Login or Register ಅತ್ಯುತ್ತಮ CarDekho experience ಗೆ
Login

ಹೊಸ Kia Sonet ನ HTX+ ವೇರಿಯಂಟ್‌ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ

published on ಡಿಸೆಂಬರ್ 19, 2023 04:35 pm by rohit for ಕಿಯಾ ಸೊನೆಟ್

HTX+ ವಾಹನವು ಕಿಯಾ ಸೋನೆಟ್‌ ನ ಟೆಕ್‌ (HT) ಲೈನ್‌ ಅಡಿಯಲ್ಲಿ ಸಂಪೂರ್ಣವಾಗಿ ಲೋಡೆಡ್‌ ಆದ ವೇರಿಯಂಟ್‌ ಆಗಿದ್ದು, ಹೊರಾಂಗಣ ಶೈಲಿಯಲ್ಲಿ ಒಂದಷ್ಟು ಭಿನ್ನತೆಯನ್ನು ಹೊಂದಿದೆ. ಹೀಗಾಗಿ ಇದು GT ಲೈನ್‌ ಮತ್ತು X-ಲೈನ್‌ ಟ್ರಿಮ್‌ ಗಳಿಂದ ಭಿನ್ನವಾಗಿ ಕಾಣುತ್ತದೆ.

ಕಿಯಾ ಸೋನೆಟ್‌ ಫೇಸ್‌ ಲಿಫ್ಟ್ ವಾಹನವನ್ನು ಭಾರತದಲ್ಲಿ ಅನಾವರಣಗೊಳಿಸಲಾಗಿದ್ದು, ಹೊಸ SUV ಯನ್ನು ಈ ಕೆಳಗಿನ ಮೂರು ವಿಸ್ತೃತ ಟ್ರಿಮ್‌ ಗಳಲ್ಲಿ ಒದಗಿಸಲಾಗುವುದು ಎಂದು ಈ ಕಾರು ತಯಾರಕ ಸಂಸ್ಥೆಯು ದೃಢೀಕರಿಸಿದೆ: ಟೆಕ್ (ಅಥವಾ HT) ಲೈನ್, GT ಲೈನ್‌ ಮತ್ತು X-ಲೈನ್. ನಾವು ಈಗಾಗಲೇ GTX+ ವೇರಿಯಂಟ್‌ ನ ವಿವರಗಳನ್ನು ಸಚಿತ್ರವಾಗಿ ಈಗಾಗಲೇ ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೇವೆ. ಈ ವರದಿಯಲ್ಲಿ, ಟೆಕ್‌ ಲೈನ್‌ ನ ಸಂಪೂರ್ಣ ಲೋಡೆಡ್‌ ವೇರಿಯಂಟ್‌ ಎನಿಸಿರುವ HTX+ ಮೇಲೆ ಬೆಳಕು ಹರಿಸಲಿದ್ದೇವೆ:

  1. ಹೊರಾಂಗಣ

ಇದರ ಫೇಶಿಯಾವು GTX+ ವೇರಿಯಂಟ್‌ ಗಿಂದ ಸ್ವಲ್ಪ ಭಿನ್ನಾವಾಗಿದೆ. ಏಕೆಂದರೆ ಗ್ರಿಲ್‌ ಅನ್ನು ಮರುವಿನ್ಯಾಸಕ್ಕೆ ಒಳಪಡಿಸಲಾಗಿದ್ದು, ಇದು ಸಿಲ್ವರ್‌ ಇನ್ಸರ್ಟ್‌ ಗಳನ್ನು ಹೊಂದಿಲ್ಲ. ಇದರಲ್ಲಿ ಮುಂಭಾಗದ ಕ್ಯಾಮರಾವು ಸಹ ಇಲ್ಲ. ಇದನ್ನು ೩೬೦ ಡಿಗ್ರಿ ಯೂನಿಟ್‌ ಜೊತೆಗೆ ಅಳವಡಿಸಲಾಗಿದೆ.

ನೀವು ಇನ್ನೂ ಸರಿಯಾಗಿ ನೋಡಿದರೆ, HTX+ ವೇರಿಯಂಟ್‌ ಉದ್ದನೆಯ LED DRL ಪಟ್ಟಿಗಳನ್ನು ಹೊಂದಿದ್ದು, ಇದು ಬಂಪರ್‌ ತನಕ ಚಾಚಿದೆ ಹಾಗೂ ಲಂಬಾಂತರವಾಗಿ ಇರಿಸಲಾದ 3 ಪೀಸ್‌ LED ಫಾಗ್‌ ಲ್ಯಾಂಪ್‌ ಗಳನ್ನು ಸಹ ಹೊಂದಿದೆ. ಅದರ ಕೆಳಗೆ ನೀವು ಹೊಸದಾಗಿ ವಿನ್ಯಾಸಗೊಳಿಸಲಾದ ಬಂಬರ್‌ ಮತ್ತು ದೊಡ್ಡದಾದ ಸೆಂಟ್ರಲ್‌ ಏರ್‌ ಡ್ಯಾಮ್‌ ಅನ್ನು ಕಾಣಬಹುದು.

ಪ್ರೊಫೈಲ್‌ ನಲ್ಲಿ ಕಿಯಾ ಸೋನೆಟ್ HTX+‌ ವಾಹನವು 16 ಇಂಚಿನ ಅಲೋಯ್‌ ವೀಲ್‌ ಗಳಿಗೆ ಹೊಸ ವಿನ್ಯಾಸವನ್ನು ಪಡೆದಿದ್ದು ಇದು GTX+ ವೇರಿಯಂಟ್‌ ನಲ್ಲಿ ಇರುವ ವೀಲ್‌ ಗಳಿಗಿಂತ ಭಿನ್ನವಾಗಿದೆ. ಈ ವೇರಿಯಂಟ್‌ ನಲ್ಲಿ 360 ಡಿಗ್ರಿ ಕ್ಯಾಮರಾ ಇಲ್ಲದ ಕಾರಣ, ORVM ಮೌಂಟೆಡ್‌ ಕ್ಯಾಮರಾ ಇದರಲ್ಲಿ ಕಾಣಸಿಗದು.

2024 ಕಿಯಾ ಸೋನೆಟ್ HTX+‌ ವಾಹನವು ವಾಶರ್‌ ಮತ್ತು ಡಿಫಾಗರ್‌ ಜೊತೆಗೆ ರಿಯರ್‌ ವೈಪರ್‌ ಅನ್ನು ಹೊಂದಿದೆ ಮಾತ್ರವಲ್ಲದೆ ಸಂಪರ್ಕಿತ LED ಟೇಲ್‌ ಲೈಟ್‌ ಗಳು ಮತ್ತು ಹೊಸ ಸ್ಥಾನದಲ್ಲಿ ಇರಿಸಲಾದ ʻಸೋನೆಟ್‌ʼ ಬ್ಯಾಜ್‌ ಅನ್ನು ಇಲ್ಲಿ ಕಾಣಬಹುದು. ಕೆಳಗಡೆ ಇದು ದಪ್ಪನೆಯ ಸಿಲ್ವರ್‌ ಸ್ಕಿಡ್‌ ಪ್ಲೇಟ್‌ ಅನ್ನು ಪಡೆದಿದೆ.

  1. ಒಳಾಂಗಣ

ಒಳಗಡೆಯಲ್ಲಿ HTX+ ವಾಹನವು ಕಂದು ಬಣ್ಣದ ಇನ್ಸರ್ಟ್‌ ಗಳೊಂದಿಗೆ ಕಪ್ಪು ಮತ್ತು ಕಂದು ಬಣ್ಣದ ಥೀಮ್‌ ಅನ್ನು ಹೊಂದಿದೆ. ಕಿಯಾ ಸಂಸ್ಥೆಯು ಇದರಲ್ಲಿ ಪರಿಷ್ಕೃತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌, 10.25 ಇಂಚಿನ ಚಾಲಕನ ಹೊಸ ಡಿಜಿಟಲ್‌ ಡಿಸ್ಪ್ಲೇ (ಪರಿಷ್ಕೃತ ಕಿಯಾ ಸೆಲ್ಟೋಸ್‌ ನಿಂದ ಇದನ್ನು ಎರವಲು ಪಡೆಯಲಾಗಿದೆ) ಇತ್ಯಾದಿಗಳನ್ನು ನೀಡಿದೆ. ಅಲ್ಲದೆ ಈ ವೇರಿಯಂಟ್‌ ನಲ್ಲಿ 10.25 ಇಂಚಿನ ಟಚ್‌ ಸ್ಕ್ರೀನ್‌, ಸನ್‌ ರೂಫ್‌, ಆರು ಏರ್‌ ಬ್ಯಾಗ್‌ ಗಳು, ಮತ್ತು 4 ವೇ ಪವರ್ಡ್‌ ಡ್ರೈವರ್‌ ಸೀಟ್ (ಡೀಸೆಲ್-iMT ಕೋಂಬೊ ಜೊತೆ ಮಾತ್ರ) ಮುಂತಾದುವುಗಳನ್ನು ಕಾಣಬಹುದು.

2024 ಸೋನೆಟ್ HTX+‌ ವಾಹನವು ಹಿಂಭಾಗದ ಪ್ರಯಾಣಿಕರಿಗಾಗಿ AC ವೆಂಟ್‌ ಗಳು, ಕಪ್‌ ಹೋಲ್ಡರ್‌ ಗಳ ಜೊತೆಗೆ ಆರ್ಮ್‌ ರೆಸ್ಟ್‌, ಸನ್‌ ಶೇಡ್‌ ಗಳು, ಹೊಂದಿಸಬಹುದಾದ ಹೆಡ್‌ ರೆಸ್ಟ್‌ ಗಳು, (ಆದರೆ ಮಧ್ಯದ ಪ್ರಯಾಣಿಕರಿಗೆ ಈ ಸೌಲಭ್ಯವಿಲ್ಲ), ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು ಮತ್ತು 3 ಪಾಯಿಂಟ್‌ ಸೀಟ್‌ ಬೆಲ್ಟ್‌ ಗಳನ್ನು ಹೊಂದಿದೆ.

ಪರಿಷ್ಕೃತ ಕಿಯಾ ಸೋನೆಟ್ HTX+‌ ವಾಹನವು ಟರ್ಬೊ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳೊಂದಿಗೆ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಗಳ ಜೊತೆಗೆ (iMT ಸೇರಿದಂತೆ) ಮಾತ್ರವೇ ದೊರೆಯುತ್ತದೆ.

ಬಿಡುಗಡೆ ಮತ್ತು ವೆಚ್ಚ

ಹೊಸ ಕಿಯಾ ಸೋನೆಟ್‌ ವಾಹನವು 2024ರ ಜನವರಿ ತಿಂಗಳಿನಲ್ಲಿ ಶೋರೂಂಗಳಲ್ಲಿ ಕಾಣಿಸಿಕೊಳ್ಳಲಿದೆ. ನಮ್ಮ ಪ್ರಕಾರ ಇದರ ಬೆಲೆಯು ಸುಮಾರು ರೂ. 8 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಪರಿಷ್ಕೃತ ಸೋನೆಟ್‌ ಕಾರು ಮಾರುತಿ ಬ್ರೆಜ್ಜಾ, ಮಹೀಂದ್ರಾ XUV300, ಟಾಟಾ ನೆಕ್ಸನ್, ಹ್ಯುಂಡೈ ವೆನ್ಯು, ರೆನೋ ಕೈಗರ್, ನಿಸಾನ್‌ ಮ್ಯಾಗ್ನೈಟ್, ಮತ್ತು ಮಾರುತಿ ಫ್ರಾಂಕ್ಸ್‌ ಕ್ರಾಸ್‌ ಓವರ್‌ ಜೊತೆಗೆ ಸ್ಪರ್ಧಿಸಲಿದೆ.

ಸಂಬಂಧಿತ: ಭಿನ್ನತೆಗಳನ್ನು ಭೇದಿಸುವುದು: ಹೊಸ ಮತ್ತು ಹಳೆಯ ಕಿಯಾ ಸೋನೆಟ್

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಿಯಾ ಸೋನೆಟ್‌ ಅಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 59 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೊನೆಟ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ