ಎಕ್ಸ್‌ಕ್ಲೂಸಿವ್: ಟೆಸ್ಟಿಂಗ್ ಸಮಯದಲ್ಲಿ ಹೊಸ 19-ಇಂಚಿನ ಚಕ್ರಗಳೊಂದಿಗೆ ಕಂಡು ಬಂದ ಫೇಸ್‌ಲಿಫ್ಟ್ ಟಾಟಾ ಸಫಾರಿ
ಟಾಟಾ ಸಫಾರಿ ಗಾಗಿ rohit ಮೂಲಕ ಜೂನ್ 20, 2023 02:33 pm ರಂದು ಪ್ರ ಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಇದು 2024 ರ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ
-
ನವೀಕೃತ ಸ್ಪೈ ಶಾಟ್‌ಗಳಲ್ಲಿ ನವೀಕೃತ ಎಸ್‌ಯುವಿಯ ಎರಡು ಪರೀಕ್ಷಾರ್ಥ ಕಾರುಗಳು ಕಂಡುಬಂದಿವೆ.
-
ಒಂದು ಪ್ರಸ್ತುತ ಲಭ್ಯವಿರುವ ಮಾಡೆಲ್‌ನಂತೆಯೇ 18-ಇಂಚಿನ ವ್ಹೀಲ್‌ಗಳನ್ನು ಹೊಂದಿದ್ದರೆ ಇನ್ನೊಂದು ಹೊಸ 19-ಇಂಚಿನ ವ್ಹೀಲ್‌ಗಳನ್ನು ಪಡೆದುಕೊಂಡಿದೆ.
-
ಹೆಚ್ಚಿನ ಆಧುನಿಕ ಕಾರುಗಳಂತೆ ಸ್ಲಿಮ್ಮರ್ ಎಲ್‌ಇಡಿ ಲೈಟಿಂಗ್ ಮತ್ತು ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಪಡೆಯುತ್ತದೆ.
-
ಪ್ರಸ್ತುತ ಲಭ್ಯವಿರುವ ಮಾಡೆಲ್ ಈಗಾಗಲೇ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ADAS ಅನ್ನು ಪಡೆದುಕೊಂಡಿದೆ, ಇವುಗಳನ್ನೇ ನವೀಕೃತ ಎಸ್‌ಯುವಿ ಕೂಡ ಪಡೆದುಕೊಳ್ಳುವ ಸಾಧ್ಯತೆಯಿದೆ.
-
ಹೊಸ ಟರ್ಬೊ-ಪೆಟ್ರೋಲ್ (1.5-ಲೀಟರ್ TGDI) ಮತ್ತು ಪ್ರಸ್ತುತ ಲಭ್ಯವಿರುವ ಡೀಸೆಲ್ ಎಂಜಿನ್ ಎರಡನ್ನೂ ಪಡೆಯುತ್ತದೆ.
-
ಬೆಲೆಗಳು 16 ಲಕ್ಷ ರೂ.ದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ).
ನವೀಕೃತ ಟಾಟಾ ಸಫಾರಿಯ ಸಾಕಷ್ಟು ಸ್ಪೈ ಶಾಟ್‌ಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಮತ್ತೊಮ್ಮೆ, ನವೀಕೃತ ಎಸ್‌ಯುವಿಯ ಎರಡು ಪರೀಕ್ಷಾರ್ಥ ಕಾರುಗಳು ಸುಳಿವು ಸಿಗದ ರೀತಿಯಲ್ಲಿ ಕಾಣಿಸಿಕೊಂಡಿವೆ, ಆದರೂ ಅವುಗಳಿಗೆ ಸಂಬಂಧಿಸಿದ ಅನೇಕ ಹೊಸ ಮಾಹಿತಿಗಳು ಲಭ್ಯವಾಗಿವೆ.
ಹೊಸ ಸ್ಪೈ ಶಾಟ್ ವಿವರಗಳು
ಹೊಸ ಸ್ಪೈ ಶಾಟ್‌ಗಳಲ್ಲಿ, ಒಂದು ಪರೀಕ್ಷಾರ್ಥ ಕಾರು ಪ್ರಸ್ತುತ ಲಭ್ಯವಿರುವ ಮಾಡೆಲ್‌ನಂತೆಯೇ 18-ಇಂಚಿನ ವ್ಹೀಲ್‌ಗಳನ್ನು ಹೊಂದಿರುವುದನ್ನು ನಾವು ಗಮನಿಸಬಹುದು, ಆದರೆ ಇನ್ನೊಂದು ನವೀಕೃತ ಸಫಾರಿ ಅದರ ವ್ಹೀಲ್‌ಗಳಿಗೆ ನವೀನ, ಸಂಕೀರ್ಣವಾದ 5-ಸ್ಪೋಕ್ ವಿನ್ಯಾಸವನ್ನು ಪಡೆದುಕೊಂಡಿದೆ. ಪ್ರಸ್ತುತ ಲಭ್ಯವಿರುವ ಸಫಾರಿಯು 18-ಇಂಚಿನ ಯುನಿಟ್‌ಗಳೊಂದಿಗೆ ಲಭ್ಯವಾಗುತ್ತದೆ, ಹೊಸ ಸ್ಪೈ ಶಾಟ್‌ಗಳಲ್ಲಿ ಕಂಡುಬರುವಂತೆ ನವೀಕೃತ ಮಾಡೆಲ್ 19-ಇಂಚಿನ ವ್ಹೀಲ್‌ಗಳನ್ನು ಪಡೆಯುತ್ತದೆ.
ಇದನ್ನೂ ನೋಡಿ: ಟಾಟಾ ಪಂಚ್ ಸಿಎನ್‌ಜಿ ಪರೀಕ್ಷೆಯ ಸಮಯದಲ್ಲಿ ಕಂಡುಬಂದಿದೆ, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ
ಗಮನಿಸಲಾದ ಪರಿಷ್ಕರಣೆಗಳು
ಈ ಮೊದಲೇ ನೋಡಿದ ಸ್ಪೈ ಶಾಟ್‌ಗಳಿಂದ ತಿಳಿದುಕೊಂಡಂತೆ, ನವೀಕೃತ ಎಸ್‌ಯುವಿ ಲಂಬವಾಗಿ ಇರಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್ ಎಲ್‌ಇಡಿ DRL ಗಳನ್ನು ಹೊಂದಿದೆ. ಇದರ ಪ್ರೊಫೈಲ್ ಹೊಸ ಅಲಾಯ್ ವ್ಹೀಲ್ ವಿನ್ಯಾಸವನ್ನು ಹೊರತುಪಡಿಸಿ ಹೆಚ್ಚಿನ ಅಪ್‌ಡೇಟ್‌ಗಳನ್ನು ಪಡೆಯುವ ನಿರೀಕ್ಷೆಯಿಲ್ಲ ಆದರೆ ಹಿಂಭಾಗದಲ್ಲಿ, ನೀವು ಸ್ಲಿಮ್ಮರ್, ಕನೆಕ್ಟೆಡ್ ಎಲ್ಇಡಿ ಲೈಟ್‌ಗಳು ಮತ್ತು ರಿಫ್ರೆಶ್ ಮಾಡಿದ ಬಂಪರ್ ಅನ್ನು ಹೊಂದುವಿರಿ. ಇದು ಹೊಸ ಕಾರುಗಳಂತೆ ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಸಹ ಹೊಂದಿದೆ.
ಕ್ಯಾಬಿನ್ ಮತ್ತು ಫೀಚರ್ ಅಪ್‌ಡೇಟ್‌ಗಳು
ಟಾಟಾ ಇತ್ತೀಚೆಗೆ ಸಫಾರಿ ಕಾರಿನ ಕ್ಯಾಬಿನ್‌ಗೆ ಹಲವು ಅಪ್‌ಡೇಟ್‌ಗಳನ್ನು ಒದಗಿಸಿದೆ, ಆದ್ದರಿಂದ ಅವುಗಳನ್ನು ಅದರ ನವೀಕೃತ ಆವೃತ್ತಿಯಲ್ಲಿಯೂ ಕಾಣಬಹುದು ಎಂದು ಊಹಿಸಲಾಗಿದೆ. ಇತ್ತೀಚಿನ ಸೇರ್ಪಡೆಗಳಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿವೆ. ಮಹೀಂದ್ರಾ ಎಕ್ಸ್‌ಯುವಿ700 ಯೊಂದಿಗೆ ಕಠಿಣ ಸ್ಪರ್ಧೆಯನ್ನು ಕಾಯ್ದುಕೊಳ್ಳಲು ಟಾಟಾ ಅನೇಕ ಹೊಸ ಫೀಚರ್‌ಗಳೊಂದಿಗೆ ಸಫಾರಿಯನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಲೇ ಇರುತ್ತದೆ. ಈ ಮಿಡ್‌ಲೈಫ್ ಅಪ್‌ಡೇಟ್‌ನೊಂದಿಗೆ ಇನ್ನೂ ಕೆಲವು ಹೆಡ್‌ಲೈನಿಂಗ್ ಫೀಚರ್‌ಗಳನ್ನು ಸೇರ್ಪಡೆಯನ್ನು ನೀವು ನಿರೀಕ್ಷಿಸಬಹುದು ಎಂದು ಕಂಪನಿಯು ಹೇಳಿದೆ.
ಇವುಗಳಲ್ಲದೆ, 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಸೀಟ್‌ಗಳನ್ನು ಸಹ ಇದರಲ್ಲಿ ನೀಡಬಹುದು. 2024 ರ ಸಫಾರಿ ಕಾರು ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು.
ಎಂಜಿನ್‌ನಲ್ಲಿ ಬದಲಾವಣೆ ಮಾಡಲಾಗಿದೆಯೇ?
ನವೀಕೃತ ಟಾಟಾ ಸಫಾರಿಯು ಪ್ರಸ್ತುತ ಲಭ್ಯವಿರುವ ಮಾಡೆಲ್‌ನಂತೆಯೇ 2-ಲೀಟರ್ ಡೀಸೆಲ್ ಎಂಜಿನ್ (170PS/350Nm) ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. 2023 ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಪ್ರದರ್ಶಿಸಿದ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (170PS/280Nm) ಆಯ್ಕೆಯನ್ನು ಟಾಟಾ ನೀಡಬಹುದು.
ಇದನ್ನೂ ಓದಿ: ಕಾರ್‌ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್‌ಗಾಗಿ ಉತ್ತಮ ಹೊಸ ಫೀಚರ್‌ಗಳನ್ನು ಸೇರಿಸಿರುವ ಆ್ಯಪಲ್ iOS 17
ಬಿಡುಗಡೆ, ಬೆಲೆ ಮತ್ತು ಹೋಲಿಕೆ
ಮುಂದಿನ ವರ್ಷದ ಆರಂಭದಲ್ಲಿ ಟಾಟಾ ನವೀಕೃತ ಸಫಾರಿಯನ್ನು ಬಿಡುಗಡೆ ಮಾಡಬಹುದೆನ್ನುವುದು ನಮ್ಮ ನಿರೀಕ್ಷೆಯಾಗಿದೆ ಮತ್ತು ಅದರ ಬೆಲೆಗಳು 16 ಲಕ್ಷ ರೂ.ದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು. ಇದು ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು MG ಹೆಕ್ಟರ್ ಪ್ಲಸ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.
0 out of 0 found this helpful