ಹ್ಯುಂಡೈ ಎಕ್ಸ್‌ಟರ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ
ಹ್ಯುಂಡೈ ಎಕ್ಸ್‌ಟರ್ ಅನ್ನು ಜುಲೈ 10 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು ಇದರ ಬೆಲೆಯು ರೂ.6 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ.
-
ಹ್ಯುಂಡೈ ಎಕ್ಸ್‌ಟರ್ ಅನ್ನು ಐದು ವಿಶಾಲ ಟ್ರಿಮ್‌ಗಳಲ್ಲಿ ನೀಡಲಾಗುತ್ತಿದೆ: EX, S, SX, SX (O), ಮತ್ತು SX (O) ಕನೆಕ್ಟ್.
-
ಇದರಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ನೀಡಲಾಗಿದ್ದು 1.2 ಲೀಟರ್ ಎಂಜಿನ್ ಅನ್ನು ಬಳಸಲಾಗಿದೆ.
-
ಇದು ಈ ವಿಭಾಗದಲ್ಲಿಯೇ ಪ್ರಥಮ ಎಂಬಂತಹ ವಾಯ್ಸ್ ಅಸಿಸ್ಟೆಡ್ ಸಿಂಗಲ್ ಪೇನ್ ಸನ್‌ರೂಫ್, ಡ್ಯುಯಲ್ ಡ್ಯಾಶ್ ಕ್ಯಾಮ್ ಸೆಟಪ್ ಫೀಚರ್‌ಗಳನ್ನು ಪಡೆದಿದೆ.
ಭಾರತದ ಕ್ರಿಕೆಟ್ ತಂಡದ ಆಲ್-ರೌಂಡರ್, ಹಾರ್ದಿಕ್ ಪಾಂಡ್ಯ ಅವರನ್ನು ಹ್ಯುಂಡೈನ ಮುಂಬರುವ ಎಸ್‌ಯುವಿ ಮತ್ತು ಜುಲೈ 10 ರಂದು ಬಿಡುಗಡೆಯಾಗಲಿರುವ ಹ್ಯುಂಡೈ ಎಕ್ಸ್‌ಟರ್‌ನ, ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಹ್ಯುಂಡೈ ಪ್ರಕಾರ, ಎಕ್ಸ್‌ಟರ್ Z ಪೀಳಿಗೆಯು ಉತ್ಸಾಹಭರಿತ ಜೀವನಶೈಲಿಗೆ ಪೂರಕವಾಗಿದೆ, ಮತ್ತು ಹಾರ್ದಿಕ್ ಯೂತ್ ಐಕಾನ್ ಮತ್ತು ಆಲ್-ರೌಂಡರ್ ಆಗಿ ಮುಂಬರುವ ಮೈಕ್ರೋ ಎಸ್‌ಯುವಿಗೆ ಪರಿಪೂರ್ಣವಾಗಿ ಹೊಂದಾಣಿಕೆಯಾಗುತ್ತಾರೆ.
ಇವರು ಮುಂಬರುವ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್‌ಗಾಗಿ ಹ್ಯುಂಡೈ ಆಯೋಜಿಸಿರುವ ಮುಂದಿನ ದಿನಗಳ ಮಾರುಕಟ್ಟೆ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹ್ಯುಂಡೈ ಹಾರ್ದಿಕ್ ಪಾಂಡ್ಯ ಅವರ ಜೊತೆಗೆ ಎಕ್ಸ್‌ಟರ್‌ನ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದು, ಇದರ ಹೊರಗಿನ ನೋಟವನ್ನು ಸಮೀಪದಿಂದ ನೋಡಬಹುದು.
ಸಂಪೂರ್ಣ ವಿನ್ಯಾಸ
ಹ್ಯುಂಡೈ ಎಕ್ಸ್‌ಟರ್‌ಗಾಗಿ ಟೀಸರ್ ಸೀರೀಸ್‌ಗಳನ್ನು ಬಹಿರಂಗಪಡಿಸಿರುವುದರಿಂದ ಈ ಮೈಕ್ರೋ ಎಸ್‌ಯುವಿಯ ಸಂಪೂರ್ಣ ವಿನ್ಯಾಸವನ್ನು ನಾವೀಗ ತಿಳಿದುಕೊಂಡಿದ್ದೇವೆ. ಮುಂಭಾಗದಲ್ಲಿ, ಈ ಎಕ್ಸ್‌ಟರ್ ಬಂಪರ್ ಕೆಳಗೆ ಜೋಡಿಸಲಾದ H-ಆಕಾರದ ಎಲ್‌ಇಡಿ ಡಿಆರ್‌ಎಲ್ ಹೆಡ್‌ಲೈಟ್‌ಗಳನ್ನು ಹೊಂದಿದೆ. ಎಕ್ಸ್‌ಟರ್ ಮುಂಭಾಗದಿಂದ ನೇರವಾದ ಸ್ಟ್ಯಾನ್ಸ್ ಅನ್ನು ಹೊಂದಿದ್ದು ಇದು ಅದರ ಪ್ರೊಫೈಲ್‌ನಾದ್ಯಂತ ಮತ್ತು ಹಿಂಭಾಗದ ತುದಿಯಲ್ಲಿಯೂ ಮುಂದುವರಿಯುತ್ತದೆ. ಹಿಂಭಾಗದಲ್ಲಿಯೂ, ಇದು ಮುಂಭಾಗದಲ್ಲಿರುವಂತೆಯೇ H-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಪಡೆದಿದೆ.
ಇದನ್ನೂ ಓದಿ: ಎಕ್ಸ್‌ಕ್ಲೂಸಿವ್: ಭಾರತದಲ್ಲಿ ಪಾದಾರ್ಪಣೆ ಮಾಡಿದ ಸ್ಪೈಶಾಟ್ ನವೀಕೃತ i20
ಕೆಲವು ವಿಭಾಗದಲ್ಲೇ ಪ್ರಥಮ ಫೀಚರ್‌ಗಳು
ಹ್ಯುಂಡೈ ಇನ್ನೂ ಒಳಾಂಗಣದ ಒಂದು ನೋಟವನ್ನು ನೀಡದಿದ್ದರೂ ಅಥವಾ ಬಹಿರಂಗಪಡಿಸದಿದ್ದರೂ, ಕಾರು ತಯಾರಕರು ಈಗಾಗಲೇ ಟೀಸರ್‌ಗಳ ಮೂಲಕ ಎಕ್ಸ್‌ಟರ್‌ನ ಕೆಲವು ಪ್ರಮುಖ ಫೀಚರ್‌ಗಳ ಕುರಿತು ಚರ್ಚಿಸಿದ್ದಾರೆ. ಈ ಮೈಕ್ರೋ ಎಸ್‌ಯುವಿಯು ಡ್ಯುಯಲ್ ಡ್ಯಾಶ್ ಕ್ಯಾಮ್ ಮತ್ತು ವಾಯ್ಸ್ ಅಸಿಸ್ಟೆಡ್ ಸಿಂಗಲ್ ಪೇನ್ ಸನ್‌ರೂಫ್ ಫೀಚರ್‌ಗಳನ್ನು ಈ ವಿಭಾಗದಲ್ಲಿಯೇ ಮೊದಲ ಬಾರಿ ಹೊಂದಿದೆ. ಎಕ್ಸ್‌ಟರ್ ದೊಡ್ಡ ಇನ್‌ಫೊಟೇನ್‌ಮೆಂಟ್ ಡಿಸ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ಹೊಂದಬಹುದೆಂದು ನಿರೀಕ್ಷಿಸಲಾಗಿದೆ.
ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಹಿಲ್ ಅಸಿಸ್ಟ್, ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ಗಳು ಹಾಗೂ ಎಲ್ಲಾ ಐದು ಸೀಟುಗಳಿಗೂ ರಿಮೈಂಡರ್‌ಗಳು ಹಿಂಬದಿ ಪಾರ್ಕಿಂಗ್ ಕ್ಯಾಮರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಗಳನ್ನು ಸಹ ಇದು ಹೊಂದಿರುವ ಸಾಧ್ಯತೆಯಿದೆ.
ಎಂಜಿನ್ ಹೇಗಿದೆ
ಪ್ರೊಪಲ್ಶನ್ ಕೆಲಸಕ್ಕೆ, ಈ ಎಕ್ಸ್‌ಟರ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ: 5 ಸ್ಪೀಡ್ ಮ್ಯಾನ್ಯುವಲ್ ಅಥವಾ 5 ಸ್ಪೀಡ್ ಎಎಂಟಿಯೊಂದಿಗೆ ಜೋಡಿಸಲ್ಪಟ್ಟ 1.2-ಲೀಟರ್ ಎಂಜಿನ್ ಮತ್ತು ಸಿಎನ್‌ಜಿ ಕಾನ್ಫಿಗರೇಶನ್‌ನಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಶನ್‌ಗೆ ಜೋಡಿಸಲಾಗಿದೆ.
ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್: ಇದರ ಕಾಯುವಿಕೆಗೆ ಅರ್ಥವಿದೆಯೇ ಅಥವಾ ಇದರ ಪ್ರತಿಸ್ಪರ್ಧಿಗಳನ್ನು ಖರೀದಿಸಬಹುದೇ?
ಸ್ಪರ್ಧಿಗಳು
ಹ್ಯುಂಡೈ ಈ ಮೈಕ್ರೋ ಎಸ್‌ಯುವಿಯನ್ನು ಐದು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ: EX, S, SX, SX (O), ಮತ್ತು SX (O) ಕನೆಕ್ಟ್. ಸರಿಸುಮಾರು ರೂ. 6 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಯಿದೆ, ಇದು ಟಾಟಾ ಪಂಚ್, ಸಿಟ್ರಾನ್ C3, ನಿಸಾನ್ ಮ್ಯಾಗ್ನೆಟ್, ರೆನಾಲ್ಟ್ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್‌ಗೆ ಸ್ಪರ್ಧೆಯನ್ನು ಒಡ್ಡುತ್ತದೆ.