ಈ ಏಪ್ರಿಲ್‌ನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಪಡೆಯಿರಿ 72,000 ರೂವರೆಗಿನ ಭರ್ಜರಿ ಆಫರ್..!
ರೆನಾಲ್ಟ್ ಕ್ವಿಡ್ ಗಾಗಿ ansh ಮೂಲಕ ಏಪ್ರಿಲ್ 10, 2023 09:45 am ರಂದು ಪ್ರಕಟಿಸಲಾಗಿದೆ
- 37 Views
- ಕಾಮೆಂಟ್ ಅನ್ನು ಬರೆಯಿರಿ
ಕಾರು ತಯಾರಕರು ಈ ತಿಂಗಳಿನಲ್ಲಿ ತಮ್ಮ ಸಂಪೂರ್ಣ ಶ್ರೇಣಿಯಲ್ಲಿ ನಗದು, ವಿನಿಮಯ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡುತ್ತಿದ್ದಾರೆ.
- ರೆನಾಲ್ಟ್ ಕೈಗರ್ ಮತ್ತು ಟ್ರೈಬರ್ ರೂ 72,000 ತನಕದ ಅತೀ ಹೆಚ್ಚು ಪ್ರಯೋಜನಗಳನ್ನು ಹೊಂದಿವೆ.
- ರೂ 67,000 ತನಕದ ರಿಯಾಯಿತಿಯೊಂದಿಗೆ ಕ್ವಿಡ್ ಅನ್ನು ಹೊಂದಬಹುದು.
- ಈ ಆಫರ್‌ಗಳು BS6 ಹಂತ ಒಂದು ಮತ್ತು ಹಂತ ಎರಡು ಯೂನಿಟ್‌ಗಳೆರಡರಲ್ಲೂ ಲಭ್ಯವಿರುತ್ತದೆ.
- ರಿಯಾಯಿತಿಗಳನ್ನು ಈ ತಿಂಗಳ ಕೊನೆಯವರೆಗೂ ಪಡೆಯಬಹುದು.
BS6 ಹಂತ ಎರಡು ಮಾನದಂಡಗಳ ಕಾರಣದಿಂದ ಬೆಲೆ ಏರಿಕೆಗಳ ನಡುವೆಯೂ ರೆನಾಲ್ಟ್, ಇತರ ಕಾರು ತಯಾರಕರ ನಡುವೆ ತನ್ನ ಸಂಪೂರ್ಣ ಶ್ರೇಣಿಯ ಮೇಲೆ ಈ ಆಫರ್‌ಗಳನ್ನು ನೀಡಿದೆ. ಏಪ್ರಿಲ್ ಕೊನೆಯ ತನಕ BS6 ಹಂತ ಒಂದು ಮತ್ತು ಹಂತ ಎರಡು ಯೂನಿಟ್‌ಗಳೆರಡರಲ್ಲಿಯೂ ಇದು ಸ್ಕ್ರ್ಯಾಪೇಜ್ ಪ್ರಯೋಜನಗಳೊಂದಿಗೆ ನಗದು, ವಿನಿಮಯ ಮತ್ತು ಕಾರ್ಪೋರೇಟ್ ರಿಯಾಯಿತಿಗಳನ್ನು ನೀಡುತ್ತಿದೆ.
ಇದನ್ನೂ ಓದಿ: ಈ ಏಪ್ರಿಲ್‌ನಲ್ಲಿ ಮಾರುತಿ ನೆಕ್ಸಾ ಕಾರುಗಳ ಮೇಲೆ ರೂ 44,000 ತನಕ ಉಳಿಸಿ
ಮಾಡೆಲ್‌ವಾರು ಆಫರ್ ಪಟ್ಟಿಯ ವಿವರಗಳನ್ನು ಇಲ್ಲಿ ನೋಡಿ:
ಕ್ವಿಡ್
ಆಫರ್‌ಗಳು |
BS6 ಹಂತ 1 (MY22) |
BS6 ಹಂತ 2 (MY23) |
ನಗದು ರಿಯಾಯಿತಿ |
ರೂ 25,000 ತನಕ |
ರೂ 5,000 ತನಕ |
ವಿನಿಮಯ ಪ್ರಯೋಜನ |
ರೂ 20,000 ತನಕ |
ರೂ 10,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 12,000 ತನಕ |
ರೂ 12,000 ತನಕ |
ಸ್ಕ್ರ್ಯಾಪೇಜ್ ಪ್ರಯೋಜನಗಳು |
ರೂ 10,000 ತನಕ |
ರೂ 10,000 ತನಕ |
ಒಟ್ಟು ಪ್ರಯೋಜನಗಳು |
ರೂ 67,000 ತನಕ |
ರೂ 37,000 ತನಕ |
- ಕ್ವಿಡ್‌ನ BS6 ಹಂತ ಒಂದು ಯೂನಿಟ್‌ಗಳ ಮೇಲಿನ ನಗದು ರಿಯಾಯಿತಿಯು ಆಯ್ದ ವೇರಿಯೆಂಟ್‌ಗಳಲ್ಲಿ ಮಾತ್ರ ಇರುತ್ತದೆ ಮತ್ತು ಇದು AMT ವೇರಿಯೆಂಟ್‌ಗಳಲ್ಲಿ ರೂ 25,000 ತನಕ ಮತ್ತು ಮ್ಯಾನುವಲ್ ವೇರಿಯೆಂಟ್‌ಗಳಲ್ಲಿ ರೂ 20,000 ತನಕದ ರಿಯಾಯಿತಿಗಳನ್ನು ಒಳಗೊಂಡಿರುತ್ತದೆ.
- ಎಲ್ಲಾ ವೇರಿಯೆಂಟ್‌ಗಳಲ್ಲಿ BS6 ಹಂತ ಒಂದು ಯೂನಿಟ್‌ಗಳ ಮೇಲೆ ರೂ 20,000 ತನಕ ಮತ್ತು ಹಂತ ಎರಡು ಯೂನಿಟ್‌ಗಳ ಮೇಲೆ ರೂ 10,000 ತನಕದ ವಿನಿಮಯ ಪ್ರಯೋಜನಗಳು ಇವೆ.
- BS6 ಹಂತ ಒಂದು ಮತ್ತು ಹಂತ ಎರಡು ಯೂನಿಟ್‌ಗಳೆರಡೂ ಒಂದೇ ರೀತಿಯ (ಆಯ್ದ ವೇರಿಯೆಂಟ್‌ಗಳಲ್ಲಿ) ಮತ್ತು ಸ್ಕ್ರ್ಯಾಪೇಜ್ ಪ್ರಯೋಜನಗಳನ್ನು ಹೊಂದಿದೆ.
- ರೆನಾಲ್ಟ್ ಕ್ವಿಡ್ ಬೆಲೆ ರೂ 4.70 ಲಕ್ಷದಿಂದ 6.33 ಲಕ್ಷದ ತನಕ ಇದೆ.
ಕೈಗರ್
ಆಫರ್‌ಗಳು |
BS6 ಹಂತ 1 (MY22 & MY23) |
BS6 ಹಂತ 2 (MY23) |
ನಗದು ರಿಯಾಯಿತಿ |
ರೂ 25,000 ತನಕ |
ರೂ 10,000 ತನಕ |
ವಿನಿಮಯ ಪ್ರಯೋಜನ |
ರೂ 25,000 ತನಕ |
ರೂ 20,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 12,000 ತನಕ |
ರೂ 12,000 ತನಕ |
ಸ್ಕ್ರ್ಯಾಪೇಜ್ ಪ್ರಯೋಜನಗಳು |
ರೂ 10,000 ತನಕ |
ರೂ 10,000 ತನಕ |
ಒಟ್ಟು ಪ್ರಯೋಜನಗಳು |
ರೂ 72,000 ತನಕ |
ರೂ 52,000 ತನಕ |
- BS6 ಹಂತ ಒಂದು ಯೂನಿಟ್‌ಗಳ ನೈಸರ್ಗಿಕವಾಗಿ ಚೂಷಿಸಲ್ಪಡುವ AMT ವೇರಿಯೆಂಟ್‌ಗಳ ನಗದು ರಿಯಾಯಿತಿ ರೂ 25,000ರ ತನಕ ಮತ್ತು ನೈಸರ್ಗಿಕವಾಗಿ ಚೂಷಿಸಲ್ಪಡುವ ಮ್ಯಾನುವಲ್ ಮತ್ತು ಟರ್ಬೋ ವೇರಿಯೆಂಟ್‌ಗಳ ಮೇಲೆ ರೂ 15,000 ತನಕ ಇದೆ. BS6 ಹಂತ ಎರಡು ಯೂನಿಟ್‌ಗಳ ಆಯ್ದ ವೇರಿಯೆಂಟ್‌ಗಳ ಮೇಲೆ ರೂ. 10,000 ತನಕದ ರಿಯಾಯಿತಿ ಇದೆ.
- ಕೈಗರ್‌ನ BS6 ಹಂತ ಒಂದು ಯೂನಿಟ್‌ಗಳು ರೂ 25,000 ತನಕದ ವಿನಿಮಯ ಬೋನಸ್ ಅನ್ನು ಮತ್ತು ಹಂತ ಒಂದು ಯೂನಿಟ್‌ಗಳ ಆಯ್ದ ವೇರಿಯೆಂಟ್‌ಗಳ ಮೇಲೆ ಎರಡಕ್ಕೂ ರೂ 10,000 ತನಕದ ರಿಯಾಯಿತಿಯನ್ನು ಹೊಂದಿದೆ.
- BS6 ಫೇಸ್ ವನ್ ಕೈಗರ್‌ನ ಬೇಸ್-ಸ್ಪೆಕ್ RXE ವೇರಿಯೆಂಟ್ ಯಾವುದೇ ನಗದು ಅಥವಾ ವಿನಿಮಯ ಪ್ರಯೋಜನಗಳನ್ನು ಹೊಂದಿಲ್ಲ.
- ಕಾರ್ಪೋರೇಟ್ ವಿನಾಯಿತಿ ಮತ್ತು ಸ್ಕ್ರ್ಯಾಪೇಜ್ ಪ್ರಯೋಜನಗಳು ಕೈಗರ್‌ನ BS6 ಹಂತ ಒಂದು ಮತ್ತು ಎರಡು ವೇರಿಯಂಟ್‌ಗಳೆರಡಕ್ಕೂ ಒಂದೇ ರೀತಿಯಾಗಿವೆ.
- ಕೈಗರ್‌ನ ಬೆಲೆಯನ್ನು ರೂ 6.50 ಲಕ್ಷ ಮತ್ತು ರೂ 11.23 ಲಕ್ಷದ ನಡುವೆ ನಿಗದಿಪಡಿಸಲಾಗಿದೆ.
ಟ್ರೈಬರ್
ಆಫರ್‌ಗಳು |
BS6 ಹಂತ 1 |
BS6 ಹಂತ 2 (MY23) |
|
MY22 |
MY23 |
||
ನಗದು ರಿಯಾಯಿತಿ |
ರೂ 25,000 ತನಕ |
ರೂ 15,000 ತನಕ |
ರೂ 10,000 ತನಕ |
ವಿನಿಮಯ ಪ್ರಯೋಜನ |
ರೂ 25,000 ತನಕ |
ರೂ 25,000 ತನಕ |
ರೂ 20,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 12,000 ತನಕ |
ರೂ 12,000 ತನಕ |
ರೂ 12,000 ತನಕ |
ಸ್ಕ್ರ್ಯಾಪೇಜ್ ಪ್ರಯೋಜನಗಳು |
ರೂ 10,000 ತನಕ |
ರೂ 10,000 ತನಕ |
ರೂ 10,000 ತನಕ |
ಒಟ್ಟು ಪ್ರಯೋಜನಗಳು |
ರೂ 72,000 ತನಕ |
ರೂ 62,000 ತನಕ |
ರೂ 52,000 ತನಕ |
- BS6 ಹಂತ ಒಂದು ಯೂನಿಟ್‌ಗಳು ರೂ 25,000 ತನಕದ ನಗದು ವಿನಾಯಿತಿಯನ್ನು ಪಡೆದಿದೆ ಮತ್ತು BS6 ಹಂತ ಎರಡು ಯೂನಿಟ್‌ಗಳು ಆಯ್ದ ವೇರಿಯೆಂಟ್‌ಗಳಲ್ಲಿ ರೂ 10,000 ತನಕದ ವಿನಾಯಿತಿಯನ್ನು ಪಡೆದಿದೆ
- BS6 ಹಂತ ಒಂದು ಯೂನಿಟ್‌ಗಳ ಮೇಲಿನ ವಿನಾಯಿತಿ ಬೋನಸ್ ರೂ 25,000 ತನಕ ಇದೆ ಮತ್ತು ಹಂತ ಎರಡು ಯೂನಿಟ್‌ಗಳ ಮೇಲೆ ಇದು 20,000 ತನಕ ಇದೆ.
- BS6 ಹಂತ ಒಂದು ಮತ್ತು ಹಂತ ಎರಡು ಯೂನಿಟ್‌ಗಳೆರಡೂ ಒಂದೇ ರೀತಿಯ ಕಾರ್ಪೋರೇಟ್ ಮತ್ತು ಸ್ಕ್ರ್ಯಾಪೇಜ್ ರಿಯಾಯಿತಿಗಳನ್ನು ಹೊಂದಿವೆ.
- ಟ್ರೈಬರ್‌ನ ಬೆಲೆ ರೂ 6.33 ಲಕ್ಷದಿಂದ ರೂ 8.98 ಲಕ್ಷದ ತನಕ ಇದೆ.
* ಎಲ್ಲಾ ಬೆಲೆಗಳೂ ಎಕ್ಸ್-ಶೋರೂ ದೆಹಲಿ ಪ್ರಕಾರ
ಇದನ್ನೂ ನೋಡಿ: ಯೂರೋಪ್‌ನಲ್ಲಿ ಕಾಣಿಸಿಕೊಂಡಿದೆ ಹೊಸ ಪೀಳಿಗೆ ರೆನಾಲ್ಟ್ ಡಸ್ಟರ್!
ಗಮನಿಸಿ:
- ನೀವಿರುವ ಸ್ಥಳ ಮತ್ತು ವೇರಿಯೆಂಟ್ ಆಯ್ಕೆಗಳನ್ನು ಅವಲಂಬಿಸಿ ಮೇಲೆ ಪಟ್ಟಿ ಮಾಡಲಾದ ಆಫರ್‌ಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ಹೆಚ್ಚಿನ ಮಾಹಿತಿ ಪಡೆಯಲು, ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
- ಈ ಎಲ್ಲಾ ಮಾಡೆಲ್‌ಗಳ ಮೇಲೆ ರೂ 5,000 ತನಕದ ಗ್ರಾಮೀಣ ರಿಯಾಯಿತಿಯೂ ಲಭ್ಯವಿದೆ. ಗ್ರಾಹಕರು ಗ್ರಮೀಣ ರಿಯಾಯಿತಿ ಅಥವಾ ಕಾರ್ಪೋರೇಟ್ ರಿಯಾಯಿತಿ ಎರಡರಲ್ಲಿ ಒಂದನ್ನು ಪಡೆಯಬಹುದು, ಆದರೆ ಎರಡನ್ನು ಪಡೆಯಲಾಗುವುದಿಲ್ಲ.
- ಕ್ವಿಡ್‌ನ BS6 ಹಂತ ಎರಡು -ಅನುಸರಣೆಯ ಬೇಸ್ -ಸ್ಪೆಕ್ RXE ವೇರಿಯೆಂಟ್ ಮತ್ತು ಕೈಗರ್ ಮತ್ತು ಟ್ರೈಬರ್‌ನ BS6 ಹಂತ ಒಂದು ಮತ್ತು ಹಂತ ಎರಡು RXE ವೇರಿಯೆಂಟ್‌ಗಳು ಮಾತ್ರ ಲಾಯಲ್ಟಿ ಪ್ರಯೋಜನಗಳನ್ನು ಹೊಂದಿವೆ.
- ಈ ಲಾಯಲ್ಟಿ ಪ್ರಯೋಜನಗಳು ರೂ 10,000 ತನಕದ ನಗದು ರಿಯಾಯಿತಿ, ರೂ 5.31 ಲಕ್ಷ ತನಕದ ಸಾಲದ ಮೊತ್ತಕ್ಕೆ ಅನ್ವಯವಾಗುವ 3.99 ಪ್ರತಿಶತ ಬಡ್ಡಿದರ, ಮೂರು ವರ್ಷಗಳಿಗೆ/ 60,000ಕಿಮೀಗಳಿಗೆ (ಮೊದಲು ಬರುವುದಕ್ಕೆ) ವಿಸ್ತರಿಸಿದ ವಾರೆಂಟಿ ಮತ್ತು ಮೂರು ವರ್ಷ/ 30,000ಕಿಮೀ ವಾರ್ಷಿಕ ನಿರ್ವಹಣೆ ಪ್ಯಾಕೇಜ್ ಅನ್ನು ಒಳಗೊಂಡಿರುತ್ತದೆ.
ಇನ್ನಷ್ಟು ಓದಿ : KWID AMT
0 out of 0 found this helpful