• English
  • Login / Register

ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ

ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 18, 2023 10:33 am ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ಸೋನೆಟ್‌ ಫೇಸ್‌ ಲಿಫ್ಟ್‌ ಅನ್ನು ಎಂದು ಮೋನೋಟೋನ್‌ ಮತ್ತು ಎರಡು ಡ್ಯುವಲ್‌ ಟೋನ್‌ ಪೇಂಟ್‌ ಆಯ್ಕೆಗಳಲ್ಲಿ ನೀಡಿದರೆ, X-ಲೈನ್‌ ವೇರಿಯಂಟ್‌ ತನ್ನದೇ ಆದ ಮ್ಯಾಟ್‌ ಫಿನಿಶ್‌ ಛಾಯೆಯನ್ನು ಪಡೆಯಲಿದೆ.

2024 Kia Sonet colour options

  • ಪರಿಷ್ಕೃತ ಕಿಯಾ ಸೋನೆಟ್‌ ಅನ್ನು ಇತ್ತೀಚೆಗೆ ಭಾರತದಲ್ಲಿ ಅನಾವರಣಗೊಳಿಸಲಾಯಿತು.
  • ಒಟ್ಟು ಏಳು ವೇರಿಯಂಟ್‌ ಗಳಲ್ಲಿ ಇದು ಲಭ್ಯ: HTE, HTK, HTK+, HTX, HTX+, GT-ಲೈನ್ ಮತ್ತು X-ಲೈನ್.
  • ಸೆಲ್ಟೋಸ್‌ ನಿಂದ ಒಂದು ಹೊಸ ಬಣ್ಣವನ್ನು ಇದು ಎರವಲು ಪಡೆದಿದ್ದು ಉಳಿದವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ. 
  • ಹಳೆಯ ಸೋನೆಟ್‌ ನಂತೆಯೇ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳನ್ನು ಹೊಂದಿದ್ದು ಡೀಸೆಲ್‌ MT ಆಯ್ಕೆಯು ವಾಪಾಸ್‌ ಬಂದಿದೆ.
  • ಇದು 2024ರ ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.

ಇತ್ತೀಚೆಗಷ್ಟೇ ಪರಿಷ್ಕೃತ ಕಿಯಾ ಸೋನೆಟ್ ಅನ್ನು ಭಾರತದಲ್ಲಿ ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಬೆಲೆಯ ವಿವರಗಳಿಗಾಗಿ ನಾವು ಕಾಯುತ್ತಿದ್ದರೂ, ಈ ಕಾರು ತಯಾರಕ ಸಂಸ್ಥೆಯು ಪರಿಷ್ಕೃತ SUV ಯ ಬುಕಿಂಗ್‌ ಅನ್ನು ಡಿಸೆಂಬರ್‌ 20ರಿಂದ ಪ್ರಾರಂಭಿಸಲಿದೆ. ಹೊಸ ಸೋನೆಟ್‌ ವಾಹನಕ್ಕಾಗಿ ನೀವು ಎದುರು ನೋಡುತ್ತಿದ್ದರೆ ಇದು ಯಾವೆಲ್ಲ ಬಣ್ಣಗಳಲ್ಲಿ ಲಭ್ಯವಿದೆ ಎಂಬುದನ್ನು ಇಲ್ಲಿ ಗಮನಿಸಿ:

 

  • ಪ್ಯೂಟರ್‌ ಆಲಿವ್‌ (ಹೊಸತು)

 

  • ಗ್ಲೇಸಿಯರ್ ವೈಟ್‌ ಪರ್ಲ್

  • ಸ್ಪಾರ್ಕ್‌ಲಿಂಗ್‌ ಸಿಲ್ವರ್

  • ಗ್ರಾವಿಟಿ ಗ್ರೇ

  • ಅರೋರ ಬ್ಲ್ಯಾಕ್‌ ಪರ್ಲ್

  • ಇಂಟೆನ್ಸ್‌ ರೆಡ್

 

  • ಇಂಪೀರಿಯಲ್‌ ಬ್ಲೂ

  • ಕ್ಲೀಯರ್‌ ವೈಟ್‌

 ಎಲ್ಲಾ ಛಾಯೆಗಳನ್ನು ಇದೀಗ ನಿವೃತ್ತಿ ಹೊಂದುತ್ತಿರುವ ಮಾದರಿಯಿಂದ ಮುಂದುವರಿಸಲಾಗಿದ್ದು, ಪ್ಯೂಟರ್‌ ಆಲಿವ್‌ ಬಣ್ಣವನ್ನು ಮಾತ್ರವೇ ಹೊಸ ಕಿಯಾ ಸೆಲ್ಟೋಸ್‌  ನಿಂದ ಎರವಲು ಪಡೆಯಲಾಗಿದೆ. ಸೋನೆಟ್‌ ಕಾರನ್ನು 2020ರಲ್ಲಿ ಬಿಡುಗಡೆ ಮಾಡಿದಾಗ ಅದು ಹೊಂದಿದ್ದ ಬೇಜ್‌ ಗೋಲ್ಡ್‌ ಬಣ್ಣವನ್ನು ಕೆಲವು ಸಮಯದ ಹಿಂದೆ ನಿಲ್ಲಿಸಲಾಗಿತ್ತು. ಪರಿಷ್ಕೃತ ಮಾದರಿಯಲ್ಲೂ ಈ ಬಣ್ಣ ಕಾಣಿಸದು.

ಇದನ್ನು ಈ ಕೆಳಗೆ ಉಲ್ಲೇಖಿಸಿದಂತೆ ಎರಡು ಡ್ಯುವಲ್‌ ಟೋನ್‌ ಪೇಂಟ್‌ ಆಯ್ಕೆಗಳಲ್ಲಿ ನೀಡಲಾಗುತ್ತದೆ:

  •  ಅರೋರಾ ಬ್ಲ್ಯಾಕ್‌ ಪರ್ಲ್‌ ಜೊತೆಗೆ ಇಂಟೆನ್ಸ್‌ ರೆಡ್

  •  ಅರೋರಾ ಬ್ಲ್ಯಾಕ್‌ ಪರ್ಲ್‌ ಜೊತೆಗೆ ಗ್ಲೇಸಿಯರ್‌ ವೈಟ್‌ ಪರ್ಲ್

 ಈ ಶ್ರೇಣಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಬರುವ X-ಲೈನ್‌ ವೇರಿಯಂಟ್‌, ʻXಕ್ಲೂಸಿವ್‌ ಮ್ಯಾಟ್‌ ಗ್ರಾಫಿಕ್‌ʼ ಎನ್ನುವ ಅನನ್ಯ ಮ್ಯಾಟ್‌ ಫಿನಿಶ್‌ ಬಣ್ಣದೊಂದಿಗೆ ಬರಲಿದೆ.

ಹೊರಾಂಗಣ ಛಾಯೆಗಳು ಮಾತ್ರವಲ್ಲದೆ ಕ್ಯಾಬಿನ್‌ ಸಹ ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ಬರಲಿದ್ದು, ವಿವಿಧ ಸೀಟ್‌ ಅಫೋಲ್ಸ್ಟರಿ ಮತ್ತು ಇತರ ಇನ್‌ ಕ್ಯಾಬಿನ್‌ ವಿಶೇಷತೆಗಳೊಂದಿಗೆ ಲಭ್ಯ.

 X ಲೈನ್‌ ವೇರಿಯಂಟ್‌, ಸೇಜ್‌ ಗ್ರೀನ್‌ ಲೆದರೆಟ್‌ ಸೀಟುಗಳು ಮತ್ತು ಇನ್ಸರ್ಟ್‌ ಗಳೊಂದಿಗೆ ಸಂಪೂಣ್ಣ ಕಪ್ಪು ಬಣ್ಣದ ಕ್ಯಾಬಿನ್‌ ಜೊತೆಗೆ ಬರುತ್ತದೆ. ನೀವು GTX+ ವೇರಿಯಂಟ್‌ ಅನ್ನು (GT ಲೈನ್‌ ಅಡಿಯಲ್ಲಿ) ಆರಿಸಿಕೊಂಡರೆ, ಇದು ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್‌ ಥೀಮ್‌ ಅನ್ನು ಹೊಂದಿದೆ. ಆದರೆ ಇದರ ಅಫೋಲ್ಸ್ಟರಿಗೆ ಕಪ್ಪು ಮತ್ತು ಬಿಳಿ ಬಣ್ಣದ ಫಿನಿಶ್‌ ನೀಡಲಾಗಿದ್ದು, ಕ್ಯಾಬಿನ್‌ ನಲ್ಲಿ ಕೆಲವು ಬಿಳಿ ಇನ್ಟರ್ಟ್‌ ಗಳನ್ನು ನೋಡಬಹುದು.

 ಟೆಕ್‌ ಲೈನ್‌ ವೇರಿಯಂಟ್‌ ಗಳು (HT ಲೈನ್‌ ಎಂದು ಸಹ ಕರೆಯಲಾಗುತ್ತದೆ) ಒಟ್ಟು ಮೂರು ಕ್ಯಾಬಿನ್‌ ಥೀಮ್‌ ಗಳನ್ನು ಪಡೆದಿವೆ: ಸೆಮಿ ಲೆದರೆಟ್‌ ಸೀಟುಗಳೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್,‌ ಕಪ್ಪು ಮತ್ತು ಬೇಜ್‌ ಕ್ಯಾಬಿನ್‌ ಥೀಮ್‌ ಮತ್ತು ಸೆಮಿ ಲೆದರೇಟ್‌ ಸೀಟುಗಳು, ಮತ್ತು ಕಪ್ಪು ಹಾಗೂ ಕಂದು ಬಣ್ಣದ ಸೀಟ್‌ ಅಫೋಲ್ಸ್ಟರಿ ಮತ್ತು ಕಂದು ಬಣ್ಣದ ಇನ್ಸರ್ಟ್‌ ಗಳೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್.

ಸಂಬಂಧಿತ: ಪರಿಷ್ಕೃತ ಕಿಯಾ ಸೋನೆಟ್‌ ವಾಹನದ ಪ್ರತಿ ವೇರಿಯಂಟ್‌ ನೀಡಲಿರುವ ಸೌಲಭ್ಯಗಳಿವು...

 

 ಪವರ್‌ ಟ್ರೇನ್‌ ಮತ್ತು ವೈಶಿಷ್ಟ್ಯಗಳು

 ಕಿಯಾ ಸಂಸ್ಥೆಯು ಪರಿಷ್ಕೃತ ಸೋನೆಟ್‌ ಅನ್ನು ಈಗ ನಿವೃತ್ತಿ ಹೊಂದಲಿರುವ ಮಾದರಿಯಲ್ಲಿರುವಂತೆಯೇ ಅದೇ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳೊಂದಿಗೆ ಬರಲಿದ್ದು ಇದರ ಟ್ರಾನ್ಸ್‌ ಮಿಶನ್‌ ಆಯ್ಕೆಗಳಿಗೆ ಒಂದು ಹೆಚ್ಚುವರಿ ಸೇರ್ಪಡೆಯನ್ನು ಮಾಡಲಾಗಿದೆ. ಇದರಲ್ಲಿರುವ ಸಾಧನಗಳ ಕುರಿತು ಮಾತನಾಡುವುದಾದರೆ, ಇದು 10.25 ಇಂಚಿನ ಡಿಸ್ಪ್ಲೇಗಳು, 360 ಡಿಗ್ರಿ ಕ್ಯಾಮರಾ, ಅರು ಏರ್‌ ಬ್ಯಾಗ್‌ ಗಳು (ಈಗ ಇದು ಪ್ರಮಾಣಿತ), ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳನ್ನು ಹೊಂದಿದೆ. ನೀವು ನಮ್ಮ ‘ಸೋನೆಟ್‌ ಫೇಸ್‌ ಲಿಫ್ಟ್‌ ಅನಾವರಣʼ ವರದಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

 ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

 ನಮ್ಮ ಪ್ರಕಾರ ಪರಿಷ್ಕೃತ ಕಿಯಾ ಸೋನೆಟ್‌ ಕಾರು 2024ರ ಜನವರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಕಿಯಾ ಸಂಸ್ಥೆಯು ಈ ಪರಿಷ್ಕೃತ ಸಬ್-4m SUV ಯ ಬೆಲೆಯನ್ನು ರೂ. 8 ಲಕ್ಷಕ್ಕೆ (ಎಕ್ಸ್‌ - ಶೋರೂಂ) ನಿಗದಿಪಡಿಸಿದೆ. ಇದು ಹ್ಯುಂಡೈ ವೆನ್ಯು, ಮಹೀಂದ್ರಾ XUV300, ಮಾರುತಿ ಬ್ರೆಜ್ಜ, ಟಾಟಾ ನೆಕ್ಸನ್, ನಿಸ್ಸಾನ್‌ ಮ್ಯಾಗ್ನೈಟ್, ಮತ್ತು ರೆನೋ ಕೈಗರ್‌ ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದ್ದು, ಮಾರುತಿ ಫ್ರಾಂಕ್ಸ್‌ ಕ್ರಾಸ್‌ ಓವರ್‌ ಗೆ ಬದಲಿ ಆಯ್ಕೆ ಎನಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಿಯಾ ಸೋನೆಟ್‌ ಡೀಸೆಲ್

was this article helpful ?

Write your Comment on Kia ಸೊನೆಟ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience