಡ್ಯಾಮ್ ನ ಕೆಳಗೆ ಸ್ಕಿಡ್ ಪ್ಲೇಟ್‌ನೊಂದಿಗೆ ತೆಗೆದುಕೊಳ್ಳಲಾಗುತ್ತದೆ, ಎರಡೂ ಬಾಗಿಲುಗಳ ಮೇಲೆ ಕ್ಲಾಡಿಂಗ್ ಮತ್ತು ಸಿ-ಆಕಾರದ ಟೈಲ್‌ಲೈಟ್‌ಗಳು ಮತ್ತು ಬೃಹತ್ ಬಂಪರ್‌ನೊಂದಿಗೆ ಉಬ್ಬಿದ ಹಿಂಭಾಗದ ತುದಿಯನ್ನು ಹೊಂದಿರುತ್ತದೆ.

ಒಳಭಾಗದವನ್ನು ಗಮನಿಸಿದರೆ

C3 ಏರ್‌ಕ್ರಾಸ್‌ನ ಕ್ಯಾಬಿನ್ ಸಹ ಕೆಲವು ಸಣ್ಣ ಅಪ್ಡೇಟ್ ಗಳೊಂದಿಗೆ C3 ಅನ್ನು ಹೋಲುತ್ತದೆ. ಸಿಟ್ರೊಯೆನ್ ಕಾಂಪ್ಯಾಕ್ಟ್ SUV ಗೆ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ನೀಡಿದೆ, ಆದರೆ AC ವೆಂಟ್‌ಗಳು ಮತ್ತು ಡ್ಯಾಶ್‌ಬೋರ್ಡ್ ವಿನ್ಯಾಸವು ಒಂದೇ ಆಗಿರುತ್ತದೆ.

ಆದಾಗಿಯೂ, ದೊಡ್ಡ ವ್ಯತ್ಯಾಸವೆಂದರೆ C3 ಏರ್‌ಕ್ರಾಸ್ ಐದು ಮತ್ತು ಏಳು ಆಸನ ಗಳ ಸಂರಚನೆಗಳಲ್ಲಿ ಲಭ್ಯವಿದೆ. ನೀವು ಜನರಿಗಿಂತ ಹೆಚ್ಚು ಲಗೇಜ್ ಹೊಂದಿರುವಾಗ ಮೂರನೇ ಸಾಲಿನ ಆಸನಗಳನ್ನು ಸಹ ತೆಗೆಯಬಹುದಾಗಿದೆ.

ಇದನ್ನೂ ಓದಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ನ ಅಧಿಕೃತ ಕಾರಾಗಿ ನಿಸ್ಸಾನ್ ಮ್ಯಾಗ್ನೈಟ್

ಅಗತ್ಯ ವೈಶಿಷ್ಟ್ಯಗಳನ್ನು ಹೊಂದಿದೆ

ಸಿಟ್ರೊಯೆನ್ C3 ಏರ್‌ಕ್ರಾಸ್ ನ ಸೌಕರ್ಯಗಳ ಪಟ್ಟಿಯಲ್ಲಿ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಐದು ಫಾಸ್ಟ್ ಚಾರ್ಜಿಂಗ್ ಪೋರ್ಟ್‌ಗಳು, ರೂಫ್-ಮೌಂಟೆಡ್ ಎಸಿ ವೆಂಟ್‌ಗಳು ಮತ್ತು ಮ್ಯಾನ್ಯುವಲ್ ಎಸಿ ಒಳಗೊಂಡಿದೆ.

ಹಿಲ್-ಹೋಲ್ಡ್ ಅಸಿಸ್ಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ರಿವರ್ಸಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಭದ್ರಪಡಿಸುತ್ತದೆ.

ಪವರ್ ಟ್ರೇನ್ ಗಳ ಕುರಿತು

C3 ಏರ್‌ಕ್ರಾಸ್ ಸದ್ಯಕ್ಕೆ ಕೇವಲ ಒಂದು ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುತ್ತದೆ, 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110PS/190Nm) 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಯಾಗಿದ್ದು, 18.5kmpl ನಷ್ಟು ಇಂಧನ ದಕ್ಷತೆಯನ್ನು ನೀಡುತ್ತದೆ. C3 ಏರ್‌ಕ್ರಾಸ್ ಮುಂದಿನ ದಿನಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಸನ್ ನ್ನು ನೀಡುತ್ತದೆ.

ಸಂಬಂಧಿತ: ಸಿಟ್ರೊಯೆನ್ C3 ಏರ್‌ಕ್ರಾಸ್ ವಿಮರ್ಶೆ: ಇದು ವಿಭಿನ್ನವಾಗಿದೆ

ಸ್ಪರ್ಧಿಗಳು

ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಟೊಯೊಟಾ ಹೈರ್ಡರ್, ಹೋಂಡಾ ಎಲಿವೇಟ್ ಮತ್ತು ಎಂಜಿ ಆಸ್ಟರ್ ವಿರುದ್ಧ ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಸ್ಪರ್ಧೆಯನ್ನು ಒಡ್ಡುತ್ತದೆ.

ಹೆಚ್ಚು ಓದಿ : ಸಿಟ್ರೊಯೆನ್ C3 ಆನ್ ರೋಡ್ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 68 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ