• English
  • Login / Register

Facelifted Kia Sonet ವಾಹನದ ಪ್ರತಿ ವೇರಿಯಂಟ್‌ ನೀಡಲಿರುವ ಸೌಲಭ್ಯಗಳಿವು...

ಕಿಯಾ ಸೊನೆಟ್ ಗಾಗಿ ansh ಮೂಲಕ ಡಿಸೆಂಬರ್ 18, 2023 11:11 am ರಂದು ಪ್ರಕಟಿಸಲಾಗಿದೆ

  • 42 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಸೋನೆಟ್‌ ಕಾರು ವಿನ್ಯಾಸ, ಕ್ಯಾಬಿನ್‌ ಅನುಭವ, ವೈಶಿಷ್ಟ್ಯಗಳು ಮತ್ತು ಪವರ್‌ ಟ್ರೇನ್‌ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಪರಿಷ್ಕರಣೆಯನ್ನು ಕಂಡಿದೆ.

Facelifted Kia Sonet

  • ಇದು ಮೊದಲಿನಂತೆಯೇ 7 ವೇರಿಯಂಟ್‌ ಗಳಲ್ಲಿ ಬರುತ್ತದೆ: HTE, HTK, HTK+, HTX, HTX+, GT-ಲೈನ್ ಮತ್ತು X-ಲೈನ್.
  • ಕಿಯಾ ಸಂಸ್ಥೆಯು ಹೊರಾಂಗಣಕ್ಕೂ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.
  • ಲೆವೆಲ್ 1 ADAS‌ ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಪಡೆದಿದೆ.
  • ಈಗ ಡೀಸೆಲ್‌ ಎಂಜಿನ್‌ ಸಹ 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಬರುತ್ತದೆ.
  • ಇದರ ಬೆಲೆಯು ಸುಮಾರು ರೂ. 8 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.

ಪರಿಷ್ಕೃತ ಕಿಯಾ ಸೋನೆಟ್‌ ಅನ್ನು ಸಹ ಅನಾವರಣಗೊಳಿಸಲಾಗಿದ್ದು, ಈಗ ಇದು ಮರುವಿನ್ಯಾಸಕ್ಕೆ ಒಳಪಡಿಸಿದ ಹೊರಾಂಗಣ, ಸ್ವಲ್ಪ ಬದಲಾವಣೆಗೆ ಒಳಗಾದ ಕ್ಯಾಬಿನ್‌, ಹೆಚ್ಚುವರಿ ವೈಶಿಷ್ಟ್ಯಗಳು, ಸುಧಾರಿತ ಸುರಕ್ಷತೆ ಮತ್ತು ಡೀಸೆಲ್-ಮ್ಯಾನುವಲ್‌ ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಬರಲಿದೆ. ಈ ಕಾರು ತಯಾರಕ ಸಂಸ್ಥೆಯು ಡಿಸೆಂಬರ್‌ 20ರಂದು ಆರ್ಡರ್‌ ತೆಗೆದುಕೊಳ್ಳುವುದನ್ನ ಪ್ರಾರಂಭಿಸಲಿದೆ. ಒಂದು ವೇಳೆ ಇದನ್ನು ಖರೀದಿಸುವ ಇಚ್ಛೆಯನ್ನು ಹೊಂದಿದ್ದು ಯಾವ ವೇರಿಯಂಟ್‌ ಅನ್ನು ಆರಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಹೊಂದಿಲ್ಲದೆ ಇದ್ದರೆ, ಈ ಸಬ್‌ ಕಾಂಪ್ಯಾಕ್ಟ್‌ SUV ಯ ಯಾವ ವೇರಿಯಂಟ್‌ ನಿಮಗೆ ಹೆಚ್ಚು ಒಪ್ಪುತ್ತದೆ ಎಂಬುದನ್ನು ಈ ಲೇಖನವು ನಿಮಗೆ ತಿಳಿಸುತ್ತದೆ.

 

ಕಿಯಾ ಸೋನೆಟ್‌  HTE

Facelifted Kia Sonet 6 Standard Airbags

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • ಹ್ಯಾಲೋಜೆನ್‌ ಹೆಡ್‌ ಲೈಟ್‌ ಗಳು ಮತ್ತು ಟೇಲ್‌ ಲ್ಯಾಂಪ್‌ ಗಳು
  • ಕವರ್‌ ಗಳ ಜೊತೆಗೆ 15 ಇಂಚಿನ ಸ್ಟೀಲ್‌ ವೀಲ್‌ ಗಳು
  • ಬಾಡಿ ಕಲರ್ಡ್‌ ಡೋರ್‌ ಹ್ಯಾಂಡಲ್‌ ಗಳು
  • ಸೆಮಿ ಲೆದರೆಟ್‌ ಸೀಟುಗಳು
  • ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್
  • ‌AC ವೆಂಟ್‌ ಗಳ ಮೇಲೆ ಸಿಲ್ವರ್‌ ಫಿನಿಶ್
  • ಬೇಜ್‌ ರೂಫ್‌ ಲೈನಿಂಗ್
  •  
  • ಟಿಲ್ಟ್‌ ಅಡ್ಜಸ್ಟೇಬಲ್‌ ಸ್ಟೀಯರಿಂಗ್‌ ವೀಲ್
  • ಮ್ಯಾನುವಲ್‌ AC
  • ರಿಯರ್‌ AC ವೆಂಟ್‌ ಗಳು
  • ಡೇ ಅಂಡ್‌ ನೈಟ್ IRVM
  • ಟೈಪ್-C USB ಚಾರ್ಜರ್‌ ಗಳು (ಮುಂಭಾಗ ಮತ್ತು ಹಿಂಭಾಗ)
  • 12V ಪವರ್‌ ಔಟ್ಲೆಟ್
  • 4.2‌ ಇಂಚಿನ ಕಲರ್‌ ಇನ್ಸ್‌ ಟ್ರುಮೆಂಟ್‌ ಕ್ಲಸ್ಟರ್
  • 6 ಏರ್‌ ಬ್ಯಾಗುಗಳು
  • EBD‌ ಜೊತೆಗೆ ABS
  • ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC)
  • ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ (VSM)
  • ರಿಯರ್‌ ಪಾರ್ಕಿಂಗ್‌ ಸೆನ್ಸಾರ್‌ ಗಳು
  • ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS)
  • ಎಲ್ಲಾ 3 ಪಾಯಿಂಟ್‌ ಸೀಟ್‌ ಬೆಲ್ಟ್‌ ಗಳು
  • ಸೀಟ್‌ ಬೆಲ್ಟ್‌ ರಿಮೈಂಡರ್‌ ಗಳು - ಎಲ್ಲಾ ಪ್ರಯಾಣಿಕರಿಗಾಗಿ

ಹೊಸ ಕಿಯಾ ಸೋನೆಟ್‌ ಕಾರಿನ ಬೇಸ್‌ ವೇರಿಯಂಟ್‌, ಹೊರಾಂಗಣದ ವಿಚಾರದಲ್ಲಿ ಹೆಚ್ಚೇನೂ ವಿಶೇಷತೆಯನ್ನು ಹೊಂದಿಲ್ಲ. ಆದರೆ ನೀವು ಸೆಮಿ ಲೆದರೆಟ್‌ ಸೀಟುಗಳ ಜೊತೆಗೆ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್‌ ಅನ್ನು ಪಡೆಯಲಿದ್ದೀರಿ. ಅಲ್ಲದೆ ಇದು ಇನ್ಫೊಟೈನ್‌ ಮೆಂಟ್‌ ಸಿಸ್ಟಂ ಅನ್ನು ಹೊಂದಿಲ್ಲದೆ ಇದ್ದರೂ, 6 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಮತ್ತು ರಿಯರ್‌ ಪಾರ್ಕಿಂಗ್‌ ಸೆನ್ಸಾರ್‌ ಸೇರಿದಂತೆ ಅನೇಕ ಪ್ರಮಾಣಿತ ಸುರಕ್ಷಾ ಸೌಲಭ್ಯಗಳನ್ನು ಹೊಂದಿದೆ. 

ಇದನ್ನು ಸಹ ಓದಿರಿ: 2024 ಕಿಯಾ ಸೋನೆಟ್‌ ವೇರಿಯಂಟ್‌ ವಾರು ಎಂಜಿನ್‌ ಮತ್ತು ಟ್ರಾನ್ಸ್‌ ಮಿಶನ್‌ ಆಯ್ಕೆಗಳ ವಿವರಣೆ ಇಲ್ಲಿದೆ...

ಈ ವೇರಿಯಂಟ್‌ 1.2 ಲೀಟರ್‌ ಪೆಟ್ರೋಲ್‌ ಮತ್ತು 1.5 ಲೀಟರ್‌ ಡೀಸೆಲ್‌ ಎಂಜಿನ್‌ ಗಳೆರಡರಲ್ಲೂ ದೊರೆಯಲಿದೆ. ಆದರೆ ಪ್ರತಿಯೊಂದರಲ್ಲಿ ಮ್ಯಾನುವಲ್‌ ಟ್ರಾನ್ಸ್‌ ಮಿಷನ್‌ ಆಯ್ಕೆ ಮಾತ್ರವೇ ದೊರೆಯಲಿದೆ.

 

 

ಕಿಯಾ ಸೋನೆಟ್‌ HTK

Facelifted Kia Sonet Front Parking Sensors

HTE ವೇರಿಯಂಟ್‌ ಗೆ ಹೆಚ್ಚುವರಿಯಾಗಿ ವನ್-ಅಬೋವ್-‌ಬೇಸ್‌ ಸೋನೆಟ್‌ HTK ವೇರಿಯಂಟ್‌ ಈ ಕೆಳಗಿನವುಗಳನ್ನು ಒದಗಿಸುತ್ತದೆ:

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • 16 ಇಂಚಿನ ಸ್ಟೈಲ್ಡ್‌ ಸ್ಟೀಲ್‌ ವೀಲ್‌ ಗಳು
  • ರೂಫ್‌ ರ್‍ಯಾಕ್‌‌
  • ಶಾರ್ಕ್‌ ಫಿನ್‌ ಆಂಟೆನಾ

 

  • ಎತ್ತರ ಹೊಂದಿಸಬಹುದಾದ ಚಾಲಕನ ಸೀಟು
  • ರಿಯರ್‌ ಡೋರ್‌ ಸನ್‌ ಶೇಡ್
  • ಕೀ ಇಲ್ಲದೆಯೇ ಪ್ರವೇಶ
  • ಆಲ್‌ ಡೋರ್‌ ಪವರ್‌ ವಿಂಡೋಗಳು
  • ಸ್ಟೀಯರಿಂಗ್‌ ಮೌಂಟೆಡ್‌ ಆಡಿಯೋ ಕಂಟ್ರೋಲ್‌ ಗಳು
  • 8 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ
  • ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ
  • 6 ಸ್ಪೀಕರ್‌ ಸೌಂಡ್‌ ಸಿಸ್ಟಂ (4 ಸ್ಪೀಕರ್‌ ಗಳು ಮತ್ತು 2 ಟ್ವೀಟರ್‌ ಗಳು)
  • ಫ್ರಂಟ್ ಪಾರ್ಕಿಂಗ್‌ ಸೆನ್ಸಾರ್‌ ಗಳು
  • ಫಾಲೋ ಮಿ ಹೋಂ ಹೆಡ್‌ ಲೈಟ್‌ ಗಳು
  • ರಿಯರ್‌ ವ್ಯೂ ಕ್ಯಾಮರಾ

HTK ವೇರಿಯಂಟ್‌ ನಲ್ಲಿ ನೀವು ಹೊರಗಡೆಗೆ ಸಣ್ಣಪುಟ್ಟ ಪರಿಷ್ಕರಣೆಗಳನ್ನು ಕಾಣಬಹುದು. ಆದರೆ ಕ್ಯಾಬಿನ್‌ ನಿಮಗೆ ಹೆಚ್ಚಿನ ಅನುಕೂಲತೆಯನ್ನು ನೀಡುತ್ತದೆ. ಜೊತೆಗೆ ವೈರ್‌ ಲೆಸ್‌ ಕನೆಕ್ಟೆಡ್‌ ಕಾರ್‌ ಟೆಕ್‌ ನೊಂದಿಗೆ 8 ಇಂಚಿನ ಟಚ್‌ ಸ್ಕ್ರೀನ್‌ ಅನ್ನು ಇದು ಹೊಂದಿದೆ. ಅಲ್ಲದೆ ಪಾರ್ಕಿಂಗ್‌ ಕ್ಯಾಮರಾದಂತಹ ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ಕೆಲವೊಂದು ಅನುಕೂಲಕರ ಸುರಕ್ಷಾ ವೈಶಿಷ್ಟ್ಯಗಳನ್ನು ಈ ವೇರಿಯಂಟ್‌ ಒದಗಿಸುತ್ತದೆ. ಸೋನೆಟ್ HTK‌ ಯು ಬೇಸ್‌ ವೇರಿಯಂಟ್‌ ಹೊಂದಿರುವ ಎರಡು ಪವರ್‌ ಟ್ರೇನ್‌ ಗಳನ್ನೇ ನೀಡುತ್ತದೆ.

 

ಕಿಯಾ ಸೋನೆಟ್‌ HTK+

Facelifted Kia Sonet Electric Sunroof

 HTK ವೇರಿಯಂಟ್‌ ಗೆ ಹೋಲಿಸಿದರೆ ಸೋನೆಟ್ HTK+‌ ಈ ಕೆಳಗಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ:

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • LED DRLಗಳು
  • LED ಸಂಪರ್ಕಿತ ಟೇಲ್‌ ಲ್ಯಾಂಪ್‌ ಗಳು
  • LED ಫಾಗ್‌ ಲ್ಯಾಂಪುಗಳು
  • ಎಲೆಕ್ಟ್ರಿಕ್‌ ಸನ್‌ ರೂಫ್‌ (ಟರ್ಬೊ)

 

  • ಅಟೋ AC
  • ಪುಶ್‌ ಬಟನ್‌ ಸ್ಟಾರ್ಟ್‌ / ಸ್ಟಾಪ್
  • ಎಲೆಕ್ಟ್ರಿಕಲಿ ಫೋಲ್ಡೆಬಲ್ ORVM‌ ಗಳು
  • ವನ್‌ ಟಚ್‌ ಅಟೋ ಅಪ್/ಡೌನ್‌ ಡ್ರೈವರ್‌ ವಿಂಡೋ
  • ರಿಮೋಟ್‌ ಎಂಜಿನ್‌ ಸ್ಟಾರ್ಟ್‌ (ಟರ್ಬೊ ಮತ್ತು ಡೀಸೆಲ್)

 

  • ರಿಯರ್‌ ಡಿಫಾಗ್ಗರ್

ಸಬ್‌ ಕಾಂಪ್ಯಾಕ್ಟ್ SUV‌ ಯ ಈ ವೇರಿಯಂಟ್‌, ಹೆಡ್‌ ಲೈಟ್‌ ಗಳನ್ನು ಹೊರತುಪಡಿಸಿ LED ಲೈಟಿಂಗ್‌ ಜೊತೆಗೆ ಹೆಚ್ಚು ಆಕರ್ಷಕ ನೋಟವನ್ನು ಹೊಂದಿದೆ. ಅಲ್ಲದೆ ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಪುಶ್‌ ಬಟನ್‌ ಸ್ಟಾರ್ಟ್/‌ ಸ್ಟಾಪ್‌ ಇತ್ಯಾದಿಗಳ ಮೂಲಕ ಅನುಕೂಲತೆಯನ್ನು ಹೆಚ್ಚಿಸಲಾಗಿದೆ.

6-ಸ್ಪೀಡ್‌ iMT (ಕ್ಲಚ್‌ ಪೆಡಲ್‌ ಇಲ್ಲದೆಯೇ ಮ್ಯಾನುವಲ್) ಜೊತೆಗೆ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು‌ ಹೊಂದಿರುವ, ಸೋನೆಟ್‌ ನ ಆರಂಭಿಕ ಹಂತದ ವೇರಿಯಂಟ್‌ ಇದಾಗಿದೆ.

 

ಕಿಯಾ ಸೋನೆಟ್‌ HTX

Facelifted Kia Sonet Ventilated Front Seats

HTK+ ಗೆ ಹೋಲಿಸಿದರೆ HTX ಈ ಕೆಳಗಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ:

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • LED ಹೆಡ್‌ ಲೈಟ್‌ ಗಳು
  • ಸನ್‌ ರೂಫ್
  • ಲೆದರೆಟ್‌ ಹೊದಿಸಿದ ಸ್ಟೀಯರಿಂಗ್‌ ವೀಲ್‌, ಗೇರ್‌ ನಾಬ್‌ ಮತ್ತು ಡೋರ್‌ ಆರ್ಮ್‌ ರೆಸ್ಟ್.
  • ವಿವಿಧ ಡ್ಯುವಲ್‌ ಟೋನ್‌ ಒಳಾಂಗಣ ಥೀಮ್‌ ಗಳು
  • ರಿಯರ್‌ ಸೀಟ್ 60:40 ಸ್ಪ್ಲಿಟ್
  • ರಿಯರ್‌ ಪಾರ್ಸೆಲ್‌ ಶೆಲ್ಫ್
  • ಹೊಂದಿಸಬಹುದಾದ ರಿಯರ್‌ ಹೆಡ್‌ ರೆಸ್ಟ್‌ ಗಳು
  • ರಿಯರ್‌ ಸೆಂಟರ್‌ ಆರ್ಮ್‌ ರೆಸ್ಟ್
  • ಕ್ರೂಸ್‌ ಕಂಟ್ರೋಲ್
  • ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು
  • ವಿವಿಧ ಡ್ರೈವ್‌ ಮೋಡ್‌ ಗಳು (ಅಟೋಮ್ಯಾಟಿಕ್)
  • ಪ್ಯಾಡಲ್‌ ಶಿಫ್ಟರ್‌ ಗಳು (ಅಟೋಮ್ಯಾಟಿಕ್)
  • ರಿಮೋಟ್‌ ಎಂಜಿನ್‌ ಸ್ಟಾರ್ಟ್

 

  • ರಿಯರ್‌ ಡಿಸ್ಕ್‌ ಬ್ರೇಕ್‌ ಗಳು
  • ISOFIX ಚೈಲ್ಡ್‌ ಸೀಟ್‌ ಆಂಕರ್‌ ಗಳು

ಸಂಪೂರ್ಣ LED ವ್ಯವಸ್ಥೆಯ ಜೊತೆಗೆ,  ಹೊಂದಿಸಬಹುದಾದ ರಿಯರ್‌ ಹೆಡ್‌ ರೆಸ್ಟ್‌ ಗಳು ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳೊಂದಿಗೆ ಕಿಯಾ ಸೋನೆಟ್‌ ನ HTX ವೇರಿಯಂಟ್‌ ಉತ್ತಮ ಕ್ಯಾಬಿನ್‌ ಅನುಭವವನ್ನು ನೀಡುತ್ತದೆ. ಜತೆಗೆ ಕ್ರೂಸ್‌ ಕಂಟ್ರೋಲ್‌, ಡ್ರೈವ್‌ ಮೋಡ್‌ ಗಳು ಮತ್ತು ಪ್ಯಾಡಲ್‌ ಶಿಫ್ಟರ್‌ ಗಳ ಮೂಲಕ ಚಾಲನೆಯ ಅನುಭವದಲ್ಲಿ ಸುಧಾರಣೆಯನ್ನು ತಂದಿದೆ.

ಇದು ಹೊಸ ಕಿಯಾ ಸೋನೆಟ್‌ ಕಾರಿನ ಅಟೋಮ್ಯಾಟಿಕ್‌ ಆಯ್ಕೆಯ ಆರಂಭಿಕ ಹಂತದ ವಾಹನವೆನಿಸಿದೆ. ಆದರೆ ನೀವು ಇದರಲ್ಲಿ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಆಯ್ಕೆಯನ್ನು ಪಡೆಯುವುದಿಲ್ಲ.

ಕಿಯಾ ಸೋನೆಟ್‌ HTX+

Facelifted Kia Sonet 10.25-inch Touchscreen

ಸೋನೆಟ್‌ ನ ಮಿಡ್‌ ಸ್ಪೆಕ್‌ HTX+ ವೇರಿಯಂಟ್‌ ಈ ಕೆಳಗಿನ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯಲಿದೆ:

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • 16 ಇಂಚುಗಳ ಅಲೋಯ್‌ ವೀಲ್‌ ಗಳು
  • ಕಪ್ಪು ಮತ್ತು ಕಂದು ಬಣ್ಣದ ಲೆದರೆಟ್‌ ಸೀಟುಗಳು
  • LED ಆಂಬಿಯೆಂಟ್‌ ಸೌಂಡ್‌ ಲೈಟಿಂಗ್
  • ವೈರ್‌ ಲೆಸ್‌ ಫೋನ್‌ ಚಾರ್ಜರ್
  • 4 ವೈ ಪವರ್ಡ್‌ ಡ್ರೈವರ್‌ ಸೀಟ್
  • ರಿಯರ್‌ ವೈಪರ್‌ ವಾಶರ್
  • 7 ಸ್ಪೀಕರ್‌ ಬೋಸ್‌ ಸೌಂಡ್‌ ಸಿಸ್ಟಂ
  • ಏರ್‌ ಪ್ಯೂರಿಫೈರ್
  • ಆ್ಯಂಟಿ ಗ್ಲೇರ್ IRVM
  • 10.25 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ
  • 10.25‌ ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ
  • ವೈರ್ಡ್ ಆಂಡ್ರಾಯ್ಡ್‌ ಅಟೋ ಮತ್ತು ಆ್ಯಪಲ್‌ ಕಾರ್‌ ಪ್ಲೇ

 

HTX+‌ ವೇರಿಯಂಟ್‌, ಕಿಯಾ ಸೋನೆಟ್‌ ನೀಡುವ ಹೆಚ್ಚಿನ ಪ್ರೀಮಿಯಂ ಆರಾಮ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ದೊಡ್ಡದಾದ ಟಚ್‌ ಸ್ಕ್ರೀನ್‌ ಜೊತೆಗೆ ವೈರ್‌ ಲೆಸ್‌ ಸ್ಮಾರ್ಟ್‌ ಫೋನ್‌ ಏಕೀಕರಣವನ್ನು ಇದು ಹೊಂದಿಲ್ಲ. ಈ ಪರಿಷ್ಕೃತ ವಾಹನದಲ್ಲಿನ 10.25 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಇದರಲ್ಲಿನ ದೊಡ್ಡ ಬದಲಾವಣೆ ಎನಿಸಿದೆ. 

ರಸ್ತೆ ಬದಿಯ ನೆರವು

ಅಲ್ಲದೆ ಈ ವೇರಿಯಂಟ್‌ ಯಾವುದೇ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಆಯ್ಕೆಯೊಂದಿಗೆ ದೊರೆಯುವುದಿಲ್ಲ.

 

ಕಿಯಾ ಸೋನೆಟ್‌ GTX+

Facelifted Kia Sonet ADAS

ಸೋನೆಟ್‌ ನ GTX+ ವೇರಿಯಂಟ್‌ ನಲ್ಲಿ ನೀವು ಈ ಕೆಳಗಿನ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯಲಿದ್ದೀರಿ:

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • 16 ಇಂಚುಗಳ ಅಲೋಯ್‌ ವೀಲ್‌ ಗಳು
  • ನುಣುಪಾದ LED ಫಾಗ್‌ ಲ್ಯಾಂಪುಗಳು
  • ಬಾಡಿ ಕಲರ್‌ ರಿಯರ್‌ ಸ್ಪಾಯ್ಲರ್
  • ಮುಂಭಾಗದ ಮತ್ತು ಹಿಂಭಾಗದ ಸ್ಕಿಡ್‌ ಪ್ಲೇಟ್‌ ಗಳಿಗೆ ವಿವಿಧ ಶೈಲಿಗಳು
  • ಗ್ಲೋಸ್‌ ಬ್ಲ್ಯಾಕ್‌ ರೂಫ್‌ ರೇಲ್‌ ಗಳು
  • GT ಲೈನ್‌ ಲೋಗೊ ಜೊತೆಗೆ ಚರ್ಮದ ಹೊದಿಕೆಯ ಸ್ಟೀಯರಿಂಗ್‌ ವೀಲ್
  • ಅಲೋಯ್‌ ಪೆಡಲ್‌ ಗಳು
  • ಕಪ್ಪು ಬಣ್ಣದ ಲೆದರೆಟ್‌ ಸೀಟುಗಳು 
  • 4 ವೇ ಪವರ್‌ ಅಡ್ಜಸ್ಟೇಬಲ್‌ ಚಾಲಕನ ಸೀಟು

 

 

  • 360 ಡಿಗ್ರಿ ಕ್ಯಾಮರಾ
  • ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್
  • ಲೇನ್‌ ಕೀಪ್‌ ಅಸಿಸ್ಟ್
  • ಲೇನ್‌ ಡಿಪಾರ್ಚರ್‌ ವಾರ್ನಿಂಗ್
  • ಹೈ ಬೀಮ್‌ ಅಸಿಸ್ಟ್
  • ಡ್ರೈವರ್‌ ಅಟೆನ್ಶನ್‌ ವಾರ್ನಿಂಗ್
  • ಅಟೋ ಎಮರ್ಜೆನ್ಸಿ ಬ್ರೇಕಿಂಗ್

ಕಿಯಾ ಸೋನೆಟ್‌ ಕಾರಿನ GT ಲೈನ್‌ ವೇರಿಯಂಟ್‌ ವಿಭಿನ್ನ ಶೈಲಿಯ 16 ಇಂಚುಗಳ ಅಲೋಯ್‌ ವೀಲ್‌ ಗಳು ಮತ್ತು ಕ್ಯಾಬಿನ್‌ ನಲ್ಲಿ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಬರುತ್ತದೆ. ಆದರೆ ಸುರಕ್ಷತೆಯ ವಿಚಾರದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಮಾಡಲಾಗಿದ್ದು, 360 ಡಿಗ್ರಿ ಕ್ಯಾಮರಾ ಮತ್ತು ಲೆವಲ್‌ 1 ADAS ವೈಶಿಷ್ಟ್ಯಗಳ ಸೂಟ್‌ ಅನ್ನು ಸೇರಿಸಲಾಗಿದೆ. GTX+‌ ವೇರಿಯಂಟ್‌ ಅನ್ನು ಟರ್ಬೊ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳ ಜೊತೆಗೆ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳ ಜೊತೆಗೆ ನೀಡಲಾಗುತ್ತದೆ.

ಇದನ್ನು ಸಹ ಓದಿರಿ: ಕಿಯಾ ಸೋನೆಟ್‌ ಫೇಸ್‌ ಲಿಫ್ಟ್‌ ನ GTX+ ವೇರಿಯಂಟ್‌ ಅನ್ನು ಈ 15 ಚಿತ್ರಗಳ ಮೂಲಕ ಅರಿತುಕೊಳ್ಳಿರಿ

 

ಕಿಯಾ ಸೋನೆಟ್‌ X-ಲೈನ್

Facelifted Kia Sonet X-Line

ಕೊನೆಯದಾಗಿ Gt-ಲೈನ್‌ ಗೆ ಹೋಲಿಸಿದರೆ X-ಲೈನ್ ಈ ಕೆಳಗಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ:

ಹೊರಾಂಗಣ

ಒಳಾಂಗಣ

ಆರಾಮ ಮತ್ತು ಅನುಕೂಲತೆ

ಇನ್ಫೊಟೈನ್‌ ಮೆಂಟ್

ಸುರಕ್ಷತೆ

  • ಪಿಯಾನೊ ಬ್ಲ್ಯಾಕ್ ORVMಗಳು
  • ಮ್ಯಾಟ್‌ ಫಿನಿಶ್
  • ಸೇಜ್‌ ಗ್ರೀನ್‌ ಲೆದರೆಟ್‌ ಸೀಟುಗಳು
  • ಎಲ್ಲಾ ಪವರ್‌ ವಿಂಡೋಗಳು ವನ್‌ ಟಚ್‌ ಅಪ್‌ ಅಂಡ್‌ ಡೌನ್

 

 

GT-ಲೈನ್‌ ಗೆ ಹೋಲಿಸಿದರೆ, 2024 ಕಿಯಾ ಸೋನೆಟ್‌ ಕಾರಿನ ಟಾಪ್‌ ಸ್ಪೆಕ್‌ X-ಲೈನ್‌ ವೇರಿಯಂಟ್‌ ಹೆಚ್ಚಿನ ಮಟ್ಟಿಗೆ ಸೌಂದರ್ಯದಲ್ಲಿ ಬದಲಾವಣೆಯನ್ನು ಕಂಡಿದೆ. ಇದರಲ್ಲಿ ವಿಭಿನ್ನ ಹೊರಾಂಗಣ ಬಣ್ಣಗಳು, ಸೇಜ್‌ ಗ್ರೀನ್‌ ಸೀಟುಗಳು ಮತ್ತು ಒಟ್ಟಾರೆ ಆಕರ್ಷಕ ನೋಟ ಇತ್ಯಾದಿಗಳು ಸೇರಿವೆ. ಇದು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಆಯ್ಕೆಗಳಿಗೆ ಸೀಮಿತವಾಗಿದೆ.

ನಿರೀಕ್ಷಿತ ಬೆಲೆ ಮತ್ತು ಬಿಡುಗಡೆ

Facelifted Kia Sonet

ಕಿಯಾ ಸೋನೆಟ್‌ ಫೇಸ್‌ ಲಿಫ್ಟ್‌ ಕಾರನ್ನು ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 8 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಟಾಟಾ ನೆಕ್ಸನ್ಹ್ಯುಂಡೈ ವೆನ್ಯುಮಾರುತಿ ಬ್ರೆಜ್ಜ ಮತ್ತು ಮಹೀಂದ್ರಾ XUV300 ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್‌ ಅಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೊನೆಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience